ETV Bharat / entertainment

ಬ್ರೆಜಿಲ್​ಗೆ ಹಾರಿದ ಆಲಿಯಾ ಭಟ್.. ಯಾಕೆ ಗೊತ್ತಾ? ​​ - ನಟಿ ಆಲಿಯಾ ಭಟ್​ ಇತ್ತಿಚೆಗೆ ವಿಶ್ವ ವಿಖ್ಯಾತ ಬ್ರಾಂಡ್​

ಮೊದಲ ಬಾರಿಗೆ ನಟಿ ಆಲಿಯಾ ಹಾಲಿವುಡ್​ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಕುರಿತು ಹೊಸ ಫೋಟೋ ಮೂಲಕ ಅವರು ಅಪ್​ಡೇಟ್​ ನೀಡಿದ್ದಾರೆ.

Alia Bhatt flew to Brazil for the Netflix Tudum show

author img

By

Published : Jun 15, 2023, 1:15 PM IST

ಮುಂಬೈ: ಮುದ್ದು ಮಗಳು ರಾಹಾಳಿಗೆ ಜನ್ಮ ನೀಡಿದ ಬಳಿಕ ಮತ್ತೆ ವೃತ್ತಿ ಜೀವನಕ್ಕೆ ಹೊರಳಿರುವ ನಟಿ ಆಲಿಯಾ ಭಟ್​ ಇತ್ತಿಚೆಗೆ ವಿಶ್ವ ವಿಖ್ಯಾತ ಬ್ರಾಂಡ್​ ಆಗಿರುವ ಗುಚ್ಚಿ ರಾಯಭಾರಿಯಾಗಿ ಜಪಾನ್​ನಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಬ್ರಾಂಡ್​ಗೆ ಭಾರತದ ಮೊದಲ ರಾಯಭಾರಿಯಾದವರು ಇವರಾಗಿದ್ದಾರೆ. ಇದೀಗ ಮೊದಲ ಬಾರಿಗೆ ಹಾಲಿವುಡ್​ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಹಾರ್ಟ್​​ ಆಫ್​ ಸ್ಟೋನ್​ನಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದು, ಬ್ರೆಜಿಲ್​ನ ಸಾಹೊ ಪೌಲೊದಲ್ಲಿ ನಡೆಯುತ್ತಿರುವ ನೆಟ್​ಫ್ಲಿಕ್ಸ್​​ ಟುಡುಮ್​ನಲ್ಲಿ ಭಾಗಿಯಾಗುವುದಾಗಿ ಅವರು ಖಚಿತಪಡಿಸಿದ್ದಾರೆ. ಗುರುವಾರ ಸಾಮಾಜಿಕ ಜಾಲತಾಣ ಇನ್​​​​ಸ್ಟಾಗ್ರಾಂನಲ್ಲಿ ಹೊಸ ಫೋಟೋವನ್ನು ಹಾಕಿರುವ ಅವರು ಈ ಕುರಿತು ತಿಳಿಸಿದ್ದಾರೆ.

ಸಾಹೋ ಪೌಲೊಗೆ ತೆರಳುವು ಮುನ್ನ ಈ ಫೋಟೋಗಳನ್ನು ಕ್ಲಿಕಿಸಿದ್ದು, ಈ ಫೋಟೋ ಹಂಚಿಕೊಂಡಿರುವ ಅವರು, 'ಇಲ್ಲಿ ಯಾವುದೇ ಕಲ್ಲಿನ ಹೃದಯ​ ಇಲ್ಲ... ಕೇವಲ ಪ್ರೀತಿಯಿಂದ ತುಂಬಿದೆ... ನನ್ನ ಮಾರ್ಗ ಸಾಹೋ ಪೌಲೊ ಹತ್ತಿರ ಎಂದು ಕ್ಯಾಪ್ಷನ್​ ಬರೆದಿದ್ದಾರೆ. ಇನ್ನು ಹಾರ್ಟ್​ ಆಫ್​ ಸ್ಟೋನ್​ ಚಿತ್ರ ಸ್ಪೈ ಥ್ರಿಲ್ಲರ್​ ಕಥೆ ಹೊಂದಿದ್ದು, ನೆಟ್​ಫ್ಲಿಕ್ಸ್​ ಮತ್ತು ಸ್ಕೃಡ್ಯಾನ್ಸ್​ ಇದರ ನಿರ್ಮಾಣ ಮಾಡಿದೆ. ಈ ಚಿತ್ರದಲ್ಲಿ ಆಲಿಯಾ ಜೊತೆಗೆ ಗಾಲ್​ ಗಡೊಟ್​ ಮತ್ತು ಜಿಮಿ ಡೊರ್ನನ್​ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.

ಮನೆಯಿಂದ ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ಕನ್ನಡಿ ಮುಂದೆ ನಿಂತು ಹೊಸ ಉಡುಪಿನಲ್ಲಿ ಫೋಸ್​ ನೀಡಿರುವ ಅವರು, ತಮ್ಮ ಕೈಯಲ್ಲಿ ಹೃದಯದ ಚಿಹ್ನೆಯನ್ನು ತೋರಿಸಿದ್ದಾರೆ. ತಮ್ಮ ಡಿಂಪಲ್​ ಜೊತೆಗೆ ಫೋಟೋದಲ್ಲಿ ಅದ್ಬುತವಾಗಿ ಆಕೆ ಕಂಡಿದ್ದಾರೆ. ಬಹು ಬಣ್ಣದ ಕಸೂತಿಯ ಕ್ರಾಪ್​ ಟಾಕ್​ ಜೊತೆಗೆ ನೀಲಿ ಬಣ್ಣದ ಡೆನಿಮ್​ ಟ್ರಶರ್ನಲ್ಲಿ ಕಾಣಿಸಿಕೊಂಡಿದ್ದಾರೆ. ​

ಹಾರ್ಟ್​ ಆಫ್​ ಸ್ಟೋನ್​ ಜೊತೆಗೆ ನಟಿ ಆಲಿಯಾ ಸದ್ಯ ಕರಣ್​ ಜೋಹರ್​ರ ಸಿನಿಮಾ ರಾಕಿ ಆಫ್​ ರಾಣಿ ಕಿ ಪ್ರೇಮ್​ ಕಹಾನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ನಟಿ ಆಲಿಯಾಗೆ ನಟ ರಣವೀರ್​ ಸಿಂಗ್​ ಜೊತೆಯಾಗುತ್ತಿದ್ದಾರೆ. ಗಲ್ಲಿ ಬಾಯ್​ ಸಿನಿಮಾದ ಹಿಟ್​ ಬಳಿಕ ಈ ಚಿತ್ರದಲ್ಲಿ ಈ ಜೋಡಿ ಮತ್ತೊಮ್ಮೆ ಜೊತೆಯಾಗಿದ್ದಾರೆ. ಈ ಚಿತ್ರದಲ್ಲಿ ಧರ್ಮೇಂದ್ರ ಶಬಾನಾ ಅಜ್ಮಿಂ ಮತ್ತು ಜಯಾ ಬಚ್ಚನ್​ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದೇ ಜುಲೈ 28 ರಂದು ಬಿಡುಗಡೆಯಾಲಿದೆ.

ಏತನ್ಮಾಥ್ಯೆ, ನಟಿ ಆಲಿಯಾ ಗಂಡ ರಣಬೀರ್​ ಕಪೂರ್​ ಜೊತೆಗೆ ಮತ್ತೊಂದು ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿತೇಶ್​ ತಿವಾರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ರಾಮಾಯಣ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ರಾಕಿಂಗ್​ ಸ್ಟಾರ್​ ಯಶ್​​ ರಾವಣ ಪಾತ್ರ ನಿರ್ವಹಣೆ ಮಾಡಲಿದ್ದಾರೆ ಎಂಬ ಮಾತು ಕೇಳಿ ಬಂದಿತು. ಆದರೆ, ಯಶ್​ ಈ ಪಾತ್ರದಲ್ಲಿ ನಟಿಸುವುದಿಲ್ಲ ಎಂಬುದು ಇದೀಗ ಸ್ಪಷ್ಟವಾಗಿದೆ. ಈ ಚಿತ್ರವೂ ಈ ವರ್ಷಾಂತ್ಯದಲ್ಲಿ ಅಂದರೆ ಡಿಸೆಂಬರ್​​ಗೆ ಸೆಟ್ಟೆರಲಿದೆ.

ಇದನ್ನೂ ಓದಿ: Kangana Ranaut.. 'ಬಿಳಿ ಇಲಿ ರಾಮನ ಪಾತ್ರಕ್ಕೆ ಬೇಡ': ಭಗವಾನ್​ನಂತೆ ಯಶ್​ ಕಾಣುತ್ತಾರೆಂದ ಕಂಗನಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.