ETV Bharat / entertainment

ಆಕಾಸ ವೀದುಲ್ಲೋ ಸಿನಿಮಾದ ಲಿಪ್​ಲಾಕ್​ ಸೀನ್ ವೈರಲ್​.. ನಟ ಗೌತಮ್​ ಕೃಷ್ಣ ಏನಂದ್ರು ಗೊತ್ತಾ - ನಟ ಗೌತಮ್​ ಕೃಷ್ಣ ಚೊಚ್ಚಲ ಸಿನಿಮಾ

ನಟ ಗೌತಮ್​ ಕೃಷ್ಣ ಅವರ ಆಕಾಸ ವೀದುಲ್ಲೋ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರಲು ರೆಡಿಯಾಗಿದೆ. ಸಿನಿಮಾದ ರೊಮ್ಯಾಂಟಿಕ್​ ಹಾಡೊಂದು ಸಖತ್​ ಹೈಪ್​ ಕ್ರಿಯೇಟ್​ ಮಾಡಿದ್ದು, ಇದರಲ್ಲಿ ನಟಿ ಪೂಜಿತಾ ಜಿತೆ ಲಿಪ್​ಲಾಕ್​ ಮಾಡಿದ ದೃಶ್ಯ ವೈರಲ್​ ಆಗಿದೆ.

akasa-veedullo-liplock-scene-viral
ಆಕಾಸ ವೀದುಲ್ಲೋ ಸಿನಿಮಾದ ಲಿಪ್​ಲಾಕ್​ ಸೀನ್ ವೈರಲ್
author img

By

Published : Aug 29, 2022, 9:28 AM IST

ಮುಂಬೈ: ತೆಲುವು ನಟ ಗೌತಮ್​ ಕೃಷ್ಣರ ಚೊಚ್ಚಲ ಸಿನಿಮಾ "ಆಕಾಸ ವೀದುಲ್ಲೋ" ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾದ ಹಾಡೊಂದು ಬಿಡುಗಡೆಯಾಗಿದ್ದು, ಅದರಲ್ಲಿ ನಟಿ ಪೂಜಿತಾ ಪೊನ್ನಡ ಅವರಿಗೆ ಲಿಪ್​ಲಾಕ್​ ಮಾಡಿದ ದೃಶ್ಯ ಎಲ್ಲೆಡೆ ವೈರಲ್​ ಆಗಿದೆ. ಸಿನಿಮಾದ ರೊಮ್ಯಾಂಟಿಕ್​ ಹಾಡಾದ ಅಯ್ಯಯ್ಯಯ್ಯೋದಲ್ಲಿ ಪೂಜಿತಾ ಮತ್ತು ಗೌತಮ್​ ಕೃಷ್ಣ ಚುಂಬಿಸುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಲಿಪ್​ಲಾಕ್​ ಮಾಡಿದ್ದು, ಈ ದೃಶ್ಯ ಚರ್ಚಿತ ವಿಷಯವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ಗೌತಮ್​ ಕೃಷ್ಣ, ಹಾಡಿನಲ್ಲಿ ಪ್ರಣಯವನ್ನು ಸುಮಧುರ ಮತ್ತು ನೈಜವಾಗಿ ತೋರಿಸಲು ಈ ರೀತಿ ಚಿತ್ರಿಸಲಾಗಿದೆ. ನಾವು ಟೀಕೆಗಳ ಬಗ್ಗೆ ಚಿಂತಿಸಲಿಲ್ಲ. ಹಾಡಿಗೆ ಜೀವ ತುಂಬಲು ಇದು ಅಗತ್ಯವಾಗಿತ್ತು ಎಂದು ಸಮರ್ಥಿಸಿಕೊಂಡರು. ಸಿನಿಮಾದ ಟ್ರೈಲರ್​ ಮತ್ತು ಹಾಡುಗಳು ಜನರಿಗೆ ಇಷ್ಟವಾಗಿವೆ. ಸಕಾರಾತ್ಮಕ ಸ್ಪಂದೆನ ದೊರಕುತ್ತಿದೆ ಎಂದು ಇದೇ ವೇಳೆ ಹೇಳಿದರು.

ಚಿತ್ರದ ಕಥೆ ಯುವಕರ ಜೀವನಕ್ಕೆ ತುಂಬಾ ಹತ್ತಿರವಾಗಿದೆ. ಪ್ರತಿ ಯುವಕನ ಜೀವನಕ್ಕೂ ಇದು ರಿಲೇಟ್​ ಆಗಿರುತ್ತದೆ. ಇದು ಪ್ರೇಕ್ಷಕರನ್ನು ರಂಜಿಸುವುದರಲ್ಲಿ ಅನುಮಾನವೇ ಇಲ್ಲ ಎಂದರು. ಚಿತ್ರದಲ್ಲಿ ನಟಿ ಪೂಜಿತಾ ಅವರು ಉತ್ತಮವಾಗಿ ನಟಿಸಿದ್ದಾರೆ. ಅವರ ಬೆಂಬಲ ಮತ್ತು ಸಹಕಾರದಿಂದ ರೊಮ್ಯಾಂಟಿಕ್​ ಅಯ್ಯಯ್ಯಯ್ಯೋ ಹಾಡು ಉತ್ತಮವಾಗಿ ಮೂಡಿ ಬಂದಿದೆ. ನನ್ನ ಮತ್ತು ಅವರ ಆನ್​ಸ್ಕ್ರೀನ್​ ಕೆಮಿಸ್ಟ್ರಿ ತುಂಬಾ ಚೆನ್ನಾಗಿದೆ. ಇದು ಪ್ರೇಕ್ಷಕರಿಗೂ ಇಷ್ಟವಾಗಲಿದೆ ಎಂದರು. ಆಕಾಸ ವೀಧುಲ್ಲೋ ಸೆಪ್ಟೆಂಬರ್ 2 ರಂದು ಸಿನಿಮಾ ಬಿಡುಗಡೆಯಾಗಲಿದೆ.

ಓದಿ: ಎಲಿವೇಟರ್​ನಲ್ಲಿ ಚುಂಬಿಸಿದ ಕರಣ್​ ತೇಜಸ್ವಿ.. TejRan ರೊಮ್ಯಾನ್ಸ್ ಫೋಟೋಗಳ ಝಲಕ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.