ETV Bharat / entertainment

ಮಗಳು ಅರ್ಹಾಳ ಯೋಗಾಭ್ಯಾಸ ಕಂಡ ಅಲ್ಲು ಅರ್ಜುನ್​ ಶಾಕ್​! - ಈಟಿವಿ ಭಾರತ ಕನ್ನಡ

ಸ್ನೇಹಾ ರೆಡ್ಡಿ ಹಂಚಿಕೊಂಡಿರುವ ಫೋಟೋದಲ್ಲಿ ಅಲ್ಲು ಅರ್ಜುನ್​, ಮಗಳು ಅರ್ಹಾ ಮಾಡುವ ಯೋಗಾಭ್ಯಾಸವನ್ನು ಕಂಡು ಆಶ್ಚರ್ಯಪಟ್ಟಿದ್ದಾರೆ.

Yoga
ಮಗಳು ಅರ್ಹಾಳ ಯೋಗಾಭ್ಯಾಸ ಕಂಡ ಅಲ್ಲು ಅರ್ಜುನ್​ ಶಾಕ್​!
author img

By

Published : Mar 21, 2023, 2:15 PM IST

ಟಾಲಿವುಡ್​ ನಟ ಅಲ್ಲು ಅರ್ಜುನ್​ ಫ್ಯಾಮಿಲಿ ಜೊತೆ ಹೆಚ್ಚು ಟೈಮ್​ ಸ್ಪೆಂಡ್​ ಮಾಡುತ್ತಾರೆ. ಅದರಲ್ಲೂ ಮಗಳು ಅಲ್ಲು ಅರ್ಹಾ ಜೊತೆಗಿನ ವಿಡಿಯೋಗಳನ್ನು ಆಗಾಗ ಶೇರ್​ ಮಾಡುತ್ತಿರುತ್ತಾರೆ. ಅಲ್ಲು ಅರ್ಜುನ್​ಗೆ ಮಗಳೆಂದರೆ ಕೊಂಚ ಹೆಚ್ಚೇ ಪ್ರೀತಿ. ಹೀಗಾಗಿಯೇ ಅಲ್ಲು ತಮ್ಮ ಹೆಚ್ಚಿನ ಸಮಯವನ್ನು ಅವಳಿಗಾಗಿಯೇ ಮೀಸಲಿಡುತ್ತಾರೆ. ಅಲ್ಲದೇ ದಿನನಿತ್ಯ ಅಪ್ಪನೊಂದಿಗೆ ಸೇರಿಕೊಂಡು ಮಗಳು ಕೂಡ ಜಾಗಿಂಗ್​, ವ್ಯಾಯಾಮಗಳನ್ನು ಮಾಡುತ್ತಾಳೆ.

ಇಂದು ಅಲ್ಲು ಅರ್ಜುನ್​ ಪತ್ನಿ ಅಲ್ಲು ಸ್ನೇಹಾ ರೆಡ್ಡಿ ಅವರು ಪತಿ ಮತ್ತು ಮಗಳ ಫೋಟೋವೊಂದನ್ನು ಇನ್​ಸ್ಟಾಗ್ರಾಮ್​ನಲ್ಲಿ ಸ್ಟೋರಿ ಹಾಕಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್​ ಕುಳಿತುಕೊಂಡು, ಮಗಳು ಅರ್ಹಾ ಮಾಡುವ ಯೋಗಾಭ್ಯಾಸವನ್ನು ಆಶ್ಚರ್ಯಚಕಿತರಾಗಿ ನೋಡುತ್ತಿರುವುದು ಕಾಣಬಹುದು. ಸ್ನೇಹಾ ಈ ಪೋಟೋವನ್ನು ಹಂಚಿಕೊಂಡು ಅಲ್ಲು ಅರ್ಜುನ್​ ಅವರನ್ನು ಟ್ಯಾಗ್​​ ಮಾಡಿದ್ದಾರೆ. ಜೊತೆಗೆ ಗುಡ್​ ಮಾರ್ನಿಂಗ್​ ಸ್ಟಿಕ್ಕರ್​ ಜೊತೆ ಫೋಟೋವನ್ನು ಶೇರ್​ ಮಾಡಿದ್ದಾರೆ. ಚಿತ್ರದಲ್ಲಿ ಅಲ್ಲು ಅರ್ಜುನ್​ ಕಪ್ಪು ಶಾರ್ಟ್ಸ್​ ಮತ್ತು ಟೀ ಶರ್ಟ್​ ಧರಿಸಿದ್ದು, ಮಗಳು ಆರ್ಹಾ ನೈಟ್​ ಡ್ರೆಸ್​ನಲ್ಲಿ ಯೋಗಭ್ಯಾಸ ಮಾಡುತ್ತಿದ್ದಾರೆ.

Yoga
ಮಗಳು ಅರ್ಹಾಳ ಯೋಗಾಭ್ಯಾಸ ಕಂಡ ಅಲ್ಲು ಅರ್ಜುನ್​ ಶಾಕ್​!

ಈ ಫೋಟೋವನ್ನು ಹೈದರಾಬಾದ್​ನಲ್ಲಿರುವ ಅಲ್ಲು ಅರ್ಜುನ್​ ಮನೆಯ ಗಾರ್ಡನ್​ನಲ್ಲಿ ತೆಗೆಯಲಾಗಿದೆ. ಸ್ನೇಹಾ ರೆಡ್ಡಿ ಅಪ್ಪ, ಮಗಳಿಗೆ ಗೊತ್ತಾಗದಂತೆ ಈ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಅವರ ಪಾಡಿಗೆ ಮಾತನಾಡಿಕೊಂಡು ಯೋಗ ಮಾಡುತ್ತಿರುವ ವೇಳೆ ಕ್ಯಾಂಡಿಡ್​ ಆಗಿ ದೃಶ್ಯವನ್ನು ಕ್ಯಾಪ್ಚರ್​ ಮಾಡಿದ್ದಾರೆ. ಸಿನಿಮಾ ವಿಚಾರವಾಗಿ ಸ್ಟೈಲಿಶ್​ ಸ್ಟಾರ್​ ಎಷ್ಟೇ ಬ್ಯುಸಿಯಾಗಿದ್ದರೂ ಸಹ ಎಂದಿಗೂ ಅವರು ಫ್ಯಾಮಿಲಿಯನ್ನು ನೆಗ್ಲೇಟ್​ ಮಾಡುವುದಿಲ್ಲ ಎಂಬುದಕ್ಕೆ ಇದುವೇ ಸಾಕ್ಷಿ.

ಇದನ್ನೂ ಓದಿ: "ದಸರಾ" ಚಿತ್ರತಂಡಕ್ಕೆ ಚಿನ್ನದ ನಾಣ್ಯ ಗಿಫ್ಟ್​ ನೀಡಿದ ನಟಿ ಕೀರ್ತಿ ಸುರೇಶ್! ಯಾಕೆ ಗೊತ್ತಾ?

ಅಲ್ಲು ಸಿನಿಮಾ ಬಗ್ಗೆ ಹೇಳುವುದಾದರೆ.. ಅಲ್ಲು ಅರ್ಜುನ್​ ಸದ್ಯ ಪುಷ್ಪ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶರವೇಗದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಈ ಸಿನಿಮಾ ಈಗಾಗಲೇ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಸುಕುಮಾರ್​ ನಿರ್ದೇಶನದ ಈ ಚಿತ್ರದಲ್ಲಿ ಅಲ್ಲು ಅರ್ಜುನ್​ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಮಲಯಾಳಂ ಸ್ಟಾರ್ ಫಹಾದ್ ಫಾಜಿಲ್ ಜೊತೆಗೆ ಅನಸೂಯಾ ಮತ್ತು ಸುನೀಲ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಕೂಡ ಅಭಿನಯಿಸಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ.

ಇದಲ್ಲದೇ ತೆಲುಗಿನ ಖ್ಯಾತ ನಿರ್ದೇಶಕ ಅರ್ಜುನ್​ ರೆಡ್ಡಿ ಖ್ಯಾತಿಯ ಸಂದೀಪ್​ ರೆಡ್ಡಿ ವಾಂಗ ಜೊತೆ ಅಲ್ಲು ಅರ್ಜುನ್ ಮುಂದಿನ​ ಸಿನಿಮಾ ಮಾಡಲಿದ್ದಾರೆ. ಇನ್ನು ಹೆಸರಿಡದ ಈ ಸಿನಿಮಾವನ್ನು ಭೂಷಣ್​ ಕುಮಾರ್​ ಅವರ ಫಿಲ್ಮ್​ ಸ್ಟುಡಿಯೋ ಮತ್ತು ಟೀ ಸೀರಿಸ್​ ಹಾಗೂ ಸಂದೀಪ್​ ರೆಡ್ಡಿ ಅವರ ಭದ್ರಕಾಳಿ ಪಿಕ್ಚರ್ಸ್​ ನಿರ್ಮಾಣ ಮಾಡುತ್ತಿದೆ. ಅಲ್ಲು ಅರ್ಜುನ್​ ಹೊಸ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲೇ ರಿಲೀಸ್ ಆಗಲಿದೆ. ದೊಡ್ಡ ಮಟ್ಟದಲ್ಲಿ ಸಿನಿಮಾ ಪ್ಲ್ಯಾನ್​ ಮಾಡಿರುವ ಚಿತ್ರತಂಡ ಸದ್ಯ ಪ್ರಿ ಪ್ರೊಡಕ್ಷನ್​ ಕೆಲಸದಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: 'ಮೀಸೆ ಬಿಟ್ಟಿದ್ರೆ ಚೆನ್ನಾಗಿರ್ತಿತ್ತು': 'ಗುರುದೇವ್​ ಹೊಯ್ಸಳ' ಟ್ರೇಲರ್ ಲಾಂಚ್​ ಮಾಡಿದ ಕಿಚ್ಚ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.