ETV Bharat / entertainment

'ಆಹಾ'ದಲ್ಲಿ​ ಅಲ್ಲು ಅರ್ಜುನ್​.. ಫ್ಯಾನ್ಸ್​ಗೆ ಕಾದಿದೆ ಬಿಗ್​ ಸರ್ಪ್ರೈಸ್​.. - ಈಟಿವಿ ಭಾರತ ಕನ್ನಡ

ಓಟಿಟಿ ಪ್ಲಾಟ್​ಫಾರ್ಮ್ 'ಆಹಾ'ದಲ್ಲಿ​ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್ ಕಾಣಿಸಿಕೊಳ್ಳಲಿದ್ದಾರೆ.

allu
ಅಲ್ಲು ಅರ್ಜುನ್
author img

By

Published : Mar 16, 2023, 12:30 PM IST

2021ರಲ್ಲಿ ಬಿಡುಗಡೆಯಾದ ಪುಷ್ಪ- ದಿ ರೈಸ್​ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಮಾತ್ರವಲ್ಲದೇ ಪ್ರಪಂಚದಾದ್ಯಂತ ಹಿಟ್​ ಆಗಿದೆ. ಇದೀಗ ಸೂಪರ್​ ಹಿಟ್​ ಪುಷ್ಪದ ಮುಂದುವರಿದ ಭಾಗ ಪುಷ್ಪ-2 ಚಿತ್ರೀಕರಣ ನಡೆಯುತ್ತಿದೆ. ಶೂಟಿಂಗ್​ನಲ್ಲಿ ಫುಲ್​ ಬ್ಯುಸಿಯಾಗಿದ್ದ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ಸದ್ಯ ಫ್ಯಾಮಿಲಿ ಜೊತೆ ಟೈಮ್​ ಸ್ಪೆಂಡ್​ ಮಾಡುತ್ತಿದ್ದಾರೆ. ಪುಷ್ಪಾ ಸಿನಿಮಾದಿಂದಲೇ ಕ್ರೇಜ್​ ಹೆಚ್ಚಿಸಿಕೊಂಡಿರುವ ಅಲ್ಲು ಅವರ ಮುಂದಿನ ಯೋಜನೆಗಳ ಬಗ್ಗೆ ಅಭಿಮಾನಿಗಳು ಆಸಕ್ತಿ ತೋರುತ್ತಿದ್ದಾರೆ. ಅದರಂತೆ ಓಟಿಟಿ ಪ್ಲಾಟ್​ಫಾರ್ಮ್​ 'ಆಹಾ' ಫ್ಯಾನ್ಸ್​ಗೆ ಭರ್ಜರಿ ಸರ್ಪ್ರೈಸ್​ ಪ್ಲಾನ್​ ಮಾಡಿದೆ.

ಈಗಾಗಲೇ ನಂದಮೂರಿ ಬಾಲಕೃಷ್ಣ ಜೊತೆ ಎನ್‌ಬಿಕೆ ಅನ್‌ಸ್ಟಾಪೇಬಲ್ ಶೋ ಮೂಲಕ ಅಭಿಮಾನಿಗಳನ್ನು ಥ್ರಿಲ್ ಮಾಡಿರುವ 'ಆಹಾ' ಇದೀಗ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ಪ್ಲಾನ್ ಮಾಡಿದೆ. ಈ ಬಗ್ಗೆ 'ಆಹಾ' ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತವಾಗಿ ಮಾಹಿತಿ ನೀಡಿದೆ. ನೀವು ಇಲ್ಲಿಯವರೆಗೆ ಅಲ್ಲು ಅರ್ಜುನ್​ ಅನ್ನು ಮಾಸ್​ ಮತ್ತು ಕ್ಲಾಸಿಯಾಗಿ ನೋಡಿರುತ್ತೀರಿ. ಆದರೆ ಈ ಬಾರಿ 'ಆಹಾ' ನಿಮಗೆ ಅವರನ್ನು ಬೇರೊಂದು ಲುಕ್​ನಲ್ಲಿ ತೋರಿಸಲು ಸಜ್ಜಾಗಿದೆ. ಅದಕ್ಕಾಗಿ ಕಾಯುತ್ತಿರಿ ಎಂದು ಅಲ್ಲು ಅರ್ಜುನ್​ ಫೋಟೋ ಜೊತೆಗೆ ಕ್ಯಾಪ್ಶನ್​ ಬರೆದು 'ಆಹಾ' ಪೋಸ್ಟ್​ ಮಾಡಿದೆ.

ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲೇ ಭಾಷಣ ಮಾಡಲಿದ್ದಾರೆ 'ಕಾಂತಾರ' ರಿಷಬ್‌ ಶೆಟ್ಟಿ!

ಇದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಜೊತೆಗೆ ಈ ಬಗ್ಗೆ ಚರ್ಚೆ ಶುರುವಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ನೆಟಿಜನ್​ಗಳು ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸುತ್ತಿದ್ದಾರೆ. ಅವರು ಯಾವುದಾದರೂ ಸಂದರ್ಶನದಲ್ಲಿ ಕಾಣಿಸಿಕೊಳ್ಳಲಿದ್ದಾರಾ? ಇನ್ಯಾವುದಾದರೂ ಪ್ರೋಗ್ರಾಂ ಅನ್ನು ನಿರೂಪಣೆ ಮಾಡಲಿದ್ದಾರಾ? ಅಥವಾ ಯಾವುದಾದರೂ ಡ್ಯಾನ್ಸ್​ ಶೋ ತೀರ್ಪುಗಾರರಾಗಲಿದ್ದಾರಾ? ಎಂದೆಲ್ಲಾ ತಡೆಯಲಾಗದೇ ಅಭಿಮಾನಿಗಳು ತಮ್ಮ ಕುತೂಹಲವನ್ನು ಕಮೆಂಟ್​ ಮೂಲಕ ತೆರೆದಿಡುತ್ತಿದ್ದಾರೆ.

ಆದರೆ ಸದ್ಯ 'ಆಹಾ'ದಲ್ಲಿ ಹಲವು ಶೋಗಳು ನಡೆಯುತ್ತಿವೆ. 'ಅನ್‌ಸ್ಟಾಪಬಲ್', 'ಡ್ಯಾನ್ಸ್ ಐಕಾನ್', 'ಇಂಡಿಯನ್ ಐಡಲ್ 2' ಮುಂತಾದ ಶೋಗಳು ಪ್ರೇಕ್ಷಕರನ್ನು ರಂಜಿಸುತ್ತಿವೆ. ಇದರಲ್ಲಿ ಅಲ್ಲು ಅರ್ಜುನ್​ ಗೆಸ್ಟ್ ಅಪಿಯರೆನ್ಸ್ ನೀಡುತ್ತಾರೋ? ಯಾವುದಾದರೂ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಬರುತ್ತಾರೋ? ಅಥವಾ ಅವರ ಜೊತೆ ಹೊಸ ಶೋ ಆರಂಭಿಸುತ್ತಾರೋ? ಎಂಬ ಊಹಾಪೋಹಗಳು ಕೇಳಿ ಬರುತ್ತಿವೆ. ಆದರೆ 'ಆಹಾ' ಮತ್ತೊಂದು ಅಧಿಕೃತ ಘೋಷಣೆ ಮಾಡುವವರೆಗೂ ಯಾವುದೇ ಸ್ಪಷ್ಟತೆ ಇಲ್ಲ ಎನ್ನುತ್ತಾರೆ ಅಭಿಮಾನಿಗಳು.

ಇದನ್ನೂ ಓದಿ: ನಾಳೆ 4,000 ಥಿಯೇಟರ್‌ಗಳಲ್ಲಿ 'ಕಬ್ಜ' ಬಿಡುಗಡೆ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಉಪ್ಪಿ ಟೀಂ

ಇನ್ನು, ಸಿನಿಮಾ ವಿಚಾರವಾಗಿ ಹೇಳುವುದಾದರೆ, ಅಲ್ಲು ಅರ್ಜುನ್​ ಸದ್ಯ ಪುಷ್ಪ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶರವೇಗದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಈ ಸಿನಿಮಾ ಈಗಾಗಲೇ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಸುಕುಮಾರ್​ ನಿರ್ದೇಶನದ ಈ ಚಿತ್ರದಲ್ಲಿ ಅಲ್ಲು ಅರ್ಜುನ್​ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಮಲಯಾಳಂ ಸ್ಟಾರ್ ಫಹಾದ್ ಫಾಜಿಲ್ ಜೊತೆಗೆ ಅನಸೂಯಾ ಮತ್ತು ಸುನೀಲ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಕೂಡ ಅಭಿನಯಿಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.