ETV Bharat / entertainment

ಆ್ಯಕ್ಷನ್​ ಪ್ರಿನ್ಸ್​ ಅಭಿನಯದ ಮಾರ್ಟಿನ್ ರಿಲೀಸ್​ ಯಾವಾಗ? ಏನ್​ ಹೇಳ್ತಾರೆ ನಿರ್ಮಾಪಕ ಉದಯ್ ಮೆಹ್ತಾ - ಆ್ಯಕ್ಷನ್​ ಕಿಂಗ್​ ಅರ್ಜುನ್​ ಸರ್ಜಾ ಕಥೆ

ಆ್ಯಕ್ಷನ್​ ಪ್ರಿನ್ಸ್​ ಮಾರ್ಟಿನ್​ ಸಿನಿಮಾಗೆ ಆ್ಯಕ್ಷನ್​ ಕಿಂಗ್​ ಅರ್ಜುನ್​ ಸರ್ಜಾ ಕಥೆ ಬರೆದಿದ್ದಾರೆ.

Martin Movie team
ಮಾರ್ಟಿನ್ ಸಿನಿಮಾ ತಂಡ
author img

By

Published : May 20, 2023, 8:01 PM IST

ಕರ್ನಾಟಕ ಚುನಾವಣೆ ಹಾಗೂ ಐಪಿಎಲ್‌ ಅಬ್ಬರದಿಂದ ಕನ್ನಡ ಚಿತ್ರರಂಗದಲ್ಲಿ ದೊಡ್ಡ ದೊಡ್ಡ ಚಿತ್ರಗಳು ಬಿಡುಗಡೆ ಆಗುತ್ತಿಲ್ಲ. ಸದ್ಯ ವಿಧಾನಸಭೆ ಚುನಾವಣೆ ಮುಗಿದಿದ್ದು, ಕಾಂಗ್ರೆಸ್ ಸರ್ಕಾರ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಸದ್ಯ ರಿಲೀಸ್‌ಗೆ ರೆಡಿ ಆಗಿರುವ ಬಿಗ್ ಸ್ಟಾರ್ ಸಿನಿಮಾಗಳಲ್ಲಿ ಧ್ರುವ ಸರ್ಜಾ ನಟನೆಯ ಮಾರ್ಟಿನ್, ಶಿವರಾಜ್ ಕುಮಾರ್ ಘೋಸ್ಟ್ ಹಾಗು ಉಪೇಂದ್ರ ಅಭಿನಯದ ಯುಐ ಚಿತ್ರಗಳು ಬಿಡುಗಡೆ ಹಂತದಲ್ಲಿವೆ.

ಈ ಮೂರು ಬಿಗ್ ಬಜೆಟ್ ಸಿನಿಮಾಗಲ್ಲಿ ರಿಲೀಸ್​ಗೆ ಸಜ್ಜಾಗಿರೋ ಹೈ ವೋಲ್ಟೆಜ್ಸ್ ಚಿತ್ರ ಮಾರ್ಟಿನ್. ಫೆಬ್ರವರಿ ತಿಂಗಳಲ್ಲಿ ಈ ಚಿತ್ರದ ಟೀಸರ್ ರಿಲೀಸ್ ಮಾಡಿ ಚಿತ್ರತಂಡ ಗಮನ ಸೆಳೆದಿತ್ತು. ಆ್ಯಕ್ಷನ್ ಪ್ರಿನ್ಸ್ ಮಾಸ್ ಲುಕ್​ನಲ್ಲಿ ಕಾಣಿಸಿಕೊಂಡಿರುವ ಎ.ಪಿ ಅರ್ಜುನ್ ನಿರ್ದೇಶನದ ಈ ಚಿತ್ರಕ್ಕೆ ಉದಯ್ ಕೆ ಮೆಹ್ತಾ ಬಂಡವಾಳ ಹೂಡಿದ್ದಾರೆ. ಈ ಹೈವೋಲ್ಟೇಜ್ ಆ್ಯಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ.

ಆ್ಯಕ್ಷನ್ ಪ್ಯಾಕ್ಡ್ ಟೀಸರ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿತ್ತು. ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚು ಮಾಡಿದೆ. ಧ್ರುವ ಸಿಕ್ಕಾಪಟ್ಟೆ ಖಡಕ್ ರೋಲ್‌ನಲ್ಲಿ ಮಿಂಚಿದ್ದಾರೆ. ಕಾರಣಾಂತರಗಳಿಂದ ಸಿನಿಮಾ ರಿಲೀಸ್ ತಡವಾಗುತ್ತಿದೆ. ಚುನಾವಣೆ ನಂತರ ಸಿನಿಮಾ ರಿಲೀಸ್‌ ಬಗ್ಗೆ ಪ್ಲ್ಯಾನ್ ಮಾಡೋದಾಗಿ ಚಿತ್ರತಂಡ ಹೇಳಿತ್ತು. ಮಾರ್ಟಿನ್ ಟೀಸರ್ ಡಿಲಿಟ್ ಆದಾಗ ರಷ್ಯಾ ಹ್ಯಾಕರ್ಸ್‌ಗಳದ್ದೇ ಕೈವಾಡ ಇದೆ ಅಂತಾ ಹೇಳಲಾಗಿತ್ತು.

ಇನ್ನು ಧ್ರುವ ಸರ್ಜಾ ಜೊತೆ ವೈಭವಿ ಶಾಂಡಿಲ್ಯ ರೊಮ್ಯಾನ್ಸ್ ಮಾಡಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ನಿರ್ಮಾಪಕ ಉದಯ್ ಮೆಹ್ತಾ ಈಟಿವಿ ಭಾರತ್ ಜೊತೆ ಮಾತನಾಡಿ, ಮಾರ್ಟಿನ್ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ, ಸಿನಿಮಾ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. 4 ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಸದ್ಯ ಧ್ರುವ ಸರ್ಜಾ 'ಕೆಡಿ' ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. 15 ದಿನಗಳಲ್ಲಿ ಆ ಶೂಟಿಂಗ್ ಮುಗಿಸಿ ಬರ್ತಾರೆ.

ಇನ್ನು ಡಬ್ಬಿಂಗ್ ಕೆಲಸ ಕೂಡ ಪೂರ್ಣ: 3 ಹಾಡುಗಳನ್ನು ಸೆಟ್‌ಗಳಲ್ಲಿ ಚಿತ್ರೀಕರಣ ನಡೆಸಲು ಪ್ಲ್ಯಾನ್ ಮಾಡಲಾಗಿದೆ. ಒಂದನ್ನು ಮಾತ್ರ ಔಟ್‌ ಡೋರ್‌ ಪ್ಲ್ಯಾನ್ ಮಾಡಲಾಗ್ತಿದೆ. ಇನ್ನು ಧ್ರುವ ಬಿಟ್ಟು ಉಳಿದ ಎಲ್ಲರ ಡಬ್ಬಿಂಗ್ ಕಂಪ್ಲೀಟ್ ಆಗಿದೆ. 15 ದಿನಗಳಲ್ಲಿ ಸಾಂಗ್ಸ್ ಶೂಟಿಂಗ್ ಮುಗಿಯುತ್ತೆ. ಆಮೇಲೆ ಸಿನಿಮಾ ಪ್ರಮೋಷನ್, ರಿಲೀಸ್ ಪ್ಲ್ಯಾನ್ ಮಾಡುತ್ತೇವೆ. ಸಿನಿಮಾ ಪೋಸ್ಟ್ ಪ್ರೊಡಕ್ಷನ್ ವರ್ಕ್‌ ಕೂಡ ಬಹುತೇಕ ಮುಕ್ತಾಯವಾಗಿದೆ ಎಂದಿದ್ದಾರೆ.

ಸಾಂಗ್ ಶೂಟಿಂಗ್ ಮುಗಿದ ಕೂಡಲೇ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತೇವೆ ಅಂತಾ ನಿರ್ಮಾಪಕ ಉದಯ್ ಮೆಹ್ತಾ ಮಾಹಿತಿ ನೀಡಿದ್ದಾರೆ. ಕನ್ನಡದ ನಟರು ಒಬ್ಬೊಬ್ಬರಾಗಿ ಪ್ಯಾನ್ ಇಂಡಿಯಾ ಸ್ಟಾರ್‌ಗಳಾಗುತ್ತಿದ್ದಾರೆ. ಇದೀಗ ಧ್ರುವ ಸರ್ಜಾ ಸರದಿ. ಏಕಕಾಲಕ್ಕೆ 5 ಭಾಷೆಗಳಲ್ಲಿ 'ಮಾರ್ಟಿನ್' ದರ್ಬಾರ್ ಶುರುವಾಗಲಿದೆ.

ದೊಡ್ಡ ಮಟ್ಟದಲ್ಲಿ ಹೊಸ ರಾಜ್ಯಗಳಲ್ಲೂ ಸಿನಿಮಾ ಪ್ರಮೋಷನ್ ನಡೆಯಲಿದೆ. ಈಗಾಗಲೇ ಟೀಸರ್‌ಗೆ ಪರಭಾಷಾ ಪ್ರೇಕ್ಷರಿಂದಲೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ಬಗ್ಗೆ ಹೊಸ ರಾಜ್ಯಗಳಲ್ಲೂ ಬಝ್ ಕ್ರಿಯೇಟ್ ಆಗ್ತಿದೆ. ಟೀಸರ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದ್ದು, ಧ್ರುವ ಸರ್ಜಾ ಜಬರ್ದಸ್ತ್ ಪರ್ಫಾರ್ಮೆನ್ಸ್ ಇರುವ 'ಮಾರ್ಟಿನ್' ಟೀಸರ್ ಹಿಟ್ ಆಗಿದೆ. 4 ದಿನಕ್ಕೆ 70 ಮಿಲಿಯನ್‌ಗೂ ಅಧಿಕ ವ್ಯೂಸ್​ ಸಾಧಿಸಿ ಸದ್ದು ಮಾಡಿತ್ತು. ಕಳೆದ ತಿಂಗಳು ಲಹರಿ ಸಂಸ್ಥೆಯ ಯೂಟ್ಯೂಬ್ ಚಾನಲ್ ಹ್ಯಾಕ್ ಮಾಡಿ ರಷ್ಯಾದ ಕಿಡಿಗೇಡಿಗಳು ಟೀಸರ್‌ ಡಿಲಿಟ್ ಮಾಡಿದ್ದಾಗಿ ಹೇಳಲಾಗಿತ್ತು. 4 ದಿನಗಳ ನಂತರ ಟೀಸರ್ ವಾಪಸ್ ಬಂದಿತ್ತು. ಆಗಸ್ಟ್ ಅಥವಾ ಸೆಪ್ಟೆಮಬರ್ ತಿಂಗಳಲ್ಲಿ ಈ ಸಿನಿಮಾ ತೆರೆಗೆ ತರುವ ಪ್ಲಾನ್​ನಲ್ಲಿದ್ದಾರೆ ನಿರ್ಮಾಪಕರು.

ಇದನ್ನೂ ಓದಿ: ಜ್ಯೂನಿಯರ್​​ ಎನ್‌ಟಿಆರ್ ಹುಟ್ಟುಹಬ್ಬ, ವಿಶೇಷವಾಗಿ ಶುಭಕೋರಿದ ಕೆನಡಾ, ಜಪಾನ್‌ನ ಅಭಿಮಾನಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.