ETV Bharat / entertainment

ಪುನೀತ್ ರಾಜ್‌ಕುಮಾರ್ '2nd ಲೈಫ್' ಚಿತ್ರ ನಿರ್ಮಾಣ ಮಾಡಬೇಕಿತ್ತು: ಆದರ್ಶ್ ಗುಂಡುರಾಜ್ - ಈಟಿವಿ ಭಾರತ ಕನ್ನಡ

ಮಗು ಜನಿಸಿದ ಕೆಲವೇ ದಿನಗಳಲ್ಲಿ ಕರುಳಬಳ್ಳಿ ಬೀಳುತ್ತದೆ. ಇದನ್ನು ಶೇಖರಿಸಿಟ್ಟು ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತದೆ. ಇಂಥದ್ದೊಂದು ಕಥಾವಸ್ತು ಆಧರಿಸಿದ ಸಿನಿಮವೇ '2nd ಲೈಫ್'.

'2nd Life' film
'2nd ಲೈಫ್' ಚಿತ್ರ
author img

By

Published : Aug 3, 2022, 4:36 PM IST

ಕನ್ನಡ ಚಿತ್ರರಂಗದಲ್ಲಿ ಹೊಸ, ವಿಭಿನ್ನ ಕಥೆಗಳನ್ನಾಧರಿಸಿರುವ ಸಿನಿಮಾಗಳು ಬರುತ್ತಿವೆ. ಇಲ್ಲೊಂದು ಉತ್ಸಾಹಿ ಚಿತ್ರತಂಡ '2nd ಲೈಫ್' (ಸೆಕೆಂಡ್ ಲೈಫ್) ಎಂಬ ಟೈಟಲ್ ಇಟ್ಟುಕೊಂಡು ಸುದ್ದಿಯಲ್ಲಿದೆ. ವಿಶೇಷ ಕಥಾ ವಸ್ತು ಹೊಂದಿರುವ ಸಿನಿಮಾ ಕುರಿತು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ನಟ ಆದರ್ಶ್ ಗುಂಡುರಾಜ್ ಮಾತನಾಡಿ, ಮಗು ಜನಿಸಿದ ಕೆಲವೇ ದಿನಗಳಲ್ಲಿ ಕರುಳ ಬಳ್ಳಿ (ಹೊಕ್ಕಳ ಬಳ್ಳಿ) ಬೀಳುತ್ತದೆ. ಇದನ್ನು ಶೇಖರಿಸಿಡುವ ಕಾರ್ಯ ಈಗ ಭರದಿಂದ ಸಾಗಿದೆ. ಇದನ್ನು ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತಿದೆ. ಅಂತಹ ಕಥಾವಸ್ತು ಆಧರಿಸಿ ನಮ್ಮ ಚಿತ್ರ ನಿರ್ಮಾಣವಾಗಿದೆ. ಹೊಸ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡುವ ಪುನೀತ್ ರಾಜಕುಮಾರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಬೇಕಿತ್ತು. ಆ ಸಲುವಾಗಿ ಚರ್ಚಿಸಲು ಅವರು ನಮಗೆ ಸ್ನೇಹಿತರೊಬ್ಬರ ಮೂಲಕ ಸಮಯ ನೀಡಿದ್ದರು. ಆದರೆ ವಿಧಿಬರಹವೇ ಬೇರೆಯಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಆದರ್ಶ್ ಗುಂಡುರಾಜ್ ಜೋಡಿಯಾಗಿ ಸಿಂಧೂ ರಾವ್ ದಿವ್ಯಾಂಗ ಪಾತ್ರದಲ್ಲಿ(ಕಣ್ಣು ಕಾಣದವರು) ಕಾಣಿಸಿಕೊಂಡಿದ್ದಾರೆ. ಜೊತೆಗೆ ಕಲಾವಿದರಾದ ಶಿವಪ್ರದೀಪ್, ನವೀನ್ ಶಕ್ತಿ ಸೇರಿ ಮೊದಲಾದವರು ಚಿತ್ರದಲ್ಲಿದ್ದಾರೆ. ಜಯಣ್ಣ ಫಿಲ್ಮ್ಸ್ ಹಾಗೂ ಶುಕ್ರ ಫಿಲ್ಮ್ಸ್ ನಿರ್ಮಿಸಿರುವ 2nd ಲೈಫ್ ಚಿತ್ರವನ್ನು ರಾಜು ದೇವಸಂದ್ರ ನಿರ್ದೇಶಿಸಿದ್ದಾರೆ. ಈ ಹಿಂದೆ ಇವರು ಅಕ್ಷತೆ ಸೇರಿದಂತೆ ಮೂರು ಸಿನಿಮಾ ನಿರ್ದೇಶಿಸಿದ್ದಾರೆ. ಹಾಗಾಗಿ ಇದು ಇವರಿಗೆ 4ನೇ ಚಿತ್ರ.

ಇದನ್ನೂ ಓದಿ: ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಬಿಡುಗಡೆ ದಿನಾಂಕ ಮುಂದೂಡಿಕೆ; ಅಭಿಮಾನಿಗಳಿಗೆ ನಿರಾಸೆ

ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರಕಥೆಯನ್ನು ಮಂಜುಳ ರಮೇಶ್ ಬರೆದಿದ್ದಾರೆ. ಆರವ್ ಕೌಶಿಕ್ ಸಂಗೀತವಿದೆ. ರಮೇಶ್ ಕೊಯಿರ ಛಾಯಾಗ್ರಾಹಣ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.