ETV Bharat / entertainment

ಸೋದರಿ ನೆನೆದು ಕಣ್ಣೀರಿಟ್ಟ ಸೂಪರ್‌ಸ್ಟಾರ್ ಅಕ್ಷಯ್​ ಕುಮಾರ್​ ​ - ಅಲ್ಕಾ ಭಾಟಿಯಾ

ಅಕ್ಷಯ್ ಕುಮಾರ್ ನಟನೆಯ ಸಹೋದರ - ಸಹೋದರಿಯ ನಡುವಿನ ಪ್ರೀತಿ, ಬಾಂಧವ್ಯ ತೋರಿಸುವ 'ರಕ್ಷಾ ಬಂಧನ್' ಸಿನಿಮಾ ಆಗಸ್ಟ್ 11 ರಂದು ತೆರೆಕಾಣಲಿದೆ. ಚಿತ್ರದ ಪ್ರಚಾರಕ್ಕಾಗಿ ರಿಯಾಲಿಟಿ ಶೋ 'ಸೂಪರ್‌ಸ್ಟಾರ್ ಸಿಂಗರ್ 2' ಗೆ ಬಂದಿದ್ದ ಅಕ್ಷಯ್​ ತಮ್ಮ ಸಹೋದರಿ ಅಲ್ಕಾ ಭಾಟಿಯಾ ಅವರಿಂದ ಅಚ್ಚರಿಯ ಆಡಿಯೋ ಸಂದೇಶ ಕೇಳಿದ ಬಳಿಕ ಭಾವುಕರಾದರು.

Akshay Kumar
ಅಕ್ಷಯ್​ ಕುಮಾರ್​ ​
author img

By

Published : Aug 6, 2022, 8:41 AM IST

ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಅಭಿನಯದ 'ರಕ್ಷಾ ಬಂಧನ್' ಸಿನಿಮಾ ಮುಂದಿನ ವಾರ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗಷ್ಟೇ ತಮ್ಮ ಚಿತ್ರದ ಪ್ರಚಾರಕ್ಕಾಗಿ ‘ಸೂಪರ್​ಸ್ಟಾರ್​ ಸಿಂಗರ್​ 2' ರಿಯಾಲಿಟಿ ಶೋಗೆ ತೆರಳಿದ್ದ ಅಕ್ಷಯ್, ಸಖತ್​ ಎಮೋಷನಲ್​ ಆಗಿ ಕಣ್ಣೀರು ಹಾಕಿದ್ದಾರೆ.

ನಟ ಅಕ್ಷಯ್​ ಕುಮಾರ್ ಸಾಧ್ಯವಾದಷ್ಟು ಸಮಯವನ್ನ ಕುಟುಂಬದೊಂದಿಗೆ ಕಳೆಯಲು ಇಷ್ಟಪಡುತ್ತಾರೆ. 'ಸೂಪರ್‌ಸ್ಟಾರ್ ಸಿಂಗರ್ 2'ಗೆ ಅತಿಥಿಯಾಗಿ ಆಗಮಿಸಿದ್ದ ವೇಳೆ ಸಹೋದರಿ ಅಲ್ಕಾ ಭಾಟಿಯಾ ಅವರಿಂದ ಅಚ್ಚರಿಯ ಆಡಿಯೋ ಸಂದೇಶ ಕೇಳಿದ ನಂತರ ನಟ ಕಣ್ಣೀರಿಟ್ಟರು. ಆಡಿಯೋದಲ್ಲಿ ಅಲ್ಕಾ ಭಾಟಿಯಾ ಸಹೋದರನ ಪ್ರೀತಿಯನ್ನ ಹಾಡಿ ಹೊಗಳಿದ್ದಾರೆ. ಅಕ್ಷಯ್ ಕುಮಾರ್ ಕೇವಲ ಅಣ್ಣನಷ್ಟೇ ಅಲ್ಲ, ತಂದೆ - ತಾಯಿ, ಗೆಳೆಯನ ಸ್ಥಾನವನ್ನು ತುಂಬಿದ್ದಾರೆ ಎಂದಿದ್ದಾರೆ.

ರಿಯಾಲಿಟಿ ಶೋನಲ್ಲಿ ಕಣ್ಣೀರಿಟ್ಟ ಸೂಪರ್‌ಸ್ಟಾರ್ ಅಕ್ಷಯ್​ ಕುಮಾರ್​ ​

ಬಳಿಕ ತನ್ನ ಸಹೋದರಿ ಕುರಿತು ಮಾತನಾಡಿದ ಅಕ್ಷಯ್, ತಂಗಿಯೊಂದಿಗಿನ ಬಾಂಧವ್ಯಕ್ಕಿಂತ ದೊಡ್ಡದು ಮತ್ತೊಂದಿಲ್ಲ. ನನ್ನ ಸಹೋದರಿ ಚಿತ್ರರಂಗಕ್ಕೆ ಬಂದ ನಂತರ ಅವಳ ಜೀವನ ಹೇಗೆ ಬದಲಾಯಿತು ಎಂಬುದನ್ನು ವಿವರಿಸಿದರು.

ಅಂದಹಾಗೆ, ಆನಂದ್ ಎಲ್‌. ರೈ ಅವರು 'ರಕ್ಷಾ ಬಂಧನ್' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ನಾಲ್ವರು ತಂಗಿಯರ ಅಣ್ಣನಾಗಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಅಕ್ಷಯ್‌ಗೆ ನಾಯಕಿಯಾಗಿ ಭೂಮಿ ಪೆಡ್ನೇಕರ್ ನಟಿಸಿದ್ದಾರೆ. ಸಿನಿಮಾ ಆಗಸ್ಟ್ 11ಕ್ಕೆ ತೆರೆಕಾಣುತ್ತಿದೆ.

ಇದನ್ನೂ ಓದಿ: ಇಲ್ಲಿಯವರೆಗಿನ ನನ್ನ ಸಿನಿಮಾಗಳಲ್ಲಿ 'ರಕ್ಷಾ ಬಂಧನ' ಅತ್ಯುತ್ತಮ ಚಿತ್ರ: ಅಕ್ಷಯ್ ಕುಮಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.