ETV Bharat / entertainment

ಬರ್ತ್‌ಡೇ ದಿನ ಅಪಾರ ಪ್ರೀತಿ ತೋರಿದ ಅಭಿಮಾನಿಗಳಿಗೆ ಅಲ್ಲು ಅರ್ಜುನ್​ ಕೃತಜ್ಞತೆ - ಅಲ್ಲು ಅರ್ಜುನ್​ ಅಭಿಮಾನಿಗಳು

ನಟ ಅಲ್ಲು ಅರ್ಜುನ್ ತಮ್ಮನ್ನು ನೋಡಲು ಬಂದ ಅಭಿಮಾನಿಗಳಿಗೆ ಮತ್ತು ಸೋಶಿಯಲ್​ ಮೀಡಿಯಾದಲ್ಲಿ ಪ್ರೀತಿಯ ಮಳೆಗೈದ ಫ್ಯಾನ್ಸ್​ಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Allu Arjun birthday
ಅಲ್ಲು ಅರ್ಜುನ್​ ಕೃತಜ್ಞತಾ ಪೋಸ್ಟ್
author img

By

Published : Apr 9, 2023, 4:33 PM IST

ಏಪ್ರಿಲ್ 8ರಂದು (ನಿನ್ನೆ, ಶನಿವಾರ) ಅಲ್ಲು ಅರ್ಜುನ್ 41ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ 'ಪುಷ್ಪ' ತಾರೆಗೆ ಸಾಕಷ್ಟು ಸಂಖ್ಯೆಯ ಶುಭಾಶಯಗಳ ಸಂದೇಶಗಳು ಹರಿದು ಬಂದಿವೆ. ಆದರೆ ಅವರ ಕಟ್ಟಾ ಅಭಿಮಾನಿಗಳು ನಟನನ್ನು ಖುದ್ದಾಗಿ ವೀಕ್ಷಿಸಲು ಇಚ್ಛಿಸಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಹೈದರಾಬಾದ್​ನ ಅವರ ನಿವಾಸದ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಅಗಾಧ ಪ್ರೀತಿ ಗಳಿಸಿದ ಸೂಪರ್​ ಸ್ಟಾರ್​ ಇಂದು ಸಾಮಾಜಿಕ ಮಾಧ್ಯಮದ ಮೂಲಕ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

ಪ್ರೀತಿಪೂರ್ವಕ ಕೃತಜ್ಞತೆಯ ಪೋಸ್ಟ್ ಅನ್ನು ಅಲ್ಲು ಅರ್ಜುನ್​ ಹಂಚಿಕೊಂಡಿದ್ದಾರೆ. 20.7 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿರುವ ಇವರು ಇನ್‌ಸ್ಟಾಗ್ರಾಮ್​ನಲ್ಲಿ ಸುಂದರ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುವ ಫೋಟೋ ಇದಾಗಿದ್ದು, "ಎಲ್ಲರಿಗೂ ಧನ್ಯವಾದಗಳು. ಪ್ರೀತಿ ಮತ್ತು ಶುಭಾಶಯಗಳಿಗೆ ಧನ್ಯವಾದಗಳು. ನಾನು ನಿಜವಾಗಿಯೂ ಆಶೀರ್ವದಿಸಲ್ಪಟ್ಟಿದ್ದೇನೆ" ಎಂದು ಬರೆದಿದ್ದಾರೆ.

ಜುಬಿಲಿ ಹಿಲ್ಸ್ ಪ್ರದೇಶದಲ್ಲಿರುವ ಅಲ್ಲು ಅರ್ಜುನ್ ಅವರ ನಿವಾಸದ ಬಳಿ ಶನಿವಾರ ಅಭಿಮಾನಿಗಳ ಸಾಗರವೇ ಹರಿದು ಬಂದಿತ್ತು. 'ಪುಷ್ಪರಾಜ್' ತಮ್ಮ ಅಭಿಮಾನಿಗಳನ್ನು ನಿರಾಶೆಗೊಳಿಸಲಿಲ್ಲ. ಮಗಳು ಅಲ್ಲು ಅರ್ಹಾ ಮತ್ತು ಮಗ ಅಲ್ಲು ಅಯಾನ್ ಜೊತೆ ಬಂದ ಬಹುಬೇಡಿಕೆಯ ನಟ ಅಭಿಮಾನಿಗಳತ್ತ ಕೈ ಬೀಸಿದರು. ಬ್ಲ್ಯಾಕ್​ ಟಿ ಶರ್ಟ್, ವೈಟ್​ ಪ್ಯಾಂಟ್​, ಸನ್​ ಗ್ಲಾಸ್​ ಹಾಕಿದ್ದ ಅಲ್ಲು ಅರ್ಜುನ್​ ಕೂಲ್​ ಲುಕ್​ನಲ್ಲಿ ಕಂಗೊಳಿಸಿದ್ದರು.

ಇದೆಲ್ಲದರ ನಡುವೆ ಪುಷ್ಪ: ದಿ ರೂಲ್ ನಿರ್ಮಾಪಕರು ಅಲ್ಲು ಅರ್ಜುನ್ ಅಭಿಮಾನಿಗಳ ಖುಷಿಗೆ ಕಾರಣರಾಗಿದ್ದಾರೆ. ಪುಷ್ಪ ಸೀಕ್ವೆಲ್‌ನ ಬಹು ನಿರೀಕ್ಷಿತ ಟೀಸರ್ ಬಿಡುಗಡೆ ಮಾಡುವುದರಿಂದ ಹಿಡಿದು ಸೀರೆಯುಟ್ಟಿರುವ ನಟನ ಆಕರ್ಷಕ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಸ್ಪೆಷಲ್​ ಗಿಫ್ಟ್​ ಕೊಟ್ಟಿದೆ.

ಇದನ್ನೂ ಓದಿ: ಈಸ್ಟರ್‌ಗೆ ಶುಭ ಕೋರಿ ಜೈಲಿನಿಂದಲೇ ಜಾಕ್ವೆಲಿನ್‌ಗೆ ಪ್ರೇಮ ಪತ್ರ ಬರೆದ ಸುಕೇಶ್ ಚಂದ್ರಶೇಖರ್

ಚಿತ್ರತಂಡ ಈ ಮೊದಲೇ ಕೊಟ್ಟ ಮಾಹಿತಿಯಂತೆ ಏಪ್ರಿಲ್​ 7ರ ಸಂಜೆ 4 ಗಂಟೆ 5 ನಿಮಿಷಕ್ಕೆ ಟೀಸರ್​ ಬಿಡುಗಡೆ ಮಾಡಿತ್ತು. ಟೀಸರ್‌ನಲ್ಲಿ ಇಡೀ ನಾಯಕನಟ ಪುಷ್ಪರಾಜ್​​ (ಅಲ್ಲು ಅರ್ಜುನ್​) ಹುಡುಕಾಟವೇ ನಡೆಯುತ್ತೆ. ಗುಂಡೇಟು ತಿಂದು ಕಣ್ಮರೆಯಾದ ಪುಷ್ಪರಾಜ್​​ ಕೊನೆಗೆ ಹುಲಿ ಜೊತೆ ಕಾಣಿಸಿಕೊಳ್ಳುತ್ತಾನೆ. ಟೀಸರ್​ ಸಾಕಷ್ಟು ಕುತೂಹಲ ಮೂಡಿಸಿದ್ದು, ಕ್ರೇಜ್​ ಕಡಿಮೆ ಆಗುವ ಮುನ್ನವೇ (ನಿನ್ನೆ) ಅಲ್ಲು ಅರ್ಜುನ್ ಅವರ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಸೀರೆಯುಟ್ಟು, ಆಭರಣಗಳನ್ನು ತೊಟ್ಟು ಕಾಣಿಸಿಕೊಂಡಿದ್ದು 'ಪುಷ್ಪಾ 2' ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.

ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ಜಯಾ ಬಚ್ಚನ್: ಅಮ್ಮನಿಗೆ ವಿಶೇಷವಾಗಿ ಶುಭಾಶಯ ಕೋರಿದ ಪುತ್ರ ಅಭಿಷೇಕ್

ಮೈತ್ರಿ ಮೂವೀ ಮೇಕರ್ಸ್, ಮುತ್ತಂ ಶೆಟ್ಟಿ ಮೀಡಿಯಾ ನಿರ್ಮಾಣದ ಪುಷ್ಪ 1 ಚಿತ್ರ 2021ರ ಕೊನೆಯಲ್ಲಿ ತೆರೆಕಂಡಿತ್ತು. ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ ಚಿತ್ರ ಸುಮಾರು 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್​ ಮಾಡಿದೆ. ಸುಕುಮಾರ್​ ನಿರ್ದೇಶನದ ಚಿತ್ರದಲ್ಲಿ ಅಲ್ಲು ಅರ್ಜುನ್​ ಜೊತೆಗೆ ರಶ್ಮಿಕಾ ಮಂದಣ್ಣ, ಸುನೀಲ್, ಫಹಾದ್ ಫಾಜಿಲ್, ಅನಸೂಯ ಮುಂತಾದವರು ನಟಿಸಿದ್ದರು. ಕೆಲ ಪ್ರಮುಖ ಪಾತ್ರಗಳು ಈ ಚಿತ್ರದಲ್ಲಿಯೂ ಮುಂದುವರಿದಿದ್ದು, ಸಿನಿಮಾ ಬಗ್ಗೆ ಹೆಚ್ಚಿನ ಗುಟ್ಟು ಬಿಟ್ಟುಕೊಟ್ಟಿಲ್ಲ ಚಿತ್ರತಂಡ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.