ಸೌತ್ ಸಿನಿಮಾ ಇಂಡಸ್ಟ್ರಿಯ ಬಹುಬೇಡಿಕೆಯ ತಾರೆ ಸಮಂತಾ ರುತ್ ಪ್ರಭು. ಸಿನಿಮಾ ಮತ್ತು ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇವರು ಸ್ಟಾರ್ ಹೀರೋಗಳಂತೆ ದೇಶ ಮಾತ್ರವಲ್ಲದೇ ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದ್ದಾರೆ. ಸದ್ಯ ಸ್ಯಾಮ್ ಅಮೆರಿಕ ಪ್ರವಾಸದಲ್ಲಿದ್ದಾರೆ. ಸಿನಿಮಾಗಳಿಂದ ಕೊಂಚ ಕಾಲ ಬ್ರೇಕ್ ತೆಗೆದುಕೊಂಡಿರುವ ನಟಿ ಆರೋಗ್ಯದ ಕಡೆ ಗಮನ ಹರಿಸುವುದರ ಜೊತೆಗೆ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ನಿತ್ಯ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಸ್ನೇಹಿತರನ್ನು ಭೇಟಿಯಾದ ಸ್ಯಾಮ್: ನಟಿ ಸಮಂತಾ ರುತ್ ಪ್ರಭು ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯ ಎಂಬುದು ನಿಮಗೆ ತಿಳಿದೇ ಇದೆ. ಸಂದರ್ಭಕ್ಕೆ ತಕ್ಕಂತೆ ಪೋಸ್ಟ್ ಹಂಚಿಕೊಳ್ಳುತ್ತಲೇ ಇರುತ್ತಾರೆ. ಸೋಮವಾರ ಸಮಂತಾ ಅಮೆರಿಕದ ವಾರ್ನರ್ ಬ್ರದರ್ಸ್ ಸ್ಟುಡಿಯೋದಲ್ಲಿ ಸ್ನೇಹಿತರನ್ನು ಭೇಟಿಯಾಗಿದ್ದಾರೆ. ಈ ವಿಚಾರವನ್ನು ತಮ್ಮ ಫ್ಯಾನ್ಸ್ಗೆ ತಿಳಿಸಲು ನಟಿ ಇನ್ಸ್ಟಾ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಅಲ್ಲಿನ ಸುಂದರ ದೃಶ್ಯಗಳ ಒಳಗೊಂಡ ಫೋಟೋಗೆ 'ಐ ವಿಲ್ ಬಿ ದೇರ್ ಫರ್ ಯೂ' ಎಂಬ ಇಂಗ್ಲಿಷ್ ಹಾಡನ್ನು ಹಿನ್ನೆಲೆ ಸಂಗೀತವಾಗಿ ಸೇರಿಸಿದ್ದಾರೆ.
ಅಮೆರಿಕದಲ್ಲಿ ಕುಶಿ ಪ್ರಮೋಶನ್: ಸದ್ಯ ಈ ಮನಮೋಹಕ ನಟಿ ಅಮೆರಿಕ ಪ್ರವಾಸ ಆನಂದಿಸುತ್ತಿದ್ದಾರೆ. ಇದೇ ತಿಂಗಳ 20ರಂದು ನಡೆದ ಇಂಡಿಯಾ ಡೇ ಪರೇಡ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಭಾರತೀಯ ಸಂಸ್ಕೃತಿಯಂತೆ ಸೀರೆಯುಟ್ಟು ನ್ಯೂಯಾರ್ಕ್ ಸಿಟಿ ಸುತ್ತಿದ್ದರು. ಬಳಿಕ ತಮ್ಮ ಮುಂಬರುವ ಕುಶಿ ಚಿತ್ರದ ಪ್ರಮೋಶನ್ ಸಹ ಕೈಗೊಂಡಿದ್ದರು. ಈವೆಂಟ್ನಲ್ಲಿ ಸಮಂತಾ ಕೆಲವೇ ಕೆಲ ಕ್ಷಣ ಹಾಜರಿದ್ದರು. ಇದಕ್ಕಾಗಿ ನಟಿಗೆ ಸುಮಾರು 30 ಲಕ್ಷ ರೂ. ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
- " class="align-text-top noRightClick twitterSection" data="">
ಇದನ್ನೂ ಓದಿ: ವಿಜಯ್ ದೇವರಕೊಂಡ ಜೊತೆ ಸಮಂತಾ ಸಿನಿಮಾ ಪ್ರಚಾರ; ಅಭಿಮಾನಿಗಳು ಫುಲ್ 'ಕುಶಿ': Photos
ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಟಿಕೆಟ್ ದರ ನಿಗದಿ ಮಾಡಲಾಗಿತ್ತು. ಟಿಕೆಟ್ ದರ 12,000 ರೂ.ನಿಂದ ಹಿಡಿದು 2 ಲಕ್ಷದವರೆಗೂ ಇತ್ತು. 2 ಲಕ್ಷ ರೂ. ಕೊಟ್ಟು ಟಿಕೆಟ್ ಖರೀದಿಸಿದವರಿಗೆ ಸಮಂತಾ ಬಳಿ ಕುಳಿತುಕೊಳ್ಳುವ ಅವಕಾಶ ಕಲ್ಪಿಸಲಾಗಿತ್ತು ಎಂಬ ಮಾಹಿತಿ ಇದೆ. ಈ ವಿಷಯ ತಿಳಿದವರು ಸಮಂತಾ ಕ್ರೇಜ್ ಸಾಮಾನ್ಯದ್ದಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಶಿ ಬಿಡುಗಡೆಗೆ 3 ದಿನ ಬಾಕಿ: ಸಮಂತಾ ರುತ್ ಪ್ರಭು ಮತ್ತು ಸೌತ್ ಸೆನ್ಸೇಶನಲ್ ಸ್ಟಾರ್ ವಿಜಯ್ ದೇವರಕೊಂಡ ಮುಖ್ಯಭೂಮಿಕೆಯ ಕಂಪ್ಲೀಟ್ ಲವ್ ಸ್ಟೋರಿ ಸಿನಿಮಾ 'ಕುಶಿ'. ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಶಿವ ನಿರ್ವಾಣ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರ ಸೆಪ್ಟಂಬರ್ 1ರಂದು ತೆರೆ ಕಾಣಲಿದೆ. ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಸಮಂತಾ ಮತ್ತು ವಿಜಯ್ ದೇವರಕೊಂಡ ಎರಡನೇ ಬಾರಿ ತೆರೆ ಹಂಚಿಕೊಂಡಿದ್ದಾರೆ.
ಕಂಪ್ಲೀಟ್ ಲವ್ ಸ್ಟೋರಿ ಸಿನಿಮಾ... ಸಂಪೂರ್ಣ ಪ್ರೇಮಕಥೆ ಆಗಿರುವ ಈ ಕುಶಿ ಸಿನಿಮಾ ಸದ್ಯ ಟ್ರೇಲರ್ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದೆ. ವೀಕ್ಷಕರನ್ನು ಪ್ರೇಮದಲೆಯಲ್ಲಿ ತೇಲಿಸುತ್ತಿದೆ. ಜೋಡಿಯ ಪ್ರೇಮ ಪ್ರಯಾಣ, ವಿಭಿನ್ನ ಆಚರಣೆಗಳಿಗೆ ಒಗ್ಗಿಕೊಳ್ಳೋದು, ಎದುರಾಗುವ ಸವಾಲುಗಳು, ಕಥೆಯಲ್ಲಿನ ಟ್ವಿಸ್ಟ್ ವೀಕ್ಷಕರ ಕುತೂಹಲ ಹೆಚ್ಚಿಸಿದೆ. ಚಿತ್ರ ಬಿಡುಗಡೆಗಾಗಿ ಸಿನಿ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: Samantha: ಸೀರೆಯುಟ್ಟು ನ್ಯೂಯಾರ್ಕ್ ಸಿಟಿ ಸುತ್ತಿದ ಸಮಂತಾ ರುತ್ ಪ್ರಭು - ಫೋಟೋಗಳಿಗೆ ಮನಸೋತ ಅಭಿಮಾನಿಗಳು