ETV Bharat / entertainment

ಸಮಾಜವಾದಿ ಮುಖಂಡ ಫಹಾದ್ ಅಹ್ಮದ್ ಜೊತೆ ಸ್ವರಾ ಭಾಸ್ಕರ್​ ಗಪ್‌ ಚುಪ್ ಶಾದಿ: ವಿಡಿಯೋ ಹಂಚಿಕೊಂಡ ನಟಿ - ಫಹಾದ್ ಅಹ್ಮದ್​ ಸ್ವರಾ ಭಾಸ್ಕರ್ ಮದುವೆ

ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ ಅವರೊಂದಿಗೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್​ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.

actress-swara-bhaskar-ties-nuptial-knot-with-political-activist-fahad-ahmad
ಯುವ ರಾಜಕಾರಣಿಯೊಂದಿಗೆ ಸ್ವರಾ ಭಾಸ್ಕರ್​ ರಹಸ್ಯ ಮದುವೆ
author img

By

Published : Feb 16, 2023, 8:21 PM IST

Updated : Feb 16, 2023, 10:26 PM IST

ಮುಂಬೈ (ಮಹಾರಾಷ್ಟ್ರ): ನಟನೆ ಹಾಗೂ ವಿವಾದಾತ್ಮಕ ಹೇಳಿಕೆಗಳಿಂದ ಯಾವಾಗಲೂ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್​ ರಹಸ್ಯವಾಗಿ ಮದುವೆಯಾಗಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ ಅವರೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಈ ಸುದ್ದಿಯನ್ನು ನವಜೋಡಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಕಟಿಸಿದ್ದಾರೆ.

34 ವರ್ಷದ ನಟಿ ಸ್ವರಾ ಹಾಗೂ ರಾಜಕಾರಣಿ ಫಹಾದ್ ಅಹ್ಮದ್​ ತಮ್ಮ ದಾಂಪತ್ಯದ ಕಾಲಿಟ್ಟ ಕ್ಷಣಗಳ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಳೆದ ತಿಂಗಳು ಜನವರಿ 6ರಂದು ನ್ಯಾಯಾಲಯದಲ್ಲಿ ಮದುವೆ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರು ಕೂಡ ಹಿಂದೆ ಪ್ರತಿಭಟನೆಯೊಂದರಲ್ಲಿ ಮುಖಾಮುಖಿಯಾಗಿದ್ದರು. ಅಲ್ಲಿ ಮೊದಲ ನೋಟದಲ್ಲೇ ಇಬ್ಬರ ಮಧ್ಯೆ ಪ್ರೀತಿ ಚಿಗುರಿತ್ತಂತೆ.

ಮದುವೆ ಬಗ್ಗೆ ಸ್ವರಾ ಟ್ವೀಟ್​: ಫಹಾದ್ ಅಹ್ಮದ್​ ಜೊತೆಗೆ ಹೊಸ ಜೀವನಕ್ಕೆ ಕಾಲಿಟ್ಟ ಬಗ್ಗೆ ನಟಿ ಸ್ವರಾ ಸ್ವತಃ ಟ್ವೀಟ್​ ಮಾಡಿ, ತಾವಿಬ್ಬರೂ ಭೇಟಿಯಾದ ಕ್ಷಣದಿಂದ ಹಿಡಿದುಕೊಂಡು ಮದುವೆಯವರೆಗಿನ ಕ್ಷಣಗಳ ವಿಡಿಯೋ ಶೇರ್​ ಮಾಡಿದ್ದಾರೆ. ಜೊತೆಗೆ, ''ಕೆಲವೊಮ್ಮೆ ನಾವು ಏನನ್ನಾದರೂ ಹುಡುಕುತ್ತಾ ಅಲೆದಾಡುತ್ತೇವೆ. ಆದರೆ, ಅದು ಯಾವಾಗಲೂ ನಮ್ಮ ಸುತ್ತಲೂ ಇರುತ್ತದೆ'' ಎಂದು ಬರೆದುಕೊಂಡಿದ್ದಾರೆ.

ಮುಂದುವರೆದು, ''ನಾವಿಬ್ಬರೂ ಪ್ರೀತಿಯನ್ನು ಹುಡುಕುತ್ತಿದ್ದೆವು. ಆದರೆ, ಇದಕ್ಕೂ ಮುನ್ನ ಸ್ನೇಹವನ್ನು ನಾವು ಕಂಡುಕೊಂಡೆವು. ಇದರ ನಂತರ ನಾವು ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡೆವು. ಫಹಾದ್ ಅಹ್ಮದ್​ ನನ್ನ ಹೃದಯದ ಕೋಣೆಯಲ್ಲಿ ನಿನಗೆ ಆತ್ಮೀಯ ಸ್ವಾಗತ. ನಾನು ಸ್ವಲ್ಪ ವಿಭಿನ್ನವಾಗಿದ್ದೇನೆ. ಆದರೆ, ಈಗ ನಾನು ನಿಮ್ಮವಳು'' ಎಂದು ನಟಿ ಹೇಳಿದ್ದಾರೆ. ನವ ಜೀವನಕ್ಕೆ ಕಾಲಿಟ್ಟಿರುವ ಸ್ವರಾ ದಂಪತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

  • Sometimes you search far & wide for something that was right next to you all along. We were looking for love, but we found friendship first. And then we found each other!
    Welcome to my heart @FahadZirarAhmad It’s chaotic but it’s yours! ♥️✨🧿 pic.twitter.com/GHh26GODbm

    — Swara Bhasker (@ReallySwara) February 16, 2023 " class="align-text-top noRightClick twitterSection" data=" ">

ಫಹಾದ್ ಅಹ್ಮದ್ ಯಾರು?: ಸ್ವರಾ ಭಾಸ್ಕರ್​​ ಮದುವೆಯಾಗಿರುವ ಫಹಾದ್ ಅಹ್ಮದ್ ಸಮಾಜವಾದಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ, ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ಯುವಜನ ಸಭಾದ ರಾಜ್ಯಾಧ್ಯಕ್ಷರೂ ಆಗಿದ್ದಾರೆ. ಸ್ವರಾ ಆಗಾಗ್ಗೆ ರಾಜಕೀಯ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಬಹಿರಂಗ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಲ್ಲಿ ಇರುತ್ತಾರೆ.

ಇದನ್ನೂ ಓದಿ: ಮರುಮದುವೆ ಸಂತಸದಲ್ಲಿ ಹಾರ್ದಿಕ್ ಪಾಂಡ್ಯ ದಂಪತಿ: ಪುತ್ರನಿಗೆ ಪೋಷಕರ ವಿವಾಹ ನೋಡುವ ಭಾಗ್ಯ

Last Updated : Feb 16, 2023, 10:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.