ಮುಂಬೈ: ಬಾಲಿವುಡ್ನ ರೋಮ್ಯಾಂಟಿಕ್ ಜೋಡಿಗಳಲ್ಲಿ ಒಂದಾಗಿರುವ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಇತ್ತೀಚೆಗಷ್ಟೇ ಎರಡು ಕುಟುಂಬಸ್ಥಗಳ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದರು. ರಾಜಸ್ಥಾನದ ಜೈಸಲ್ಮೇರ್ನ ಸೂರ್ಯಗಢ ಕೋಟೆಯಲ್ಲಿ ನಡೆದ ಸಮಾರಂಭಕ್ಕೆ ಕೇವಲ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಇದೀಗ ಈ ಜೋಡಿ ಮುಂಬೈನಲ್ಲಿ ಅದ್ಧೂರಿ ಆರತಕ್ಷತೆಗೆ ಸಿದ್ಧರಾಗಿದ್ದಾರೆ. ಈ ಆರತಕ್ಷತೆ ಸಮಾರಂಭದಲ್ಲಿ ಬಾಲಿವುಡ್ ಮಂದಿ ಭಾಗಿಯಾಗಲಿದ್ದು, ಮತ್ತೊಂದು ಅದ್ಧೂರಿ ಕಾರ್ಯಕ್ರಮ ನಡೆಸಲು ಜೋಡಿ ಸಜ್ಜಾಗಿದೆ. ಸದ್ಯ ರಾಜಸ್ಥಾನದ ಸೂರ್ಯಗಢ್ ಅರಮನೆಯಲ್ಲಿ ನಡೆದ ಅದ್ಧೂರಿ ಮದುವೆ ಬಳಿಕ ಇದೀಗ ದೆಹಲಿಯಲ್ಲಿ ಸಿದ್ಧಾರ್ಥ್ ಮನೆಯಲ್ಲಿ ಈ ಜೋಡಿ ಹಲವು ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಬ್ಯುಸಿ ಇದ್ದಾರೆ.
- " class="align-text-top noRightClick twitterSection" data="
">
ಮದುವೆ ಬಳಿಕ ಈ ಜೋಡಿ ಎರಡು ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಿದ್ದಾರೆ. ಫೆ 9ರಂದು ದೆಹಲಿಯಲ್ಲಿ ಸ್ನೇಹಿತರು, ಕುಟುಂಬಸ್ಥರಿಗೆ ದೆಹಲಿಯ ಲೀಲಾ ಪ್ಯಾಲೇಸ್ನಲ್ಲಿ ಫೆಬ್ರವರಿ 9ರಂದು ಆರತಕ್ಷತೆ ನಡೆಸಲಾಗಿತ್ತು. ಈಗ ಬಾಲಿವುಡ್ ಮಂದಿಗಾಗಿ ಎರಡನೇ ಆರತಕ್ಷತೆಯನ್ನು ಮುಂಬೈನ ಸೇಂಟ್ ರೆಜಿಸ್ ಹೋಟೆಲ್ನಲ್ಲಿ ಫೆ. 12ರಂದು(ಭಾನುವಾರ) ನಡೆಸಲು ಸಜ್ಜಾಗಿದ್ದಾರೆ. ದೆಹಲಿಯಲ್ಲಿ ಕುಟುಂಬಸ್ಥರಿಗಾಗಿ ನಡೆದ ಆರತಕ್ಷತೆಯಲ್ಲಿ ತುಂಬಾ ಸಿಂಪಲ್ ಲುಕ್ನಲ್ಲಿ ಕಿಯಾರಾ ಮತ್ತು ಸಿದ್ದಾರ್ಥ್ ಕಂಡು ಬಂದಿದ್ದಾರೆ ಎನ್ನಲಾಗಿದೆ. ಮುಂಬೈ ಆರತಕ್ಷತೆಯಲ್ಲಿ ಮತ್ತೆ ಅವರು ಮನೀಷ್ ಮಲ್ಹೋತ್ರಾ ವಸ್ತ್ರ ವಿನ್ಯಾಸದಲ್ಲಿ ಅದ್ದೂರಿಯಾಗಿ ಕಣ್ಸೆಳೆಯಬಹುದು ಎನ್ನಲಾಗಿದೆ. ಸಿದ್ದಾರ್ಥ್ ಮತ್ತು ಕಿಯಾರಾ ಶನಿವಾರ ದೆಹಲಿಯಿಂದ ಮುಂಬೈಗೆ ಆಗಮಿಸಲಿದ್ದಾರೆ.
- " class="align-text-top noRightClick twitterSection" data="
">
ಮದುವೆಯಲ್ಲಿ ಸಾಕಷ್ಟು ಗೌಪ್ಯತೆ ಕಾಪಾಡಿದ ಈ ಜೋಡಿಯ ಆರತಕ್ಷತೆಯ ಆಹ್ವಾನ ಪತ್ರಿಕೆ ಆನ್ಲೈನ್ನಲ್ಲಿ ಸೋರಿಕೆಯಾಗಿದೆ. ವೆಬ್ಲೊಯ್ಡ್ , ಸಿದ್ದಾರ್ಥ್ ಕಿಯಾರಾ ಅವರ ಮುಂಬೈ ಆರತಕ್ಷತೆಯ ಆಹ್ವಾನ ಪತ್ರಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ. ಕಾರ್ಡ್ನಲ್ಲಿ ಸಿದ್ದಾರ್ಥ್-ಕಿಯಾರಾ ನಗು ಮುಖದ ಫೋಟೋ ಕಾಣಬಹುದಾಗಿದ್ದು, ಜೊತೆಗೆ ಆರತಕ್ಷತೆ ನಡೆಯುವ ಸ್ಥಳ, ದಿನಾಂಕ ಮತ್ತು ಸಮಯ ದಾಖಲಾಗಿದೆ.
ಬಾಲಿವುಡ್ ಮತ್ತು ಉದ್ಯಮಿಗಳು ಈ ಆರತಕ್ಷತೆಯಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಇನ್ನು ಮೂಲಗಳ ಪ್ರಕಾರ, ಕರಣ್ ಜೋಹರ್, ಶಹೀದ್ ಕಪೂರ್, ಮನೀಷ್ ಮಲ್ಹೋತ್ರಾ, ಶಾರುಖ್ ಖಾನ್, ವರುಣ್ ಧವನ್, ಅಕ್ಷಯ್ ಕುಮಾರ್, ಪರಿಣಿತಿ ಚೋಪ್ರಾ, ಜೂಹಿ ಚಾವ್ಲಾ, ಅನಿಲ್ ಕಪೂರ್, ಅಜಯ್ ದೇವಗನ್ ಮತ್ತು ರಾಕುಲ್ ಪ್ರೀತ್ ಸಿಂಗ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.
ಸಿದ್ಧಾರ್ಥ್- ಕಿಯಾರಾ ಕಳೆದೆರಡು ವರ್ಷಗಳಿಂದ ಪ್ರೀತಿಸುತ್ತಿದ್ದು, ಮದುವೆ ಬಗ್ಗೆ ಯಾವುದೇ ಗುಟ್ಟನ್ನು ಅವರು ಬಿಟ್ಟುಕೊಟ್ಟಿರಲಿಲ್ಲ. ಶೇರ್ಶಾ ಚಿತ್ರದಲ್ಲಿ ಈ ಜೋಡಿ ಒಟ್ಟಿಗೆ ಅಭಿನಯಿಸಿದ್ದರು. ಮದುವೆ ವಿಷಯವನ್ನು ಈ ಜೋಡಿ ಫೋಟೋವನ್ನು ಹಂಚಿಕೊಂಡಿತ್ತು. ಖ್ಯಾತ ವಸ್ತ್ರ ವಿನ್ಯಾಸಕ ಮನಿಷ್ ಮಲ್ಹೋತ್ರಾ ವಿನ್ಯಾಸಿತ ತಿಳಿ ಗುಲಾಬಿ ಬಣ್ಣದ ಲೆಹಂಗಾದಲ್ಲಿ ಕಿಯಾರಾ ಕಂಗೊಳಿಸಿದರೆ, ಕ್ರೀಮ್ ಬಣ್ಣದ ಶೇರ್ವಾನಿಯಲ್ಲಿ ನಟ ಸಿದ್ದಾರ್ಥ್ ಮಿಂಚಿದ್ದರು. ಇನ್ನು ಮದುವೆಯ ಸಮಾರಂಭದಲ್ಲಿನ ವಿಡಿಯೋವನ್ನು ಕೂಡ ದೆಹಲಿ ಆರತಕ್ಷತೆಗೆ ಮುನ್ನ ಈ ಜೋಡಿ ಹಂಚಿಕೊಂಡಿದ್ದರು.
ಇದನ್ನೂ ಓದಿ: ಸಿದ್ಧಾರ್ಥ್ ಕಿಯಾರಾ ವಿವಾಹ: ವಧುವಿನ ಕಡೆಯವರಿಗಿಂತ ವರನ ಅತಿಥಿಗಳ ಸಂಖ್ಯೆಯೇ ದುಪ್ಪಟ್ಟು!