ಪ್ರಭಾಸ್ ಮತ್ತು ಕೃತಿ ಸನೋನ್ ಅಭಿನಯದ ಆದಿಪುರುಷ್ ಚಿತ್ರದ ಡೈಲಾಗ್‌ಗಳು ಟೀಕೆಗೊಳಗಾಗಿ, ವಿವಾದವನ್ನು ಹುಟ್ಟುಹಾಕಿದೆ. ಸಂಭಾಷಣೆ ವೇಳೆ ಬಳಸಿರುವ ಭಾಷೆಗೆ "ಟಪೋರಿ" ಭಾಷೆ ಎಂದು ಕರೆಯಲಾಗಿದೆ. ಚಿತ್ರದಲ್ಲಿ ಕೆಲ ಸ್ಥಳೀಯ ಪದಗಳನ್ನು ಬಳಸಿರುವುದನ್ನು ನಿರ್ಮಾಪಕರು ಮೊದಲು ಸಮರ್ಥಿಸಿಕೊಂಡರು. ಭಾರಿ ಟೀಕೆಯ ನಂತರ, ಅವರು ಚಿತ್ರದಲ್ಲಿ ಭಗವಾನ್ ಹನುಮಾನ್ ಪಾತ್ರವನ್ನು ನಿರ್ವಹಿಸುವ ನಟನಿಂದ ಬಂದ ಡೈಲಾಗ್ಗಳನ್ನು ಸರಿಪಡಿಸುವ ಭರವಸೆ ನೀಡಿದರು. ಕೊಟ್ಟ ಮಾತಿನಂತೆ ಇದೀಗ ಆದಿಪುರುಷ್ ಚಿತ್ರದ ವಿವಾದಾತ್ಮಕ ಡೈಲಾಗ್ಗಳನ್ನು ಬದಲಾಯಿಸಲಾಗಿದೆ.
ಲಂಕಾ ದಹನ ದೃಶ್ಯದ ಡೈಲಾಗ್‌ಗಳು: ಆದಿಪುರುಷ್ ಸಿನಿಮಾದ ಲಂಕಾ ದಹನ ದೃಶ್ಯದಲ್ಲಿ ನಟ ದೇವದತ್ತ ನಾಗೆ (Devdatta Nage, ಹನುಮಾನ್ ಪಾತ್ರ) ಅವರ ಸಂಭಾಷಣೆ ವಿವಾದಕ್ಕೊಳಗಾಯಿತು. ಹಲವರು ಭಗವಾನ್ ಬಾಯಲ್ಲಿ ಇಂತಹ ಡೈಲಾಗ್ಸ್ ಸರಿಯಲ್ಲವೆಂದು ಅಸಮಾಧಾನ ಹೊರಹಾಕಿದ್ದರು.
ಬದಲಾದ ಡೈಲಾಗ್‌ಗಳು: ಲಂಕಾ ದಹನ ದೃಶ್ಯದ ಮೊದಲಿನ ಡೈಲಾಗ್‌ಗಳು ಹೀಗಿದ್ದವು: "ಕಪ್ಡಾ ತೇರೆ ಬಾಪ್ ಕಾ, ತೇಲ್ ತೇರೆ ಬಾಪ್ ಕಾ, ಆಗ್ ಭಿ ತೇರೆ ಬಾಪ್ ಕಿ, ಔರ್ ಜಲೇಗಿ ಭಿ ತೇರೆ ಬಾಪ್ ಕಿ" (ಬಟ್ಟೆ ನಿನ್ನ ಅಪ್ಪನದ್ದು, ಎಣ್ಣೆ ನಿನ್ನ ಅಪ್ಪನದ್ದು, ಬೆಂಕಿ ನಿನ್ನ ಅಪ್ಪನದ್ದು ಮತ್ತು ಸುಟ್ಟೋಗುವುದು ನಿನ್ನ ಅಪ್ಪನದ್ದೇ). ಇದೀಗ ಈ ಡೈಲಾಗ್ಸ್ ಬದಲಾಯಿಸಲಾಗಿದ್ದು, "ಬಾಪ್" ಪದದಿಂದ "ಲಂಕಾ" ಎಂದು ಬಳಸಲಾಗಿದೆ. ವೀಕ್ಷಕರೊಬ್ಬರು ಟ್ವಿಟ್ಟರ್‌ನಲ್ಲಿ ಬದಲಾಯಿಸಿರುವ ಡೈಲಾಗ್ಸ್ನ ವಿಡಿಯೋವನ್ನು (ಥಿಯೇಟರ್ ಸೀನ್) ಹಂಚಿಕೊಂಡಿದ್ದಾರೆ. ಅದರಲ್ಲಿ "ಕಪ್ಡಾ ತೇರಿ ಲಂಕಾ ಕಾ, ತೇಲ್ ತೇರಿ ಲಂಕಾ ಕಾ, ಆಗ್ ಭಿ ತೇರಿ ಲಂಕಾ ಕಿ, ಔರ್ ಜಲೇಗಿ ಭಿ ತೇರಿ ಲಂಕಾ ಹಿ" ಎಂಬ ಡೈಲಾಗ್ಸ್ಗಳಿವೆ.
-
The dialogue of "Kapda Tere Baap Ka" w.s replaced by "Kapda Teri Lanka Ka".😳 #Aadipursh pic.twitter.com/oEoPIB7UsR
— Bharat Ojha🗨 (@Bharatojha03) June 21, 2023 " class="align-text-top noRightClick twitterSection" data="
">The dialogue of "Kapda Tere Baap Ka" w.s replaced by "Kapda Teri Lanka Ka".😳 #Aadipursh pic.twitter.com/oEoPIB7UsR
— Bharat Ojha🗨 (@Bharatojha03) June 21, 2023The dialogue of "Kapda Tere Baap Ka" w.s replaced by "Kapda Teri Lanka Ka".😳 #Aadipursh pic.twitter.com/oEoPIB7UsR
— Bharat Ojha🗨 (@Bharatojha03) June 21, 2023
ಸಿನಿಮಾ ಗಳಿಕೆ ಇಳಿಕೆ: 'ಆದಿಪುರುಷ್' ಹಿಂದೂ ಮಹಾಕಾವ್ಯ ರಾಮಾಯಣದಿಂದ ಸ್ಫೂರ್ತಿ ಪಡೆದ ಸಿನಿಮಾ. ಓಂ ರಾವುತ್ ನಿರ್ದೇಶನದ ಈ ಚಿತ್ರದಲ್ಲಿ ದಕ್ಷಿಣದ ಸೂಪರ್ ಸ್ಟಾರ್ ಪ್ರಭಾಸ್, ಬಾಲಿವುಡ್ ಬಹುಬೇಡಿಕೆ ನಟಿ ಕೃತಿ ಸನೋನ್ ಸೇರಿದಂತೆ ಸೈಫ್ ಅಲಿ ಖಾನ್, ಸನ್ನಿ ಸಿಂಗ್ ಮತ್ತು ದೇವದತ್ತ ನಾಗೆ ನಟಿಸಿದ್ದಾರೆ. ಇದು ಕಳೆದ ಶುಕ್ರವಾರ (ಜೂನ್ 16 ರಂದು) ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ವಿಶ್ವದಾದ್ಯಂತ 10,000ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಪ್ರದರ್ಶನ ಆರಂಭಿಸಿತು. ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ 140 ಕೋಟಿ ರೂ. ಗಳಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿತು. ಆದ್ರೀಗ ಸಿನಿಮಾ ಗಳಿಕೆ ಇಳಿಕೆಯಾಗಿದೆ.
ಇದನ್ನೂ ಓದಿ: 'ಹನುಮಂತ ದೇವರಲ್ಲ': ಪೊಲೀಸರ ಭದ್ರತೆಯಲ್ಲಿರುವಾಗ ಆದಿಪುರುಷ್ ಸಂಭಾಷಣೆ ಬರಹಗಾರ ಮನೋಜ್ ಮುಂತಶಿರ್ ಶುಕ್ಲಾ ಹೇಳಿಕೆ
500 ಕೋಟಿ ರೂ.ಗಳ ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ ಮೂರು ದಿನಗಳಲ್ಲಿ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಎಲ್ಲರ ಗಮನ ಸೆಳೆಯಿತು. ಆದ್ರೆ ಸಿನಿಮಾ ನೋಡಿದವರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ಸಾಕಷ್ಟು ಟೀಕೆ ಟ್ರೋಲ್ ಆದ ಬೆನ್ನಲ್ಲೇ ಕಲೆಕ್ಷನ್ನಲ್ಲಿ ದೊಡ್ಡ ಮಟ್ಟದ ಕುಸಿತವಾಗಿದೆ. ಐದು ದಿನಗಳಲ್ಲಿ 395 ಕೋಟಿ ರೂ. ಸಂಗ್ರಹಿಸಿದೆ. ಪೌರಾಣಿಕ ಚಲನಚಿತ್ರ ಕಳಪೆ ಗ್ರಾಫಿಕ್ಸ್ನಿಂದ ಕೂಡಿದೆ, ಆಡುಮಾತಿನ ಡೈಲಾಗ್ಸ್ಗಳಿವೆ ಎಂಬ ಅಭಿಪ್ರಾಯ ಸಿನಿಮಾ ನೋಡಿದವರಿಂದ ವ್ಯಕ್ತವಾಗಿದೆ. ಋಣಾತ್ಮಕ ಸಂಭಾಷಣೆ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಪರಿಣಾಮ ಬೀರಿದೆ.
ಇದನ್ನೂ ಓದಿ: 'ಜನ ದುಡ್ಡು ಕೊಟ್ಟು ಸಿನಿಮಾ ನೋಡ್ತಾರೆ, ಅದ್ಭುತ ಚಿತ್ರ ನೀಡುವ ಜವಾಬ್ದಾರಿ ನನ್ನ ಮೇಲಿದೆ': ಯಶ್