ETV Bharat / entertainment

ಬಹುನಿರೀಕ್ಷಿತ 'ಪುಷ್ಪ 2' ರಿಲೀಸ್​ಗೆ ಮುಹೂರ್ತ ಫಿಕ್ಸ್​; ಚಿತ್ರತಂಡದಿಂದ ಅಧಿಕೃತ ಘೋಷಣೆ - etv bharat kannada

Allu Arjun's Pushpa 2 release date: ಬಹುನಿರೀಕ್ಷಿತ 'ಪುಷ್ಪ 2' ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್​ ಆಗಿದ್ದು, 2024ರ ಆಗಸ್ಟ್​ 15ರಂದು ತೆರೆ ಕಾಣಲಿದೆ.

Allu Arjun's Pushpa 2 release date locked
ಬಹುನಿರೀಕ್ಷಿತ 'ಪುಷ್ಪ 2' ರಿಲೀಸ್​ಗೆ ಮುಹೂರ್ತ ಫಿಕ್ಸ್
author img

By ETV Bharat Karnataka Team

Published : Sep 11, 2023, 6:30 PM IST

ಭಾರತೀಯ ಚಿತ್ರರಂಗ ಬಹು ಕಾತರದಿಂದ ಕಾಯುತ್ತಿರುವ ಚಿತ್ರ 'ಪುಷ್ಪ 2: ದಿ ರೂಲ್​'. 2021ರಲ್ಲಿ ತೆರೆ ಕಂಡು ವಿಶ್ವದಾದ್ಯಂತ ಧೂಳೆಬ್ಬಿಸಿದ್ದ 'ಪುಷ್ಪ: ದಿ ರೈಸ್​'ನ ಮುಂದುವರೆದ ಭಾಗ ಇದಾಗಿದೆ. ಟಾಲಿವುಡ್​ ಸ್ಟಾರ್​ ನಿರ್ದೇಶಕ ಸುಕುಮಾರನ್​ ಮತ್ತು ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ಮತ್ತೊಮ್ಮೆ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡಿಯೋದಕ್ಕೆ ಸಜ್ಜಾಗಿದ್ದಾರೆ. ಈ ಮೊದಲು ಬಿಡುಗಡೆಯಾದ ಪುಷ್ಪ 2 ಸಣ್ಣ ತುಣುಕು ಹಂಗಾಮ ಕ್ರಿಯೇಟ್​ ಮಾಡಿದೆ. ಪುಷ್ಪನ ಎಂಟ್ರಿ ಮತ್ತೊಮ್ಮೆ ಯಾವಾಗ ಎನ್ನುತ್ತಿದ್ದ ಫ್ಯಾನ್ಸ್​ಗೆ ಚಿತ್ರತಂಡ ಸಡನ್​ ಸರ್​ಪ್ರೈಸ್​ ನೀಡಿದೆ.

ಪುಷ್ಪ 2 ರಿಲೀಸ್​ ಡೇಟ್​: 'ಪುಷ್ಪ 2: ದಿ ರೂಲ್​' ಬಿಡುಗಡೆಗೆ ಮುಹೂರ್ತ ಫಿಕ್ಸ್​ ಆಗಿದ್ದು, ಅಲ್ಲು ಅಭಿಮಾನಿ ಬಳಗದಲ್ಲಿ ಸಂತಸ ಮನೆ ಮಾಡಿದೆ. 2024ರ ಆಗಸ್ಟ್​ 15 ರಂದು ಅಂದರೆ ಸ್ವಾತಂತ್ರ್ಯ ದಿನಾಚರಣೆಯಂದು ಚಿತ್ರ ತೆರೆ ಕಾಣಲಿದೆ. ಅಲ್ಲು ಅರ್ಜುನ್​ ಅವರನ್ನು ಒಳಗೊಂಡಿರುವ ಕುತೂಹಲಕಾರಿ​ ಪೋಸ್ಟರ್​ ಅನ್ನು ಹಂಚಿಕೊಂಡಿರುವ ನಿರ್ದೇಶಕ ಸುಕುಮಾರನ್​, "ದಿನಾಂಕವನ್ನು ಗುರುತಿಸಿ. ಆಗಸ್ಟ್​ 15, 2024- 'ಪುಷ್ಪ 2: ದಿ ರೂಲ್​' ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಪುಷ್ಪರಾಜ್​ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆಯಲು ಹಿಂತಿರುಗುತ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ.

ಡಿಫರೆಂಟ್​ ಪೋಸ್ಟರ್​ ಮೂಲಕ ಪುಷ್ಪ 2 ರಿಲೀಸ್​ ಡೇಟ್​ ಅನೌನ್ಸ್​ ಆಗಿದ್ದು, ಸೀಕ್ವೆಲ್​ ನೋಡಲು ಸಿನಿ ಪ್ರೇಮಿಗಳು ಕಾತರರಾಗಿದ್ದಾರೆ. ಅಲ್ಲು ಅರ್ಜುನ್​ ಹುಟ್ಟುಹಬ್ಬದಂದು ಸ್ಪೆಷಲ್​ ಆಗಿ ಹೊರಬಿದ್ದಿದ್ದ ಪುಷ್ಪ 2 ಟೀಸರ್ ಝಲಕ್ ಹಲ್​ ಚಲ್​ ಎಬ್ಬಿಸಿತ್ತು. ಅದರಲ್ಲಿ ಪುಷ್ಪರಾಜನ ಹೊಸ ಲುಕ್​ ಅಂತೂ ಟಾಕ್​ ಆಫ್​ ದಿ ಟಾಲಿವುಡ್​ ಆಗಿತ್ತು. ಸೀರೆ ಉಟ್ಟು, ಬಳೆ ತೊಟ್ಟು, ಮೂಗುತಿ ಧರಿಸಿ, ಕೈಯಲ್ಲಿ ಪಿಸ್ತೂಲ್​ ಹಿಡಿದು ಡಿಫರೆಂಟ್​ ಆಗಿ ದರ್ಶನ ಕೊಟ್ಟಿದ್ದ ಅಲ್ಲು ಅವತಾರಕ್ಕೆ ಫ್ಯಾನ್ಸ್​ ಉಫ್​ ಎಂದಿದ್ದರು.

ಇದನ್ನೂ ಓದಿ: Pushpa 2: ಅಲ್ಲು ಅರ್ಜುನ್ ದಿನಚರಿ.. ರಾಷ್ಟ್ರಪ್ರಶಸ್ತಿ ವಿಜೇತ ನಟನ ಮನೆ, ಪುಷ್ಪ ಸೆಟ್​​ ಹೇಗಿದೆ ನೋಡಿ..

ಪುಷ್ಪ 2 ಶೂಟಿಂಗ್​.. ​'ಪುಷ್ಪ 2: ದಿ ರೂಲ್​' ಶೂಟಿಂಗ್​ ಭರದಿಂದ ಸಾಗುತ್ತಿದೆ. ಈ ನಡುವೆಯೇ ಸೀಕ್ವೆಲ್​ ರೈಟ್ಸ್​ ಭಾರಿ ಮೊತ್ತಕ್ಕೆ ಮಾರಾಟವಾಗಿದೆ ಎಂಬ ಸುದ್ದಿ ಹೊರಬಿದ್ದಿದೆ. ಹಿಂದಿ ಭಾಷೆಯಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹಕ್ಕು ಮಾರಾಟವಾಗಿದೆಯಂತೆ. ಪುಷ್ಪ ದಿ ರೈಸ್​ ಬಾಲಿವುಡ್​ ಅಂಗಳದಲ್ಲಿ ದೊಡ್ಡ ಹಿಟ್​ ಕಂಡಿತ್ತು. ಅಲ್ಲು ಆಕ್ಟಿಂಗ್​, ಸುಕುಮಾರ್​ ಟೇಕಿಂಗ್​ಗೆ ಹಿಂದಿ ಪ್ರೇಕ್ಷಕರು ಫಿದಾ ಆಗಿದ್ದರು. ಬಾಲಿವುಡ್​ ಚಿತ್ರಗಳಿಗೆ ಟಕ್ಕರ್​ ಕೊಟ್ಟು ಪುಷ್ಪ ತಲೆ ಎತ್ತಿ ನಿಂತಿತ್ತು. ಇದೀಗ 'ಪುಷ್ಪ 2: ದಿ ರೂಲ್​' 200 ಕೋಟಿ ಮೊತ್ತಕ್ಕೆ ಹಿಂದಿ ರೈಟ್ಸ್​ ಮಾರಾಟವಾಗಿದ್ದು, 75 ಕೋಟಿಗೆ ಆಡಿಯೋ ರೈಟ್ಸ್​ ಸೇಲ್​ ಆಗಿದೆ ಎಂಬ ಮಾಹಿತಿ ಸಿನಿ ಬಜಾರ್​ನಲ್ಲಿ ಓಡಾಡುತ್ತಿದೆ.

ಪುಷ್ಪ: ದಿ ರೈಸ್​ ಹಿಟ್​: 2021ರ ಡಿಸೆಂಬರ್​ 17 ರಂದು ಪುಷ್ಪ: ದಿ ರೈಸ್​ ತೆರೆಗೆ ಬಂದಿತ್ತು. ಚಿತ್ರವು ಜಗತ್ತಿನಾದ್ಯಂತ ಸಿನಿರಸಿಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಸುಕುಮಾರನ್​ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಎಲ್ಲರನ್ನೂ ಸೆಳೆದಿತ್ತು. ​ಕೆಂಪು ಚಂದನ ಮರದ ಕಳ್ಳಸಾಗಣೆ ಕುರಿತ ಕಥಾವಸ್ತುವನ್ನು ಸಿನಿಮಾ ಹೊಂದಿತ್ತು.

ಪುಪ್ಪ: ದಿ ರೈಸ್​ ಚಿತ್ರವು ವಿಶ್ವದಾದ್ಯಂತ ಸುಮಾರು 400 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿತ್ತು. ಈ ಮೂಲಕ 2021ರಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿರುವ ಸಿನಿಮಾಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿತ್ತು. ಮೈತ್ರಿ ಮೂವೀ ಮೇಕರ್ಸ್, ಮುತ್ತಂ ಶೆಟ್ಟಿ ಮೀಡಿಯಾ ಜಂಟಿಯಾಗಿ ನಿರ್ಮಿಸಿದ್ದ ಚಿತ್ರದಲ್ಲಿ ಸುನೀಲ್, ಫಹಾದ್ ಫಾಜಿಲ್, ಅನಸೂಯ ಮುಂತಾದವರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದರು.

ಇದನ್ನೂ ಓದಿ: ಪುಷ್ಪ 2 ಶೂಟಿಂಗ್ ಸೆಟ್​​ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ.. ಗರಿಗೆದರಿದ ಕುತೂಹಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.