ETV Bharat / entertainment

ನಾಗ ಚೈತನ್ಯ ಜೊತೆ ಡೇಟಿಂಗ್​ ವದಂತಿ: ಶೋಭಿತಾ ಧೂಳಿಪಾಲ ಹೇಳಿದ್ದೇನು? - etv bharat kannada

ನಟ ನಾಗ ಚೈತನ್ಯ ಅವರೊಂದಿಗೆ ಡೇಟಿಂಗ್​ ವದಂತಿ ಬಗ್ಗೆ ಶೋಭಿತಾ ಧೂಳಿಪಾಲ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.

Shobhitha Dhulipala
ಶೋಭಿತಾ ಧೂಳಿಪಾಲ
author img

By

Published : May 9, 2023, 1:00 PM IST

ನಟಿ ಸಮಂತಾ ರುತು ಪ್ರಭು ಜೊತೆ ವಿಚ್ಛೇದನ ಪಡೆದ ಬಳಿಕ ನಟಿ ಶೋಭಿತಾ ಧೂಳಿಪಾಲ ಅವರೊಂದಿಗೆ ತೆಲುಗು ಸೂಪರ್​ಸ್ಟಾರ್ ನಾಗ ಚೈತನ್ಯ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ವದಂತಿ ಹಲವು ದಿನಗಳಿಂದ ಕೇಳಿಬರುತ್ತಿದೆ. ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ತಮ್ಮ ಸಿನಿಮಾ ಕೆಲಸದ ಜವಾಬ್ದಾರಿಗಳ ನಡುವೆ, ಈ ಮೂವರು ವೈಯಕ್ತಿಕ ಜೀವನದ ಬಗ್ಗೆಯೂ ಸುದ್ದಿಯಲ್ಲಿದ್ದಾರೆ. ಇದೀಗ ನಾಗ ಚೈತನ್ಯ ಜೊತೆಗಿನ ಡೇಟಿಂಗ್​ ವಿಚಾರವಾಗಿ ಶೋಭಿತಾ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ಇತ್ತೀಚೆಗೆ ಹೈದರಾಬಾದ್​ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಶೋಭಿತಾ ಧೂಳಿಪಾಲ ಮೊದಲ ಬಾರಿಗೆ ತಮ್ಮ ಡೇಟಿಂಗ್​ ವದಂತಿಗಳ ಬಗ್ಗೆ ನೇರವಾಗಿಯೇ ಮಾತನಾಡಿದ್ದಾರೆ. "ನನ್ನ ಕುರಿತಾದ ಸುದ್ದಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ಧದ ಪ್ರಚಾರಗಳ ಬಗ್ಗೆ ನಾನು ಗಮನ ನೀಡುವುದಿಲ್ಲ. ಈ ವಿಷಯವಾಗಿ ಮಾತನಾಡಲು ನಾನು ಇಚ್ಛಿಸುವುದಿಲ್ಲ. ತಪ್ಪು ಮಾಡದ ಕಾರಣ ಮಾಧ್ಯಮದ ಮುಂದೆ ಬಂದು ವಿವರಣೆ ನೀಡುವ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.

ಮುಂದುವರೆದು, "ಜೀವನವನ್ನು ಶಾಂತವಾಗಿಟ್ಟುಕೊಳ್ಳುವುದು ನನ್ನ ಆಲೋಚನೆ. ನನ್ನ ಗಮನ ಯಾವಾಗಲೂ ಒಂದೇ ಆಗಿರುತ್ತದೆ. ಈಗ ನಟಿಯಾಗಿ ತುಂಬಾ ಚೆನ್ನಾಗಿದ್ದೇನೆ. ಸಿನಿಮಾಗಳನ್ನು ಮಾಡುತ್ತಿದ್ದೇನೆ. ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಚಿತ್ರದಲ್ಲೂ ನಟಿಸಿದ್ದೇನೆ. ಆಸ್ಕರ್​ ವಿಜೇತ ಎ.ಆರ್.ರೆಹಮಾನ್​ ಅವರ ಸಂಗೀತಕ್ಕೂ ನೃತ್ಯ ಮಾಡಿದ್ದೇನೆ. ಇಂತಹ ಒಳ್ಳೆ ನೆನಪುಗಳು ನನಗಿದೆ. ಹೀಗಿರುವಾಗ ನಾನು ಯಾವುದರ ಬಗ್ಗೆಯೂ ಚಿಂತಿಸುವ ಅಗತ್ಯವಿಲ್ಲ. ತಪ್ಪಾಗದಿದ್ದಾಗ ಆತಂಕ ಪಡುವ ಅವಶ್ಯಕತೆಯೂ ಇಲ್ಲ​" ಎಂದು ಶೋಭಿತಾ ಸ್ಪಷ್ಟಪಡಿಸಿದರು.

ನಾಗ ಚೈತನ್ಯ ಹೇಳಿದ್ದೇನು?: “ನನ್ನ ಮತ್ತು ಸಮಂತಾ ವಿಚಾರದ ಮಧ್ಯೆ ಸಂಬಂಧವಿಲ್ಲದ ಮೂರನೇ ವ್ಯಕ್ತಿಯನ್ನು ಎಳೆದುಕೊಂಡು ಸುದ್ದಿ ಬರೆಯುತ್ತಿದ್ದಾರೆ. ಇದು ಆ ಮೂರನೇ ವ್ಯಕ್ತಿಗೆ ಅಗೌರವ ಉಂಟು ಮಾಡಿದೆ. ಸಿನಿಮಾ ಪ್ರಚಾರದಲ್ಲಿ ಭಾಗವಹಿಸುವಾಗ ಅನೇಕರು ನನ್ನ ವೈಯಕ್ತಿಕ ಜೀವನದ ಬಗ್ಗೆ ಕೇಳುತ್ತಾರೆ. ಮೊದಮೊದಲು ನಾನು ತಲೆಕೆಡಿಸಿಕೊಳ್ಳಲಿಲ್ಲ. ಅಂತಹ ಪ್ರಶ್ನೆಗಳಿಗೆ ಮೌನವಾಗಿರುತ್ತಿದ್ದೆ. ಆದರೂ ಇವರೆಲ್ಲರೂ ಯಾಕೆ ನನ್ನ ಮದುವೆಯ ಬಗ್ಗೆ ಮಾತನಾಡುತ್ತಿದ್ದಾರೆ? ಏಕೆ ವದಂತಿಗಳನ್ನು ಸೃಷ್ಟಿಸುತ್ತಿದ್ದಾರೆ? ಇದೇ ನನಗೆ ಅರ್ಥವಾಗುತ್ತಿಲ್ಲ" ಎಂದು ಪರೋಕ್ಷವಾಗಿ ಇತ್ತೀಚೆಗೆ ನಾಗ ಚೈತನ್ಯ ಮಾತನಾಡಿದ್ದರು.

'ಆ ಹುಡುಗಿಯಾದರೂ ಸಂತೋಷವಾಗಿರಲಿ': ಈ ಹಿಂದೆ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಜೊತೆಗಿನ ಡೇಟಿಂಗ್​ ವದಂತಿಯ ಬಗ್ಗೆ ಸಮಂತಾ ಪ್ರತಿಕ್ರಿಯಿಸಿದ್ದರು. "ಯಾರು ಯಾರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಪ್ರೀತಿಯ ಮೌಲ್ಯವನ್ನು ತಿಳಿದಿಲ್ಲದವರು, ಎಷ್ಟು ಜನರೊಂದಿಗೆ ಡೇಟ್ ಮಾಡಿದರೂ ಕಣ್ಣೀರು ಹಾಕುತ್ತಾರೆ. ಕನಿಷ್ಠ ಆ ಹುಡುಗಿಯಾದರೂ ಸಂತೋಷವಾಗಿರಬೇಕು, ಅವರು ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಂಡು ಆ ಹುಡುಗಿಯನ್ನು ನೋಯಿಸದಂತೆ ನೋಡಿಕೊಂಡರೆ ಎಲ್ಲರಿಗೂ ಒಳ್ಳೆಯದು" ಎಂದು ಸಲಹೆ ನೀಡಿದ್ದರು.

ನಾಗ ಚೈತನ್ಯ ಮತ್ತು ಶೋಭಿತಾ ಅವರ ಇತ್ತೀಚಿನ ಫೋಟೋವೊಂದು ಆನ್​ಲೈನ್​ನಲ್ಲಿ ವೈರಲ್​ ಆಗಿತ್ತು. ಲಂಡನ್ ರೆಸ್ಟೋರೆಂಟ್‌ನಿಂದ ಬಂದ ಫೋಟೋ ಅದು. ಹೀಗಾಗಿ ಅವರಿಬ್ಬರು ಡೇಟಿಂಗ್​ನಲ್ಲಿದ್ದಾರೆ ಎಂಬ ಊಹಾಪೋಹಗಳು ಜೋರಾಗಿಯೇ ಹರಡಿದ್ದವು.​

ಇದನ್ನೂ ಓದಿ: 'ಸಮಂತಾ ಹೃದಯವಂತಳು, ಯಾವಾಗಲೂ ಸಂತೋಷವಾಗಿರಬೇಕು': ಮಾಜಿ ಪತ್ನಿ ಕೊಂಡಾಡಿದ ನಾಗ ಚೈತನ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.