ಓಂ ರಾವುತ್ ನಿರ್ದೇಶನದ ಆದಿಪುರುಷ್ ಸಿನಿಮಾ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಹೋರಾಟವನ್ನು ಮುಂದುವರೆಸಿದೆ. ವಿಶ್ವಾದ್ಯಂತ ಮೂರೇ ದಿನದಲ್ಲಿ 300 ಕೋಟಿ ರೂ. ಕಲೆಕ್ಷನ್ ಮಾಡಿದ ಸಿನಿಮಾ ಸೋಮವಾರದಂದು ಗಳಿಸಿದ್ದು 20 ಕೋಟಿ ರೂಪಾಯಿ. ಬುಧವಾರ ಅಂದರೆ ಚಿತ್ರ ತೆರೆಕಂಡ 6ನೇ ದಿನ ಸಿನಿಮಾ ಗಳಿಕೆ ಒಂದಂಕಿಗೆ ಒಂದು ನಿಂತಿದೆ. ಬುಧವಾರದಂದು 7.50 ಕೋಟಿ ರೂ.ಗೆ ಕುಸಿದಿದೆ. ಚಿತ್ರದಲ್ಲಿ ಕೆಲವು ಸಂಭಾಷಣೆಗಳನ್ನು ಬದಲಾಯಿಸಿದ ನಂತರವೂ ಸಿನಿಮಾ ಬಗೆಗಿನ ನೆಗೆಟಿವ್ ಟ್ರೆಂಡ್ ಮುಂದುವರಿದಿದೆ. ಆದಾಗ್ಯೂ, ಮೊದಲ ದಿನಗಳಲ್ಲಿ ಹೆಚ್ಚಿನ ಟಿಕೆಟ್ ದರವಿದ್ದ ಹಿನ್ನೆಲೆ ಆದಿಪುರುಷ್ ಭಾರತದಲ್ಲಿ ಒಟ್ಟು 250 ಕೋಟಿ ರೂ. ಮೈಲಿಗಲ್ಲನ್ನು ಮೀರಿಸುವಲ್ಲಿ ಯಶಸ್ವಿಯಾಗಿದೆ.
ಗಳಿಕೆಯಲ್ಲಿ ಗಮನಾರ್ಹ ಕುಸಿತ: ಶುಕ್ರವಾರ ತೆರೆಕಂಡಿರುವ ರಾಮಾಯಣ ಆಧಾರಿತ ಆದಿಪುರುಷ್ ಸಿನಿಮಾ ಡೈಲಾಗ್ಸ್ ಮತ್ತು ಗ್ರಾಫಿಕ್ ವಿಚಾರವಾಗಿ ವ್ಯಾಪಕ ಟೀಕೆಗಳನ್ನು ಎದುರಿಸುತ್ತಿದೆ. ಮೊದಲ ಮೂರು ದಿನ ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸದ್ದು ಮಾಡಿತು. ಮೂರೇ ದಿನಗಳಲ್ಲಿ 300 ಕೋಟಿ ಗಳಿಸುವಲ್ಲಿಯೂ ಯಶಸ್ವಿ ಆಯಿತು. ಪ್ರೀ ಟಿಕೆಟ್ ಬುಕಿಂಗ್, ಸಿನಿಮಾದ ವ್ಯಾಪಕ ಪ್ರಚಾರ ಮೊದಲ ದಿನಗಳ ಯಶಸ್ವಿಗೆ ಕಾರಣವಾಯಿತು. ಆದ್ರೆ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ವಿಮರ್ಶೆಗಳು, ಋಣಾತ್ಮಕ ಪ್ರತಿಕ್ರಿಯೆಗಳು ಉಲ್ಬಣಗೊಂಡ ಬೆನ್ನಲ್ಲೇ ಆದಿಪುರುಷ್ ಗಳಿಕೆಯಲ್ಲಿ ಗಮನಾರ್ಹ ಕುಸಿತ ಸಂಭವಿಸಿದೆ. Sacnilk.com ಪ್ರಕಾರ, ಆದಿಪುರುಷ್ ತನ್ನ ಆರನೇ ದಿನ (ಬುಧವಾರ) ಬಾಕ್ಸ್ ಆಫೀಸ್‌ನಲ್ಲಿ ಎಲ್ಲಾ ಭಾಷೆಗಳೂ ಸೇರಿ ಭಾರತದಲ್ಲಿ 7.50 ಕೋಟಿ ರೂ. ಸಂಪಾದಿಸಿದೆ.
ವಿಶ್ವಾದ್ಯಂತ ಒಟ್ಟು ಗಳಿಕೆ? ಬುಧವಾರದ ಗಳಿಕೆಯೂ ಸೇರಿ ಭಾರತದಲ್ಲಿ ಎಲ್ಲಾ ಭಾಷೆಗಳಲ್ಲಿ ಈವರೆಗೆ ಒಟ್ಟು 255.30 ಕೋಟಿ ರೂ. ಸಂಪಾದನೆ ಆಗಿದೆ. ವರದಿಗಳ ಪ್ರಕಾರ, ಬುಧವಾರದಂದು ಒಟ್ಟು ಹಿಂದಿ ಆಕ್ಯುಪೆನ್ಸಿ ಶೇಕಡ 9.44 ರಷ್ಟಿತ್ತು. ಇನ್ಸ್ಟಾಗ್ರಾಮ್ನಲ್ಲಿ ಬುಧವಾರದಂದು ಚಿತ್ರ ನಾಯಕ ನಟಿ ಕೃತಿ ಸನೋನ್ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ವಿಶ್ವದಾದ್ಯಂತ ಒಟ್ಟು ಗಳಿಕೆ (ಮಂಗಳವಾರದವರೆಗೆ) 395 ಕೋಟಿ ರೂ. ಆಗಿದೆ ಎಂದು ಪೋಸ್ಟ್ ತಿಳಿಸುತ್ತದೆ.
ಇದನ್ನೂ ಓದಿ: Adipurush: ವಿವಾದಕ್ಕೊಳಗಾದ ಭಗವಾನ್ ಹನುಮಂತನ ಡೈಲಾಗ್ಸ್ ಸರಿಪಡಿಸಿದ ಚಿತ್ರತಂಡ - ವಿಡಿಯೋ ನೋಡಿ
ಹನುಮಂತನ ಡೈಲಾಗ್ಸ್ನಲ್ಲಿ ಬದಲಾವಣೆ: ಬಿಗ್ ಬಜೆಟ್‌ನ ಬಹುಭಾಷಾ ಸಿನಿಮಾ ಆದಿಪುರುಷ್ ಅನ್ನು ಓಂ ರಾವುತ್ ನಿರ್ದೇಶಿಸಿದ್ದರೆ, ಟಿ-ಸೀರೀಸ್ ನಿರ್ಮಿಸಿದೆ. 500 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ನಿರ್ಮಾಣಗೊಂಡಿದೆ. ಅದರ ವಿಎಫ್‌ಎಕ್ಸ್ ಮತ್ತು ಆಡುಭಾಷೆಯ ಡೈಲಾಗ್ಸ್ ಹಿನ್ನೆಲೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟೀಕೆ ವ್ಯಕ್ತವಾಗಿದೆ. ಸಂಭಾಷಣೆ ಬರಹಗಾರ ಮನೋಜ್ ಮುಂತಶಿರ್ ಶುಕ್ಲಾ ಅವರು ಲಂಕಾ ದಹನದ ದೃಶ್ಯದಲ್ಲಿ ಭಗವಾನ್ ಹನುಮಂತನ ಸಂಭಾಷಣೆ ವಿಚಾರವಾಗಿ ಟೀಕೆಗಳನ್ನು ಎದುರಿಸಿದ್ದಾರೆ. ಆದ್ರೆ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವೊಂದರ ಪ್ರಕಾರ, ಆ ಡೈಲಾಗ್ ಅನ್ನು ಬದಲಾಯಿಸಲಾಗಿದೆ.
ಇದನ್ನೂ ಓದಿ: Haddi: ನವಾಜುದ್ದೀನ್ ಸಿದ್ದಿಕಿಯ ಸಿನಿಮಾದಲ್ಲಿ ನಟಿಸುತ್ತಿರುವ 300 ತೃತೀಯಲಿಂಗಿಗಳು