ETV Bharat / entertainment

ಅಕ್ಷಯ್​ ಕುಮಾರ್​ ಅಭಿನಯದ 'ದಿ ಗ್ರೇಟ್​ ಇಂಡಿಯನ್​ ರೆಸ್ಕ್ಯೂ' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ - ಚಿತ್ರದ ಬಿಡುಗೆ ದಿನಾಂಕ

ಶ್ರೀ ಜಸ್ವಂತ್​ ಸಿಂಗ್​ ಗಿಲ್​ ಅವರ ಜೀವನಾಧರಿತ ಕಥೆಯ ಈ ಚಿತ್ರ ಸೆಟ್ಟೇರಿದಾಗಿನಿಂದಲೂ ಸಾಕಷ್ಟು ಸುದ್ದಿ ಮಾಡಿದೆ.

Akshay Kumar starrer The Great Indian Rescue movie release date announcement

author img

By

Published : Jun 15, 2023, 11:29 AM IST

Updated : Jun 15, 2023, 2:33 PM IST

ಮುಂಬೈ: ನಟ ಅಕ್ಷಯ್​ ಕುಮಾರ್​ ಮತ್ತು ಪರಿಣಿತಿ ಚೋಪ್ರಾ ಅಭಿನಯದ 'ದಿ ಗ್ರೇಟ್​ ಇಂಡಿಯನ್​ ರೆಸ್ಕ್ಯೂ' ಚಿತ್ರ ಘೋಷಣೆಯಾದಾಗಿನಿಂದ ಸದ್ದು ಮಾಡಿದ ಹಾಗೂ ಚರ್ಚೆಗೆ ಒಳಪಟ್ಟ ಚಿತ್ರವಾಗಿದೆ. ಈ ಚಿತ್ರ ಇದೀಗ ಬಿಡುಗಡೆಗೆ ಸಿದ್ದವಾಗಿದ್ದು, ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ.

ಈ ಕುರಿತು ಹೊಸ ಮಾಹಿತಿ ಹಂಚಿಕೊಂಡಿರುವ ಚಿತ್ರ ವಿಶ್ಲೇಷಕ ತರಣ್​​ ಆದರ್ಶ್​​, ಅಕ್ಷಯ್​ ಕುಮಾರ್​ ಅವರ 'ದಿ ಗ್ರೇಟ್​​​ ಇಂಡಿಯನ್​ ರೆಸ್ಕೂ' ಚಿತ್ರ ಅಕ್ಟೋಬರ್​ 5ಕ್ಕೆ ಬಿಡುಗಡೆಗೆ ಸಜ್ಜಾಗಿದೆ ಎಂದಿದ್ದಾರೆ. ಈ ಚಿತ್ರವನ್ನು ಟಿನು ಸುರೇಶ್​ ದೇಸಾಯಿ ನಿರ್ಮಿಸಿದ್ದು, ವಶುಭಗ್ನಾನಿ, ದೀಪ್​ಶೀಖಾ ದೇಶ್​ಮುಖ್​, ಜಾಕಿ ಭಗ್ನಾನಿ ಮತ್ತು ಅಜಯ್​ ಕಪೂರ್​ ನಿರ್ಮಾಣ ಮಾಡಿದ್ದಾರೆ.

ದೇಶದ ಮೊದಲ ಕಲ್ಲಿದ್ದಲು ಗಣಿ ರಕ್ಷಣಾ ಮಿಷನ್​ನ ನೇತೃತ್ವದ ವಹಿಸಿದ್ದ ಶ್ರೀ ಜಸ್ವಂತ್​ ಸಿಂಗ್​ ಗಿಲ್​ ಅವರ ಜೀವಾನಾಧಾರಿತ ಕಥೆಯ ಚಿತ್ರ ಇದಾಗಿದೆ. ಇದೇ ಅಕ್ಟೋಬರ್​ 5 ರಂದು ಚಿತ್ರ ವರ್ಲ್ಡ್​​ ವೈಡ್​ ಥಿಯೇಟರ್​ನಲ್ಲಿ ಬಿಡುಗಡೆಯಾಗಲಿದೆ. 2019ರಲ್ಲಿ ಕೇಸರಿ ಚಿತ್ರದಲ್ಲಿ ನಟ ಅಕ್ಷಯ್​ ಕುಮಾರ್​ ಮತ್ತು ನಟಿ ಪರಿಣಿತಿ ಚೋಪ್ರಾ ಒಟ್ಟಿಗೆ ನಟಿಸಿದ್ದು, ಗಲ್ಲಾಪೆಟ್ಟಿಗೆಯಲ್ಲೂ ಈ ಚಿತ್ರ ಯಶಸ್ವಿಯಾಗಿದೆ. ಇದಾದ ಬಳಿಕ ಮತ್ತೊಮ್ಮೆ ಈ ಜೋಡಿ ಈ ಚಿತ್ರದಲ್ಲಿ ಜೊತೆಯಾಗಿದ್ದಾರೆ.

ಇನ್ನು ನಟ ಅಕ್ಷಯ್​ ಕುಮಾರ್​ ನಿರ್ದೇಶಕ ಟಿನು ಸುರೇಶ್​ ದೇಸಾಯಿ ಕೂಡ ಒಟ್ಟಾಗಿ ಕೆಲಸ ಮಾಡುತ್ತಿರುವ ಎರಡನೇ ಚಿತ್ರ ಇದಾಗಿದೆ. ಈ ಹಿಂದೆ ಈ ಜೋಡಿ 'ರುಸ್ತುಂ' ಎಂಬ ಕ್ರೈಂ ಥ್ರಿಲ್ಲರ್​ ಚಿತ್ರದಲ್ಲಿ ಕೆಲಸ ಮಾಡಿದ್ದರು. ಈ ಹಿಂದೆ ಈ ಚಿತ್ರದ ಕೆಲವು ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದವು. ಇದರಲ್ಲಿ ನಟ ಅಕ್ಷಯ್​​ ಕೆಂಪು ಬಣ್ಣದ ಟರ್ಬನ್​ (ಪಂಜಾಬಿಗಳು ತಲೆಗೆ ಕಟ್ಟುವ ಪೇಟ) ಮತ್ತು ಸ್ಟ್ರಿಪಡ್​ ಶರ್ಟ್​ ಮತ್ತು ರಿಡೀಂಗ್​ ಗ್ಲಾಸ್​ನಲ್ಲಿದ್ದ ಸಿನಿಮಾದ ದೃಶ್ಯಗಳು ಸೋರಿಕೆ ಆಗಿದ್ದವು.

ಈ ಚಿತ್ರದ ಹೊರತಾಗಿ ನಟ ಅಕ್ಷಯ್​​ ಕುಮಾರ್​ 'ಒಎಂಜಿ- ಒ ಮೈ ಗಾಡ್​ '2 ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟಿ ಯಾಮಿ ಗೌತಮ್​ ಮತ್ತು ಪಂಕಹ್​ ತ್ರಿಪಾಠಿ ಕೂಡ ಬಣ್ಣ ಹಚ್ಚಿದ್ದಾರೆ, ಈ ಚಿತ್ರ ಇದೇ ಆಗಸ್ಟ್​ 11ಕ್ಕೆ ಬಿಡುಗಡೆ ಕಾಣಲಿದೆ.

ಇದರ ಜೊತೆಗೆ ನಟ ಸೂರ್ಯ ನಟಿಸಿದ್ದ ತಮಿಳಿನ ಬ್ಲಾಕ್​ ಬಸ್ಟರ್​ ಸಿನಿಮಾ 'ಸೂರರೈ ಪೊಟ್ರು'ವಿನ ಹಿಂದಿ ರಿಮೇಟ್​ನಲ್ಲಿ ಕೂಡ ನಟಿಸುತ್ತಿದ್ದು, ಈ ಚಿತ್ರದ ಶೀರ್ಷಿಕೆ ಇನ್ನು ಅಂತಿಮವಾಗಿಲ್ಲ. ಈ ಚಿತ್ರ ಇದೇ ಸೆಪ್ಟೆಂಬರ್​ 1 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ನಟಿ ರಾಧಿಕಾ ಮದನ್​ ಮತ್ತು ಪರೇಶ್​ ರಾವಲ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಹೊರತಾಗಿ ನಟ ಅಕ್ಷಯ್​ ಕುಮಾರ್​ ಟೈಗರ್​ ಶ್ರಾಫ್​ ಅವರು ಆ್ಯಕ್ಷನ್​ ಥ್ರಿಲ್ಲರ್​ 'ಬಡೇ ಮಿಯಾನ್​ ಚೋಟೆ ಮಿಯಾನ್​ವಿಚ್'​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ 2024ರ ಈದ್​​ಗೆ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ನಟ ಶಾರುಖ್​ ಖಾನ್​ಗೆ ಮುತ್ತಿಟ್ಟ ಮಹಿಳಾ ಅಭಿಮಾನಿ: ವಿಡಿಯೋ ವೈರಲ್, ನೆಟಿಜನ್ಸ್​ ಅಸಾಮಾಧಾನ

Last Updated : Jun 15, 2023, 2:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.