ETV Bharat / entertainment

'ಹೇ ವತನ್​ ಮೇರಾ ವತನ್'​ ಚಿತ್ರದ ಟೀಸರ್​ ಬಿಡುಗಡೆ: ಸ್ವಾತಂತ್ರ್ಯ ಹೋರಾಟಗಾರ್ತಿ ಪಾತ್ರದಲ್ಲಿ ನಟಿ ಸಾರಾ ಅಲಿ ಖಾನ್​

author img

By

Published : Jan 23, 2023, 1:04 PM IST

ಇದೇ ಮೊದಲ ಬಾರಿಗೆ ಸಾರಾ ಅಲಿ ಖಾನ್​ ಸ್ವಾತಂತ್ರ್ಯ ಹೋರಾಟ ಕಾಲಘಟ್ಟದ ನೈಜ ಘಟನೆ ಆಧಾರಿತ ಕಥೆಗೆ ಬಣ್ಣ ಹಚ್ಚಿದ್ದಾರೆ

actress-sara-ali-khan-played-freedom-fighter-role-in-hey-watan-mera-watan
'ಹೇ ವತನ್​ ಮೇರಾ ವತನ್'​ ಚಿತ್ರದ ಟೀಸರ್​ ಬಿಡುಗಡೆ; ಸ್ವಾತಂತ್ರ್ಯ ಹೋರಾಟಗಾರ್ತಿ ಪಾತ್ರದಲ್ಲಿ ನಟಿ ಸಾರಾ ಆಲಿ ಖಾನ್​

ಹೈದರಾಬಾದ್​: 2018ರಲ್ಲಿ 'ಕೇದಾರ್​ನಾಥ್​' ಸಿನಿಮಾ ಮೂಲಕ ಬಾಲಿವುಡ್​ ಅಂಗಳಕ್ಕೆ ಕಾಲಿಟ್ಟ ಸಾರಾ ಅಲಿಖಾನ್​ ಇದೇ ಮೊದಲ ಬಾರಿಗೆ ಸ್ವಾತಂತ್ರ್ಯ ಹೋರಾಟದ ಧೀರ ಮಹಿಳೆಯ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಅವರ ಬಹು ನಿರೀಕ್ಷಿತ ಚಿತ್ರ 'ಹೇ ವತನ್​ ಮೇರೆ ವತನ್'​ ಚಿತ್ರದಲ್ಲಿ ಅವರು ಸ್ವಾತಂತ್ರ್ಯ ಹೋರಾಟಗಾರ್ತಿ ಉಷಾ ಮೆಹ್ತಾ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಚಿತ್ರದ ಮೊದಲ ಟೀಸರ್​ ಇಂದು ಬಿಡುಗಡೆಯಾಗಿದ್ದು, ಇದರಲ್ಲಿ ಸ್ವತಂತ್ರ್ವ ಹೋರಾಟ ಸಮಯದಲ್ಲಿ ಬ್ಯಾಗ್​ಗ್ರೌಂಡ್​ ಕಾಣಬಹುದಾಗಿದೆ.

ಖಾದಿ ಸೀರೆ ತೊಟ್ಟ ಸಾರಾ, ಮೈಕ್​ ಹಿಡಿದು ಸ್ವಾತಂತ್ರ್ಯದ ಕುರಿತ ಪ್ರೇರಣಾದಾಯಕ ಮಾತುಗಳನ್ನು ಆಡಿದ್ದಾರೆ. ಇದೇ ಮೊದಲ ಬಾರಿಗೆ ನಿಜ ಜೀವನದ ನಾಯಕಿ ಪಾತ್ರವನ್ನು ತೆರೆಯ ಮೇಲೆ ನಿಭಾಯಿಸಿದ್ದಾರೆ. ಈ ಚಿತ್ರದ ಮೂಲಕ ಸಾರಾ ಸಾಮರ್ಥ್ಯ ಹೊರ ಬರಲಿದೆ.

ಚಿತ್ರವೂ ಸಂಪೂರ್ಣವಾಗಿ ಸ್ವತಂತ್ರ ಪೂರ್ವದ ಕಾಲಘಟ್ಟದ ಕಥೆ ಹೊಂದಿದ್ದು, ಇದರಲ್ಲಿ ಅನೇಕ ಧೀರ ಹೋರಾಟಗಾರರ ಪಾತ್ರ ಕಾಣಲಿದೆ. 1942ರ ಭಾರತ ಬಿಟ್ಟು ತೊಲಗಿ ಚಳವಳಿಗೆ ಸಮಯದ ಕಥೆಯನ್ನು ಹೊಂದಿದ್ದು, ಇದು ನಿಜ ಘಟನೆಯ ಪ್ರೇರಣೆ ಹೊಂದಿರುವ ಕಥೆ ಹೊಂದಿದೆ. ಈ ಚಿತ್ರವನ್ನು ದರಬ್​​ ಫರೂಕಿ ಮತ್ತು ಕನ್ನನ್​ ಅಯ್ಯರ್​ ಬರೆದಿದ್ದಾರೆ. ಇನ್ನು ಚಿತ್ರ ಈಗಾಗಲೇ ಶೂಟಿಂಗ್​ ಮುಗಿಸಿದ್ದು, ಪೋಸ್ಟ್​ ಪ್ರೊಡಕ್ಷನ್​ ಹಂತದಲ್ಲಿದೆ. ಧರ್ಮಾಟಿಂಗ್​​ ಎಂಟರ್​​ಟೈನ್​ಮೆಂಟ್​ ಚಿತ್ರಕ್ಕೆ ಹಣ ಹೂಡುತ್ತಿದ್ದು, ಅಮೆಜಾನ್​ ಪ್ರೈಂನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದ ಟೀಸರ್​ ಅನ್ನು ಕರಣ್​ ಜೋಹರ್​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸ್ವಾತಂತ್ರ್ಯ ಹೋರಾಟದ ತೆರೆಮರೆಯ ನಾಯಕರು ಎಂದಿದ್ದಾರೆ.

ಭಾರತ ಬಿಟ್ಟು ತೊಲಗಿ ಆಂದೋಲನ ಸಮಯದ ಕಥೆ: ಇನ್ನು ಚಿತ್ರದ ಬಗ್ಗೆ ಮಾತನಾಡಿರುವ ನಟಿ ಸಾರಾ, ’’ಈ ಚಿತ್ರದಲ್ಲಿ ತಾವು ಭಾಗಿಯಾಗಿರುವುದು ಖುಷಿ ಜೊತೆ ಗೌರವ ಕೂಡ ಮೂಡಿದೆ. ಧರ್ಮೆಟಿಂಗ್​ ಎಂಟರ್​ಟೈನ್​ಮೆಂಟ್​, ಪ್ರೈಮ್​ ವಿಡಿಯೋ ಈ ಅವಕಾಶ ನೀಡಿರುವುದು ಸಂತಸ ತಂದಿದೆ. ಭಾರತೀಯಳಾಗಿರುವ ನಾನು, ಇಂತಹ ಧೈರ್ಯವಂತ, ಧೀರ ಪಾತ್ರಕ್ಕೆ ಬಣ್ಣ ಹಚ್ಚಿರುವುದಕ್ಕೆ ಹೆಮ್ಮೆಯಾಗುತ್ತಿದೆ‘‘ ಎಂದಿದ್ದಾರೆ.

ಈ ಚಿತ್ರದ ಟೀಸರ್​ ಅನ್ನು ಕರಣ್​ ಜೋಹರ್​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸ್ವಾತಂತ್ರ್ಯ ಹೋರಾಟದ ತೆರೆಮರೆಯ ನಾಯಕರು ಎಂದಿದ್ದಾರೆ. ಇನ್ನು ಚಿತ್ರದ ಬಗ್ಗೆ ಮಾತನಾಡಿರುವ ನಟಿ ಸಾರಾ, ಈ ಚಿತ್ರದಲ್ಲಿ ತಾವು ಭಾಗಿಯಾಗಿರುವುದು ಖುಷಿ ಜೊತೆ ಗೌರವ ಕೂಡ ಮೂಡಿದೆ. ಧರ್ಮೆಟಿಂಗ್​ ಎಂಟರ್​ಟೈನ್​ಮೆಂಟ್​ ಮತ್ತಿ ಪ್ರೈಮ್​ ವಿಡಿಯೋ ಈ ಅವಕಾಶ ನೀಡಿರುವುದು ಸಂತಸ ತಂದಿದೆ. ನಟಿ ಅದಕ್ಕಿಂತಲೂ ಭಾರತೀಯಳಾಗಿರುವ ನಾನು, ಇಂತಹ ಧೈರ್ಯವಂತ, ಧೀರ ಪಾತ್ರಕ್ಕೆ ಬಣ್ಣ ಹಚ್ಚಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ.

ಬಾಂಬೆಯಲ್ಲಿನ ಕಾಲೇಜು ವಿದ್ಯಾರ್ಥಿಯೊಬ್ಬಳು ಹೇಗೆ ಸ್ವಾತಂತ್ರ್ಯ ಹೋರಾಟಗಾರ್ತಿಯಾದರು ಎಂಬ ನೈಜ ಕಥೆಯನ್ನು ಈ ಚಿತ್ರ ಹೊಂದಿದೆ. ದೇಶಕ್ಕಾಗಿ ಹೋರಾಡಿದ, ತ್ಯಾಗ ಮಾಡಿದ ಅನೇಕ ಧೈರ್ಯವಂತ ಯುವ ಜನತೆಯ ಸ್ಟೋರಿ ಹೇಳುತ್ತಿರುವುದು ಮತ್ತೊಂದು ವಿಶೇಷ.

ಇದನ್ನೂ ಓದಿ: ಪಠಾಣ್​ ರಿಲೀಸ್​ಗೆ ಇನ್ನೆರಡೇ ದಿನ ಬಾಕಿ: ಅಭಿಮಾನಿಗಳಿಗೆ ಶುಭಾಶಯ ಕೋರಿದ ಶಾರುಖ್​ ಖಾನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.