ETV Bharat / entertainment

ಕಿಸ್ ವೈರಲ್​ ಬಳಿಕ ಪಾರ್ಟಿಯಲ್ಲಿ ಬಾಯ್​ಫ್ರೆಂಡ್ ಜೊತೆ ಕಾಣಿಸಿಕೊಂಡ ನಟಿ ಭೂಮಿ ಪೆಡ್ನೇಕರ್​

author img

By

Published : Feb 20, 2023, 2:11 PM IST

ಬಾಲಿವುಡ್​ ನಟಿ ಭೂಮಿ ಪೆಡ್ನೇಕರ್​ ತನ್ನ ತಂಗಿ ಬರ್ತ್​ಡೇ ಪಾರ್ಟಿಯಲ್ಲಿ ಬಾಯ್​ಫ್ರೆಂಡ್​ ಎಂದು ಹೇಳಲಾಗುತ್ತಿರುವ ಯಶ್​ ಕಟಾರಿಯಾ ಅವರ ಮತ್ತೊಮ್ಮೆ ಕಾಣಿಸಿಕೊಂಡಿದ್ದು, ಮತ್ತೆ ಸುದ್ದಿಯಲ್ಲಿದ್ದಾರೆ.

Actress Bhumi Padnekar party
ನಟಿ ಭೂಮಿ ಪಡ್ನೇಕರ್​ ಪಾರ್ಟಿ

ಬಾಲಿವುಡ್​ನ ಟಾಪ್​ ನಟಿಯರಲ್ಲಿ ಒಬ್ಬರಾಗಿರುವ ನಟಿ ಭೂಮಿ ಪೆಡ್ನೇಕರ್​ ಇತ್ತೀಚೆಗೆ ಬಾಲಿವುಡ್​ ಜೋಡಿಯ ಮದುವೆ ಆರತಕ್ಷತೆಯಲ್ಲಿ ಅಪರಿಚಿತ ವ್ಯಕ್ತಿಗೆ ಕಿಸ್​ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದ್ದರು. ಇದೀಗ ಮತ್ತೊಮ್ಮೆ ಬಿಸಿ ಬಿಸಿ ಸುದ್ದಿಯಲ್ಲಿದ್ದಾರೆ ಬಾಲಿವುಡ್​ ಬ್ಯೂಟಿ ಭೂಮಿ ಪೆಡ್ನೇಕರ್​. ಕಿಸ್​ ಸುದ್ದಿ ವೈರಲ್​ ಆದ ಸ್ವಲ್ಪ ದಿನದಲ್ಲೇ ಇದೀಗ ಭೂಮಿ ಪಡ್ನೇಕರ್​ ಬಾಯ್​ಫ್ರೆಂಡ್​ ಎಂದು ಹೇಳಲಾಗುತ್ತಿರುವ ಅಪರಿಚಿತ ವ್ಯಕ್ತಿ ಜೊತೆ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ಹಸೆಮಣೆ ಏರಿದ ಬಾಲಿವುಡ್​ ತಾರಾ ಜೋಡಿ ಸಿದ್ಧಾರ್ಥ್​ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಮದುವೆ ಆರತಕ್ಷತೆಯಲ್ಲಿ ಭೂಮಿ ಪೆಡ್ನೇಕರ್​​ ಎರಡು ವಿಷಯಗಳಿಗೆ ಹೆಚ್ಚು ಸುದ್ದಿಯಾಗಿದ್ದರು. ಒಂದು ಅವರ ಬೋಲ್ಡ್​ ಸ್ಟೈಲ್​ ಸ್ಟೇಟ್​ಮೆಂಟ್​ಗೆ ಹಾಗೂ ಇನ್ನೊಂದು ಒಬ್ಬ ಅಪರಿಚಿತ ವ್ಯಕ್ತಿ ಜೊತೆಗಿನ ಕಿಸ್​ ವಿಷಯ ವೈರಲ್​ ಆಗಿತ್ತು.

ಭಾನುವಾರ ರಾತ್ರಿ ಭೂಮಿ ತಮ್ಮ ತಂಗಿ ಸಮೀಕ್ಷಾ ಪೆಡ್ನೇಕರ್​​ ಅವರ ಬರ್ತ್​ಡೇಯನ್ನು ಮುಂಬೈನಲ್ಲಿ ತಮ್ಮ ಆಪ್ತ ಸ್ನೇಹಿತರೊಂದಿಗೆ ಆಚರಿಸಿದ್ದಾರೆ. ಪಾರ್ಟಿಯಲ್ಲಿ ಬೀಜ್ ಕಾರ್ಸೆಟ್​ ಟಾಪ್​ ಹಾಗೂ ಅದಕ್ಕೆ ಮ್ಯಾಚ್​ ಆಗುವ ಲೆದರ್​ ಪ್ಯಾಂಟ್​ನಲ್ಲಿ ಸ್ಟೈಲಿಶ್​ ಆಗಿ ಕಾಣಿಸಿಕೊಂಡಿದ್ದಾರೆ. ಸಮೀಕ್ಷಾ ಪೆಡ್ನೇಕರ್​​ ಬರ್ತ್​ಡೇ ಪಾರ್ಟಿಯಲ್ಲಿ ನೈಸಾ ದೇವಗನ್​, ಓರ್ಹಾನ್​ ಅವತ್ರಮನಿ ಅಲಿಯಾಸ್​ ಆರ್ರಿ ಹಾಗೂ ಭೂಮಿ ಪಡ್ನೇಕರ್​ ಅವರ ಬಾಯ್​ಫ್ರೆಂಡ್​ ಎಂದು ಹೇಳಲಾಗುತ್ತಿರುವ ಬಿಲ್ಡರ್​ ಯಶ್​ ಕಟಾರಿಯಾ ಕೂಡ ಪಾಲ್ಗೊಂಡಿದ್ದರು.

ಸಮೀಕ್ಷಾ ಪೆಡ್ನೇಕರ್​ ಬರ್ತ್​ಡೇ ಪಾರ್ಟಿಯ ಕೆಲವೊಂದು ಫೋಟೋಗಳನ್ನು ಆರ್ರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆರ್ರಿ ಇನ್​ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಹಂಚಿಕೊಂಡಿರುವ ಫೋಟೋಗಳಲ್ಲಿ ಭೂಮಿ ಪೆಡ್ನೇಕರ್​​ ಹಾಗೂ ಯಶ್​ ಕಟಾರಿಯಾ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಲವ್​ಬರ್ಡ್ಸ್​ ಎಂದು ಹೇಳಲಾಗುತ್ತಿರುವ ಇಬ್ಬರೂ ಕೂಡ ಆರ್ರಿ ಜೊತೆಗೆ ಬೇರೆ ಬೇರೆ ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್​ ಕಟಾರಿಯಾ ಮುಂಬೈ ಮೂಲದ ರಿಯಲ್ ಎಸ್ಟೇಟ್ ಡೆವಲಪರ್ ಮತ್ತು ಬಿಲ್ಡರ್ ಆಗಿದ್ದಾರೆ.

ಈ ಹಿಂದೆಯೂ ನಟಿ ಭೂಮಿ ಪೆಡ್ನೇಕರ್​ ಯಶ್​ ಕಟಾರಿಯಾ ಹಾಗೂ ತನ್ನ ಸಹೋದರಿ, ಕೆಲವು ಸ್ನೇಹಿತರ ಜೊತೆಗೆ ಹಾಲಿಡೇ ಟ್ರಿಪ್​ ಕೂಡ ಹೋಗಿದ್ದರು. ಅದಲ್ಲದೆ ಈ ಲವ್​ಬರ್ಡ್ಸ್​ ಎಂದು ಹೇಳಲಾಗುತ್ತಿರುವ ಜೋಡಿ 2023 ಹೊಸ ವರ್ಷವನ್ನು ಮೆಕ್ಸಿಕೋದ ತುಲುಮ್​ನಲ್ಲಿ ಜೊತೆಯಾಗಿ ಸ್ವಾಗತಿಸಿದ್ದಾರೆ. ಆಗ ಭೂಮಿ ಪಡ್ನೇಕರ್​ ಕೆಲವು ಫೋಟೋಗಳು ಹಾಗೂ ವೀಡಿಯೋಗಳನ್ನು ಹಂಚಿಕೊಂಡಿದ್ದರು. ಆದರೆ ಅವುಗಳಲ್ಲಿ ಯಶ್​ ಹಾಗೂ ಭೂಮಿ ಪೆಡ್ನೇಕರ್​​ ರಿಲೇಷನ್​ಶಿಪ್​ನಲ್ಲಿ ಇದ್ದಾರೆ ಎನ್ನುವುದಕ್ಕೆ ಯಾವುದೇ ಹಿಂಟ್​ಗಳಿರಲಿಲ್ಲ.

ಸಿನಿಮಾ ವಿಷಯಕ್ಕೆ ಬಂದರೆ ಭೂಮಿ ಪೆಡ್ನೇಕರ್​​ ಅವರ ಕೈಯಲ್ಲಿ ಹಲವು ಸಿನಿಮಾಗಳಿದ್ದು, ಈ ವರ್ಷ ಮತ್ತು ಮುಂದಿನ ವರ್ಷ ಇವರು ಅಭಿನಯದ ಹಲವು ಸಿನಿಮಾಗಳು ಬಿಡುಗಡೆಯಾಗಲಿವೆ. 2023 ಒಬ್ಬ ಕಲಾವಿದೆಯಾಗಿ ನನಗೆ ಉತ್ತಮ ವರ್ಷವಾಗಿರಲಿದೆ ಎಂದು ಈ ಹಿಂದೆ ನಟಿ ಹೇಳಿಕೊಂಡಿದ್ದರು. ಅನುಭವ್​ ಸಿನ್ಹಾ ಅವರ ಭೀದ್​, ಅಜಯ್​ ಬಹ್ಲ್​ ಅವರ 'ದ ಲೇಡಿ ಕಿಲ್ಲರ್​', ಸುಧೀರ್​ ಮಿಶ್ರಾ ಅವರ ಅಫ್ವಾ, ಭಕ್ಷಕ್​ ಅವರ ಪುಲ್ಕಿಟ್​ ಹಾಗೂ ಮುದಸ್ಸರ್​ ನಿರ್ದೇಶನದ 'ಮೇರೆ ಹಸ್ಬೆಂಡ್​ ಕಿ ಬೀವಿ' ಸಿನಿಮಾಗಳು ಸದ್ಯ ಭೂಮಿ ಪಡ್ನೇಕರ್​ ಅವರ ಬತ್ತಳಿಕೆಯಲ್ಲಿವೆ.

ಇದನ್ನೂ ಓದಿ: 'ಸ್ನೇಹಿತರು ಫೋಟೋಗೆ ಫೋಸ್​ ಕೇಳಿದ್ರೆ ನಾನು​ ಹೀಗೆ..': ಶಕ್ತಿಮಾನ್​ ಲುಕ್​ನಲ್ಲಿ ರಶ್ಮಿಕಾ ಮಂದಣ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.