ಭಾರತದ ಮಹಾಕಾವ್ಯ ರಾಮಾಯಣ ಆಧಾರಿತ ಪೌರಾಣಿಕ ಚಿತ್ರ ಆದಿಪುರುಷ್ ಇಂದು ಪಂಚಭಾಷೆಗಳಲ್ಲಿ ಅದ್ಧೂರಿಯಾಗಿ ತೆರೆಕಂಡಿದೆ. ಸುಮಾರು 500 ಕೋಟಿ ರೂ.ಗಳ ಬೃಹತ್ ಬಜೆಟ್‌ನಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಓಂ ರಾವುತ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಭಾರತದಾದ್ಯಂತ ಇಂದು 7,000 ಹಾಗೂ ವಿದೇಶಗಳಲ್ಲಿ 3000 ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ತೆರೆ ಕಂಡ ಈ ಸಿನಿಮಾದಲ್ಲಿ ದಕ್ಷಿಣದ ಸೂಪರ್ ಸ್ಟಾರ್ ಪ್ರಭಾಸ್ ರಾಘವ್ ಪಾತ್ರದಲ್ಲಿ, ಬಾಲಿವುಡ್ ಬಹುಬೇಡಿಕೆ ನಟಿ ಕೃತಿ ಸನೋನ್ ಜಾನಕಿ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಲಂಕೇಶ್ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್, ಸನ್ನಿ ಸಿಂಗ್ ಲಕ್ಷ್ಮಣನ ಪಾತ್ರದಲ್ಲಿ, ದೇವ್ದತ್ತ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಪ್ರೀಮಿಯರ್ ಶೋಗಳನ್ನು ನೋಡಿದ ಅಭಿಮಾನಿಗಳು ಟ್ವಿಟರ್ನಲ್ಲಿ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಆದಿಪುರುಷ್ ಟ್ವಿಟರ್ ವಿಮರ್ಶೆ: ಆದಿಪುರುಷ್ ಪ್ರೀಮಿಯರ್ ಶೋಗಳನ್ನು ನೋಡಿದವರ ಪೈಕಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಸಿನಿಮಾ ಬಗ್ಗೆ ಗುಣಗಾನ ಮಾಡಿದ್ದಾರೆ. 'ಕಲ್ಪನೆಗೂ ನಿಲುಕದ ದೃಶ್ಯಗಳಿರುವ ಆದಿಪುರುಷ್ ಉತ್ತಮ ಸಿನಿಮಾ' ಎಂದು ಕೆಲವರು ಅಭಿಪ್ರಾಯ ಪಟ್ಟರೆ, ಇನ್ನು ಕೆಲವರು 'ಪ್ರಭಾಸ್ ರಾಮನಾಗಿ ತೆರೆಯ ಮೇಲೆ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ' ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಹಿನ್ನೆಲೆ ಸಂಗೀತ ಮತ್ತು ಹಾಡುಗಳ ಬಗ್ಗೆಯೂ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
-
Visuals of jam-packed Sudarshan Theatre in Hyderabad as Prabhas-starrer 'Adipurush' releases today. pic.twitter.com/M7RkLX4dRM
— Press Trust of India (@PTI_News) June 16, 2023 " class="align-text-top noRightClick twitterSection" data="
">Visuals of jam-packed Sudarshan Theatre in Hyderabad as Prabhas-starrer 'Adipurush' releases today. pic.twitter.com/M7RkLX4dRM
— Press Trust of India (@PTI_News) June 16, 2023Visuals of jam-packed Sudarshan Theatre in Hyderabad as Prabhas-starrer 'Adipurush' releases today. pic.twitter.com/M7RkLX4dRM
— Press Trust of India (@PTI_News) June 16, 2023
ಸಿನಿಮಾದ ಫಸ್ಟ್ ಹಾಫ್ ಚೆನ್ನಾಗಿದೆ ಎಂದು ನೆಟಿಜನ್ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಸಂಗೀತ ಸಿನಿಮಾದ ಹೈಲೈಟ್ ಎಂದು ಓರ್ವರು ತಿಳಿಸಿದ್ದಾರೆ. ಫೈಟಿಂಗ್ ದೃಶ್ಯಗಳು ಆಕರ್ಷಕವಾಗಿವೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಸಿನಿಮಾದ ಆರಂಭದಲ್ಲಿ ಅನಿಮೇಷನ್ ದೃಶ್ಯಗಳು ಚೆನ್ನಾಗಿವೆ. ಕಥೆಯನ್ನು ವಿವರಿಸಿರುವ ರೀತಿ ಕೂಡ ಅದ್ಭುತವಾಗಿದೆ. ಹಾಡುಗಳು ಮತ್ತು ಬಿಜಿಎಂ ಚೆನ್ನಾಗಿ ಮೂಡಿಬಂದಿದೆ ಎನ್ನುತ್ತಾರೆ ಹೆಚ್ಚಿನ ಸಂಖ್ಯೆಯ ನೆಟಿಜನ್ಗಳು. ಪ್ರಭಾಸ್ ಮತ್ತು ಕೃತಿ ಸನೋನ್ ನಟನೆ ಸಿನಿಮಾದ ಜೀವಾಳ ಎಂಬುದು ಕೆಲವರ ಅಭಿಪ್ರಾಯ.
-
London Adipurush Premier.
— CR (@CR27CR27) June 16, 2023 " class="align-text-top noRightClick twitterSection" data="
Surreal experience, theatre filled with Jai Shree Ram chants.. Goosebumps.#AdipurushReview #Adipurush #London #Prabhas𓃵 pic.twitter.com/yclWCRuEKE
">London Adipurush Premier.
— CR (@CR27CR27) June 16, 2023
Surreal experience, theatre filled with Jai Shree Ram chants.. Goosebumps.#AdipurushReview #Adipurush #London #Prabhas𓃵 pic.twitter.com/yclWCRuEKELondon Adipurush Premier.
— CR (@CR27CR27) June 16, 2023
Surreal experience, theatre filled with Jai Shree Ram chants.. Goosebumps.#AdipurushReview #Adipurush #London #Prabhas𓃵 pic.twitter.com/yclWCRuEKE
ಪ್ರಭಾಸ್ ಸಾಹಸ ದೃಶ್ಯಗಳು ಚಿತ್ರದ ಹೈಲೈಟ್: 'ಆದಿಪುರುಷ್' ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರ ನಿರ್ವಹಿಸಿದ ರೀತಿ ಹೈಲೈಟ್ ಎನ್ನುತ್ತಾರೆ ಹಲವು ಪ್ರೇಕ್ಷಕರು. ಶ್ರೀರಾಮನಾಗಿ ಅವರ ನಟನೆಗೆ ಪ್ರಶಂಸೆಯ ಸುರಿಮಳೆ ಸಿಕ್ಕಿದೆ. ಪ್ರಭಾಸ್ ಅವರ ಸಾಹಸ ದೃಶ್ಯಗಳನ್ನು ಪ್ರೇಕ್ಷಕರು ಎಂಜಾಯ್ ಮಾಡುತ್ತಿದ್ದಾರೆ. ಆದರೆ, ಇನ್ನುಳಿದ ಪಾತ್ರಗಳ ಪ್ರಾಮುಖ್ಯತೆಯಿಂದಾಗಿ ಆದಿಪುರುಷ್ನಲ್ಲಿ ಪ್ರಭಾಸ್ಗೆ ಕಡಿಮೆ ಸ್ಕ್ರೀನ್ ಟೈಮ್ ಸಿಕ್ಕಿದೆ ಎಂಬುದು ಕೂಡ ಹಲವರ ಅಭಿಪ್ರಾಯ. ಏಕೆಂದರೆ ಕಥೆಯಲ್ಲಿ ಸೀತೆ, ಲಕ್ಷ್ಮಣ, ಹನುಮಂತ, ರಾವಣನ ಪಾತ್ರ ಕೂಡ ಬಹಳ ಪ್ರಮುಖವಾದದ್ದು. ಚಿತ್ರದ ಮೊದಲಾರ್ಧವನ್ನು ನಿರ್ದೇಶಕರು ಅದ್ಭುತವಾಗಿ ತೋರಿಸಿದ್ದಾರೆ ಎನ್ನುತ್ತಾರೆ ಸಿನಿಪ್ರಿಯರು.
-
#Adipurush Very Good 1st Half!!💥
— Neeraj Kumar (@73forever_) June 15, 2023 " class="align-text-top noRightClick twitterSection" data="
Prabhas as "Lord Rama" career best performance. 🏹
The intro and interval sequences are pure goosebumps along with solid setup of the story. BGM is on another level...👏
Looking forward for the 2nd half 👍#AdipurushReview #Prabhas pic.twitter.com/3qGUyl52Ep
">#Adipurush Very Good 1st Half!!💥
— Neeraj Kumar (@73forever_) June 15, 2023
Prabhas as "Lord Rama" career best performance. 🏹
The intro and interval sequences are pure goosebumps along with solid setup of the story. BGM is on another level...👏
Looking forward for the 2nd half 👍#AdipurushReview #Prabhas pic.twitter.com/3qGUyl52Ep#Adipurush Very Good 1st Half!!💥
— Neeraj Kumar (@73forever_) June 15, 2023
Prabhas as "Lord Rama" career best performance. 🏹
The intro and interval sequences are pure goosebumps along with solid setup of the story. BGM is on another level...👏
Looking forward for the 2nd half 👍#AdipurushReview #Prabhas pic.twitter.com/3qGUyl52Ep
ಇದನ್ನೂ ಓದಿ: Mahesh Babu Daughter Dance: ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿರುವ ಮಹೇಶ್ ಬಾಬು ಪುತ್ರಿ!
ರಾವಣಾಸುರನಿಂದ ಸೀತೆಯನ್ನು ಅಪಹರಿಸುವ ದೃಶ್ಯ, ಲಂಕಾ ದಹನ ಸಿನಿಮಾದ ಹೈಲೈಟ್ಗಳಲ್ಲೊಂದು. ರಾಮ, ರಾವಣಾಸುರನ ಎಂಟ್ರಿ, ಹನುಮಂತ ಸಂಜೀವನಿ ತರುವ ದೃಶ್ಯ, ಲಕ್ಷ್ಮಣನ ಸಾಥ್ ಅಭಿಮಾನಿಗಳಿಗೆ ಅದ್ಭುತ ಅನುಭವ ನೀಡಲಿದೆ, ಶಬರಿ ಮತ್ತು ಸುಗ್ರೀವನೊಂದಿಗಿನ ರಾಮನ ದೃಶ್ಯಗಳು ಭಾವನಾತ್ಮಕವಾಗಿವೆ ಎಂಬ ಕಾಮೆಂಟ್‌ಗಳು ವ್ಯಕ್ತವಾಗುತ್ತಿವೆ.
ಇದನ್ನೂ ಓದಿ: ಅಲ್ಲು ಅರ್ಜುನ್ ಮಾಲೀಕತ್ವದ 'ಎಎಎ ಸಿನಿಮಾಸ್' ಮಲ್ಟಿಪ್ಲೆಕ್ಸ್ ಉದ್ಘಾಟನೆ: ತೆರೆ ಕಾಣಲಿರುವ ಮೊದಲ ಸಿನಿಮಾ 'ಆದಿಪುರುಷ್'