'ಆದಿಪುರುಷ್' ಸಿನಿಮಾದ ಡೈಲಾಗ್ಗಳು ಅದರಲ್ಲೂ ಆಂಜನೇಯನ ಸಂಭಾಷಣೆಗಳ ಬಗ್ಗೆ ಭಾರಿ ಚರ್ಚೆ ನಡೆದಿದ್ದು ನಿಮಗೆ ಗೊತ್ತೇ ಇದೆ. ಸಿನಿಮಾ ಡೈಲಾಗ್ ಸಂಬಂಧ ಹೆಚ್ಚಿನ ಟೀಕೆಗಳು ಕೇಳಿ ಬಂದಿದ್ದವು. ಇದೀಗ ಚಿತ್ರದ ಸಂಭಾಷಣೆ ಬರಹಗಾರ ಮನೋಜ್ ಮುಂತಶಿರ್ ಶುಕ್ಲಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ಡೈಲಾಗ್‌ಗಳಿಂದ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ.
ಮನೋಜ್ ಮುಂತಶಿರ್ ಶುಕ್ಲಾ ಟ್ವೀಟ್: '' 'ಆದಿಪುರುಷ್' ಸಿನಿಮಾದಿಂದ ಜನರ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾನು ಕೈಮುಗಿದು, ನನ್ನ ಬೇಷರತ್ ಕ್ಷಮೆಯಾಚಿಸುತ್ತೇನೆ. ಪ್ರಭು ಬಜರಂಗಬಲಿ ನಮ್ಮನ್ನು ಒಗ್ಗೂಡಿಸಲಿ ಮತ್ತು ನಮ್ಮ ಪವಿತ್ರ ಸನಾತನ ಧರ್ಮ ಮತ್ತು ನಮ್ಮ ಮಹಾನ್ ರಾಷ್ಟ್ರದ ಸೇವೆ ಮಾಡಲು ನಮಗೆ ಶಕ್ತಿಯನ್ನು ನೀಡಲಿ'' ಎಂದು ಡೈಲಾಗ್ ರೈಟರ್ ಮನೋಜ್ ಮುಂತಶಿರ್ ಶುಕ್ಲಾ ಟ್ವೀಟ್ ಮಾಡಿದ್ದಾರೆ. ಅವರ ಈ ಟ್ವೀಟ್ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ಕ್ಷಮೆಯಾಚನೆ ಬಹಳ ತಡವಾಯಿತೆಂದು ಹಲವರು ತಿಳಿಸಿದ್ದರೆ, ಕೆಲವರು ಕ್ಷಮೆಯಾಚನೆ ಟ್ವೀಟ್ ಅನ್ನು ಸ್ವೀಕರಿಸಿದ್ದಾರೆ. ತಡವಾಯಿತೆಂದು ಹೇಳಿದವರು ಆದಿಪುರುಷ್ ಡೈಲಾಗ್ ರೈಟರ್ ಅನ್ನು ಟ್ರೋಲ್ ಮಾಡುತ್ತಿದ್ದಾರೆ.
-
मैं स्वीकार करता हूँ कि फ़िल्म आदिपुरुष से जन भावनायें आहत हुईं हैं.
— Manoj Muntashir Shukla (@manojmuntashir) July 8, 2023 " class="align-text-top noRightClick twitterSection" data="
अपने सभी भाइयों-बहनों, बड़ों, पूज्य साधु-संतों और श्री राम के भक्तों से, मैं हाथ जोड़ कर, बिना शर्त क्षमा माँगता हूँ.
भगवान बजरंग बली हम सब पर कृपा करें, हमें एक और अटूट रहकर अपने पवित्र सनातन और महान देश की…
">मैं स्वीकार करता हूँ कि फ़िल्म आदिपुरुष से जन भावनायें आहत हुईं हैं.
— Manoj Muntashir Shukla (@manojmuntashir) July 8, 2023
अपने सभी भाइयों-बहनों, बड़ों, पूज्य साधु-संतों और श्री राम के भक्तों से, मैं हाथ जोड़ कर, बिना शर्त क्षमा माँगता हूँ.
भगवान बजरंग बली हम सब पर कृपा करें, हमें एक और अटूट रहकर अपने पवित्र सनातन और महान देश की…मैं स्वीकार करता हूँ कि फ़िल्म आदिपुरुष से जन भावनायें आहत हुईं हैं.
— Manoj Muntashir Shukla (@manojmuntashir) July 8, 2023
अपने सभी भाइयों-बहनों, बड़ों, पूज्य साधु-संतों और श्री राम के भक्तों से, मैं हाथ जोड़ कर, बिना शर्त क्षमा माँगता हूँ.
भगवान बजरंग बली हम सब पर कृपा करें, हमें एक और अटूट रहकर अपने पवित्र सनातन और महान देश की…
ಹನುಮಂತನ ಡೈಲಾಗ್ಗೆ ವಿರೋಧ: ಮೊದಲು ಬಿಡುಗಡೆ ಆದ ಆದಿಪುರುಷ್ ಚಿತ್ರದ ಕೆಲ ಡೈಲಾಗ್ಗಳಿಗೆ ಪ್ರೇಕ್ಷಕರು ಕಿಡಿ ಕಾರಿದ್ದರು. ಲಂಕಾ ದಹನ ದೃಶ್ಯದಲ್ಲಿ ಬರುವ ಹನುಮಂತನ ಸಂಭಾಷಣೆಗಳನ್ನು ಮೆಚ್ಚಿಕೊಂಡಿರಲಿಲ್ಲ. ನಟ ದೇವದತ್ತ ನಾಗೆ (Devdatta Nage) ಹನುಮಾನ್ ಪಾತ್ರ ವಹಿಸಿದ್ದಾರೆ, ಲಂಕಾ ದಹನ ದೃಶ್ಯದಲ್ಲಿ ಅವರ ಬಾಯಿಂದ ಬಂಡ ಡೈಲಾಗ್ಗಳು ಟೀಕೆಗಳನ್ನು ಆಹ್ವಾನಿಸಿತ್ತು. ದೇವರ ಬಾಯಲ್ಲಿ ಇಂತಹ ಮಾತುಗಳನ್ನಾಡಿಸುವುದು ಸರಿ ಅಲ್ಲ ಎಂದು ಹಲವರು ಕಿಡಿಕಾರಿದ್ದರು.
ವಿವಾದಿತ ಡೈಲಾಗ್ - ಬದಲಾದ ಸಂಭಾಷಣೆ: ಮೊದಲು ತೆರೆಕಂಡ ಚಿತ್ರದಲ್ಲಿ ಹನುಮಾನ್ ಬಾಯಲ್ಲಿ "ಕಪ್ಡಾ ತೇರೆ ಬಾಪ್ ಕಾ, ತೇಲ್ ತೇರೆ ಬಾಪ್ ಕಾ, ಆಗ್ ಭಿ ತೇರೆ ಬಾಪ್ ಕಿ, ಔರ್ ಜಲೇಗಿ ಭಿ ತೇರೆ ಬಾಪ್ ಕಿ" (ಬಟ್ಟೆ ನಿನ್ನ ಅಪ್ಪನದ್ದು, ಎಣ್ಣೆ ನಿನ್ನ ಅಪ್ಪನದ್ದು, ಬೆಂಕಿ ನಿನ್ನ ಅಪ್ಪನದ್ದು ಮತ್ತು ಸುಟ್ಟೋಗೋದು ನಿನ್ನ ಅಪ್ಪನದ್ದೇ) ಎಂಬ ಡೈಲಾಗ್ ಹೇಳಿಸಿದ್ದರು. ಡೈಲಾಗ್ ತೀವ್ರ ಟೀಕೆಗೆ ಒಳಗಾದ ಹಿನ್ನೆಲೆ, ಬಾಪ್ ಪದದ ಬದಲಿಗೆ ಲಂಕಾ ಎನ್ನುವ ಪದ ಬಳಕೆ ಮಾಡಿಸಿ, ಹೊಸ ಕಾಪಿಯನ್ನು ಬಿಡುಗಡೆಗೊಳಿಸಿದರು. ಸದ್ಯ ಸಿನಿಮಾದಲ್ಲಿ "ಕಪ್ಡಾ ತೇರಿ ಲಂಕಾ ಕಾ, ತೇಲ್ ತೇರಿ ಲಂಕಾ ಕಾ, ಆಗ್ ಭಿ ತೇರಿ ಲಂಕಾ ಕಿ, ಔರ್ ಜಲೇಗಿ ಭಿ ತೇರಿ ಲಂಕಾ ಹಿ" ಎಂಬ ಡೈಲಾಗ್ಸ್ಗಳಿವೆ.
ಹನುಮಾನ್ ದೇವರಲ್ಲ ಹೇಳಿಕೆ: ಅಲ್ಲದೇ, ಸಿನಿಮಾ ಸಾಕಷ್ಟು ಟೀಕೆಗೊಳಗಾಗಿದ್ದ ಸಂದರ್ಭದಲ್ಲೇ ಸಂದರ್ಶನವೊಂದರಲ್ಲಿ ''ಹನುಮಾನ್ ದೇವರಲ್ಲ, ಅವರು ಶ್ರೀರಾಮನ ಭಕ್ತ. ಆದರೆ ನಾವು ಅವರನ್ನು ಭಗವಾನ್ನಂತೆ ಬಿಂಬಿಸುತ್ತೇವೆ, ಹನುಮಂತ ರಾಮನಂತೆ ತತ್ವಜ್ಞಾನಿ ಆಗಿರಲಿಲ್ಲ' ಎಂದು ತಿಳಿಸಿದ್ದರು. ಈ ಬಗ್ಗೆಯೂ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದೀಗ ಟ್ವೀಟ್ ಮೂಲಕ ಜನರಲ್ಲಿ ಕ್ಷಮೆಯಾಚಿಸಿದ್ದಾರೆ.
ಇದನ್ನೂ ಓದಿ: Rishab Shetty birthday Photos: 'ಸಾಯುವವರೆಗೂ ಸಿನಿಮಾಗಳ ಮೂಲಕ ನಿಮ್ಮ ಋಣ ತೀರುಸುತ್ತೇನೆ' - ರಿಷಬ್ ಶೆಟ್ಟಿ
ಓಂ ರಾವುತ್ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ, ಕೃತಿ ಸನೋನ್ ಸೀತೆ ಪಾತ್ರದಲ್ಲಿ, ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್, ಲಕ್ಷ್ಮಣನ ಪಾತ್ರದಲ್ಲಿ ಸನ್ನಿ ಸಿಂಗ್, ದೇವದತ್ತ ಹನುಮಂತನ ಪಾತ್ರದಲ್ಲಿ ನಟಿಸಿದ್ದಾರೆ. ಜೂನ್ 16ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡ ಈ ಸಿನಿಮಾ ನೆಗೆಟಿವ್ ವಿಮರ್ಷೆಗಳನ್ನು ಸ್ವೀಕರಿಸಿದೆ.