ETV Bharat / entertainment

ಕಟೌಟ್ ಸುಂದರಿ ಉರ್ಫಿ ಜಾವೇದ್​ಗೆ ಅತ್ಯಾಚಾರ, ಕೊಲೆ ಬೆದರಿಕೆ ಕರೆ - uorfi javed

ನಟಿ ಉರ್ಫಿ ಜಾವೇದ್ ಅವರಿಗೆ ಕೊಲೆ ಮತ್ತು ಅತ್ಯಾಚಾರ ಬೆದರಿಕೆಗಳು ಬಂದಿವೆಯಂತೆ.

Actress uorfi javed
ಉರ್ಫಿ ಜಾವೇದ್
author img

By

Published : Dec 18, 2022, 4:54 PM IST

ಸಾಮಾಜಿಕ ಜಾಲತಾಣದಲ್ಲಿ ಬೋಲ್ಡ್​ ಮತ್ತು ಹಾಟ್​ ಫೋಟೋ ಹಂಚಿಕೊಳ್ಳುವ ಮೂಲಕ ಸೆನ್ಸೇಷನ್ ಕ್ರಿಯೇಟ್​ ಮಾಡಿರುವ ನಟಿ ಉರ್ಫಿ ಜಾವೇದ್ ಅವರಿಗೆ ಕೊಲೆ ಮತ್ತು ಅತ್ಯಾಚಾರ ಬೆದರಿಕೆಗಳು ಬಂದಿವೆಯಂತೆ. ಈ ಸಂಬಂಧ ಸ್ವತಃ ಉರ್ಫಿ ಜಾವೇದ್ ಗೋರೆಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಶ್ಲೀಲ ಭಾಷೆಯಲ್ಲಿ ನಿಂದನೆ ಮತ್ತು ಅತ್ಯಾಚಾರದ ಬೆದರಿಕೆಗಳನ್ನು ವಾಟ್ಸಾಪ್‌ ಕರೆಯಲ್ಲಿ ಸ್ವೀಕರಿಸಲಾಗಿದೆ. ಕಾಲ್​​ ರೆಕಾರ್ಡಿಂಗ್‌ಗಳನ್ನು ವಿವಿಧ ಸಂಖ್ಯೆಗಳಿಂದ ಕಳುಹಿಸಲಾಗಿದೆ. ಈ ಪ್ರಕರಣದಲ್ಲಿ ನವೀನ್ ಗಿರಿ ಎಂಬ ವ್ಯಕ್ತಿಯ ವಿರುದ್ಧ ನಟಿ ದೂರು ಕೊಟ್ಟಿದ್ದಾರೆ.

Actress uorfi javed
ಉರ್ಫಿ ಜಾವೇದ್

ವಿಭಿನ್ನ ಮತ್ತು ವಿಶಿಷ್ಟ ವೇಷಭೂಷಣಕ್ಕೆ ಹೆಸರಾಗಿರುವ ನಟಿ ಉರ್ಫಿ ಜಾವೇದ್ ಅವರನ್ನು ಕಟೌಟ್​ ನಟಿ ಎಂದೇ ಕರೆಯಲಾಗುತ್ತದೆ. ಚಿತ್ರ-ವಿತ್ರ ಬಟ್ಟೆ ತೊಟ್ಟು ಅಭಿಮಾನಿಗಳಿಗಾಗಿ ಬೀದಿಗೆ ಬರುವ ಈ ಬಾಲಿವುಡ್​ ಬೇಬಿಯ ಫೋಟೋ, ವಿಡಿಯೋಗಳು ಆಗಾಗ ಜಾಲತಾಣದಲ್ಲಿ ವೈರಲ್​ ಆಗುತ್ತವೆ. ಬಿಗ್ ಬಾಸ್ OTT ಸೀಸನ್ 1ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಈ ವಯ್ಯಾರಿ ಈಗ ಜಾಲತಾಣದಲ್ಲಿ ಟ್ರೆಂಡಿಂಗ್ ಬಟ್ಟೆಯಿಂದಲೇ ಸೆನ್ಸೇಷನ್ ಆಗಿದ್ದಾರೆ. ಈ ಬಗ್ಗೆ ಹಲವರು ಆಕ್ರೋಶ ಕೂಡ ವ್ಯಕ್ತಪಡಿಸಿದ್ದಾರೆ. ಇದೀಗ ಇವರಿಗೆ ಅತ್ಯಾಚಾರ, ಕೊಲೆ ಬೆದರಿಕೆ ಬಂದಿದ್ದು, ದೂರು ದಾಖಲಾಗಿದೆ.

ಇದನ್ನೂ ಓದಿ: 'ಪಠಾಣ್' ಸಿನಿಮಾ ಏಕೆ ನೋಡ್ಬೇಕು?: ಶಾರುಖ್ ಖಾನ್ ಉತ್ತರ ಹೀಗಿತ್ತು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.