ಏಪ್ರಿಲ್ 14ರಂದು ಮುಂಬೈನ ಬಾಂದ್ರಾ ನಿವಾಸದಲ್ಲಿ ವಿವಾಹವಾದ ಬಾಲಿವುಡ್ ಜೋಡಿ ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಪೋಷಕರಾಗಿ ಬಡ್ತಿ ಪಡೆದಿರೋದು ಎಲ್ಲರಿಗೂ ತಿಳಿದಿರುವ ವಿಚಾರ. ತಮ್ಮ ಮೊದಲ ಮಗುವಿನ ಆಗಮನದ ನಂತರ ಬಾಲಿವುಡ್ನ ಬಹುಬೇಡಿಕೆ ನಟಿ ಆಲಿಯಾ ಭಟ್ ಇದೀಗ ಅಭಿಮಾನಿಗಳಿಗಾಗಿ ತಮ್ಮ ಮೊದಲ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಇದೇ ನವೆಂಬರ್ 6ರಂದು ಆಲಿಯಾ ಭಟ್ ಮುಂಬೈನ ಹೆಚ್ಹೆನ್ ರಿಲಯನ್ಸ್ ಆಸ್ಪತ್ರೆಯಲ್ಲಿ ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಕೆಲ ಹೊತ್ತಿನಲ್ಲೇ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಈ ಶುಭ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿದ್ದರು. ಒಂದು ಮರಿ ಸಿಂಹದ ಜೊತೆಗೆ ಎರಡು ಪೋಷಕ ಸಿಂಹಗಳಿರುವ ಫೋಟೋದೊಂದಿಗೆ, ''ನಮ್ಮ ಜೀವನದ ಅತ್ಯುತ್ತಮ ಸುದ್ದಿ. ನಮ್ಮ ಮಗು ಈಗ ನಮ್ಮೊಂದಿಗೆ. ಅಬ್ಬಾ ಎಂಥಾ ಮ್ಯಾಜಿಕಲ್ ಹುಡುಗಿ. ನಾವು ಅಧಿಕೃತವಾಗಿ ಪ್ರೀತಿಯಿಂದ ಈ ವಿಷಯವನ್ನು ಘೋಷಣೆ ಮಾಡುತ್ತಿದ್ದೇವೆ. ಆಶೀರ್ವಾದ ಗಳಿಸಿದ ಪೋಷಕರು - ಲವ್ ಲವ್ ಲವ್ ಆಲಿಯಾ ಮತ್ತು ರಣಬೀರ್'' ಎಂದು ಬರೆದಿದ್ದರು.
ಇದನ್ನೂ ಓದಿ: ನಟನೆಯಿಂದ ಕೊಂಚ ವಿರಾಮ.. ಕುಟುಂಬಕ್ಕೆ ಸಮಯ ಕೊಡಲು ನಿರ್ಧರಿಸಿದ ಅಮಿರ್ ಖಾನ್
ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿ ಮನೆಗೆ ಹೋಗುವ ವೇಳೆ ಪಾಪರಾಜಿಗಳ ಕಣ್ಣಿಗೆ ರಾಲಿಯಾ ದಂಪತಿ ಕಾಣಿಸಿಕೊಂಡಿದ್ದರು. ಆದರೆ, ಅವರ ಫೋಟೋವಾಗಲಿ ಅಥವಾ ಮಗುವಿನ ಚಿತ್ರವನ್ನಾಗಲಿ ಹಂಚಿಕೊಂಡಿರಲಿಲ್ಲ. ಅಭಿಮಾನಿಗಳು ತಾಯಿ ಮಗುವಿನ ಫೋಟೋಗಾಗಿ ಕಾದು ಕುಳಿತಿದ್ದರು.
ಇದೀಗ ಆಲಿಯಾ ಕಾಫಿ ಕಪ್ ಹಿಡಿದು ತನ್ನ ಫೋಟೋ ಹಂಚಿಕೊಂಡಿದ್ದಾರೆ. ಕಪ್ ಮೇಲೆ 'ಮಮ್ಮಾ' ಎಂದು ಬರೆದಿದೆ. ಈ ಫೋಟೋದಲ್ಲಿ ಆಲಿಯಾರ ಮುಖ ಸರಿಯಾಗಿ ಕಂಡಿಲ್ಲ. ಹಾಗಾಗಿ ತಾಯಿ ಮಗುವಿನ ಕ್ಲಿಯರ್ ಪಿಕ್ಚರ್ಗೆ ಅಭಿಮಾನಿಗಳು ಬೇಡಿಕೆಯಿಟ್ಟಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಯಿಂದ ಆಲಿಯಾ ಡಿಸ್ಚಾರ್ಜ್.. ಮಗುವನ್ನು ಸ್ವಾಗತಿಸಲು ಮನೆಯಲ್ಲಿ ಭರ್ಜರಿ ತಯಾರಿ