ಮುಂಬೈ: ಪುತ್ರ ರಣಬೀರ್ ಕಪೂರ್ ವಿವಾಹ ಸಂಭ್ರಮ ನೀತು ಕಪೂರ್‌ಗೆ ಹಳೇಯ ದಿನಗಳನ್ನು ನೆನಪಿಗೆ ತಂದಿದ್ದು, ಬುಧವಾರ ರಣಬೀರ್ ಮತ್ತು ಆಲಿಯಾ ಭಟ್ ಅವರ ವಿವಾಹ ಸಮಾರಂಭಗಳನ್ನು ಪ್ರಾರಂಭಿಸುವ ಮೊದಲು, ನೀತು ತಮ್ಮ ಇನ್ಸ್ಟಾಗ್ರಾಂನಲ್ಲಿ 43 ವರ್ಷಗಳ ಹಿಂದೆ ಬೈಸಾಖಿಯ ಸಂದರ್ಭದಲ್ಲಿ ದಿವಂಗತ ನಟ ರಿಷಿ ಕಪೂರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ದಿನಗಳ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ನೀತು, ತಮ್ಮ ಮತ್ತು ರಿಷಿ ಕಪೂರ್ ಅವರ ನಿಶ್ಚಿತಾರ್ಥ ಸಮಾರಂಭದ ಹಳೇಯ ಫೋಟೋವೊಂದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಆ ಕಪ್ಪು ಬಿಳುಪು ಫೋಟೋದಲ್ಲಿ ರಿಷಿ ಮತ್ತು ನೀತು ಉಂಗುರ ಬದಲಾಯಿಸಿಕೊಳ್ಳುತ್ತಿದ್ದಾರೆ. "ಬೈಸಾಖಿ ದಿನದ ಅಚ್ಚುಮೆಚ್ಚಿನ ನೆನಪುಗಳು.. ನಾವು 43 ವರ್ಷಗಳ ಹಿಂದೆ 13 ಏಪ್ರಿಲ್ 1979 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದೇವು" ಎಂದು ಪೋಸ್ಟ್‌ಗೆ ಶೀರ್ಷಿಕೆಯನ್ನೂ ನೀಡಿದ್ದಾರೆ.
- " class="align-text-top noRightClick twitterSection" data="
">
ನೀತು ಅವರು ಶೇರ್ ಮಾಡಿರುವ ಪೋಸ್ಟ್‌ಗೆ ಹಲವಾರು ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ಬಂದಿವೆ. "ಈ ಸುಂದರ ಸ್ಮರಣೆಯನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು" ಎಂದು ನೆಟಿಜನ್ ಕಮೆಂಟ್ ಮಾಡಿದ್ದಾರೆ. "ಸಿಹಿಯಾದ ನೆನಪುಗಳು ಆದರೆ ನಿಜವಾಗಿಯೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಚಿಂತು ಜೀ" ಎಂದು ಇನ್ನೊಬ್ಬರು ಬರೆದಿದ್ದಾರೆ. ದುರದೃಷ್ಟವಶಾತ್, ರಿಷಿ ಕಪೂರ್ ಅವರು 2020ರ ಏಪ್ರಿಲ್ 30ರಂದು ಕ್ಯಾನ್ಸರ್ ವಿರುದ್ಧ ಹೋರಾಡಿ, ನಿಧನರಾದರು.
ಇದನ್ನೂ ಓದಿ: ಅಭಿಮಾನಿಗಳಿಗೆ ಕೊಟ್ಟ ಭರವಸೆ ಈಡೇರಿಸಿದ ಪೂನಂ : ಕ್ಯಾಮೆರಾ ಮುಂದೆ ಟಾಪ್ಲೆಸ್ ಆದ ಪಾಂಡೆ