ETV Bharat / entertainment

"ನಾವು ಬರುತ್ತಿದ್ದೇವೆ, ನೀವೂ ಬನ್ನಿ, ಚಿತ್ರಮಂದಿರಗಳಲ್ಲಿ ಆಗಸ್ಟ್ 11ಕ್ಕೆ OMG2": ಅಕ್ಷಯ್ ಕುಮಾರ್ - ಒಎಂಜಿ

ಆಗಸ್ಟ್ 11ಕ್ಕೆ ಅಕ್ಷಯ್​ ಕುಮಾರ್​ ಅಭಿನಯದ 'OMG 2' ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

OMG 2 release date
ಒಎಂಜಿ 2 ಬಿಡುಗಡೆ ದಿನಾಂಕ
author img

By

Published : Jun 9, 2023, 12:58 PM IST

ಸಿನಿಮಾ ಯಶಸ್ಸು ವಿಚಾರವಾಗಿ ಕೊಂಚ ಹಿನ್ನೆಡೆ ಕಂಡಿರುವ ಬಾಲಿವುಡ್​ ಬೇಡಿಕೆ ನಟ ಅಕ್ಷಯ್​ ಕುಮಾರ್​ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ 'OMG 2'. ಆಧ್ಯಾತ್ಮಿಕ ಸಿನಿಮಾವಾದ ಓ ಮೈ ಗಾಡ್ (Oh My God 2) ಚಿತ್ರದ ಮುಂದಿವರಿದ ಭಾಗ. ಈ ಸಿನಿಮಾ ಅಪ್​ಡೇಟ್ಸ್​ಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ಬಾಲಿವುಡ್​ ನಟ ಗುಡ್​ ನ್ಯೂಸ್ ಕೊಟ್ಟಿದ್ದಾರೆ.

ಚಿತ್ರ ತಯಾರಕರು ಅಕ್ಷಯ್ ಕುಮಾರ್ ನಾಯಕರಾಗಿರುವ ತಮ್ಮ ಸಿನಿಮಾದ ಬಿಡುಗಡೆ ದಿನಾಂಕವನ್ನು ಅಂತಿಮಗೊಳಿಸಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ನಟ ಅಕ್ಷಯ್ ಕುಮಾರ್ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ನಟ "ನಾವು ಬರುತ್ತಿದ್ದೇವೆ, ನೀವೂ ಬನ್ನಿ. ಆಗಸ್ಟ್ 11ಕ್ಕೆ ಚಿತ್ರಮಂದಿರಗಳಲ್ಲಿ OMG2" ಎಂದು ಬರೆದುಕೊಂಡಿದ್ದಾರೆ.

ಕೆಲ ವಾರಗಳ ಹಿಂದೆ, ವೂಟ್ ಮತ್ತು ಜಿಯೋ ಸಿನಿಮಾದಂತಹ ಮುಂಚೂಣಿಯಲ್ಲಿರುವ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಈ OMG2 ಅನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗುತ್ತಿತ್ತು. ಆದರೆ, ಇತ್ತೀಚಿನ ಮಾಹಿತಿ ಪ್ರಕಾರ, ಅಭಿಮಾನಿಗಳು ಅಕ್ಷಯ್ ಅವರ ಸಿನಿಮಾವನ್ನು ದೊಡ್ಡ ಪರದೆಯಲ್ಲೇ ವೀಕ್ಷಿಸಿ ಆನಂದಿಸಬಹುದು. ಒಎಂಜಿ 2 ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಪಂಕಜ್ ತ್ರಿಪಾಠಿ ಮತ್ತು ಯಾಮಿ ಗೌತಮ್ ಕೂಡ ನಟಿಸಿದ್ದಾರೆ.

ಅಮಿತ್ ರೈ ನಿರ್ದೇಶನದ ಓಹ್! ಮೈ ಗಾಡ್ 2 ಚಿತ್ರದ ಕಥೆಯು ಭಾರತದ ಶಿಕ್ಷಣ ವ್ಯವಸ್ಥೆ, ವಿಶೇಷವಾಗಿ ಅಡಲ್ಟ್​ ಎಜುಕೇಶನ್​ ಮೇಲೆ ಕೇಂದ್ರೀಕರಿಸುತ್ತದೆ. ಒಂದು ಮೂಲದ ಪ್ರಕಾರ, ಚಿತ್ರದ ವಿಷಯವು ಬಹಳ ಮಹತ್ವದ್ದಾಗಿದೆ. ಮೊದಲ ಭಾಗ, OMG ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿತು. 2012ರ ಅತ್ಯಂತ ಯಶಸ್ವಿ ಚಲನಚಿತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿತು.

ಇದನ್ನೂ ಓದಿ: ಮೊದಲ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ನಯನತಾರಾ - ವಿಘ್ನೇಶ್​ ಶಿವನ್​: ಮಕ್ಕಳ ಫೋಟೋ ಶೇರ್

OMG ಸಿನಿಮಾ ಕಥೆ ಹಿಂದೂ ವಿಗ್ರಹಗಳು ಮತ್ತು ಪ್ರಾಚೀನ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಯನ್ನು ನಡೆಸುತ್ತಿದ್ದ ನಾಸ್ತಿಕ ಕಾಂಜಿ ಲಾಲ್ಜಿ ಮೆಹ್ತಾ ಅವರ ಮೇಲೆ ಕೇಂದ್ರೀಕೃತವಾಗಿತ್ತು. ಅವರ ಅಂಗಡಿಯು ಭೂಕಂಪದಿಂದ ಹಾನಿಗೊಳಗಾದ ನಂತರ, ಅವರು ವಿಮೆಯನ್ನು ಪಡೆಯಲು ಸಾಧ್ಯವಾಗದ ಕಾರಣ ದೇವರ ಮೇಲೆ ಮೊಕದ್ದಮೆ ಹೂಡುತ್ತಾನೆ. OMG ಯಶಸ್ವಿ ಆಗಿದ್ದು, OMG 2 ಮೇಲೆ ಅಭಿಮಾನಿಗಳ ನಿರೀಕ್ಷೆ ದೊಡ್ಡದಿದೆ. ಇನ್ನೂ ನಟ ಅಕ್ಷಯ್ ಕುಮಾರ್ ಮುಂದೆ ದಿನೇಶ್ ವಿಜನ್ ಅವರೊಂದಿಗೆ 'ಸ್ಕೈ ಫೋರ್ಸ್‌'ನಲ್ಲಿ ಕೈಜೋಡಿಸಲಿದ್ದಾರೆ. ಇದರಲ್ಲಿ ಅವರು ಭಾರತೀಯ ವಾಯುಪಡೆಯ ಅಧಿಕಾರಿಯಾಗಿ ನಟಿಸಲಿದ್ದಾರೆ.

ಇದನ್ನೂ ಓದಿ: ’ನಿನಗಾಗಿ‘ ಮ್ಯೂಸಿಕಲ್ ಆಲ್ಬಂಗೆ ಅಜಯ್ ರಾವ್ ಸಾಥ್

ಅಕ್ಷಯ್ ಅವರ ಕೊನೆಯ 10 ಚಲನಚಿತ್ರಗಳ ಪೈಕಿ, ಲಕ್ಷ್ಮಿ, ಅತ್ರಂಗಿ ರೇ ಮತ್ತು ಕಟ್ಪುಟ್ಲಿ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಇತರ ಏಳು ಚಿತ್ರಗಳು ಸೂರ್ಯವಂಶಿ, ಸೆಲ್ಫಿ, ಸಾಮ್ರಾಟ್ ಪೃಥ್ವಿರಾಜ್, ಬಚ್ಚನ್ ಪಾಂಡೆ, ರಾಮ್ ಸೇತು, ಬೆಲ್ ಬಾಟಮ್ ಮತ್ತು ರಕ್ಷಾ ಬಂಧನ್​. ಒಂದು ಕಾಲದಲ್ಲಿ ಹಿಟ್​ ಚಿತ್ರಗಳನ್ನೇ ನೀಡಿದ್ದ ಅಕ್ಷಯ್​ ಸತತ ಸೋಲು ಅನುಭವಿಸಿದ್ದು, OMG2 ಗೆಲ್ಲಲಿದೆ ಅನ್ನೋ ವಿಶ್ವಾಸ ಚಿತ್ರತಂಡ ಮತ್ತು ಅಭಿಮಾನಿಗಳದ್ದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.