ETV Bharat / entertainment

ತಮನ್ನಾಗಾಗಿ ಭದ್ರತೆ ಭೇದಿಸಿ ಬಂದ ಫ್ಯಾನ್​...ನಾಜೂಕಾಗಿ ಪ್ರತಿಕ್ರಿಯಿಸಿದ ಸೌತ್​ ಸ್ಟಾರ್​ ನಟಿ - ತಮನ್ನಾ ಭಾಟಿಯಾ ಕೇರಳ ನ್ಯೂಸ್

Tamannaah Bhatia: ತಮನ್ನಾ ಭಾಟಿಯಾ ಅವರನ್ನು ಮಾತನಾಡಿಸಲು ಅಭಿಮಾನಿಯೊಬ್ಬರು ಬ್ಯಾರಿಕೇಡ್​ ಹಾರಿ ಬಂದು ಭದ್ರತಾ ಸಿಬ್ಬಂದಿಯ ಹೃದಯವನ್ನೇ ನಡುಗಿಸಿದ್ದರು.

Tamannaah Bhatia
ನಟಿ ತಮನ್ನಾ ಭಾಟಿಯಾ
author img

By

Published : Aug 8, 2023, 1:40 PM IST

ಹಾಲ್ಗೆನ್ನೆ ಚೆಲುವೆ ತಮನ್ನಾ ಭಾಟಿಯಾ ಅವರಿಗೆ ಸಂಬಂಧಪಟ್ಟ ವಿಡಿಯೋವೊಂದು ಸಾಮಾಜಿಕ ಮಾಧ್ಯವದಲ್ಲಿ ಕಾಣಿಸಿಕೊಂಡಿದೆ. ಕೇರಳದ ಕೊಲ್ಲಂನಲ್ಲಿ ನಡೆದ ಈವೆಂಟ್​ ಒಂದರಲ್ಲಿ ಸೌತ್​ ಸ್ಟಾರ್ ನಟಿ ತಮನ್ನಾ ಭಾಟಿಯಾ ಅವರ ಕಟ್ಟಾ ಅಭಿಮಾನಿ ವರ್ತಿಸಿದ ರೀತಿ ಕಂಡು ಒಂದು ಕ್ಷಣಕ್ಕೆ ಎಲ್ಲರೂ ತಬ್ಬಿಬ್ಬಾದರು. ನಟಿ ಮತ್ತು ಅಭಿಮಾನಿ ಆ ಕೂಡಲೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಬ್ಯಾರಿಕೇಡ್​ ಹಾರಿ ಬಂದ ಅಭಿಮಾನಿ: ಕೇರಳದ ಕೊಲ್ಲಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿಮಾನಿಯೊಬ್ಬರು ಬಹುಬೇಡಿಕೆ ತಾರೆಯನ್ನು ಮಾತನಾಡಿಸಲು ಎಂದು ಬ್ಯಾರಿಕೇಡ್​ ಹಾರಿ ಬಂದರು. ಈ ಮೂಲಕ ಭದ್ರತಾ ನಿಯಮ ಉಲ್ಲಂಘಿಸಿದರು. ಆ ಕೂಡಲೇ ಭದ್ರತಾ ಸಿಬ್ಬಂದಿ ಅಭಿಮಾನಿಯನ್ನು ಹಿಂದಕ್ಕೆ ಸರಿಸಿ, ತಮನ್ನಾರನ್ನು ರಕ್ಷಿಸಲು ಮುಂದಾದರು. ನಟಿಯನ್ನು ಮಾತನಾಡಿಸುವ, ಫೋಟೋ ಕ್ಲಿಕ್ಕಿಸಿಕೊಳ್ಳುವ ಇಂಗಿತವನ್ನು ಅಭಿಮಾನಿ ವ್ಯಕ್ತಪಡಿಸಿದರು.

Tamannaah Bhatia
ಹಾಲ್ಗೆನ್ನೆ ಚೆಲುವೆ ತಮನ್ನಾ ಭಾಟಿಯಾ

ಪರಿಸ್ಥಿತಿಯನ್ನು ನಾಜೂಕಾಗಿ ನಿಭಾಯಿಸಿದ ನಟಿ: ಅಭಿಮಾನಿಯ ವರ್ತನೆ ತಮನ್ನಾ ಭಾಟಿಯಾರಿಗೆ ಆಶ್ಚರ್ಯವನ್ನುಂಟುಮಾಡಿದರೂ ನಟಿ ಪರಿಸ್ಥಿತಿಯನ್ನು ಅಚ್ಚುಕಟ್ಟಾಗಿ, ನಾಜೂಕಾಗಿ ನಿಭಾಯಿಸಿದರು. ಅಭಿಮಾನಿ ಮೇಲೆ ಪ್ರೀತಿ, ದಯೆ ವ್ಯಕ್ತಪಡಿಸಿದರು. ನಟಿ ತಮ್ಮ ಕಟ್ಟಾ ಅಭಿಮಾನಿಯ ಉತ್ಸುಕತೆಯನ್ನು ಅರ್ಥ ಮಾಡಿಕೊಂಡು, ಭದ್ರತಾ ಸಿಬ್ಬಂದಿಯನ್ನು ಸಮಾಧಾನಪಡಿಸಿದರು. ಭದ್ರತಾ ಸಿಬ್ಬಂದಿಗೆ ಧೈರ್ಯ ಹೇಳಿ, ಅಭಿಮಾನಿಯನ್ನು ಶಾಂತಗೊಳಿಸಿದರು.

ನಟಿಯ ನಡೆಗೆ ಮೆಚ್ಚುಗೆ: ಜನಜಂಗುಳಿ, ಅಡೆತಡೆ ನಡುವೆಯೂ ನಟಿ ಅಭಿಮಾನಿಯೊಂದಿಗೆ ಕೈಕುಲುಕಿಸಿ, ಸೆಲ್ಫಿ ಕ್ಲಿಕ್ಕಿಸಿಕೊಂಡು ಮುನ್ನಡೆದರು. ಅಭಿಮಾನಿ ನಟಿಯ ಪ್ರತಿಕ್ರಿಯೆಗೆ ಮನಸೋತು, ವೇದಿಕೆ ಬಳಿಯೇ ಕುಣಿದು ಕುಪ್ಪಳಿಸಿದರು. ನಟಿಯ ನಡೆ ನುಡಿ ಅಲ್ಲಿದ್ದ ಪ್ರೇಕ್ಷಕರಿಂದ ಚಪ್ಪಾಳೆ ಸ್ವೀಕರಿಸಿತು. ಸದ್ಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದ್ದು, ಬಳಕೆದಾರರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ನಟಿಯ ಸ್ವಭಾವ ಸೋಷಿಯಲ್​ ಮೀಡಿಯಾ ಬಳಕೆದಾರರಿಂದ ಗುಣಗಾನಗಳನ್ನು ಸ್ವೀಕರಿಸುತ್ತಿದೆ.

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ನಟಿಯ ನಡೆಯನ್ನು ಹಲವರು ಮೆಚ್ಚಿಕೊಂಡರೆ, ಕೆಲವರು ಭದ್ರತಾ ಕ್ರಮ ಮತ್ತು ಸಂಭವನೀಯ ಅಪಾಯಗಳ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಸೆಲೆಬ್ರಿಟಿಗಳ ಸುರಕ್ಷತೆ ಖಚಿತಪಡಿಸಿಕೊಳ್ಳಲು ಆಯೋಜಕರು ಹಹೆಚ್ಚಿನ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.

ಇತ್ತೀಚೆಗೆ ಟಾಲಿವುಡ್​ ನಟ ವಿಜಯ್​ ದೇವರಕೊಂಡ ಕೂಡ ಇಂತಹ ಪರಿಸ್ಥಿತಿಯನ್ನೇ ಎದುರಿಸಿದ್ದರು. ಬೇಬಿ ಸಿನಿಮಾದ ಸಕ್ಷಸ್ ಮೀಟ್​ ಸಂದರ್ಭ ವಿಜಯ್​ ಅವರು ಅಭಿಮಾನಿಯ ಪ್ರೀತಿ ಕಂಡು ಆಶ್ಚರ್ಯಚಕಿತರಾಗಿದ್ದರು. ಮತ್ತೊಂದೆಡೆ, ಹೈದರಾಬಾದ್​ನಲ್ಲಿ ನಡೆದ ದಾಸ್​ ಕ ಧಮ್ಕಿ ಪ್ರೀ ರಿಲೀಸ್​ ಈವೆಂಟ್​ನಲ್ಲಿ ಜೂನಿಯರ್​ ಎನ್​​ಟಿಆರ್​​ ಅವರ ಮೇಲೆ ಅಭಿಮಾನಿಯೊಬ್ಬರು ಹಾರಿ ಬಂದಿದ್ದರು.

ಇದನ್ನೂ ಓದಿ: ಅಪ್ಪಟ ಚಿನ್ನದ ವ್ಯಕ್ತಿತ್ವವುಳ್ಳ ವಿಜಯ್​ ರಾಘವೇಂದ್ರರಿಗೆ ಭಗವಂತ ನೋವು ತಡೆಯುವ ಶಕ್ತಿ ನೀಡಲಿ: ವಿ. ಸೋಮಣ್ಣ

ನಟಿ ತಮನ್ನಾ ಭಾಟಿಯಾ ಸಿನಿಮಾ ವಿಚಾರ ಗಮನಿಸುವುದಾದರೆ ಕೊನೆಯ ಬಾರಿಕೆ ನೆಟ್​ಫ್ಲಿಕ್ಸ್​ನ ಲಸ್ಟ್ ಸ್ಟೋರಿಸ್​​ 2ನಲ್ಲಿ ಕಾಣಿಸಿಕೊಂಡರು. ಸುಜೋಯ್​ ಘೋಷ್​​ ನಿರ್ದೇಶನದ ಈ ಪ್ರಾಜೆಕ್ಟ್​ನಲ್ಲಿ ಗೆಳೆಯ ವಿಜಯ್​ ವರ್ಮಾ ಅವರೊಂದಿಗೆ ಸ್ಕ್ರೀನ್​ ಶೇರ್ ಮಾಡಿದ್ದಾರೆ. ಮುಂದಿನ ಬಹುನಿರೀಕ್ಷಿತ ಚಿತ್ರ ಜೈಲರ್​. ತಮಿಳಿನ ಈ ಪ್ರಾಜೆಕ್ಟ್​ನಲ್ಲಿ ಸೂಪರ್​ ಸ್ಟಾರ್ ರಜನಿಕಾಂತ್​ ಜೊತೆ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ನಟಿ ಶೆರ್ಲಿನ್​ ಚೋಪ್ರಾಗೆ ರಾಹುಲ್​ ಗಾಂಧಿಯವರನ್ನು ಮದುವೆಯಾಗೋ ಆಸೆಯಂತೆ - ಕಂಡೀಶನ್ಸ್ ಅಪ್ಲೈ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.