ಹಾಲಿವುಡ್ ಹಿರಿಯ ನಟ ಮತ್ತು ಅಕಾಡೆಮಿ ಪ್ರಶಸ್ತಿ ವಿಜೇತ ಅಲ್ ಪಚಿನೋ ನಾಲ್ಕನೇ ಬಾರಿಗೆ ತಂದೆಯಾಗಿದ್ದಾರೆ. 83 ವರ್ಷದ ನಟ, 29 ವರ್ಷದ ಗೆಳತಿ ನೂರ್ ಅಲ್ಫಲ್ಲಾಹ್ ಅವರೊಂದಿಗೆ ಗಂಡು ಮಗುವನ್ನು ಸ್ವಾಗತಿಸಿದ್ದಾರೆ. ಈ ಜೋಡಿ ತಮ್ಮ ಮಗನಿಗೆ ರೋಮನ್ ಪಚಿನೋ ಎಂದು ಹೆಸರಿಟ್ಟಿದ್ದಾರೆ.
ಈ ಹಿಂದೆ ಅಲ್ ಪಚಿನೋ ಅವರು ನೂರ್ ಅಲ್ಫಲ್ಲಾಹ್ ಜೊತೆ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಹೇಳಿದ್ದರು. ಮಾರ್ಚ್ನಲ್ಲಿ ಈ ಜೋಡಿ ಮಗುವಿನ ಬಂಪ್ನೊಂದಿಗೆ ಕಾಣಿಸಿಕೊಂಡಿದ್ದರು. ಮೇ ಅಂತ್ಯದಲ್ಲಿ ತನ್ನ ನಾಲ್ಕನೇ ಮಗು ಬರುತ್ತಿರುವುದಾಗಿ ಸಂದರ್ಶನವೊಂದರಲ್ಲಿ ನಟ ಹೇಳಿಕೊಂಡಿದ್ದರು. ಅದರಂತೆ ಇದೀಗ ಗಂಡು ಮಗುವಿನ ಜನನವಾಗಿದೆ.
ನಿರ್ಮಾಪಕಿ ನೂರ್ ಅಲ್ಫಲ್ಲಾಹ್ ಮೊದಲು ಅಲ್ ಪಚಿನೋ ಜಾನ್ ಟ್ಯಾರಂಟ್ ಅವರೊಂದಿಗಿದ್ದರು. ಅವರಿಗೆ ಜೂಲಿ ಮೇರಿ ಎನ್ನುವ 33 ವರ್ಷದ ಮಗಳು ಇದ್ದಾಳೆ. ಅಲ್ಲದೇ ಜಾನ್ ಜೊತೆ ಸಂಬಂಧ ಕಳೆದುಕೊಂಡ ನಂತರ ಅಲ್ ಬೆವರ್ಲಿ ಡಿ ಏಂಜೆಲೊ ಅವರನ್ನು ಪ್ರೀತಿಸುತ್ತಿದ್ದರು. ಅವರಿಗೆ ಈಗ 22 ವರ್ಷದ ಆಂಟನ್ ಮತ್ತು ಒಲಿವಿಯಾ ಎಂಬ ಅವಳಿ ಮಕ್ಕಳಿದ್ದಾರೆ. ಇದೀಗ ನೂರ್ ಅಲ್ಫಲ್ಲಾಹ್ ಜೊತೆ ಅಲ್ ಪಚಿನೋ ಸಂಬಂಧ ಹೊಂದಿದ್ದಾರೆ.
ಇದನ್ನೂ ಓದಿ: ಆಮಿರ್ ಖಾನ್ ಅಭಿನಯದ ಲಗಾನ್ಗೆ 22 ವರ್ಷ.. ಹಳೆಯ ನೆನಪು ಮಾಡಿಕೊಂಡ ಆಮಿರ್ ಖಾನ್ ಪ್ರೊಡಕ್ಷನ್ಸ್!
2017 ರಲ್ಲಿ ನೂರ್ ಅಲ್ಫಲ್ಲಾಹ್ ಅವರು ಈ ಹಿಂದೆ 74 ವರ್ಷ ವಯಸ್ಸಿನ ಹಿರಿಯ ಗಾಯಕ ಮಿಕ್ ಜಾಗರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಆಗ ನೂರ್ಗೆ ಜಸ್ಟ್ 22 ವಯಸ್ಸಾಗಿತ್ತು. ನಂತರ ಬಿಲಿಯನೇರ್ ನಿಕೋಲಸ್ ಬರ್ಗ್ರೂನ್ ಅವರೊಂದಿಗೆ ಡೇಟಿಂಗ್ನಲ್ಲಿದ್ದರು. ಬಳಿಕ 29 ವರ್ಷದ ನೂರ್ ಅಲ್ಫಲ್ಲಾಹ್ ಏಪ್ರಿಲ್ 2022 ರಿಂದ ಅಲ್ ಪಸಿನೊ ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದರು. ಇದೀಗ ಅವರ ಪ್ರೇಮದ ಗುರುತಾಗಿ ಗಂಡು ಮಗು ಜನಿಸಿದೆ.
ಅಲ್ ಪಸಿನೊ ಚಿತ್ರಗಳು.. ಟಾಲಿವುಡ್ನ ಹಿರಿಯ ನಟರಾಗಿರುವ ಅಲ್ ಪಸಿನೊ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ದಿ ಗಾಡ್ ಫಾದರ್, ಸೆಂಟ್ ಆಫ್ ಎ ವುಮೆನ್, ಹೀಟ್, ಸರ್ಪಿಕೊ, ಸೀ ಆಫ್ ಲವ್, ದಿ ಡೆವಿಲ್ಸ್ ಅಡ್ವೊಕೇಟ್, ದಿ ಇನ್ಸೈಡರ್ ಮತ್ತು ಜಸ್ಟಿಸ್ ಫಾರ್ ಆಲ್, ಕಾರ್ಲಿಟೊಸ್ ವೇ, ಡೊನ್ನಿ, ಬ್ರಾಸ್ಕೊ, ಓಷಿಯನ್ಸ್ ಥರ್ಟೀನ್ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ನಟ, ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್, ದಿ ಐರಿಶ್ಮನ್, ಹೌಸ್ ಆಫ್ ಗುಸ್ಸಿ, ದಿ ಪೈರೇಟ್ಸ್ ಆಫ್ ಸೊಮಾಲಿಯಾ, ಡ್ಯಾನಿ ಕಾಲಿನ್ಸ್ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇವರು ತಮ್ಮ ಅಮೋಘ ನಟನೆಗಾಗಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Mahesh Babu Daughter Dance: ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿರುವ ಮಹೇಶ್ ಬಾಬು ಪುತ್ರಿ!