ETV Bharat / entertainment

'ಕಲ್ಕಿ 2898 ಎಡಿ' ಬಿಗ್​ ಬಿ ಫಸ್ಟ್ ಲುಕ್​: ಚಿತ್ರ ನಿರ್ಮಾಪಕರಿಗೆ ಅಮಿತಾಭ್​ ಬಚ್ಚನ್​​​ ಕೃತಜ್ಞತೆ - ಅಮಿತಾಭ್​​ ಬಚ್ಚನ್ ಲೇಟೆಸ್ಟ್ ನ್ಯೂಸ್

'ಕಲ್ಕಿ 2898 ಎಡಿ' ಚಿತ್ರ ನಿರ್ಮಾಪಕರಿಗೆ ಹಿರಿಯ ನಟ ಅಮಿತಾಭ್​ ಬಚ್ಚನ್​​​ ಕೃತಜ್ಞತೆ ಸಲ್ಲಿಸಿದ್ದಾರೆ.

Amitabh Bachchan expressed his gratitude to Kalki 2898 AD makers
'ಕಲ್ಕಿ 2898 ಎಡಿ' ಚಿತ್ರ ನಿರ್ಮಾಪಕರಿಗೆ ಅಮಿತಾಭ್​ ಬಚ್ಚನ್​​​ ಕೃತಜ್ಞತೆ
author img

By ETV Bharat Karnataka Team

Published : Oct 13, 2023, 9:57 AM IST

ಭಾರತೀಯ ಚಿತ್ರರಂಗದ ಹಿರಿಯ ನಟ ಅಮಿತಾಭ್​​ ಬಚ್ಚನ್ ಅಕ್ಟೋಬರ್ 11 ರಂದು 81ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಅಕ್ಟೋಬರ್ 10ರ ಮಧ್ಯರಾತ್ರಿಯಿಂದ ಹಿಡಿದು ಅಕ್ಟೋಬರ್ 11ರ ರಾತ್ರಿವರೆಗೂ ಚಿತ್ರರಂಗ ಮತ್ತು ಅಭಿಮಾನಿಗಳಿಂದ ಬಿಗ್​ ಬಿ ಬರ್ತ್ ಡೇ ಸೆಲೆಬ್ರೇಶನ್​ ನಡೆಯಿತು. ಬಾಲಿವುಡ್​ ರಂಗದ ಹಿರಿಯ ನಟನ ಜನ್ಮದಿನವನ್ನು ಹೆಚ್ಚಿನ ಸಂಖ್ಯೆಯ ಜನರು ಸೇರಿ ವಿಶೇಷವಾಗಿಸಿದರು.

ಬಿಗ್​ ಬಿ ಫಸ್ಟ್ ಲುಕ್ ಪೋಸ್ಟರ್: 'ಕಲ್ಕಿ 2898 ಎಡಿ' ಬಿಗ್​ ಬಿ ನಟನೆಯ ಮುಂದಿನ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಚಿತ್ರ ನಿರ್ಮಾಪಕರು ಚಿತ್ರದಿಂದ ಬಿಗ್​ ಬಿ ಫಸ್ಟ್ ಲುಕ್ ಪೋಸ್ಟರ್ ಅನ್ನು ಶೇರ್ ಮಾಡಿದ್ದರು. ಮೊದಲ ನೋಟ ಚಿತ್ರದ ಮೇಲಿನ ಅಭಿಮಾನಿಗಳ ಕುತೂಹಲ, ನಿರೀಕ್ಷೆ ಹೆಚ್ಚಿಸಿದೆ. ಸಿನಿಮಾದ ಫಸ್ಟ್ ಲುಕ್ ನೋಡಿದ ಬಿಗ್ ಬಿ ಕೂಡ ಇದೀಗ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರ ನಿರ್ಮಾಪಕರಿಗೆ ನಟ ಅಮಿತಾಭ್​ ಬಚ್ಚನ್​​​ ಕೃತಜ್ಞತೆ ಸಲ್ಲಿಸಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ಸಕ್ರಿಯ ಬಿಗ್ ಬಿ: 81ರ ಹರೆಯದಲ್ಲೂ ನಟ ಅಮಿತಾಭ್​ ಬಚ್ಚನ್​​ ಸಿನಿಮಾ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಹಿರಿಯನ ನಟನ ಎನರ್ಜಿ ಯುವ ಪೀಳಿಗೆಗೆ ಸ್ಫೂರ್ತಿ. ನಿಜ ಜೀವನದಲ್ಲಿ ಮಾತ್ರವಲ್ಲದೇ ಸೋಷಿಯಲ್​ ಮೀಡಿಯಾಗಳಲ್ಲೂ ದೊಡ್ಡ ಸಂಖ್ಯೆಯ ಫಾಲೋವರ್ಸ್​​ ಸಂಪಾದಿಸಿದ್ದಾರೆ. ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಹೊಸ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಹಗಲಿರಲಿ, ರಾತ್ರಿಯಾಗಲಿ ಅವಕಾಶ ಸಿಕ್ಕಾಗಲೆಲ್ಲ ಬಿಗ್ ಬಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗುತ್ತಾರೆ.

ಚಿತ್ರ ನಿರ್ಮಾಪಕರಿಗೆ​​​ ಕೃತಜ್ಞತೆ: ಅದರಂತೆ, ಗುರುವಾರ ಮಧ್ಯರಾತ್ರಿ 'ಕಲ್ಕಿ 2898 ಎಡಿ' ಚಿತ್ರದ ತಮ್ಮ ಮೊದಲ ನೋಟವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಬುಧವಾರ ಬಿಡುಗಡೆಯಾದ ಪೋಸ್ಟರ್. ಈ ಅದ್ಭುತ ಉಡುಗೊರೆಗಾಗಿ ಚಲನಚಿತ್ರ ನಿರ್ಮಾಪಕರಿಗೆ ಬಿಗ್​ ಬಿ ಧನ್ಯವಾದ ಅರ್ಪಿಸಿದ್ದಾರೆ. 'ಕಲ್ಕಿ 2898 ಎಡಿ' ಚಿತ್ರ ವೈಜಯಂತಿ ಮೂವೀಸ್ ಅಡಿ ನಿರ್ಮಾಣಗೊಳ್ಳುತ್ತಿದೆ. ಚಿತ್ರ ನಿರ್ಮಾಪಕರಿಗೆ ಧನ್ಯವಾದ ಅರ್ಪಿಸಿದ ಬಿಗ್ ಬಿ, ''ವೈಜಯಂತಿ ಮೂವೀಸ್‌ ನನಗೆ ನೀಡಿದ ಸವಾಲು (ಸಿನಿಮಾ), ಜನ್ಮದಿನದ ಶುಭಾಶಯಕ್ಕೆ ನನ್ನ ಕೃತಘ್ಞತೆಗಳು'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅಮಿತಾಭ್​​ ಬಚ್ಚನ್ ಬರ್ತ್​​ಡೇ: ಕಲ್ಕಿ2898ಎಡಿ ಪೋಸ್ಟರ್ ರಿಲೀಸ್;​ ಪ್ರಭಾಸ್​ ಸ್ಪೆಷಲ್​ ವಿಶ್​

ಬಿಗ್ ಬಿ ಫಸ್ಟ್ ಲುಕ್ ಹೇಗಿದೆ? ಕಲ್ಕಿ 2898 ಎಡಿ ಇಂದ ಬಿಡುಗಡೆಯಾದ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ, ನಟ ಅಮಿತಾಭ್​​ ಬಚ್ಚನ್ ದೊಡ್ಡ ಶಾಲು ಹೊದ್ದುಕೊಂಡಿದ್ದಾರೆ. ಮುಖವನ್ನೂ ಸಂಪೂರ್ಣ ಕವರ್​ ಮಾಡಲಾಗಿದ್ದು, ಕಣ್ಣುಗಳು ಮಾತ್ರ ಗೋಚರಿಸುತ್ತವೆ. ಕೈಯಲ್ಲಿ ದೊಡ್ಡ ಕೋಲನ್ನು ಹಿಡಿದಿರುವುದನ್ನು ಸಹ ಕಾಣಬಹುದು. ಇದು ಜನಪ್ರಿಯ ನಟನ ಪಾತ್ರದ ಕುರಿತ ಕುತೂಹಲವನ್ನು ಹೆಚ್ಚಿಸಿದೆ.

ಇದನ್ನೂ ಓದಿ: ಈ ತಿಂಗಳಲ್ಲೇ 'ಕಾಫಿ ವಿತ್ ಕರಣ್' ಸೀಸನ್​ 8 ಆರಂಭ: ಮಾಹಿತಿ ಇಲ್ಲಿದೆ..

ನಾಗ್​ ಅಶ್ವಿನ್​ ನಿರ್ದೇಶನದ ಈ ಸಿನಿಮಾ 2024ರ ಜನವರಿ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಬಿಗ್​ ಬಜೆಟ್​ ಸಿನಿಮಾದಲ್ಲಿ ಬಿಗ್​ ಬಿ ಜೊತೆ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್​​, ಬಾಲಿವುಡ್​ ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ, ಸೌತ್​ ಸೂಪರ್ ಸ್ಟಾರ್ ಕಮಲ್ ಹಾಸ್, ಬಹುಭಾಷಾ ನಟಿ ದಿಶಾ ಪಟಾನಿ ಕೂಡ ಕಾಣಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.