ಭಾರತೀಯ ಚಿತ್ರರಂಗದ ಸ್ಟಾರ್ ನಟಿಯರು ಬಾರ್ಬಿ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸುಂದರ ಚಿತ್ರವನ್ನು ಛಾಯಾಗ್ರಾಹಕ ಹಾಗೂ ಡಿಜಿಟಲ್ ಕಲಾವಿದ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿಕೊಂಡು ಚಿತ್ರಿಸಿದ್ದಾರೆ. ಇವರ ಪ್ರಯತ್ನದ ಫಲಿತಾಂಶವು ತಾರೆಯರು ತುಂಬಾ ಮುದ್ದಾಗಿ ಮತ್ತು ಬಾರ್ಬಿ ಲುಕ್ನಲ್ಲಿ ಪರಿಪೂರ್ಣವಾಗಿ ಕಾಣುವಂತೆ ಮಾಡಿದೆ. ಸಮಂತಾ ರುತ್ ಪ್ರಭು, ಶ್ರುತಿ ಹಾಸನ್, ತ್ರಿಶಾ ಕೃಷ್ಣನ್, ತಮನ್ನಾ ಭಾಟಿಯಾ, ನಯನತಾರಾ, ಕಾಜಲ್ ಅಗರ್ವಾಲ್ ಸಖತ್ ಕ್ಯೂಟ್ ಆಗಿ ಕಂಡಿದ್ದಾರೆ.
ಫೋಟೋಗಳನ್ನು ಖ್ಯಾತ ಛಾಯಾಗ್ರಾಹಕ ಮತ್ತು ಡಿಜಿಟಲ್ ಕಲಾವಿದ ಜಥುರ್ಸನ್ ಪಿರಾಬಾಕರನ್ ಹಂಚಿಕೊಂಡಿದ್ದಾರೆ. ಇವರ ಕೈಚಳಕದಿಂದ ಮೂಡಿಬಂದ ಸ್ಟಾರ್ ನಟಿಯರ ಬಾರ್ಬಿ ಲುಕ್ ನೋಡುಗರನ್ನು ಆಕರ್ಷಿಸಿದೆ. ಶ್ರುತಿ ಹಾಸನ್ ಪಿಂಕ್ ಲಾಂಗ್ ಕೂದಲಿನೊಂದಿಗೆ ಗುಲಾಬಿ ಬಣ್ಣದ ಗೌನ್ ಧರಿಸಿ ತುಂಬಾ ಸುಂದರವಾಗಿ ಕಂಡಿದ್ದಾರೆ. ಇವರ ಬಾರ್ಬಿ ಅವತಾರ ಕಂಡ ಅಭಿಮಾನಿಗಳು, 'ಬ್ಯೂಟಿಫುಲ್', 'ತುಂಬಾ ಸುಂದರ' ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.
ತಮನ್ನಾ ಭಾಟಿಯಾ ಅವರು AI ಕೃಪೆಯಿಂದ ಗುಲಾಬಿ ಬಣ್ಣದ ದಿರಿಸಿನಲ್ಲಿ ಕ್ಯೂಟ್ ಬಾರ್ಬಿಯಾಗಿದ್ದಾರೆ. ಅವರ ಡ್ರೆಸ್ಗೆ ಮ್ಯಾಚಿಂಗ್ ಆಗುವಂತೆ ಮುತ್ತಿನ ಮಾಲೆಯನ್ನು ಧರಿಸಿದ್ದಾರೆ. ಕಾರಿನಲ್ಲಿ ಕುಳಿತು ಕ್ಯಾಮರಾಗೆ ಪೋಸ್ ನೀಡುವಂತೆ ಚಿತ್ರಿಸಲಾಗಿದೆ. ಈ ಫೋಟೋಗೆ ಪ್ರತಿಕ್ರಿಯಿಸಿದ ಅವರ ಅಭಿಮಾನಿಗಳು, 'ಟಾಮ್ ನಿಜವಾದ ಬಾರ್ಬಿಯಂತೆ ಕಾಣುತ್ತಿದ್ದಾರೆ' ಎಂದು ಹೇಳಿದ್ದಾರೆ.
ಇನ್ನೂ ತ್ರಿಶಾ ಕೃಷ್ಣನ್ ಅವರು ಪಿಂಕ್ ಬಣ್ಣದ ದಿರಿಸಿಗೆ ಅದೇ ಬಣ್ಣದ ಕಿವಿಯೋಲೆ ಧರಿಸಿ ಮುದ್ದಾಗಿ ಕಂಡಿದ್ದಾರೆ. ಸೌತ್ ಸ್ಟಾರ್ ನಟಿ ಸಮಂತಾ ರುತ್ ಪ್ರಭು ಗುಲಾಬಿ ಬಣ್ಣದ ರಫಲ್ ಡ್ರೆಸ್ ಮತ್ತು ಹೊಂಬಣ್ಣದ ಕೂದಲಿನೊಂದಿಗೆ ಬಾರ್ಬಿಯಾಗಿದ್ದಾರೆ. ಕಾಜಲ್ ಅಗರ್ವಾಲ್ ಶೈನಿಂಗ್ ಪಿಂಕ್ ಡ್ರೆಸ್ಗೆ ಹೊಂದುವಂತಹ ಆಭರಣ ಧರಿಸಿ ನಗೆ ಬೀರಿದ್ದಾರೆ. ನಯನತಾರಾ ಅವರು ಗುಲಾಬಿ ಬಣ್ಣದ ಲಾಂಗ್ ಗೌನ್ನಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: Jawan Song: ನಾಳೆ ಜವಾನ್ ರೊಮ್ಯಾಂಟಿಕ್ ಸಾಂಗ್ ರಿಲೀಸ್; ಚಲೇಯಾ ಟೀಸರ್ ನೋಡಿದ್ರಾ?
ಸ್ಟಾರ್ ನಟಿಯರ ಸಿನಿಮಾಗಳು..: ನಟಿ ಶ್ರುತಿ ಹಾಸನ್ ಅವರು ಪ್ರಭಾಸ್ ಜೊತೆ 'ಸಲಾರ್' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವು ಸೆಪ್ಟಂಬರ್ 28ರಂದು ಬಿಡುಗಡೆಯಾಗಲಿದೆ. ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಕೆಜಿಎಫ್ ಚಿತ್ರಗಳಿಗೆ ಕೆಲಸ ಮಾಡಿದ ತಾಂತ್ರಿಕ ತಂಡವೇ ಈ ಚಿತ್ರಕ್ಕೂ ಕೆಲಸ ಮಾಡಿದ್ದು, ರವಿ ಬಸ್ರೂರು ಅವರ ಸಂಗೀತ, ಭುವನ್ ಗೌಡ ಛಾಯಾಗ್ರಹಣ, ಶಿವಕುಮಾರ್ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ.
ತಮನ್ನಾ ಭಾಟಿಯಾ ಸದ್ಯ ಜೈಲರ್ ಸಿನಿಮಾದಲ್ಲಿ ಯಶಸ್ಸಿನಲ್ಲಿದ್ದಾರೆ. ಈ ಸಿನಿಮಾ ವಿಶ್ವದಾದ್ಯಂತ 500 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ನಿರೀಕ್ಷೆಗೂ ಮೀರಿದ ಯಶಸ್ಸು ಸಿಕ್ಕಿದೆ. ಕರುನಾಡ ಚಕ್ರವರ್ತಿ ಶಿವ ರಾಜ್ಕುಮಾರ್, ಮಾಲಿವುಡ್ ಸೂಪರ್ಸ್ಟಾರ್ ಮೋಹನ್ಲಾಲ್, ರಮ್ಯಾ ಕೃಷ್ಣನ್, ಯೋಗಿ ಬಾಬು, ವಸಂತ್ ರವಿ ಸೇರಿದಂತೆ ಅನೇಕರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮತ್ತೊಂದೆಡೆ, ತಮನ್ನಾ ನಾಯಕಿಯಾಗಿ ನಟಿಸಿರುವ 'ಭೋಲಾ ಶಂಕರ್' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹಿನ್ನಡೆ ಕಂಡಿದೆ.
ಸಮಂತಾ ರುತ್ ಪ್ರಭು ಕೊಂಚ ಕಾಲ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಅದಕ್ಕೂ ಮೊದಲು ತಾವು ಒಪ್ಪಿಕೊಂಡಿದ್ದ ಎರಡು ಸಿನಿಮಾಗಳ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ವಿಜಯ್ ದೇವರಕೊಂಡ ಜೊತೆಗಿನ ಖುಷಿ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ಶಿವ ನಿರ್ವಾಣ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ಸೆಪ್ಟಂಬರ್ 1ರಂದು ತೆರೆ ಕಾಣಲಿದೆ. ಇದಲ್ಲದೇ ಬಾಲಿವುಡ್ ನಟ ವರುಣ್ ಧವನ್ ಜೊತೆಗಿನ ಸಿಟಾಡೆಲ್ ಸರಣಿಯ ತಮ್ಮ ಪಾತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ.
ಕಾಜಲ್ ಅಗರ್ವಾಲ್ ಅವರು ನಟಸಿಂಹ ನಂದಮೂರಿ ಬಾಲಕೃಷ್ಣ ಜೊತೆ ಭಗವಂತ ಕೇಸರಿ ಸಿನಿಮಾ ಮಾಡುತ್ತಿದ್ದಾರೆ. ಚಿತ್ರವು ದಸರಾ ಪ್ರಯುಕ್ತ ಅಕ್ಟೋಬರ್ 19 ರಂದು ಬಿಡುಗಡೆಯಾಗಲಿದೆ. ಇನ್ನೂ ನಯನತಾರಾ ಬಹುನಿರೀಕ್ಷಿತ ಜವಾನ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಶಾರುಖ್ ಖಾನ್ ನಟನೆಯ ಈ ಚಿತ್ರವು ಸೆಪ್ಟೆಂಬರ್ 7ರಂದು ವಿಶ್ವಾದ್ಯಂತ ತೆರೆ ಕಾಣಲಿದೆ.
ಇದನ್ನೂ ಓದಿ: 'ಭಗವಂತ ಕೇಸರಿ' ರಿಲೀಸ್ಗೆ ಮುಹೂರ್ತ ಫಿಕ್ಸ್: ಬಾಲಯ್ಯ ಅಭಿಮಾನಿಗಳಲ್ಲಿ ಗರಿಗೆದರಿದ ನಿರೀಕ್ಷೆ