ETV Bharat / entertainment

53 ವರ್ಷಗಳ ನಂತರ ಜನನ ಪ್ರಮಾಣಪತ್ರ ಪಡೆದ ನಟ ನಾಸಿರುದ್ದೀನ್ ಶಾ ಪುತ್ರಿ ಹಿಬಾ: ಕಾರಣವೇನು ಗೊತ್ತಾ? - ಉತ್ತರ ಪ್ರದೇಶದ ಅಲಿಗಢ ಮಹಾನಗರ ಪಾಲಿಕೆ

Naseeruddin Shah Daughter Heeba: ಉತ್ತರ ಪ್ರದೇಶದ ಅಲಿಗಢ ಮಹಾನಗರ ಪಾಲಿಕೆಯಿಂದ 53 ವರ್ಷಗಳ ನಂತರ ಹಿರಿಯ ನಟ ನಾಸಿರುದ್ದೀನ್ ಶಾ ಅವರ ಪುತ್ರಿ ಹಿಬಾ ಶಾ ಜನನ ಪ್ರಮಾಣಪತ್ರ ಪಡೆದಿದ್ದಾರೆ.

actor-naseeruddin-shahs-daughter-heeba
ನಟ ನಾಸಿರುದ್ದೀನ್ ಶಾ ಪುತ್ರಿ ಹಿಬಾ
author img

By ETV Bharat Karnataka Team

Published : Sep 30, 2023, 4:17 PM IST

ಅಲಿಗಢ (ಉತ್ತರ ಪ್ರದೇಶ): ಬಾಲಿವುಡ್​ನ ಹಿರಿಯ ನಟ ನಾಸಿರುದ್ದೀನ್ ಶಾ ತಮ್ಮ ಪುತ್ರಿ ಹಿಬಾ ಶಾ ಅವರಿಗೆ ಜನನ ಪ್ರಮಾಣಪತ್ರವನ್ನು ಉತ್ತರ ಪ್ರದೇಶದ ಅಲಿಗಢ ಮಹಾನಗರ ಪಾಲಿಕೆಯು ವಿತರಿಸಿದೆ. 53 ವರ್ಷಗಳ ನಂತರ ಹಿಬಾ ತಮ್ಮ ಜನನ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಈ ವಿಷಯ ಕಳೆದ ಮೂರು ತಿಂಗಳಿಂದ ಸಾರ್ವಜನಿಕ ಚರ್ಚೆಗೂ ಒಳಪಟ್ಟಿತ್ತು.

ನಾಸಿರುದ್ದೀನ್ ಶಾ ಅವರ ಮಗಳು 1970ರಲ್ಲಿ ಅಲಿಗಢದ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಜನಿಸಿದ್ದರು. ಸುಮಾರು 53 ವರ್ಷಗಳ ನಂತರ ಜನನ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಜುಲೈ ತಿಂಗಳಲ್ಲಿ ಹಿಬಾ ಶಾ ಜನನ ಪ್ರಮಾಣಪತ್ರ ಪಡೆಯಲು ಸಂಬಂಧಿಕರೊಬ್ಬರ ಮೂಲಕ ಮುನ್ಸಿಪಲ್ ಕಾರ್ಪೊರೇಷನ್‌ಗೆ ಅರ್ಜಿ ಹಾಕಿದ್ದರು. ಆಗ ಪಾಲಿಕೆಯು ಪ್ರಮಾಣಪತ್ರ ನೀಡಲು ಬಲವಾದ ದಾಖಲೆಗಳನ್ನು ಕೇಳಿತ್ತು. ಇದಾದ ಬಳಿಕ ಮತ್ತೊಮ್ಮೆ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಸಿಎಂಒ (ಮುಖ್ಯ ವೈದ್ಯಾಧಿಕಾರಿ ಕಚೇರಿ) ಮತ್ತು ಎಸ್​ಡಿಎಂ (ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್​) ವರದಿ ಆಧಾರದ ಮೇಲೆ ಜನನ ಪ್ರಮಾಣ ಪತ್ರ ನೀಡಲಾಗಿದೆ.

ಜನನ ಪ್ರಮಾಣ ಪತ್ರ ನೀಡುವ ಮುನ್ನ ನಗರಸಭೆ ಎಲ್ಲ ದಾಖಲೆಗಳನ್ನು ಪರಿಶೀಲಿಸಿದೆ. ಆಗಸ್ಟ್‌ನಲ್ಲಿ ಇವುಗಳ ಪರಿಶೀಲನೆಗಾಗಿ ಮುಖ್ಯ ವೈದ್ಯಾಧಿಕಾರಿ ಕಚೇರಿಗೆ ಪತ್ರವನ್ನು ಬರೆಲಾಗಿತ್ತು. ಮುಖ್ಯ ವೈದ್ಯಾಧಿಕಾರಿ ಕಚೇರಿಯು ನಿಯಮಾನುಸಾರ ಜನನ ಪ್ರಮಾಣಪತ್ರ ನೀಡುವಂತೆ ಆದೇಶಿಸಿತ್ತು. ಇದಾದ ನಂತರ ಸೆಪ್ಟೆಂಬರ್‌ನಲ್ಲಿ ಎಸ್‌ಡಿಎಂಗೆ ಈ ಪತ್ರ ತಲುಪಿತ್ತು. ಎಲ್ಲ ವರದಿಗಳನ್ನು ಪರಿಶೀಲಿಸಿ ಜನನ ಪ್ರಮಾಣಪತ್ರವನ್ನು ನೀಡಲು ಮ್ಯಾಜಿಸ್ಟ್ರೇಟ್ ಶಿಫಾರಸು ಮಾಡಿದ್ದಾರೆ.

ಹೆರಿಗೆ ಮಾಡಿಸಿದ ನರ್ಸಿಂಗ್ ಹೋಮ್ ಬಂದ್: ಮಗು ಜನಿಸಿದ ಒಂದು ವರ್ಷದೊಳಗೆ ಜನನ ಪ್ರಮಾಣಪತ್ರ ನೀಡಿದರೆ ಮ್ಯಾಜಿಸ್ಟ್ರೇಟ್ ವರದಿ ಅಗತ್ಯವಿರಲ್ಲ. ಆದರೆ, ಇದು 53 ವರ್ಷಗಳ ಹಿಂದಿನ ಪ್ರಕರಣವಾಗಿರುವುದರಿಂದ ಆರೋಗ್ಯ ಇಲಾಖೆ ಮತ್ತು ಮ್ಯಾಜಿಸ್ಟ್ರೇಟ್ ವರದಿ ತರಿಸಿಕೊಳ್ಳಲಾಗಿದೆ. ಇದರ ಪ್ರಕಾರ, ನಾಸಿರುದ್ದೀನ್ ಶಾ ಅವರ ಮಗಳ ಹಿಬಾ ಟಿಕಾರಾಂ ನರ್ಸಿಂಗ್ ಹೋಮ್‌ನಲ್ಲಿ ಜನರಿಸುವುದು ದಾಖಲೆಗಳು ಮೂಲಕ ದೃಢಪಡಿಸಲಾಗಿದೆ. ಆದರೆ, ಈಗ ಆ ನರ್ಸಿಂಗ್ ಹೋಮ್ ಮುಚ್ಚಿದೆ.

ಪಾಸ್​ಪೋರ್ಟ್​ಗಾಗಿ ಜನನ ಪ್ರಮಾಣಪತ್ರ: ಪಾಸ್​ಪೋರ್ಟ್​ ಪಡೆಯಲು ಹಿಬಾ ಅವರಿಗೆ ಜನನ ಪ್ರಮಾಣಪತ್ರ ಬೇಕಾಗಿತ್ತು. ಇದಕ್ಕಾಗಿಯೇ ಪ್ರಮಾಣಪತ್ರಕ್ಕಾಗಿ ಅವರು ಅರ್ಜಿ ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಮುಖ್ಯ ತೆರಿಗೆ ಮೌಲ್ಯಮಾಪನ ಅಧಿಕಾರಿ ಅಶೋಕ್ ಕುಮಾರ್ ಸಿಂಗ್ ಪ್ರತಿಕ್ರಿಯಿಸಿ, ಮುಂಬೈ ನಿವಾಸಿಯಾದ ನಟ ನಾಸಿರುದ್ದೀನ್ ಶಾ ಅವರ ಮಗಳ ಜನನ ಪ್ರಮಾಣಪತ್ರ ವಿತರಿಸಲಾಗಿದೆ. ಎಸ್‌ಡಿಎಂ ಮತ್ತು ಸಿಎಂಒ ಕಚೇರಿಯ ವರದಿ ಪ್ರಕಾರ ಪ್ರಮಾಣಪತ್ರವನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 53 ವರ್ಷಗಳ ನಂತರ ಮಗಳ ಜನನ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ನಟ ನಾಸಿರುದ್ದೀನ್ ಶಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.