ಸೆಲೆನಾ ಗೊಮೆಜ್ (Selena Gomez) ನಟಿ, ಗಾಯಕಿ, ನಿರ್ಮಾಪಕಿಯಾಗಿ ಪ್ರಖ್ಯಾತಿ ಪಡೆದವರು. ಅಪಾರ ಅಭಿಮಾನಿ ಬಳಗ ಗಳಿಸಿರುವ ಇವರು ಸಾಮಾಜಿಕ ಜಾಲತಾಣ ತೊರೆಯುವುದಾಗಿ ಪ್ರಕಟಿಸಿದ್ದಾರೆ. ಕೊಂಚ ಬ್ರೇಕ್ ಪಡೆಯುವುದಾಗಿ ಇನ್ಸ್ಟಾಗ್ರಾಮ್ನಲ್ಲಿ ಗುರುವಾರ ಪೋಸ್ಟ್ ಮಾಡಿದ್ದಾರೆ.
ಇನ್ಸ್‌ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ವಿಶ್ವದ 15 ತಾರೆಯರ ಪಟ್ಟಿಯಲ್ಲಿ ಇವರ ಹೆಸರಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಈಕೆಗೆ 382 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇನ್ಸ್‌ಟಾದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಮಹಿಳಾ ಸೆಲೆಬ್ರಿಟಿ ಕೂಡಾ ಇವರೇ ಆಗಿದ್ದಾರೆ. ಕೈಲೀ ಜೆನ್ನರ್ (Kylie Jenner) ಅವರನ್ನೂ ಗೊಮೆಜ್ ಹಿಂದಿಕ್ಕಿದ್ದಾರೆ. ಕೈಲೀ ಜೆನ್ನರ್ 380 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಆದರೀಗ ಸಾಮಾಜಿಕ ಜಾಲತಾಣದಿಂದ ಕೊಂಚ ಬ್ರೇಕ್ ಪಡೆಯುವುದಾಗಿ ಸೆಲೆನಾ ಗೊಮೆಜ್ ತಿಳಿಸಿ ಅಚ್ಚರಿ ಮೂಡಿಸಿದ್ದಾರೆ.
ಕೈಲೀ ಜೆನ್ನರ್ ಈ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ (380 ಮಿಲಿಯನ್ ಫಾಲೋವರ್ಸ್) ಹೊಂದಿದ್ದ ಮಹಿಳಾ ಸೆಲೆಬ್ರಿಟಿ ಆಗಿದ್ದರು. ಸೆಲೆನಾ ಗೊಮೆಜ್ (382 ಮಿಲಿಯನ್ ಫಾಲೋವರ್ಸ್) ಮುನ್ನಡೆ ಸಾಧಿಸಿದ್ದರು. ಸೆಲೆನಾ ಮತ್ತೊಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟಿಕ್ ಟಾಕ್‌ನಲ್ಲಿ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಿದ್ದಾರೆ. "ನಾನು ಬಹಳ ಸಂತೋಷವಾಗಿದ್ದೇನೆ, ನಾನು ತುಂಬಾ ಆಶೀರ್ವದಿಸಲ್ಪಟ್ಟಿದ್ದೇನೆ. ನನಗೆ ಇಡೀ ಪ್ರಪಂಚದಲ್ಲಿ ಉತ್ತಮ ಸ್ನೇಹಿತರು ಮತ್ತು ಅತ್ಯುತ್ತಮ ಅಭಿಮಾನಿಗಳು ಇದ್ದಾರೆ'' ಎಂದು ತಿಳಿಸಿದ್ದಾರೆ.
"ನಾನು ಉತ್ತಮವಾಗಿದ್ದೇನೆ, ನಾನು ಇರುವ ರೀತಿಯನ್ನು ನಾನು ಪ್ರೀತಿಸುತ್ತೇನೆ, ನಾನು ಹೆದರುವುದಿಲ್ಲ, ನಾನು ಸಾಮಾಜಿಕ ಮಾಧ್ಯಮದಿಂದ ಒಂದು ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ. ಏಕೆಂದರೆ ಇದು ಸ್ವಲ್ಪ ಸಿಲ್ಲಿ, ನನಗೀಗ 30 ವರ್ಷ ವಯಸ್ಸು. ಹಾಗಾಗಿ ಕೊಂಚ ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ. ನಾನು ನಿಮ್ಮನ್ನು ಬಹಳ ಪ್ರೀತಿಸುತ್ತೇನೆ ಮತ್ತು ನಾನು ನಿಮ್ಮನ್ನು ಶೀಘ್ರದಲ್ಲೇ ನೋಡುತ್ತೇನೆ. ಸದ್ಯ ನಾನು ಎಲ್ಲದರಿಂದ ವಿರಾಮ ತೆಗೆದುಕೊಳ್ಳಬೇಕಾಗಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: 'ಸುದೀಪ್, ಯಶ್ ಸರ್ ಜೊತೆ ನನ್ನ ಸ್ಪರ್ಧೆಯಿಲ್ಲ': ಮಾರ್ಟಿನ್ ಹೀರೋ ಧ್ರುವ ಸರ್ಜಾ
ಸೆಲೆನಾ ಗೊಮೆಜ್ ಸಾಮಾಜಿಕ ಮಾಧ್ಯಮದಿಂದ ವಿರಾಮ ಪಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವಾರು ಸಂದರ್ಭಗಳಲ್ಲಿ ಅವರು ತಮ್ಮ ಮಾನಸಿಕ ಆರೋಗ್ಯವನ್ನು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಂಡಿದ್ದರು.
ಇದನ್ನೂ ಓದಿ: ಮುಂಬೈ ದಾಳಿ ಕುರಿತ ಜಾವೇದ್ ಅಖ್ತರ್ ಹೇಳಿಕೆಯನ್ನು 'ಸಂವೇದನಾರಹಿತ' ಎಂದ ಪಾಕ್ ನಟ
ಸೆಲೆನಾ ಗೊಮೆಜ್ ತಮ್ಮ ವೃತ್ತಿಜೀವನವನ್ನು ಮಕ್ಕಳ ಸೀರಿಸ್ ಬಾರ್ನೆ ಅಂಡ್ ಫ್ರೆಂಡ್ಸ್ (2002-2004) ಮೂಲಕ ಪ್ರಾರಂಭಿಸಿದರು. ವಿಝಾರ್ಡ್ಸ್ ಆಫ್ ವೇವರ್ಲಿ ಪ್ಲೇಸ್ (2007-2012) ನಲ್ಲಿ ಅಲೆಕ್ಸ್ ರುಸ್ಸೋ ಆಗಿ ನಟಿಸಿ ಜನಪ್ರಿಯತೆ ಪಡೆದರು. ಸಿಂಡ್ರೆಲ್ಲಾ ಸ್ಟೋರಿ (2008), ರಮೋನಾ ಮತ್ತು ಬೀಝಸ್ (2010), ಮೋಂಟೆ ಕಾರ್ಲೋ (2011), ಸ್ಪ್ರಿಂಗ್ ಬ್ರೇಕರ್ಸ್ (2012), ನೈಬರ್ಸ್ 2: ಸೊರೊರಿಟಿ ರೈಸಿಂಗ್ (2016) ನಂತಹ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ