ಬಾಲಿವುಡ್ ಸುಂದರ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಿನ್ನೆ (ಏಪ್ರಿಲ್ 14) ಮೊದಲ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಈ ವಿಶೇಷ ದಿನದಂದು ದಂಪತಿ ಮುಂಬೈನಲ್ಲಿ ನಿರ್ಮಾಣ ಹಂತದಲ್ಲಿರುವ ತಮ್ಮ ಮನೆಯನ್ನು ನೋಡಲು ತೆರಳಿದ್ದರು. ಈ ವೇಳೆ, ಪಾಪರಾಜಿಗಳ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ.
ಪಾಪ್ಸ್ಗಳು ಫೋಟೋ ತೆಗೆಯುವಂತೆ ಅವರಲ್ಲಿ ವಿನಂತಿಸಿದಾಗ, ದಂಪತಿ ಪೂರ್ಣ ಪ್ರಮಾಣದ ಸಹಕಾರ ನೀಡಿದ್ದಾರೆ. ಈ ವೇಳೆ, ಪಾಪರಾಜಿಗಳು ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ. ಸದ್ಯ ರಾಲಿಯಾ ಜೋಡಿಯ ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ದೃಶ್ಯದಲ್ಲಿ ಆಲಿಯಾ ರಣಬೀರ್ ನನ್ನು ಅಪ್ಪಿಕೊಂಡು ಮುತ್ತು ಕೊಟ್ಟು ನಾಚುತ್ತಿರುವುದು ಕಂಡು ಬಂದಿದೆ. ರಣಬೀರ್ ಅವರು ಬೂದು ಬಣ್ಣದ ಟೀ ಶರ್ಟ್ ಮತ್ತು ಪ್ಯಾಂಟ್ ಧರಿಸಿ ಕಾಣಿಸಿಕೊಂಡಿದ್ದರು. ಮತ್ತೊಂದೆಡೆ ಅವರ ಪತ್ನಿ ಆಲಿಯಾ ಭಟ್ ಬಿಳಿ ಟೀ ಶರ್ಟ್ ಮತ್ತು ಕಪ್ಪು ಜೀನ್ಸ್ ಧರಿಸಿದ್ದರು. ಆಲಿಯಾ ತನ್ನ ನೋಟವನ್ನು ಚಿನ್ನದ ಹೂಪ್ ಕಿವಿಯೋಲೆಗಳೊಂದಿಗೆ ಪೂರ್ಣಗೊಳಿಸಿದರು.
ಇದನ್ನೂ ಓದಿ: ಥಿಯೇಟರ್, ಒಟಿಟಿ, ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ 'ವರಾಹ ರೂಪಂ' ಹಾಡು ಬಳಸದಂತೆ ಕೋರ್ಟ್ ಆದೇಶ
ನಿನ್ನೆ ಆಲಿಯಾ ಭಟ್ ತಮ್ಮ ಜೀವನದ ಪ್ರೀತಿಯೊಂದಿಗೆ ಕಳೆದ ವಿಶೇಷ ಕ್ಷಣವನ್ನು ಹಂಚಿಕೊಂಡಿದ್ದರು. ರಣಬೀರ್ ಮತ್ತು ಅವರು ಸಂತೋಷದಲ್ಲಿ ಇರುವ ಮೂರು ಫೋಟೋಗಳನ್ನು ಪೋಸ್ಟ್ ಹಾಕಿದ್ದರು. ಚಿತ್ರಗಳಿಗೆ 'ಹ್ಯಾಪಿ ಡೇ' ಎಂಬ ಕ್ಯಾಪ್ಶನ್ ನೀಡಿದ್ದರು. ಈ ಫೋಟೋಗಳಿಗೆ ಫ್ಯಾನ್ಸ್ ಪ್ರೀತಿಯ ಮಳೆಯನ್ನೇ ಸುರಿಸಿದ್ದರು. ಬಗೆ ಬಗೆಯ ಬರಹಗಳಿಂದ ಆ್ಯನಿವರ್ಸರಿ ಶುಭಾಶಯಗಳನ್ನು ತಿಳಿಸಿದ್ದರು.
- " class="align-text-top noRightClick twitterSection" data="
">
'ರಾಲಿಯಾ' ಜೋಡಿ.. ಆಲಿಯಾ ಮತ್ತು ರಣಬೀರ್ 2018ರಲ್ಲಿ ತೆರೆಕಂಡ ಹಿಟ್ ಚಿತ್ರ ಬ್ರಹ್ಮಾಸ್ತ್ರ ಸೆಟ್ನಿಂದ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದರು. 5 ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಕಳೆದ ವರ್ಷ ಏಪ್ರಿಲ್ 14 ರಂದು ದಾಂಪತ್ಯಕ್ಕೆ ಕಾಲಿರಿಸಿದರು. ಮುಂಬೈನಲ್ಲಿರುವ ರಣಬೀರ್ ನಿವಾಸದಲ್ಲಿ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವಿವಾಹ ಸಮಾರಂಭ ನಡೆಯಿತು.
ರಣಬೀರ್-ಆಲಿಯಾ ಮದುವೆ ಸಮಾರಂಭದಲ್ಲಿ ಅಯಾನ್ ಮುಖರ್ಜಿ, ಕರೀನಾ ಕಪೂರ್, ಪೂಜಾ ಭಟ್, ಶಾಹೀನ್ ಭಟ್, ಕರಿಷ್ಮಾ ಕಪೂರ್, ಸೈಫ್ ಅಲಿ ಖಾನ್, ನತಾಶಾ ನಂದಾ, ರೀಮಾ ಜೈನ್ ಸೇರಿದಂತೆ ಇತರೆ ಆಪ್ತರು ಭಾಗಿಯಾಗಿದ್ದರು. ಕೆಲವು ತಿಂಗಳ ನಂತರ ನವೆಂಬರ್ 6 ರಂದು ಈ ದಂಪತಿ ಹೆಣ್ಣು ಮಗುವನ್ನು ಸ್ವಾಗತಿಸಿದರು ಅವಳಿಗೆ ರಾಹಾ ಎಂಬುದಾಗಿ ನಾಮಕರಣ ಮಾಡಿದರು. ಹೀಗಾಗಿ ಈ ಜೋಡಿಗೆ 2022 ಇನ್ನಷ್ಟು ವಿಶೇಷವಾಯಿತು. ಆದರೆ ಇಲ್ಲಿಯವರೆಗೂ ಮಗಳ ಮುಖವನ್ನು ಕ್ಯಾಮರಾ ಮುಂದೆ ದಂಪತಿ ಬಹಿರಂಗಪಡಿಸಿಲ್ಲ.
ಇದನ್ನೂ ಓದಿ: ಸಮಂತಾ ಅಭಿನಯದ ಶಾಕುಂತಲಂ ಸಿನಿಮಾ ಭರ್ಜರಿ ಓಪನಿಂಗ್; ಮೊದಲ ದಿನದ ಕಲೆಕ್ಷನ್ ಎಷ್ಟು?