ETV Bharat / entertainment

ರೈಲು, ರಿಕ್ಷಾ ಸವಾರಿ ಮಾಡಿದ ಬಾಲಿವುಡ್​ ಬ್ಯೂಟಿ ಸಾರಾ ಅಲಿ ಖಾನ್ - ಸಾರಾ ಅಲಿ ಖಾನ್ ವೈರಲ್ ವಿಡಿಯೋ

ಸಾರಾ ಅಲಿ ಖಾನ್ ತನ್ನ ಸ್ನೇಹಿತರೊಂದಿಗೆ ಸ್ಥಳೀಯ ರೈಲು ಮತ್ತು ಆಟೋರಿಕ್ಷಾ ಸವಾರಿ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Actress Sara Ali Khan traveled in local train and rickshaw
ರಿಕ್ಷಾ ಸವಾರಿ ಮಾಡಿದ ಬಾಲಿವುಡ್​ ಬ್ಯೂಟಿ ಸಾರಾ ಅಲಿ ಖಾನ್
author img

By

Published : Dec 10, 2022, 5:56 PM IST

ಬಾಲಿವುಡ್​​ ನಟಿ ಸಾರಾ ಅಲಿ ಖಾನ್ ಅವರು ಕೊನೆಯ ಬಾರಿ ಅಕ್ಷಯ್ ಕುಮಾರ್ ಮತ್ತು​​ ಧನುಷ್ ಅವರೊಂದಿಗೆ 'ಅತ್ರಂಗಿ ರೆ' ಚಿತ್ರದಲ್ಲಿ ಅಭಿನಯಿಸಿದ್ದರು. ಕಳೆದ ವರ್ಷ ಈ ಸಿನಿಮಾ ಬಿಡುಗಡೆಯಾಗಿತ್ತು. ಇದಾದ ಬಳಿಕ ಸಾರಾ ಯಾವುದೇ ಸಿನಿಮಾದಲ್ಲಿಯೂ ನಟಿಸಿಲ್ಲ. ತಮ್ಮ ಮುಂಬರುವ 'ಮೆಟ್ರೋ ಇನ್ ದಿನೋ' ಚಿತ್ರದಲ್ಲಿ ನಟಿ ಬ್ಯುಸಿಯಾಗಿದ್ದು, ಅವರ ಹೊಸ ಸೋಶಿಯಲ್​ ಮೀಡಿಯಾ ಪೋಸ್ಟ್ ಸಖತ್​ ಸದ್ದು ಮಾಡುತ್ತಿದೆ.

ಸಾರಾ ಅಲಿ ಖಾನ್ ಚಲನಚಿತ್ರಗಳ ಹೊರತಾಗಿ ತಮ್ಮ ವೈಯಕ್ತಿಕ ಜೀವನದ ವಿಷವಾಗಿಯೂ ಸುದ್ದಿಯಲ್ಲಿರುತ್ತಾರೆ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಜನರೊಟ್ಟಿಗೆ ಬೆರೆಯುವ ಅವರ ಗುಣ ಅಭಿಮಾನಿಗಳಿಗೆ ಬಹಳ ಇಷ್ಟವಾಗುತ್ತದೆ. ಆಗಾಗ ರಸ್ತೆಯಲ್ಲಿ ಅಭಿಮಾನಿಗಳೊಂದಿಗೆ ಸಮಯ ಕಳೆದಿರುವ ವಿಡಿಯೋಗಳು ವೈರಲ್ ಆಗಿ ಮೆಚ್ಚುಗೆ ಗಳಿಸಿವೆ. ಇದೀಗ ಸಾರಾ ತಮ್ಮ ಸ್ನೇಹಿತರೊಂದಿಗೆ ಸ್ಥಳೀಯ ರೈಲು ಮತ್ತು ಆಟೋರಿಕ್ಷಾ ಸವಾರಿ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಸಾರಾ ಅಲಿ ಖಾನ್ ಹೊಸ ಸಿನಿಮಾ ಯಾವುದು? ಖುಷಿ ಸುದ್ದಿ ಹಂಚಿದ ಬಾಲಿವುಡ್‌ ಬೆಡಗಿ

ರೈಲಿನಲ್ಲಿ ಸ್ನೇಹಿತರೊಂದಿಗೆ ವಿಡಿಯೋ ರೆಕಾರ್ಡ್ ಮಾಡಿರುವ ಸಾರಾ ಅಲಿ ಖಾನ್, 'ಹಲೋ ವೀಕ್ಷಕರೇ, ಇಂದು ನಾವು ನಮ್ಮ ಮೆದುಳನ್ನು ಬಳಸುತ್ತಿದ್ದೇವೆ, ನಮ್ಮ ಸಮಯವನ್ನು ಚೆನ್ನಾಗಿ ಬಳಸುತ್ತಿದ್ದೇವೆ, ಸಂಚಾರಕ್ಕೆ ರೈಲು, ಆಟೋರಿಕ್ಷಾ ಬಳುತ್ತಿದ್ದೇವೆ' ಎಂದಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿ ಮೆಚ್ಚುಗೆ ಗಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.