ಸೂಪರ್ ನ್ಯಾಚುರಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಹಿಂದಿ ಸಿನಿಮಾವೊಂದು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ. ಅಜಯ್ ದೇವಗನ್, ಆರ್ ಮಾಧವನ್ ಮತ್ತು ಜ್ಯೋತಿಕಾ ನಟನೆಯ ಹೆಸರಿಡದ ಚಿತ್ರದ ರಿಲೀಸ್ ಡೇಟ್ ಇಂದು ಅನೌನ್ಸ್ ಆಗಿದೆ. ಸೂಪರ್ 30, ಕ್ವೀನ್ ಮತ್ತು ಗುಡ್ ಬೈ ಮುಂತಾದ ಸೂಪರ್ ಹಿಟ್ ಸಿನಿಮಾಗಳಿಗೆ ಹೆಸರುವಾಸಿಯಾಗಿರುವ ವಿಕಾಸ್ ಬಹ್ಲ್ ನಿರ್ದೇಶನದಲ್ಲಿ ಈ ತ್ರಿಬಲ್ ಸ್ಟಾರ್ಗಳ ಸಿನಿಮಾ ಮೂಡಿಬರಲಿದೆ.
-
Things are about to take a supernatural turn.
— Ajay Devgn (@ajaydevgn) September 7, 2023 " class="align-text-top noRightClick twitterSection" data="
Witness the trio of myself, R Madhavan & Jyotika in a nail-biting thriller, directed by Vikas Bahl. Hitting theatres on March 8, 2024!@ActorMadhavan #Jyotika @imjankibodiwala #VikasBahl #JyotiDeshpande @KumarMangat… pic.twitter.com/PjB0WUVjje
">Things are about to take a supernatural turn.
— Ajay Devgn (@ajaydevgn) September 7, 2023
Witness the trio of myself, R Madhavan & Jyotika in a nail-biting thriller, directed by Vikas Bahl. Hitting theatres on March 8, 2024!@ActorMadhavan #Jyotika @imjankibodiwala #VikasBahl #JyotiDeshpande @KumarMangat… pic.twitter.com/PjB0WUVjjeThings are about to take a supernatural turn.
— Ajay Devgn (@ajaydevgn) September 7, 2023
Witness the trio of myself, R Madhavan & Jyotika in a nail-biting thriller, directed by Vikas Bahl. Hitting theatres on March 8, 2024!@ActorMadhavan #Jyotika @imjankibodiwala #VikasBahl #JyotiDeshpande @KumarMangat… pic.twitter.com/PjB0WUVjje
ಚಿತ್ರದ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲು ಅಜಯ್ ದೇವಗನ್ ಅವರ ನಿರ್ಮಾಣ ಸಂಸ್ಥೆ ಅಜಯ್ ದೇವಗನ್ ಎಫ್ಫಿಲ್ಮ್ಸ್ ಎಕ್ಸ್ (ಹಿಂದಿನ ಟ್ವಿಟರ್) ವೇದಿಕೆಯನ್ನು ಬಳಸಿಕೊಂಡಿತು. "ಸೂಪರ್ ನ್ಯಾಚುರಲ್ ರೋಲರ್ ಕೋಸ್ಟರ್ ರೈಡ್ಗೆ ಸಿದ್ಧರಾಗಿ! ವಿಕಾಸ್ ಬಹ್ಲ್ ನಿರ್ದೇಶನದಲ್ಲಿ ಅಜಯ್ ದೇವಗನ್, ಆರ್ ಮಾಧವನ್ ಮತ್ತು ಜ್ಯೋತಿಕಾ ಅವರ ಮುಂಬರುವ ಥ್ರಿಲ್ಲರ್ಗಾಗಿ ಬ್ರೇಸ್ ಮಾಡಿ. ಮಾರ್ಚ್ 8, 2024 ನಿಮ್ಮ ಕ್ಯಾಲೆಂಡರ್ನಲ್ಲಿ ಗುರುತಿಸಿಕೊಳ್ಳಿ" ಎಂದು ಎಕ್ಸ್ನಲ್ಲಿ ಬರೆದುಕೊಂಡಿದೆ.
ಈ ಸಿನಿಮಾ ಮೂಲಕ 25 ವರ್ಷಗಳ ನಂತರ ಜ್ಯೋತಿಕಾ ಹಿಂದಿ ಚಿತ್ರರಂಗಕ್ಕೆ ಮರಳಿದ್ದಾರೆ. ಅವರ ಕೊನೆಯ ಹಿಂದಿ ಸಿನಿಮಾ 'ಡೋಲಿ ಸಾಜಾ ಕೆ ರಖನಾ'. ಈ ಚಿತ್ರವು 1997 ರಲ್ಲಿ ಬಿಡುಗಡೆಯಾಯಿತು. ಇದನ್ನು ಪ್ರಿಯದರ್ಶನ್ ನಿರ್ದೇಶಿಸಿದ್ದರು. ಹೆಚ್ಚುವರಿಯಾಗಿ ನೋಡುವುದಾದರೆ, ನಟ ಜಾಂಕಿ ಬೋಡಿವಾಲಾ ಅವದ್ದು ಚೊಚ್ಚಲ ಹಿಂದಿ ಚಿತ್ರವಿದು. ಅವರು ಗುಜರಾತ್ ಸಿನಿಮಾಗಳಾದ ಛೆಲೋ ದಿವಾಸ್, ತಂಬುರೋ, ಚುಟ್ಟಿ ಜಶೆ ಛಕ್ಕಾ ಮತ್ತು ಬೌ ನೌ ವಿಚಾರ್ಗಳಲ್ಲಿ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ಘರ್ಷಿಸಲು ಸಜ್ಜಾದ 'ಮಾರ್ಟಿನ್' & 'ಯುವ'.. ಒಂದೇ ದಿನ 2 ಬಹುನಿರೀಕ್ಷಿತ ಚಿತ್ರಗಳು ರಿಲೀಸ್?
ಈ ಸಿನಿಮಾವನ್ನು ಜಿಯೋ ಸ್ಟುಡಿಯೋಸ್, ಅಜಯ್ ದೇವಗನ್ ಎಫ್ಫಿಲ್ಮ್ಸ್ ಮತ್ತು ಪನೋರಮಾ ಸ್ಟುಡಿಯೋಸ್ ಇಂಟರ್ನ್ಯಾಷನಲ್ ಮೂಲಕ ಪ್ರಸ್ತುತಪಡಿಸಲಾಗುತ್ತಿದೆ. ಹೆಸರಿಡದ ಚಿತ್ರವನ್ನು ಅಜಯ್ ದೇವಗನ್, ಜ್ಯೋತಿ ದೇಶಪಾಂಡೆ, ಕುಮಾರ್ ಮಂಗತ್ ಪಾಠಕ್ ಮತ್ತು ಅಭಿಷೇಕ್ ಪಾಠಕ್ ಸೇರಿದಂತೆ ಪ್ರತಿಭಾವಂತ ತಂಡ ನಿರ್ಮಾಣ ಮಾಡಿದೆ. ಈ ಹೆಸರಿಡದ ಸಿನಿಮಾವು 2024ರ ಮಾರ್ಚ್ 8 ರಂದು ತೆರೆ ಕಾಣಲಿದೆ. ಪ್ರತಿಭಾವಂತ ಕಲಾವಿದರ ಸಹಯೋಗದಲ್ಲಿ ಸಿನಿಮಾ ತಯಾರಾಗುತ್ತಿದ್ದು, ಪ್ರೇಕ್ಷಕರಿಗೆ ಮರೆಯಲಾಗದ ಅನುಭವವನ್ನು ನೀಡಲಿದೆ ಎನ್ನಲಾಗಿದೆ.
ಇನ್ನೂ ನಟ ಅಜಯ್ ದೇವಗನ್ ಈ ಸಿನಿಮಾ ಮಾತ್ರಲ್ಲದೇ ಮೈದಾನ್ ಪ್ರೀಮಿಯರ್ಗೆ ಕಾಯುತ್ತಿದ್ದಾರೆ. ಜೊತೆಗೆ ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ ಮತ್ತೊಮ್ಮೆ 'ಸಿಂಗಂ ಎಗೈನ್' ಚಿತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Jawan celebration: ಚಲೇಯಾ ಹಾಡು ಪ್ರದರ್ಶನವಾಗುತ್ತಿದ್ದಂತೆ ಚಿತ್ರಮಂದಿರದಲ್ಲಿ ಗೆಳತಿಗೆ ಪ್ರಪೋಸ್ - ವಿಡಿಯೋ ನೋಡಿ!