ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಿತ್ರದಲ್ಲಿ ಅಭಿನಯಿಸಿರುವ ಸಪ್ತಮಿ ಗೌಡ ಸಿಂಗಾರ ಸಿರಿಯೇ ಹಾಡಿನಿಂದ ಜನಪ್ರಿಯತೆ ಗಳಿಸುತ್ತಿದ್ದಾರೆ. ಮಂಗಳೂರಿನ ಕಂಬಳ ಓಟದ ಕಥೆ ಹೇಳುವ ಚಿತ್ರ ಇದಾಗಿದ್ದು, ಸೆಪ್ಟೆಂಬರ್ 30ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದೆ. ಬಿಡುಗಡೆಗೂ ಮುನ್ನವೇ ಟೀಸರ್ ಮತ್ತು ಹಾಡಿನಿಂದ ಸೌಂಡ್ ಮಾಡುತ್ತಿರುವ ಕಾಂತಾರ ಸಿನಿಮಾ ಕನ್ನಡ ಸಿನಿರಸಿಕರ ಮನ ಗೆದ್ದಿದೆ. ರಿಷಬ್ಗೆ ಜೋಡಿಯಾಗಿ ಕಾಣಿಸಿಕೊಂಡಿರುವ ಸಪ್ತಮಿ ಗೌಡ ಸಿಂಗಾರ ಸಿರಿಯೇ ಹಾಡಿನ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.
![Actress Saptami Gowda](https://etvbharatimages.akamaized.net/etvbharat/prod-images/16132870_news.jpg)
ಬೆಂಗಳೂರಿನವರಾದ ಸಪ್ತಮಿಗೌಡ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ ಉಮೇಶ್ ಅವರ ಪುತ್ರಿ. ಇವರು ದುನಿಯಾ ಸೂರಿ ನಿರ್ದೇಶನದ, ಧನಂಜಯ್ ಅಭಿನಯದ ಪಾಪ್‌ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.
![Actress Saptami Gowda](https://etvbharatimages.akamaized.net/etvbharat/prod-images/16132870_dfbge4rng.jpg)
ಸದ್ಯ ಈ ಸಿನಿಮಾದಲ್ಲಿ ಧನಂಜಯ್ ಜೊತೆ ಮಾಸ್ ಡೈಲಾಗ್ ಹೇಳುವ ಮೂಲಕ ಸಖತ್ ಸುದ್ದಿಯಾಗಿದ್ದಾರೆ. ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಕೂಡ ಸಪ್ತಮಿ ಗೌಡ ಅವರ ಡೈಲಾಗ್‌ಗಳನ್ನು ಕಂಡು ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ಹೊಡೆದಿದ್ದರು.
- " class="align-text-top noRightClick twitterSection" data="">
ಸಿಂಗಾರ ಸಿರಿಯೇ ಹಾಡು ಸದ್ಯ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. ಸಿನಿಮಾ ಅಲ್ಲದೇ ಫಿಟ್ನೆಸ್, ಅಡ್ವೆಂಚರ್ಸ್ ಬಗ್ಗೆ ಕ್ರೇಜ್ ಹೊಂದಿರುವ ಸಪ್ತಮಿ ಗೌಡ ಫಿಟ್‌ನೆಸ್‌ಗೆ ತುಂಬಾನೇ ಮಹತ್ವ ಕೊಡ್ತಾರಂತೆ. ಇನ್ನೂ ಹೆಚ್ಚು ತೂಕ ಇರುವ ವಿಭಿನ್ನ ಪಾತ್ರಗಳನ್ನು ಮಾಡುವ ಹಂಬಲ ನಟಿ ಸಪ್ತಮಿ ಗೌಡ ಅವರಿಗೆ ಇದೆಯಂತೆ. ಸಿಂಗಾರ ಸಿರಿಯೇ ಹಾಡಿನ ಯಶಸ್ಸು, ಸಿನಿಮಾದ ಬಿಡುಗಡೆಗೆ ಸಜ್ಜಾಗಿರುವ ಸಪ್ತಮಿಗೌಡ ಹೆಸರಿಡದ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರಂತೆ.
ಇದನ್ನೂ ಓದಿ: 18 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದ ಕಾಂತಾರ ಚಿತ್ರದ ಸಿಂಗಾರ ಸಿರಿಯೆ ಹಾಡು