ಹಾಲಿವುಡ್ ನಿರ್ದೇಶಕಿ ಗ್ರೆಟಾ ಗೆರ್ವಿಗ್ ನಿರ್ದೇಶನದ 'ಬಾರ್ಬಿ' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜುಲೈ 21 ರಂದು (ಶುಕ್ರವಾರ) ವಿಶ್ವದಾದ್ಯಂತ ಓಪನ್‌ಹೈಮರ್ ಸಿನಿಮಾದೊಂದಿಗೆ ಬಿಡುಗಡೆಯಾಗಿ ಕಲೆಕ್ಷನ್ ವಿಚಾರದಲ್ಲಿ ವೇಗದ ಓಟ ಮುಂದುವರೆಸಿದೆ. ಇದೀಗ ಭಾರತೀಯ ಗಾಯಕಿ ಸೋನಾ ಮೊಹಾಪಾತ್ರ ಮತ್ತು ನಟಿ ಜೂಹಿ ಪರ್ಮಾರ್ ಚಲನಚಿತ್ರದ ಬಗ್ಗೆ ತಮ್ಮ ವ್ಯತಿರಿಕ್ತ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಥಿಯೇಟರ್‌ನಲ್ಲಿ ಬಾರ್ಬಿ ಸಿನಿಮಾ ವೀಕ್ಷಿಸಿದ ನಂತರ ಮೊಹಾಪಾತ್ರ ತಮ್ಮ ನಿರಾಶೆ ವ್ಯಕ್ತಪಡಿಸಲು ಸೋಷಿಯಲ್ ಮೀಡಿಯಾವನ್ನು ವೇದಿಕೆಯಾಗಿ ಬಳಸಿಕೊಂಡರು.
ಕೆನ್ ಆಗಿ ರಯಾನ್ ಗೊಸ್ಲಿಂಗ್ ಜೊತೆಗೆ ಮಾರ್ಗಾಟ್ ರಾಬಿ ನಾಯಕಿಯಾಗಿ ನಟಿಸಿರುವ ಈ ಚಿತ್ರವು ಅಂತಾರಾಷ್ಟ್ರೀಯ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸನ್ನು ಗಳಿಸಿದೆ. ಕ್ರಿಸ್ಟೋಫರ್ ನೋಲನ್ ಅವರ ಒಪೆನ್‌ಹೈಮರ್ ಅನ್ನು ಮೀರಿಸಿದೆ. ಬಾರ್ಬಿ ಭಾರತದಲ್ಲಿ ಕಡಿಮೆ ಕಲೆಕ್ಷನ್ ಮಾಡಿದರೂ, ವಿಶ್ವಾದ್ಯಂತ ಉತ್ತಮ ಗಳಿಕೆ ಕಂಡಿದೆ. ಅದಾಗ್ಯೂ, ಸೋನಾ ಮೊಹಾಪಾತ್ರ ಅವರು ಈ ಚಿತ್ರದಿಂದ ಅತೃಪ್ತರಾಗಿದ್ದಾರೆ. ಕಲೆಕ್ಷನ್ ವಿಚಾರದ ಹೊರತಾಗಿಯೂ ಅವರಿಗೆ ಈ ಸಿನಿಮಾ ನಿರಾಶೆ ಉಂಟು ಮಾಡಿದೆ.
ಸೋನಾ ಟ್ವಿಟರ್ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, "ನಾನು ಹಲವು ವರ್ಷಗಳ ನಂತರ ಥಿಯೇಟರ್ಗೆ ಹೋಗಿದ್ದೇನೆ. ಅಸಹನೀಯ ಮತ್ತು ಭಯಾನಕ ಬಾರ್ಬಿಗೆ ಒಳಗಾಗಿದ್ದೇನೆ. ಚಿತ್ರದ ಮೂಲಕ ಜೋರಾಗಿ ಮಾತನಾಡುವ ದೇಸಿ ಬಾರ್ಬಿಗಳ ಗುಂಪೊಂದು ಹೆಚ್ಚುವರಿ ಚಿತ್ರಹಿಂಸೆಯಾಗಿದೆ." ಎಂದು ಹೇಳಿದ್ದಾರೆ. ಬಾರ್ಬಿ ಸಿನಿಮಾ ಭಯಾನಕ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ. ಸೋನಾ ಅವರ ಈ ಪೋಸ್ಟ್ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.
-
can’t believe I went to a theatre after eons & subjected myself to an unbearable, terrible #Barbie . That there were a bunch of desi Barbies talking loudly through the film was additional torture. Only redeeming factor was the well appointed ,lux 40 odd seater cinema in Jio Drive
— Sona Mohapatra (@sonamohapatra) July 25, 2023 " class="align-text-top noRightClick twitterSection" data="
">can’t believe I went to a theatre after eons & subjected myself to an unbearable, terrible #Barbie . That there were a bunch of desi Barbies talking loudly through the film was additional torture. Only redeeming factor was the well appointed ,lux 40 odd seater cinema in Jio Drive
— Sona Mohapatra (@sonamohapatra) July 25, 2023can’t believe I went to a theatre after eons & subjected myself to an unbearable, terrible #Barbie . That there were a bunch of desi Barbies talking loudly through the film was additional torture. Only redeeming factor was the well appointed ,lux 40 odd seater cinema in Jio Drive
— Sona Mohapatra (@sonamohapatra) July 25, 2023
ಇದನ್ನೂ ಓದಿ: BAD: ಟೈಟಲ್ನಿಂದಲೇ ಸದ್ದು ಮಾಡ್ತಿರುವ ಚಿತ್ರ.. ಕಾಮ ಪ್ರತಿನಿಧಿಸುವ ಪಾತ್ರದಲ್ಲಿ ಅಪೂರ್ವ ಭಾರದ್ವಾಜ್
ಕೆಲವರು ಹಾಸ್ಯ ರೀತಿಯಲ್ಲಿ ಪ್ರತಿಕ್ರಿಯಿಸಿದರೆ, ಇನ್ನು ಕೆಲವರು ಸಿನಿಮಾವನ್ನು ಸರಿಯಾಗಿ ವಿಶ್ಲೇಷಿಸಿ ಮಾತನಾಡುವಂತೆ ಹೇಳಿದ್ದಾರೆ. ಏತನ್ಮಧ್ಯೆ, ಕಿರುತೆರೆ ನಟಿ ಜೂಹಿ ಪರ್ಮಾ ಕೂಡ ಬಾರ್ಬಿಯೊಂದಿಗೆ ತಮ್ಮದೇ ಆದ ನಕಾರಾತ್ಮಕ ಅನುಭವವನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ನಲ್ಲಿ, ನಾನು ನನ್ನ 10 ವರ್ಷದ ಮಗಳು ಸಮೈರಾಳನ್ನು ಚಿತ್ರ ವೀಕ್ಷಿಸಲು ಕರೆದೊಯ್ದಿದ್ದೇನೆ. ಅದು PG-13 ಚಲನಚಿತ್ರ ಎಂದು ತಿಳಿಯದೇ. ಜೂಹಿ ಸಿನಿಮಾದ ಅಸರ್ಮಪಕ ಭಾಷೆ ಮತ್ತು ಕೆಲವು ಆತ್ಮೀಯ ದೃಶ್ಯಗಳು ಇರಿಸುಮುರಿಸು ಉಂಟು ಮಾಡುವಂತಿತ್ತು. ಇದನ್ನು ಮಗಳು ನೋಡುವುದನ್ನು ತಡೆಯಲು ಥಿಯೇಟರ್ ಅನ್ನು ಆತುರದಿಂದ ತೊರೆಯಬೇಕಾಯಿತು ಎಂದು ಹೇಳಿದ್ದಾರೆ.
- " class="align-text-top noRightClick twitterSection" data="">
ಇದರ ಹೊರತಾಗಿ ಬಾರ್ಬಿ ತನ್ನ ಕಲೆಕ್ಷನ್ ಓಟವನ್ನು ಮುಂದುವರೆಸಿದೆ. ಭಾರತದ ಟಿಕೆಟ್ ಮಾರಾಟದಲ್ಲಿ ಇದು ಓಪನ್‌ಹೈಮರ್‌ಗಿಂತ ಹಿಂದುಳಿದಿದ್ದರೂ, ಚಿತ್ರವು ಕೇವಲ ನಾಲ್ಕು ದಿನಗಳಲ್ಲಿ 21.15 ಕೋಟಿ ರೂ.ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಅಂತಾರಾಷ್ಟ್ರೀಯವಾಗಿ, ಬಾರ್ಬಿಯು 155 ಮಿಲಿಯನ್ ಗಳಿಸಿದೆ.
ಇದನ್ನೂ ಓದಿ: 'ಡ್ರೀಮ್ ಗರ್ಲ್ 2' ಪೂಜಾ ಲುಕ್ ಔಟ್: ಮೆಚ್ಚುಗೆ ವ್ಯಕ್ತಪಡಿಸಿದ ಆಯುಷ್ಮಾನ್ ಖುರಾನಾ ಪತ್ನಿ