ETV Bharat / entertainment

ಅಜಯ್​ ದೇವಗನ್​ - ಟಬು ನಟನೆಯ ಸಿನಿಮಾಗೆ ಫಿಕ್ಸ್​ ಆಯ್ತು ರಿಲೀಸ್​ ದಿನಾಂಕ

author img

By ETV Bharat Karnataka Team

Published : Dec 5, 2023, 1:49 PM IST

ರಾಜ್​ ಪಾಂಡೆ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಮುಂದಿನ ವರ್ಷ ಏಪ್ರಿಲ್​ಗೆ ಬಿಡುಗಡೆಯಾಗಲಿದೆ.

Ajay Devgn and Tabu satrrer Auron Mein Kahan Dum Tha gest release date

ಹೈದರಾಬಾದ್​: ಹಿಂದಿ ಚಿತ್ರೋದ್ಯಮದಲ್ಲಿನ ಬೆಸ್ಟ್​ ಫ್ರೆಂಡ್​ ಜೋಡಿಗಳಲ್ಲಿ ಒಂದಾಗಿರುವ​ ನಟ ಅಜಯ್​ ದೇವಗನ್​ ಮತ್ತು ಟಬು ನಟನೆಯ ರೋಮ್ಯಾಂಟಿಕ್​ ಚಿತ್ರ 'ಔರೊ ಮೇ ಕಹಾ ದಮ್​ ತಾ' ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್​ ಆಗಿದೆ. ಈ ಚಿತ್ರದ ಹೊಸ ಅಪ್​ಡೇಟ್​ ಕುರಿತು ನಿರ್ಮಾಪಕರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಿರಜ್​​​ ಪಾಂಡೆ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಮುಂದಿನ ವರ್ಷ ಏಪ್ರಿಲ್​ಗೆ ಬಿಡುಗಡೆಯಾಗಲಿದೆ. ನಿರಜ್​ ಪಾಂಡೆ ಈ ಹಿಂದಿನ ಸಿನಿಮಾಗಳಾದ 'ಎ ವೆಡ್​ನೆಸ್​ಡೇ', 'ಸ್ಪೆಷನ್​ 26' ಮತ್ತು 'ಎಂಎಸ್​ ಧೋನಿ: ದಿ ಅನ್​ಟೋಲ್ಡ್​​ ಸ್ಟೋರಿ' ಚಿತ್ರಗಳು ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡಿದ್ದವು. ಇದೀಗ ಈ ಸಿನಿಮಾ ಬಗ್ಗೆ ಕೂಡ ಹೆಚ್ಚಿನ ನಿರೀಕ್ಷೆ ಇದೆ.

ಇನ್ನು ಚಿತ್ರದ ಬಿಡುಗಡೆ ದಿನಾಂಕ ಪ್ರಕಟಿಸುವ ಫೋಟೋವನ್ನು ಇನ್​​ಸ್ಟಾಗ್ರಾಂನಲ್ಲಿ ನಿರ್ದೇಶಕರ ಜೊತೆಗೆ ನಟ ಅಜಯ್​ ದೇವಗನ್​ ಕೂಡ ಹಂಚಿಕೊಂಡಿದ್ದಾರೆ. ನಿರಜ್​​​ ಪಾಂಡೆ ಜೊತೆಗಿನ ಸಹಯೋಗದಲ್ಲಿ ಮೂಡಿ ಬರುತ್ತಿರುವ 'ಔರೊ ಮೇ ಕಹಾ ಧಮ್​ ತಾ' ಚಿತ್ರ ಏಪ್ರಿಲ್​ 26ರಂದು ಬಿಡುಗಡೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

'ಔರೊ ಮೇ ಕಹಾ ಧಮ್​ ತಾ' ಚಿತ್ರದಲ್ಲಿ ಟಬು ಮತ್ತು ಜಿಮ್ಮಿ ಶೆರ್ಗಿಲ್​ ಪ್ರಮುಖ ಪಾತ್ರದಲ್ಲಿ ಕಾಣಿಸಲಿದ್ದಾರೆ. ಚಿತ್ರವು ಒಂದು ಮ್ಯೂಸಿಕಲ್​ ಲವ್​ ಸ್ಟೋರಿ ಆಗಿದ್ದು, 2002 ಮತ್ತು 2023 ನಡುವಿನ ರೋಮ್ಯಾಟಿಕ್​ ಡ್ರಾಮಾ ಆಗಿದೆ. ಹಿಂದಿ ಜೊತೆಗೆ ಬಹು ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಎಂ ಎಂ ಕ್ರೀಮ್​ ಸಂಗೀತ ನಿರ್ದೇಶ ಮಾಡಿದ್ದಾರೆ. ಚಿತ್ರದ ಮತ್ತೊಂದು ವಿಶೇಷ ಎಂದರೆ, ಸಿನಿಮಾದಲ್ಲಿ ಸಾಯಿ ಮಂಜ್ರೇಕರ್​ ಮತ್ತು ಶಾಂತನೂ ಮಹೇಶ್ವರಿ ಪ್ರಮುಖ ಪಾತ್ರದಲ್ಲಿ ಕಾಣಿಸಲಿದ್ದಾರೆ.

'ವಿಜಯಪತಿ', 'ಹಖೀಖತ್'​​, 'ಫಿತೂರ್'​​, 'ದೃಶ್ಯಂ', 'ಗೋಲ್​ಮಲ್​ ಎಗೈನ್'​, 'ದೆ ದೇ ಪ್ಯಾರ್​ ದೇ', 'ದೃಶ್ಯಂ 2' ಮತ್ತು 'ಬೋಲಾ' ಚಿತ್ರದ ಬಳಿಕ ಅಜಯ್​ ಮತ್ತು ಟಬು ಒಟ್ಟಿಗೆ ನಟಿಸುತ್ತಿರುವ ಚಿತ್ರ ಇದಾಗಿದೆ.

ಈ ಚಿತ್ರದ ಹೊರತಾಗಿ ಅಜಯ್​ ದೇವಗನ್​ ಬೋನಿಕಪೂರ್​ ನಿರ್ಮಾಣದ ಮೈದಾನ್​ ಮತ್ತು ಆರ್​ ಮಾಧವನ್​ ಜೊತೆಗೆ ಹೆಸರಿಡದ ಚಿತ್ರ ಮತ್ತು ರೋಹಿತ್ ಶೆಟ್ಟಿ ಜೊತೆಗೆ ಆ್ಯಕ್ಷನ್​ ಥ್ರಿಲ್ಲರ್​ ಚಿತ್ರ ಸಿಂಗಂ ಎಗೈನ್​ನಲ್ಲಿ ನಟಿಸುತ್ತಿದ್ದಾರೆ. ಇನ್ನು ನಟಿ ಟಬು ಕರೀನಾ ಕಪೂರ್​​ ಮತ್ತು ಕೃತಿ ಸನೋನ್​ ಜೊತೆಗೆ ದಿ ಕ್ರೂ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಡಂಕಿ ಟ್ರೇಲರ್​​: 'ಎಸ್​​ಆರ್​ಕೆಯ 3rd ಬ್ಲಾಕ್​ಬಸ್ಟರ್' ಅಂತಿದ್ದಾರೆ ಫ್ಯಾನ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.