ETV Bharat / entertainment

'ಗುರುದೇವ್​ ಹೊಯ್ಸಳ'ನಿಗೆ ಭರ್ಜರಿ ರೆಸ್ಪಾನ್ಸ್​: ನಿರ್ಮಾಪಕರಿಂದ ಡಾಲಿಗೆ ದುಬಾರಿ ಮೌಲ್ಯದ ಕಾರ್ ಗಿಫ್ಟ್ - ಈಟಿವಿ ಭಾರತ ಕನ್ನಡ

'ಗುರುದೇವ್​ ಹೊಯ್ಸಳ' ಸಕ್ಸಸ್​ ಬೆನ್ನಲ್ಲೇ ಚಿತ್ರದ ನಿರ್ಮಾಪಕರು ದುಬಾರಿ ಮೌಲ್ಯದ ಕಾರನ್ನು ಡಾಲಿ ಧನಂಜಯ್​ಗೆ ಉಡುಗೊರೆಯಾಗಿ ನೀಡಿದ್ದಾರೆ.

dhananjay
ಗುರುದೇವ್​ ಹೊಯ್ಸಳ ಡಾಲಿಗೆ ಕಾರು ಉಡುಗೊರೆ
author img

By

Published : Mar 31, 2023, 3:19 PM IST

ನಟ ಡಾಲಿ ಧನಂಜಯ್​ ಅಭಿನಯದ 'ಗುರುದೇವ್​ ಹೊಯ್ಸಳ' ನಿನ್ನೆಯಷ್ಟೇ ಬಿಡುಗಡೆಯಾಗಿದ್ದು, ಪ್ರೇಕ್ಷಕರ ನಿರೀಕ್ಷೆ ಮಟ್ಟ ತಲುಪುವಲ್ಲಿ ಯಶಸ್ವಿಯಾಗಿದೆ. ಧನಂಜಯ್​ ಅವರ 25ನೇ ಸಿನಿಮಾ ಇದಾಗಿದೆ. ಖಡಕ್​ ಪೊಲೀಸ್​ ಅಧಿಕಾರಿಯಾಗಿ ಡಾಲಿ ಗಮನ ಸೆಳೆದಿದ್ದಾರೆ. ಚಿತ್ರ ಸಕ್ಸಸ್​ಫುಲ್​ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಡಾಲಿಗೆ ಭರ್ಜರಿ ಗಿಫ್ಟ್​ ಸಿಕ್ಕಿದೆ. ಚಿತ್ರದ ನಿರ್ಮಾಪಕರಾದ ಯೋಗಿ ರಾಜ್​ ಮತ್ತು ಕಾರ್ತಿಕ್​ ಗೌಡ ಅವರು ದುಬಾರಿ ಮೌಲ್ಯದ ಕಾರನ್ನು ಡಾಲಿಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ.

ಡಾಲಿ ಧನಂಜಯ್​ ಮತ್ತು ಅಮೃತಾ ಅಯ್ಯಂಗಾರ್​ ನಟನೆಯ ಹೊಯ್ಸಳ ಸಿನಿಮಾವು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಚಿತ್ರದಲ್ಲಿ ಅಭಿನಯಿಸಿದ ಎಲ್ಲಾ ಕಲಾವಿದರಿಗೂ ಪ್ರೇಕ್ಷಕರು ಫುಲ್​ ಮಾರ್ಕ್ಸ್​ ನೀಡಿದ್ದಾರೆ. ಜನರ ಉತ್ತಮ ಪ್ರತಿಕ್ರಿಯೆಯನ್ನು ಕಂಡು ಚಿತ್ರತಂಡ ಖುಷಿಯಾಗಿದ್ದಾರೆದೆ. ಹೀಗಾಗಿಯೇ ಗುರುದೇವ್​ ಹೊಯ್ಸಳ ನಿರ್ಮಾಪಕರು ಡಾಲಿಗೆ 1 ಕೋಟಿ ರೂಪಾಯಿ ಬೆಲೆ ಬಾಳುವ Toyota Vellfire ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕುರಿತು ಧನಂಜಯ್​ ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.

  • 25th film and a special gift from my special people. Love you and cheers for more and more things we are going to do together. Thanks for such good memories❤️

    ನನ್ನ ನಿರ್ಮಾಪಕರ ಮತ್ತು ಅಭಿಮಾನಿಗಳ ಕೊಡುಗೆ🤗#GurudevHoysala @Karthik1423 @yogigraj pic.twitter.com/7TUXXNi1gV

    — Gurudev Hoysala (@Dhananjayaka) March 31, 2023 " class="align-text-top noRightClick twitterSection" data=" ">

"25ನೇ ಚಿತ್ರ ಮತ್ತು ನನ್ನ ವಿಶೇಷ ವ್ಯಕ್ತಿಗಳಿಂದ ವಿಶೇಷ ಉಡುಗೊರೆ. ಲವ್​ ಯೂ, ನಾವು ಒಟ್ಟಿಗೆ ಮಾಡಲಿರುವ ಹೆಚ್ಚು ಹೆಚ್ಚು ಕೆಲಸಗಳಿಗಾಗಿ ಚೀರ್ಸ್. ಇಂತಹ ಒಳ್ಳೆಯ ನೆನಪುಗಳಿಗಾಗಿ ಧನ್ಯವಾದಗಳು. ನನ್ನ ನಿರ್ಮಾಪಕರ ಮತ್ತು ಅಭಿಮಾನಿಗಳ ಕೊಡುಗೆ" ಎಂದು ಡಾಲಿ ಸಂತಸದ ಟ್ವೀಟ್​ ಮಾಡಿದ್ದಾರೆ. ಅವರು ಶೇರ್​ ಮಾಡಿಕೊಂಡಿರುವ ಫೋಟೋದಲ್ಲಿ ಧನಂಜಯ್​, ಕಾರ್ತಿಕ್​ ಮತ್ತು ಯೋಗಿ ರಾಜ್​ ಹೊಸ ಕಾರಿನ ಬಳಿ ನಿಂತಿರುವುದನ್ನು ಕಾಣಬಹುದು.

ಇದನ್ನೂ ಓದಿ: ನಾಳೆ ತೆರೆ ಮೇಲೆ ಅಬ್ಬರಿಸಲಿರುವ 'ಗುರುದೇವ್​ ಹೊಯ್ಸಳ'; ರಾಣಿ ಜೊತೆ ಲೈವ್​ ಬಂದ ಧನಂಜಯ್​

ಇನ್ನೂ ಗುರುದೇವ್​ ಹೊಯ್ಸಳ ಚಿತ್ರವನ್ನು ವಿಜಯ್ ಕಿರಗಂದೂರು ಅರ್ಪಿಸುವ ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್‌ ಅಡಿಯಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ.ರಾಜ್ ನಿರ್ಮಿಸಿದ್ದಾರೆ. ವಿಜಯ್​ ಅವರ ನಿರ್ದೇಶನವಿದ್ದು, ಅಜನೀಶ್​ ಲೋಕನಾಥ್​ ಸಂಗೀತವಿದೆ. ಖಡಕ್​ ಡೈಲಾಗ್​ಗಳನ್ನು ಮಾಸ್ತಿ ಅವರು ಬರೆದಿದ್ದು, ಕಾರ್ತಿಕ್​ ಅವರ ಛಾಯಾಗ್ರಹಣ ಮತ್ತು ದೀಪು ಎಸ್​ ಕುಮಾರ್​ ಅವರ ಸಂಕಲನವಿದೆ.

ಇದನ್ನೂ ಓದಿ: ಡಾಲಿ ಅಭಿನಯದ 'ಗುರುದೇವ್​ ಹೊಯ್ಸಳ' ಬಿಡುಗಡೆ: ಶುಭ ಕೋರಿದ ರಶ್ಮಿಕಾ ಮಂದಣ್ಣ ​

ಧನಂಜಯ್ ಅವರಿಗೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್ ನಟಿಸಿದ್ದಾರೆ. ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್, ಪ್ರತಾಪ್ ನಾರಾಯಣ್, ರಾಜೇಶ್ ನಟರಂಗ, ನಾಗಭೂಷಣ್, ರಘು ಶಿವಮೊಗ್ಗ, ಅನಿರುದ್ಧ್ ಭಟ್, ಮಯೂರಿ ನಟರಾಜ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಶೀರ್ಷಿಕೆ ಮೊದಲು 'ಹೊಯ್ಸಳ' ಎಂಬುದಾಗಿತ್ತು. ಬಳಿಕ ಬೇರೆ ಒಂದು ಚಿತ್ರ ಇದೇ ಹೆಸರಿನಲ್ಲಿ ನಿರ್ಮಾಣ ಆಗುತ್ತಿರುವ ಕಾರಣಕ್ಕೆ ಸಿನಿಮಾದ ಹೆಸರನ್ನು 'ಗುರುದೇವ್ ಹೊಯ್ಸಳ' ಎಂಬುದಾಗಿ ಮರುನಾಮಕರಣ ಮಾಡಲಾಗಿದೆ.

ಇದನ್ನೂ ಓದಿ: ಟಿಕೆಟ್​ ಇದ್ದರೂ ಚಿತ್ರಮಂದಿರದಲ್ಲಿ ನರಿಕ್ಕುವರ್ ಮಹಿಳೆಗೆ ಪ್ರವೇಶ ನಿರಾಕರಣೆ ಆರೋಪ: ಸಿಬ್ಬಂದಿ ವಿರುದ್ಧ ಕೇಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.