ETV Bharat / entertainment

ನಟಿ ಐಶ್ವರ್ಯಾ ರೈಗೆ ಕಂದಾಯ ಇಲಾಖೆಯಿಂದ ನೋಟಿಸ್​ ಜಾರಿ - ಭೂ ಕಂದಾಯ ಪಾವತಿ ಮಾಡದ ಐಶ್ವರ್ಯಾ ರೈ

ನಟಿ ಐಶ್ವರ್ಯಾ ಸೇರಿದಂತೆ ತೆರಿಗೆ ಕಟ್ಟದ 1,200 ಇತರ ಆಸ್ತಿ ಮಾಲೀಕರಿಗೆ ಕಂದಾಯ ಇಲಾಖೆ ನೋಟಿಸ್ ನೀಡಿದೆ. ಮಾರ್ಚ್ ಅಂತ್ಯದವರೆಗೆ ತೆರಿಗೆ ಸಂಗ್ರಹ ಮಾಡುವ ಗುರಿ ಹೊಂದಿದ್ದರಿಂದ ಈ ನೋಟಿಸ್​ ಜಾರಿ ಮಾಡಲಾಗಿದೆ. ನಟಿಗೆ ಇದಕ್ಕೂ ಮುನ್ನವೂ ಕೂಡಾ ನೋಟಿಸ್​ ನೀಡಲಾಗಿತ್ತು.

Aishwarya Rai Bachchan Notice
ನಟಿ ಐಶ್ವರ್ಯಾ ರೈ
author img

By

Published : Jan 17, 2023, 1:33 PM IST

ನಾಸಿಕ್ (ಮಹಾರಾಷ್ಟ್ರ): ಭೂ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಬಾಲಿವುಡ್​ ನಟಿ ಐಶ್ವರ್ಯಾ ರೈ ಬಚ್ಚನ್ ಅವರಿಗೆ ಮಹಾರಾಷ್ಟ್ರದ ನಾಸಿಕ್ ಜಿಲ್ಲಾಡಳಿತ ನೋಟಿಸ್ ನೀಡಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ. ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ, ನಾಸಿಕ್‌ ಜಿಲ್ಲೆಯ ಸಿನ್ನಾರ್‌ನ ತಂಗಾವ್ ಬಳಿಯ ಅಡ್ವಾಡಿಯ ಗುಡ್ಡಗಾಡು ಪ್ರದೇಶದಲ್ಲಿ 1 ಹೆಕ್ಟೇರ್‌ಗೂ ಹೆಚ್ಚು ಜಮೀನು ಹೊಂದಿದ್ದಾರೆ. ಈ ಬಗ್ಗೆ ತೆರಿಗೆ ಕಟ್ಟುವಂತೆ ನೀಡಲಾಗಿದ್ದ ಗಡುವು ಮುಗಿದಿದ್ದರೂ 22,000 ರೂ. ಭೂ ಕಂದಾಯ ಪಾವತಿಸದೇ ಇರುವುದಕ್ಕೆ ಸೋಮವಾರ ಅವರಿಗೆ ನೋಟಿಸ್ ನೀಡಲಾಗಿದೆ.

Aishwarya Rai Bachchan Notice
ನಟಿ ಐಶ್ವರ್ಯಾ ರೈ

ನಾಸಿಕ್ ಜಿಲ್ಲಾಡಳಿತವು ಇದಕ್ಕೂ ಮುನ್ನ ಅವರಿಗೆ ತೆರಿಗೆ ಪಾವತಿ ಮಾಡುವಂತೆ ಹಲವು ಬಾರಿ ನೋಟಿಸ್​ ನೀಡಿತ್ತು. ಆದರೂ, ಅವರು ತೆರಿಗೆ ಪಾವತಿಸಿಲ್ಲ ಎಂದು ಮೂಲಗಳು ಹೇಳಿವೆ. ಮಾರ್ಚ್ ಅಂತ್ಯದೊಳಗೆ ತೆರಿಗೆ ಸಂಗ್ರಹದ ಶೇಕಡಾ ಪಾಲನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದು ಕಂದಾಯ ಇಲಾಖೆ ಈ ಕ್ರಮ ಕೈಗೊಂಡಿದೆ. ತೆರಿಗೆ ಪಾವತಿ ಮಾಡದಿರುವ ಸಂಬಂಧ ಐಶ್ವರ್ಯಾ ರೈ ಸೇರಿದಂತೆ 1200 ಇತರ ಆಸ್ತಿ ಮಾಲೀಕರಿಗೂ ಇಲಾಖೆ ನೋಟಿಸ್ ಕೊಟ್ಟಿದೆ. ನಾಸಿಕ್ ಜಿಲ್ಲಾಡಳಿತವು ಗುಡುವಿನೊಳಗೆ ಭೂ ತೆರಿಗೆದಾರರಿಂದ ವಾರ್ಷಿಕ ಒಟ್ಟು 1.11 ಕೋಟಿ ರೂ. ತೆರಿಗೆ ಸಂಗ್ರಹ ನಿರೀಕ್ಷೆ ಹೊಂದಿದೆ. ಈ ಗುರಿ ಸಾಧಿಸುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಮತ್ತೆ ಕಾರ್ಯಪ್ರವೃತ್ತವಾಗಿದೆ.

Aishwarya Rai Bachchan Notice
ನಟಿ ಐಶ್ವರ್ಯಾ ರೈ

ಗಮ್ ಪ್ರೈವೇಟ್ ಲಿಮಿಟೆಡ್, ಎಲ್.ಬಿ.ಕುಂಜಿರ್ ಇಂಜಿನಿಯರ್, ಐಟಿಸಿ ಮರಾಠಾ ಲಿಮಿಟೆಡ್, ಎಸ್.ಕೆ.ಶಿವರಾಜ್, ಹೋಟೆಲ್ ಲೀಲಾ ವೆಂಚರ್ ಲಿಮಿಟೆಡ್, ಕುಕ್ರೇಜಾ ಡೆವಲಪರ್ ಕಾರ್ಪೊರೇಷನ್, ರಾಮ ಹ್ಯಾಂಡಿಕ್ರಾಫ್ಟ್, ಒಪಿ ಎಂಟರ್‌ಪ್ರೈಸಸ್ ಕಂಪನಿ, ಬಿಂದು ವಾಯು ಉರ್ಜಾ ಲಿಮಿಟೆಡ್, ಏರ್ ಕಂಟ್ರೋಲ್ ಪ್ರೈವೇಟ್ ಇಂಡಿಯಾ ಲಿಮಿಟೆಡ್, ಚೋಟ್ಯಾಬ್ ಇಂಡಿಯಾ, ಮೆಟ್ ಜೇತಾಭಾಯಿ ಪಟೇಲ್ ಮತ್ತು ಕಂಪನಿ ಸೇರಿದಂತೆ ಒಟ್ಟು 1200 ಇತರ ಆಸ್ತಿ ಮಾಲೀಕರಿಗೆ ನೋಟಿಸ್​ ಜಾರಿ ಮಾಡಲಾಗಿದೆ. ಇದರಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಕೂಡ ಸೇರಿದ್ದಾರೆ.

Aishwarya Rai Bachchan Notice
ನಟಿ ಐಶ್ವರ್ಯಾ ರೈ

ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಸೊಸೆ ಮತ್ತು ನಟ ಅಭಿಷೇಕ್ ಬಚ್ಚನ್ ಅವರ ಪತ್ನಿ ಐಶ್ವರ್ಯಾ ರೈ ಬಚ್ಚನ್ ದೇಶದ ಜನಪ್ರಿಯ ನಟಿಯರಲ್ಲಿ ಒಬ್ಬರು. ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶಿಸಿರುವ ‘ಪೊನ್ನಿಯಿನ್ ಸೆಲ್ವನ್ 1’ ಚಿತ್ರದಲ್ಲಿ ರೈ ಪ್ರಮುಖ ಪಾತ್ರ ಮಾಡಿದ್ದರು. ಚಿತ್ರ ಸೂಪರ್​ ಹಿಟ್​ ಆಗಿತ್ತು. ದಕ್ಷಿಣ ಭಾರತದಲ್ಲಿ ಪ್ರಾಬಲ್ಯ ಮೆರೆದಿದ್ದ ಚೋಳರ ಇತಿಹಾಸವನ್ನು ತೆರೆದಿಡುವ ಸಿನಿಮಾ ಇದಾಗಿದ್ದು ಹಣ ಗಳಿಕೆಯಲ್ಲೂ ದಾಖಲೆ ಬರೆದಿತ್ತು. 9ನೇ ಶತಮಾನದ ಕಾಲಘಟ್ಟದ ಸೆಟ್‌ಗಳು, ಅದಕ್ಕೆ ಹೊಂದುವ ಗ್ರಾಫಿಕ್ಸ್, ಕಾಸ್ಟ್ಯೂಮ್ಸ್ ‘ಪೊನ್ನಿಯಿನ್ ಸೆಲ್ವನ್ 1’ ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಆಗಿದ್ದವು. ಚಿತ್ರದಲ್ಲಿ ಆದಿತ ಕರಿಕಾಳನ್ ಆಗಿ ವಿಕ್ರಂ ನಟಿಸಿದ್ದರೆ, ಅರುಲ್ಮೋಳಿ ವರ್ಮನ್ ಆಗಿ ಜಯಂ ರವಿ, ವಲ್ಲವರಾಯನ್ ವಂದಿಯಾದೇವನ್ ಆಗಿ ಕಾರ್ತಿ, ನಂದಿನಿ ಮತ್ತು ಮಂದಾಕಿನಿ ದೇವಿಯಾಗಿ ಐಶ್ವರ್ಯ ರೈ ಬಚ್ಚನ್, ಕುಂದವೈ ಪಿರತ್ತಿಯಾರ್ ಆಗಿ ತ್ರಿಷಾ, ಸುಂದರ ಚೋಳ ಆಗಿ ಪ್ರಕಾಶ್ ರಾಜ್ ಕಾಣಿಸಿಕೊಂಡಿದ್ದರು.

Aishwarya Rai Bachchan Notice
ನಟಿ ಐಶ್ವರ್ಯಾ ರೈ

ಇದನ್ನೂ ಓದಿ: 'ದಿ ವ್ಯಾಕ್ಸಿನ್ ವಾರ್' ಶೂಟಿಂಗ್ ವೇಳೆ ಕಾಶ್ಮೀರ್ ಫೈಲ್ಸ್‌ ನಟಿ ಪಲ್ಲವಿ ಜೋಶಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.