ಮುಂಬೈ: ಯಶಸ್ಸಿನ ಕುದುರೆ ಮೇಲೆ ಏರಿದ್ದ ಅಕ್ಷಯ್ ಕುಮಾರ್ ಸಿನಿಮಾಗಳು ಇತ್ತೀಚಿನ ದಿನಗಳಲ್ಲಿ ಬಾಕ್ಸ್ ಆಫೀಸ್ನಲ್ಲಿ ಹೇಳಿಕೊಳ್ಳುವಂತ ಉತ್ತಮ ಪ್ರದರ್ಶನ ತೋರುತ್ತಿಲ್ಲ. ಬಹುನಿರೀಕ್ಷಿತ ಚಿತ್ರಗಳಾದ 'ರಕ್ಷಾ ಬಂಧನ್' ಅಥವಾ 'ಪೃಥ್ವಿರಾಜ್' ಹೇಳಿಕೊಳ್ಳುವಂತಹ ಯಶಸ್ಸು ತಂದುಕೊಡಲಿಲ್ಲ. ಬಾಲಿವುಡ್ ಕಿಲಾಡಿಯ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಸತತ ಸೋಲು ಕಾಣುತ್ತಿದೆ. ಏತನ್ಮಧ್ಯ ಸಂತಸ ಸುದ್ದಿ ಎಂದರೆ, ಅಕ್ಷಯ್ ಕುಮಾ ಸಿನಿಮಾಗಳು ಒಟಿಟಿಯಲ್ಲಿ ಮಾತ್ರ ಉತ್ತಮ ಪ್ರದರ್ಶನ ಕಾಣುವಲ್ಲಿ ಯಶಸ್ವಿಯಾಗಿದೆ. ಅಕ್ಷಯ್ ಅವರ ಸಿನಿಮಾಗಳು ಥಿಯೇಟರ್ನಲ್ಲಿ ಸೋಲು ಕಂಡರೂ ಓಟಿಟಿಯಲ್ಲಿ ಮಾತ್ರ ತನ್ನ ಪ್ರಾಬಲ್ಯ ಸಾಧಿಸುವ ಮೂಲ ಒಟಿಟಿ ಬಾದ್ಷಾ ಆಗಿ ಅವರು ಹೊರಹೊಮ್ಮಿದ್ದಾರೆ.
- " class="align-text-top noRightClick twitterSection" data="
">
ಮಾಧ್ಯಮದ ವರದಿ ಅನುಸಾರ, ಅಕ್ಷಯ್ ಕುಮಾರ್ ಅವರೆ ಸಿನಿಮಾಗಳು ಒಟಿಟಿಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವರದಿ ಅನುಸಾರ ಅಕ್ಷಯ್ ಕುಮಾರ್ ಅವರ ಸಿನಿಮಾಗಳು ಒಟಿಟಿಯಲ್ಲಿ ಅತಿ ಹೆಚ್ಚು ಪ್ರದರ್ಶಿತವಾದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2020 ಕ್ಕೆ ಮುಂಚೆ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಚಿತ್ರದ ದಾಖಲೆ ಪಡೆದಿತ್ತು. ಈ ಚಿತ್ರವನ್ನು 25.1 ಮಿಲಿಯನ್ ವೀಕ್ಷಕರು ನೋಡಿದ್ದು, 2021ರಲ್ಲಿ ಸೂರ್ಯವಂಶಿ ಒಟಿಟಿಯಲ್ಲಿ ಬಿಡುಗಡೆಯಾದಾಗಲೂ ನೆಟ್ಫ್ಲಿಕ್ಸ್ನ ರೆಕಾರ್ಡ್ ಬ್ರೇಕ್ ಮಾಡಿತ್ತು.
ಒಟಿಟಿಯಲ್ಲಿ ಧೂಳೆಬ್ಬಿಸುತ್ತಿರುವ ಅಕ್ಷಯ್ ಕುಮಾರ್: ಕಟ್ಪುಟ್ಲಿ ನಿರ್ದೇಶಕ ಜಾಕಿ ಭಗ್ನಾನಿ ಹೇಳುವ ಪ್ರಕಾರ ಅಕ್ಷಯ್ ಕುಮಾರ್ ಅತಿ ದೊಡ್ಡ ಮಟ್ಟದ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಕಟ್ಪುಟ್ಲಿ 26.9 ಮಿಲಿಯನ್ ವೀಕ್ಷಣೆ ಕಾಣುವ ಮೂಲಕ ಅತಿ ಹೆಚ್ಚು ವೀಕ್ಷಣೆ ಪಡೆದ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದೇ ಕಾರಣದಿಂದಲೇ ಅವರ ಚಿತ್ರಗಳು ಉತ್ತಮ ಪ್ರದರ್ಶನ ಕಾಣುತ್ತದೆ. ಜೊತೆಗೆ ಉತ್ತಮ ಕಥೆ ಮತ್ತು ನಟನೆಯಿಂದಾಗಿ ಇವು ಚಿತ್ರಾಭಿಮಾನಿಗಳ ಮನಸೊರೆಗೊಂಡಿದೆ. 2021ರಲ್ಲಿ ಉಳಿದೆಲ್ಲ ಚಿತ್ರಗಳಿಗೆ ಹೋಲಿಕೆ ಮಾಡಿದರೆ, ಅಕ್ಷಯ್ ಅವರ ಸೂರ್ಯವಂಶಿ ಚಿತ್ರ ಥಿಯೇಟರ್ನಲ್ಲಿ ಉತ್ತಮ ಪ್ರದರ್ಶನ ಕಂಡಿತು.
- " class="align-text-top noRightClick twitterSection" data="
">
ಅತ್ರಾಂಕಿ ರೇ ಅಥವಾ ಬಚ್ಚಾನ್ ಪಾಂಡೆ, ಎಂಪರೇರ್ ಪೃಥ್ವಿರಾಜ್ ಮತ್ತು ರಾಕ್ಷ ಬಂಧನ್ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಕಾಣಲಿಲ್ಲ. ಇದಾದ ಬಳಿಕ ಬಿಡುಗಡೆಯಾದ ರಾಮ ಸೇತು ಕೂಡ ಹೇಳಿಕೊಳ್ಳುವ ಹೆಸರು ಮಾಡಲಿಲ್ಲ. ಇನ್ನು ಈ ವರ್ಷ ನಟ ಅಕ್ಷಯ್ ಕುಮಾರ್ ಅವರ ಕಡಿಮೆ ಬಜೆಟ್ನ 6 ಚಿತ್ರಗಳು ಬಿಡುಗಡೆಯಾಗಲಿದೆ. ಇಮ್ರಾನ್ ಹಶ್ಮಿ ಜೊತೆಗಿನ ಸೆಲ್ಫಿ, ಡಯಾನ ಪೆಂಟಿ ಇದೇ ಫೆಬ್ರವರಿಗೆ ತೆರೆಕಾಣಲಿದೆ.
- " class="align-text-top noRightClick twitterSection" data="
">
ನಿರಂತರ ಸೋಲಿನ ನಡುವೆಯೂ ನಟ ಅಕ್ಷಯ್ ಕುಮಾರ್ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿರುವುದು ಭಾರೀ ಟೀಕೆಗೆ ಕಾರಣವಾಗಿದೆ. ಅಕ್ಷಯ್ ಸಿನಿಮಾಗಳು ಥಿಯೇಟರ್ನಲ್ಲಿ ಚಿತ್ರಗಳು ನಿರಂತರವಾಗಿ ಸೋಲು ಕಾಣುತ್ತಿದ್ದರೂ, ಅವರ ಸಿನಿಮಾಗಳು ಒಟಿಟಿಯಲ್ಲಿ ಯಶಸ್ವಿಯಾಗಿ ಪ್ರದರ್ಶನವಾಗಿದೆ. ಇತ್ತ ಹಿಂದಿ ಸಿನಿಮಾಗಳ ನಡುವೆ ಅವರು, ಮರಾಠಿ ಸಿನಿಮಾದಲ್ಲೂ ಅವರು ಈ ವರ್ಷ ನಟನೆ ಮಾಡುತ್ತಿದ್ದಾರೆ. ಶಿವಾಜಿ ಚಿತ್ರದ ಮೂಲಕ ಅಕ್ಷಯ್ ಮೊದಲ ಬಾರಿ ಮರಾಠಿ ಸಿನಿಮಾ ಅಂಗಳಕ್ಕೆ ಕಾಲಿಡಲಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್‌ವುಡ್ ತಾರೆಯರ ಸಂಕ್ರಾಂತಿ ಜೋಶ್: ಮತ್ತೆ ಟ್ರೋಲ್ ಆದ ರಶ್ಮಿಕಾ ಮಂದಣ್ಣ