ETV Bharat / entertainment

ಫೇಸ್ ಮಾಸ್ಕ್ ಹಾಕಿ ಹೊರಬಂದ ನಟಿ: ರಾಜ್​ ಕುಂದ್ರಾ ಸಹೋದರಿಯೆಂದ ಟ್ರೋಲಿಗರು! - Urvashi Rautela latest news

ನಟಿ ಊರ್ವಶಿ ರೌಟೇಲಾ ಫೇಸ್ ಮಾಸ್ಕ್ ಹಾಕಿ ಹೊರಬಂದು ಟ್ರೋಲ್ ಆಗಿದ್ದಾರೆ.

Urvashi Rautela came out wearing a face mask
ಫೇಸ್ ಮಾಸ್ಕ್ ಹಾಕಿ ಹೊರಬಂದ ನಟಿ ಊರ್ವಶಿ ರೌಟೇಲಾ
author img

By

Published : Mar 30, 2023, 9:18 PM IST

ಸಿನಿಮಾಗಳಿಗಿಂತ ಹೆಚ್ಚಾಗಿ ಸೋಶಿಯಲ್​ ಮೀಡಿಯಾ ಪೋಸ್ಟ್ ಮೂಲಕ ಸದಾ ಸುದ್ದಿಯಲ್ಲಿರುವ ಬಾಲಿವುಡ್​ ಬ್ಯೂಟಿ ಊರ್ವಶಿ ರೌಟೇಲಾ. ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುವ ಇವರು, ಆಗಾಗ್ಗೆ ಹೊಸ ಪೋಸ್ಟ್ ಮೂಲಕ ಸದ್ದು ಮಾಡುತ್ತಾರೆ. ಅವರ ಫೋಟೋ, ವಿಡಿಯೋಗಳು ಸಾಕಷ್ಟು ವೈರಲ್​ ಆಗಿ ಸುದ್ದಿ ಆಗುತ್ತದೆ. ಇದೀಗ ನಟಿಯ ಹೊಸ ಅವತಾರ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ತನ್ನ ಸೌಂದರ್ಯದಿಂದಲೇ ಅಭಿಮಾನಿಗಳ ಕಣ್ಮನ ಸೆಳೆಯುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿಯೂ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ. ಅಭಿಮಾನಿಗಳಿಗಾಗಿ ಬಗೆಬಗೆಯ ಚಿತ್ರಗಳನ್ನು ಹಂಚಿಕೊಳ್ಳುವ ನಟಿ, ಪಾಪರಾಜಿಗಳಿಗೆ ಪೋಸ್ ನೀಡುವುದರಿಂದ ಹಿಂದೆ ಬಿದ್ದಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಸ್ವೀಕರಿಸುವುದರ ಜೊತೆಗೂ ಕೆಲವೊಮ್ಮೆ ವಿಚಿತ್ರ ಕೆಲಸಗಳಿಂದಾಗಿ ಟ್ರೋಲ್​ಗೆ ಒಳಗಾಗುತ್ತಾರೆ. ಇದೀಗ ಅವರ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಅದರಲ್ಲಿ ಅವರು ಬ್ಯೂಟಿ ಫೇಸ್ ಮಾಸ್ಕ್ ಧರಿಸಿದ್ದಾರೆ. ಫೇಸ್​ ಮಾಸ್ಕ್​​ ಹಾಕಿ ಮನೆಯಿಂದ ಹೊರಬಂದ ಅವರು, ಪಾಪರಾಜಿಗಳ ಕ್ಯಾಮರಾಗೆ ಫೋಸ್ ಕೂಡ ಕೊಟ್ಟಿದ್ದಾರೆ. ಇದು ಟ್ರೋಲಿಗರಿಗೆ ಆಹ್ವಾನ ಕೊಟ್ಟಂತಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೋಲಿಗರು ಆಟ ಶುರು ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆದಾರರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.

ಊರ್ವಶಿ ರೌಟೇಲಾ ಅವರ ಈ ವಿಡಿಯೋ ಇನ್‌ಸ್ಟಾಗ್ರಾಮ್​ನಲ್ಲಿ ಹೆಚ್ಚು ವೈರಲ್​​ ಆಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ನೋಡಿದ ಬಳಕೆದಾರರು ಕಾಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ. ಅಷ್ಟೇ ಅಲ್ಲ, ಅನೇಕ ಸೋಶಿಯಲ್ ಮೀಡಿಯಾ ಬಳಕೆದಾರರು ನಟಿಯನ್ನು ಶಿಲ್ಪಾ ಶೆಟ್ಟಿ ಅವರ ಅತ್ತಿಗೆ ಅಂದರೆ ರಾಜ್ ಕುಂದ್ರಾ ಅವರ ಸಹೋದರಿ ಎಂದು ಹೇಳಿದ್ದಾರೆ. ಇದು ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರಿಂದ ಪ್ರೇರಿತವಾಗಿದೆ ಎಂದು ಬಳಕೆದಾರರು ಬರೆದಿದ್ದಾರೆ.

ಇದನ್ನೂ ಓದಿ: 'ನಿಮ್ಮ ಅಭಿನಯ, ವ್ಯಕ್ತಿತ್ವ ಎರಡೂ ಅದ್ಭುತ': ಅನುಪಮ್​ ಖೇರ್ ಬಗ್ಗೆ ಶಿವಣ್ಣ ಗುಣಗಾನ

ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ​ಕುಂದ್ರಾ ಕೆಲ ಕಾಲ ಅಶ್ಲೀಲ ಚಿತ್ರ ನಿರ್ಮಾಣ ಮತ್ತು ವಿತರಣೆ ಆರೋಪ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದರು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಕ್ಯಾಮರಾ ಕಣ್ಣಿಗೆ ಬೀಳುವುದರಿಂದ ತಪ್ಪಿಸಿಕೊಳ್ಳಲು ಸಹಜವಾಗಿ ಪ್ರಯತ್ನಿಸುತ್ತಾರೆ. ತಮ್ಮ ಮುಖ ಮುಚ್ಚುವಂತಹ ಬ್ಲ್ಯಾಕ್ ಜಾಕೆಟ್​ ಅಥವಾ ಫೇಸ್​ ಮಾಸ್ಕ್​​, ಬ್ಲ್ಯಾಕ್​ ಸನ್ ಗ್ಲಾಸ್ ಹಾಕಿ ಕೆಲ ಕಾಲ ಓಡಾಡಿದ್ದರು. ಆ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿ, ಟ್ರೋಲಿಗೆ ಒಳಗಾಗಿದ್ದರು. ಈ ಹಿನ್ನೆಲೆ ಸದ್ಯ ನಟಿ ಊರ್ವಶಿ ರೌಟೇಲಾ ಅವರನ್ನು ಟ್ರೋಲಿಗರು ರಾಜ್​ ಕುಂದ್ರಾ ಸಹೋದರಿಯೆಂದು ಕರೆದಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾದ ಆಸ್ಕರ್ ವಿಜೇತ "ದಿ ಎಲಿಫೆಂಟ್ ವಿಸ್ಪರರ್ಸ್" ತಂಡ

ಊರ್ವಶಿ ರೌಟೇಲಾ ಇತ್ತೀಚೆಗಷ್ಟೇ 29ನೇ ಹುಟ್ಟುಹಬ್ಬದ ಆಚರಿಸಿಕೊಂಡಿದ್ದಾರೆ. ಇವರು ಕೆಲ ಬಾಲಿವುಡ್​ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾಗಿಂತ ಹೆಚ್ಚಾಗಿ ಸೌಂದರ್ಯದ ಮೂಲಕ ಸಾಧನೆ ಮಾಡಿದವರಿವರು. ಮಿಸ್​ ದಿವಾ ಕಿರೀಟ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಇಂಡಿಯನ್​ ಪ್ರಿನ್ಸೆಸ್ 2011, ಮಿಸ್​ ಟೂರಿಸಂ ವರ್ಲ್ಡ್​ 2011, ಮಿಸ್​ ಏಷಿಯನ್​ ಸೂಪರ್​ ಮಾಡೆಲ್​ 2011, ಮಿಸ್​ ಯೂನಿವರ್ಸ್ ಇಂಡಿಯಾ 2015, ಯಮಹಾ ಮಿಸ್​ ದಿವಾ 2015, ಮೋಸ್ಟ್​ ಬ್ಯೂಟಿಫುಲ್​ ವುಮೆನ್​ ಇನ್​ ದಿ ವರ್ಲ್ಡ್​ ಪ್ರಶಸ್ತಿ ಸೇರಿ ಅನೇಕ ಸೌಂದರ್ಯ ಕಿರೀಟ ಗೆದ್ದ ಏಕೈಕ ನಟಿ ಇವರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.