ಹೈದರಾಬಾದ್: ಪ್ರಭಾಸ್, ಕೃತಿ ಸನೋನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ಆದಿಪುರುಷ ಚಿತ್ರ ವಾರಾಂತ್ಯದ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಬಳಿಕ, ಈ ವಾರದಲ್ಲಿ ಕುಸಿತ ಕಾಣುತ್ತಾ ಸಾಗಿದೆ. ಮಂಗಳವಾರ, ಎಲ್ಲ ಭಾಷೆಗಳ ವಿಭಾಗದಲ್ಲಿ ಕೇವಲ 10 ಕೋಟಿ ರೂಗಳನ್ನು ಮಾತ್ರ ಕಲೆಕ್ಷನ್ ಮಾಡಿದೆ ಎಂಬ ಸುದ್ದಿ ಬಂದಿದೆ.
ಸಿನಿಮಾದ ಬಗ್ಗೆ ಬಂದಿರುವ ಋಣಾತ್ಮಕ ಮಾತುಗಳಿಂದಾಗಿ ಸಿನಿಮಾ ನೋಡುಗರ ಸಂಖ್ಯೆಯಲ್ಲಿ ಕಡಿಮೆ ಆಗಿದೆ ಎಂದು ಹೇಳಲಾಗುತ್ತಿದೆ. ಆದಿಪುರುಷದಲ್ಲಿನ ಸಂಭಾಷಣೆ ಮತ್ತು ಹಿಂದೂ ಮಹಾಕಾವ್ಯ ರಾಮಾಯಣಕ್ಕೆ ಆಧುನಿಕ ಟಚ್ ನೀಡಿರುವ ವಿಧಾನಗಳ ಬಗ್ಗೆ ಪ್ರೇಕ್ಷಕರಿಂದ ಭಾರಿ ಟೀಕೆಗಳು ವ್ಯಕ್ತವಾಗುತ್ತಿವೆ. ಇದೇ ಕಾರಣದಿಂದ ಆದಿಪುರಷ್ ಚಿತ್ರದ ಹವಾ ಕಡಿಮೆ ಆಗುತ್ತಿದೆ ಎಂಬ ಸುದ್ದಿ ಹೊರ ಬಿದ್ದಿದೆ.
ವರದಿಗಳ ಅನ್ವಯ ಆರಂಭಿಕ ಅಂದಾಜಿನ ಪ್ರಕಾರ ಚಿತ್ರವು ಮಂಗಳವಾರ ಭಾರತದ ಎಲ್ಲ ಭಾಷೆಗಳಲ್ಲಿ ಕೇವಲ 10.80 ಕೋಟಿ ಗಳಿಸಿದೆ. ವಾರಾಂತ್ಯದಲ್ಲಿ 220 ಕೋಟಿ ಗಳಿಸಿ ಭರದಿಂದ ಮುನ್ನಗಿದ್ದ ಚಿತ್ರ ಆ ಬಳಿಕ ಗಳಿಕೆ ಕಡಿಮೆ ಆಗುತ್ತಾ ಸಾಗಿದೆ. ಆದಿಪುರುಷ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಸೋಮವಾರ ಕೇವಲ 20 ಕೋಟಿ ರೂ ಗಳಿಸಿತ್ತು. ಪ್ರೊಡಕ್ಷನ್ ಬ್ಯಾನರ್ ಟಿ - ಸೀರೀಸ್ ಪ್ರಕಾರ, ಸೋಮವಾರದವರೆಗಿನ ಜಾಗತಿಕ ಒಟ್ಟು ಕಲೆಕ್ಷನ್ 375 ಕೋಟಿ ರೂ. ಎಂದು ಅಂದಾಜಿಸಿದೆ. ಮಂಗಳವಾರ ಆದಿಪುರಷದ ಕಲೆಕ್ಷನ್ ಕಡಿಮೆ ಆಗಿದೆ.
ಇದನ್ನು ಓದಿ:'Adipurush' row: 'ಆದಿಪುರುಷ್' ವಿವಾದಗಳ ಮಧ್ಯೆ ಕೇವಲ ಮೆಚ್ಚುಗೆಗೆ ಗಮನ ನೀಡಿದ ನಟಿ ಕೃತಿ ಸನೋನ್
ಸಂದರ್ಶನವೊಂದರಲ್ಲಿ ಮಾತನಾಡಿರುವ ವಿತರಕ - ಪ್ರದರ್ಶಕ ಅಕ್ಷಯ್ ರಾಠಿ, ಭಾನುವಾರದಂದು ಆದಿಪುರುಷ ಶೇ 65ರಷ್ಟು ಕುಸಿತ ಕಂಡಿದೆ ಎಂದು ಹೇಳಿದ್ದಾರೆ. "ಪ್ರೇಕ್ಷಕನಿಗೆ ತನ್ನದೇ ಆದ ಅಭಿಪ್ರಾಯಗಳಿರುತ್ತವೆ. ಅದನ್ನು ನಾವು ಒಪ್ಪಿಕೊಳ್ಳಬೇಕು. ಜನರು ಚಿತ್ರ ವೀಕ್ಷಣೆ ಆಸಕ್ತಿಯಲ್ಲಿ ತೋರದೇ ಇರುವ ಕಾರಣ ಆದಿಪುರುಷ ಚಿತ್ರದ ಕಲೆಕ್ಷನ್ ಕುಸಿತವಾಗಿದೆ. ಇದೇ ಕಾರಣದಿಂದ ಚಿತ್ರದ ಕಲೆಕ್ಷನ್ನಲ್ಲಿ ಶೇ 65 ರಿಂದ 70 ರಷ್ಟು ಕಡಿಮೆಯಾಗಿದೆ" ಎಂದು ಅವರು ಹೇಳಿದ್ದಾರೆ.
ಅರುಣ್ ಗೋವಿಲ್, ಸುನಿಲ್ ಲಾಹ್ರಿ ಮತ್ತು ದೀಪಿಕಾ ಚಿಖ್ಲಿಯಾ ಸೇರಿದಂತೆ, ಈ ಹಿಂದಿನ ರಾಮಾಯಣ ಸಿರೀಯಲ್ನ ದೂರದರ್ಶನ ನಟರು ಹಾಗೂ ಮಹಾಭಾರತದ ಮುಖೇಶ್ ಖನ್ನಾ ಅವರು ವಿವಿಧ ಕಾರಣಗಳಿಗಾಗಿ ಆದಿಪುರುಷ ಸಿಮಿಮಾದ ಬಗ್ಗೆ ಟೀಕೆ ಮಾಡಿದ್ದಾರೆ. ಏತನ್ಮಧ್ಯೆ, ಆಲ್ ಇಂಡಿಯನ್ ಸಿನಿ ವರ್ಕರ್ಸ್ ಅಸೋಸಿಯೇಷನ್ ಟ್ರೇಡ್ ಅಸೋಸಿಯೇಷನ್, ಆದಿಪುರುಷನನ್ನು ನಿಷೇಧಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದೆ. ಒಟ್ಟಾರೆ ಚಿತ್ರದ ಬಗ್ಗೆ ಜನರಲ್ಲಿ ಬೀರಿರುವ ನಕಾರಾತ್ಮಕ ಭಾವನೆ ಚಿತ್ರದ ಕಲೆಕ್ಷನ್ ಕಡಿಮೆ ಆಗುವಂತೆ ಮಾಡಿದೆ.
ಇದನ್ನು ಓದಿ:ಆದಿಪುರುಷ್ ಗಳಿಕೆ ಇಳಿಕೆ: ಮೂರು ದಿನದಲ್ಲಿ 300 ಕೋಟಿ ಗಳಿಸಿದ ಚಿತ್ರದ ನಾಲ್ಕನೇ ದಿನದ ಕಲೆಕ್ಷನ್ 20 ಕೋಟಿ!