ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ-1 ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಇದೀಗ ಪುಷ್ಪ-2 ಸಿನಿಮಾದಲ್ಲಿ ಬ್ಯುಸಿಯಾಗಿರುವ ನಟ ಮತ್ತೊಂದು ಸಿನಿಮಾಗೆ ಸಹಿ ಹಾಕಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಾಂಗ ಜೊತೆ ಅಲ್ಲು ಅರ್ಜುನ್ ಮುಂದಿನ ಸಿನಿಮಾ ಮಾಡಲಿದ್ದಾರೆ.
ಹೌದು. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ಮೊದಲ ಭಾಗದ ಯಶಸ್ಸಿನ ಬಳಿಕ ಪಾರ್ಟ್ 2 ತಯಾರಿಯಲ್ಲಿದ್ದಾರೆ. ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಈ ಸಿನಿಮಾದ ಚಿತ್ರೀಕರಣ ಭರ್ಜರಿಯಲ್ಲಿ ಸಾಗುತ್ತಿದೆ. ಜೊತೆಗೆ ಅಲ್ಲು ಈ ಸಿನಿಮಾ ಬಳಿಕ ಯಾವ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ? ಎಂಬ ಕುತೂಹಲ ಜನರಲ್ಲಿತ್ತು. ಆದರೀಗ ಕುತೂಹಲಕ್ಕೆ ತೆರೆ ಬಿದ್ದಿದೆ.
-
Brace yourselves for this massive collaboration between three powerhouses of India - Producer Bhushan Kumar, Director Sandeep Reddy Vanga and superstar Allu Arjun.@alluarjun @imvangasandeep #BhushanKumar #KrishanKumar @VangaPranay @VangaPictures #ShivChanana @NeerajKalyan_24 pic.twitter.com/xis8mWSGhl
— T-Series (@TSeries) March 3, 2023 " class="align-text-top noRightClick twitterSection" data="
">Brace yourselves for this massive collaboration between three powerhouses of India - Producer Bhushan Kumar, Director Sandeep Reddy Vanga and superstar Allu Arjun.@alluarjun @imvangasandeep #BhushanKumar #KrishanKumar @VangaPranay @VangaPictures #ShivChanana @NeerajKalyan_24 pic.twitter.com/xis8mWSGhl
— T-Series (@TSeries) March 3, 2023Brace yourselves for this massive collaboration between three powerhouses of India - Producer Bhushan Kumar, Director Sandeep Reddy Vanga and superstar Allu Arjun.@alluarjun @imvangasandeep #BhushanKumar #KrishanKumar @VangaPranay @VangaPictures #ShivChanana @NeerajKalyan_24 pic.twitter.com/xis8mWSGhl
— T-Series (@TSeries) March 3, 2023
ಮೊದಲ ಸಿನಿಮಾದಲ್ಲೇ ಸೂಪರ್ ಸಕ್ಸಸ್ ಕಂಡ ನಿರ್ದೇಶಕ ಸಂದೀಪ್ ರೆಡ್ಡಿ ವಾಂಗ ಬಾಲಿವುಡ್ ಅಂಗಳಕ್ಕೆ ಹಾರಿದರು. ಬಳಿಕ ಕಬೀರ್ ಸಿಂಗ್ ಎಂಬ ಹಿಟ್ ಸಿನಿಮಾ ಮಾಡಿದ್ದು, ದೊಡ್ಡ ಮಟ್ಟದಲ್ಲಿಯೇ ಯಶಸ್ವಿ ಕಂಡಿತು. ಅದಾದ ನಂತರ ಮತ್ತೆ ಹಿಂದಿ ಸಿನಿಮಾ ಒಪ್ಪಿಕೊಂಡಿರುವ ನಿರ್ದೇಶಕ, ರಣಬೀರ್ ಕಪೂರ್ ಜೊತೆ ಅನಿಮಲ್ ಸಿನಿಮಾ ಮಾಡುತ್ತಿದ್ದಾರೆ. ಅನಿಮಲ್ನಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ರಣಬೀರ್ ಕಪೂರ್ ಜೊತೆ ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ. ಆದರೆ ಇದೀಗ ಅನಿಮಲ್ ಚಿತ್ರೀಕರಣ ಮುಗಿಯುವ ಮುನ್ನವೇ ನಿರ್ದೇಶಕ ಸಂದೀಪ್ ರೆಡ್ಡಿ, ಅಲ್ಲು ಅರ್ಜುನ್ ಜೊತೆ ಮುಂದಿನ ಸಿನಿಮಾ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ವಿಠಲ್ ಮಲೆಕುಡಿಯ ನಕ್ಸಲ್ ನಂಟು ಆರೋಪ ಪ್ರಕರಣ ಆಧಾರಿತ 19.20.21 ಸಿನಿಮಾ ನಾಳೆ ತೆರೆಗೆ
ಇನ್ನು ಹೆಸರಿಡದ ಈ ಸಿನಿಮಾವನ್ನು ಭೂಷಣ್ ಕುಮಾರ್ ಅವರ ಫಿಲ್ಮ್ ಸ್ಟುಡಿಯೋ ಮತ್ತು ಟೀ ಸೀರಿಸ್ ಹಾಗೂ ಸಂದೀಪ್ ರೆಡ್ಡಿ ಅವರ ಭದ್ರಕಾಳಿ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ. ಅಲ್ಲು ಅರ್ಜುನ್ ಹೊಸ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲೇ ರಿಲೀಸ್ ಆಗಲಿದೆ. ದೊಡ್ಡ ಮಟ್ಟದಲ್ಲಿ ಸಿನಿಮಾ ಪ್ಲ್ಯಾನ್ ಮಾಡಿರುವ ಚಿತ್ರತಂಡ ಸದ್ಯ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿದ್ದಾರೆ. ಇನ್ನೂ ಈ ಸಿನಿಮಾದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ, ನಾಯಕಿ ಯಾರು? ಎಂಬೆಲ್ಲಾ ಪ್ರಶ್ನೆಗಳಿಗೆ ಸದ್ಯದಲ್ಲೇ ಉತ್ತರ ಸಿಗಲಿದೆ. ನಿರ್ದೇಶಕ ಸಂದೀಪ್ ರೆಡ್ಡಿ ಪ್ರಭಾಸ್ ಜೊತೆ ಸ್ಪಿರಿಟ್ ಸಿನಿಮಾ ಮಾಡುತ್ತಿದ್ದಾರೆ. ಹಾಗಾಗಿ ಈ ಸಿನಿಮಾ ಚಿತ್ರೀಕರಣ ಮುಗಿದ ಬಳಿಕವಷ್ಟೇ ಅಲ್ಲು ಅರ್ಜುನ್ ಜೊತೆ ಶೂಟಿಂಗ್ ಪ್ರಾರಂಭಿಸಲಿದ್ದಾರೆ.
'ಪ್ಯಾನ್ ಇಂಡಿಯಾ ಸ್ಟಾರ್': ಪುಷ್ಪ-1 ಸಿನಿಮಾವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತು. ಈ ಚಿತ್ರದ ಯಶಸ್ಸಿನಿಂದಲೇ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದರು. ಇದೀಗ ಪುಷ್ಪ-2 ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದು, ಭಾರೀ ನಿರೀಕ್ಷೆ ಮೂಡಿಸಿದೆ. ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಅಮೆರಿಕದಾದ್ಯಂತ ಆರ್ಆರ್ಆರ್ ಸದ್ದು: ಪ್ರೇಕ್ಷಕರ ಚಪ್ಪಾಳೆಗೆ ಸಾಕ್ಷಿಯಾದ ಯುಎಸ್ ಚಿತ್ರಮಂದಿರಗಳು