ETV Bharat / entertainment

ರಿಷಭ್​​ ಪಂತ್ ಕಾರು ಅಪಘಾತ: ನಟಿ ಊರ್ವಶಿ ರೌಟೇಲಾ ಪೋಸ್ಟ್ ಏನಿತ್ತು? - Urvashi Rautela post

ಕ್ರಿಕೆಟಿಗ ರಿಷಭ್​​ ಪಂತ್ ಕಾರು ಅಪಘಾತ ಸುದ್ದಿ ಹೊರಬೀಳುತ್ತಿದ್ದಂತೆ ನಟಿ ಊರ್ವಶಿ ರೌಟೇಲಾ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

Urvashi Rautela post
ನಟಿ ಊರ್ವಶಿ ರೌಟೇಲಾ ಪೋಸ್ಟ್
author img

By

Published : Dec 30, 2022, 5:08 PM IST

ಇಂದು ಮುಂಜಾನೆ ಸಂಭವಿಸಿದ ಕಾರು ಅಪಘಾತದಲ್ಲಿ ಕ್ರಿಕೆಟಿಗ ರಿಷಭ್​​ ಪಂತ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚೇತರಿಕೆಗೆ ಆತ್ಮೀಯರು ಸೇರಿದಂತೆ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಆದರೆ ಮಾಡೆಲ್, ನಟಿ ಊರ್ವಶಿ ರೌಟೇಲಾ ಸಾಮಾಜಿಕ ಮಾಧ್ಯಮದಲ್ಲಿ ರಹಸ್ಯ ಪೋಸ್ಟ್ ಹಂಚಿಕೊಂಡಿದ್ದಾರೆ. ಮಿನುಗುವ ಉಡುಗೆ, ಆಭರಣ ಧರಿಸಿರುವ ಫೋಟೋವನ್ನು ಹಂಚಿಕೊಂಡ ಬೆನ್ನಲ್ಲೇ ಟ್ರೋಲಿಗರು ಆಟ ಶುರು ಮಾಡಿದ್ದಾರೆ.

ಊರ್ವಶಿ ರೌಟೇಲಾ ಪೋಸ್ಟ್: ಸೋಶಿಯಲ್​ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡು "ಪ್ರಾರ್ಥನೆ" ಎಂದು ಬರೆದುಕೊಂಡಿರುವ ಅವರು ಬಿಳಿ ಹೃದಯದ ಇಮೋಜಿ, ಬಿಳಿ ಪಾರಿವಾಳ ಇಮೋಜಿ ಮತ್ತು 8 ನಕ್ಷತ್ರಗಳ ಸಿಂಬಲ್​ ಹಾಕಿಕೊಂಡಿದ್ದಾರೆ.

ದೆಹಲಿಯಿಂದ ರೂರ್ಕಿಗೆ ಹೋಗುವ ರಸ್ತೆಯಲ್ಲಿ ಕ್ರಿಕೆಟಿಗ ರಿಷಭ್​​​ ಪಂತ್ ಗಂಭೀರ ಅಪಘಾತಕ್ಕೊಳಗಾದ ಸುದ್ದಿ ಹೊರಬಂದ ಕೂಡಲೇ ನಟಿ ಈ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ರಿಷಭ್ ಪಂತ್​ ಅವರಿಗಾಗಿಯೇ ಹಾಕಿರೋದು ಎಂದು ಊಹಿಸಲಾಗುತ್ತಿದೆ. ಅಭಿಮಾನಿಗಳು ಊರ್ವಶಿ ಅವರ ಪೋಸ್ಟ್‌ ಕಾಮೆಂಟ್ ವಿಭಾಗಕ್ಕೆ ಹೋಗಿ 25 ವರ್ಷದ ಕ್ರಿಕೆಟಿಗ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುವ ಸಂದೇಶಗಳನ್ನು ಬರೆದಿದ್ದಾರೆ.

ಅಭಿಮಾನಿಗಳ ಹಾರೈಕೆ: "ರಿಷಭ್ ಭಾಯ್‌ಗೆ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ" ಎಂದು ಸೋಶಿಯಲ್​ ಮೀಡಿಯಾ ಬಳಕೆದಾರರು ಬರೆದಿದ್ದಾರೆ. "ನಾನು ಕೂಡ ಪ್ರಾರ್ಥಿಸುತ್ತಿದ್ದೇನೆ, ರಿಷಭ್​ ಭಾಯ್ ಶೀಘ್ರದಲ್ಲೇ ಗುಣಮುಖರಾಗಲಿ" ಎಂದು ಮತ್ತೋರ್ವ ನೆಟ್ಟಿಗರು ಬರೆದಿದ್ದಾರೆ. ಅಲ್ಲದೇ ಸೋಶಿಯಲ್​ ಮೀಡಿಯಾದಲ್ಲಿ ನಟಿ ಊರ್ವಶಿ ರೌಟೇಲಾ ಸಖತ್ ಟ್ರೋಲ್​ ಆಗಿದ್ದಾರೆ.

ವದಂತಿ: 2018ರಲ್ಲಿ ಊರ್ವಶಿ ಮತ್ತು ರಿಷಭ್ ಮುಂಬೈನಲ್ಲಿ ಅನೇಕ ಜನಪ್ರಿಯ ರೆಸ್ಟೋರೆಂಟ್‌ಗಳು, ಪಾರ್ಟಿಗಳು ಮತ್ತು ಈವೆಂಟ್‌ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಂತರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಡಲು ಪ್ರಾರಂಭಿಸಿದವು. ನಂತರ, ಅದೇ ವರ್ಷದಲ್ಲಿ ಇಬ್ಬರೂ ವಾಟ್ಸಾಪ್‌ನಲ್ಲಿ ಪರಸ್ಪರ ಬ್ಲ್ಯಾಕ್​​ ಮಾಡಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

ಇದನ್ನೂ ಓದಿ: ಕ್ರಿಕೆಟಿಗ ರಿಷಭ್​​​ ಪಂತ್​ ಕಾರು ಅಪಘಾತ : ವಾಹನ ಸಂಪೂರ್ಣ ಭಸ್ಮ.. ಡೆಹ್ರಾಡೂನ್​ ಆಸ್ಪತ್ರೆಗೆ ಶಿಫ್ಟ್​

2019ರಲ್ಲಿ, ರಿಷಬ್ ವದಂತಿಗಳನ್ನು ತಳ್ಳಿಹಾಕಿದರು. ಗೆಳತಿ ಇಶಾ ನೇಗಿ ಅವರೊಂದಿಗಿನ ಸಂಬಂಧವನ್ನು ಘೋಷಿಸಿದರು. ಈ ಮೊದಲು ಅವರು ಇಶಾ ಅವರೊಂದಿಗಿನ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು, "ನಿಮ್ಮನ್ನು ಸಂತೋಷ ಪಡಿಸಲು ಬಯಸುತ್ತೇನೆ, ಏಕೆಂದರೆ ನಾನು ತುಂಬಾ ಸಂತೋಷವಾಗಿರಲು ನೀವು ಕಾರಣ" ಎಂದು ಬರೆದಿದ್ದರು.

ಅಪಘಾತ: ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಅವರ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಆ ಕೂಡಲೇ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ಅಷ್ಟರಲ್ಲೇ ಗ್ರಾಮಸ್ಥರು, ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಪಘಾತ ಆದ ಕೂಡಲೇ ಅಗ್ನಿಶಾಮಕ ದಳಕ್ಕೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳದ ವಾಹನ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಿಸಿದೆ. ತಕ್ಷಣವೇ ಕ್ರಿಕೆಟಿಗ ರಿಷಭ್​ ಪಂತ್ ಅವರನ್ನು ಡೆಹ್ರಾಡೂನ್​ನ ಮ್ಯಾಕ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ದೆಹಲಿಗೆ ರೆಫರ್​ ಮಾಡಲಾಗಿದೆ.

ಇದನ್ನೂ ಓದಿ: ಕಾರಿನ ಕಿಟಕಿ ಒಡೆದು ಜೀವ ಉಳಿಸಿಕೊಂಡ ಪಂತ್​: ಹೊತ್ತಿ ಉರಿದ ಬಿಎಂಡಬ್ಲ್ಯು ಕಾರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.