ETV Bharat / entertainment

ಶಾಕುಂತಲಂ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ.. ವೇದಿಕೆ ಮೇಲೆಯೇ ಕಣ್ಣೀರಿಟ್ಟ ನಟಿ ಸಮಂತಾ

ನಟಿ ಸಮಂತಾ ಮಯೋಸಿಟಿಸ್​ನಿಂದಾಗಿ ಬಹಳ ದಿನಗಳಿಂದ ಮಾಧ್ಯಮಗಳಿಂದ ದೂರ ಉಳಿದಿದ್ದ ಅವರು ಸೋಮವಾರ ಮಧ್ಯಾಹ್ನ ನಡೆದ ಶಾಕುಂತಲಂ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಗುಣಶೇಖರ್ ಮಾತಿಗೆ ಕಣ್ಣೀರಿಟ್ಟರು.

Actress Samantha was emotional  Samantha was emotional on trailer release program  trailer release program of Shakunthalam  ಶಾಕುಂತಲಂ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ  ವೇದಿಕೆ ಮೇಲೆಯೇ ಕಣ್ಣೀರಿಟ್ಟ ನಟಿ ಸಮಂತಾ  ಶಾಕುಂತಲಂ ಚಿತ್ರದ ಟ್ರೇಲರ್ ಬಿಡುಗಡೆ  ಮಾಧ್ಯಮಗಳಿಗೆ ಮುಖ ದರ್ಶನ ನೀಡಿದ ನಟಿ ಸಮಂತಾ  ಟ್ರೇಲರ್​ ಬಿಡುಗಡೆ ವೇಳೆ ವೇದಿಕೆಯ ಮೇಲೆಯೇ ಭಾವೂಕರಾದ ಕ್ಷಣ  ಮಹೇಶ್​ ಬಾಬು ಅಭಿನಯದ ಸೂಪರ್​ ಹಿಟ್​ ಚಿತ್ರ  ಒಳ್ಳೆಯ ಕಂಟೆಂಟ್ ಇದ್ದರೆ ಸಿನಿಮಾಗಳು ಇಷ್ಟವಾಗುತ್ತವೆ  ನಮ್ಮ ಸಿನಿಮಾ ಶೀಘ್ರದಲ್ಲೇ ಬಿಡುಗಡೆ
ವೇದಿಕೆ ಮೇಲೆಯೇ ಕಣ್ಣೀರಿಟ್ಟ ನಟಿ ಸಮಂತಾ
author img

By

Published : Jan 9, 2023, 2:42 PM IST

ಹೈದರಾಬಾದ್​: ಬಹಳ ದಿನಗಳ ನಂತರ ಮಾಧ್ಯಮಗಳಿಗೆ ಮುಖ ದರ್ಶನ ನೀಡಿದ ನಟಿ ಸಮಂತಾ ಇಂದು ನಡೆದ ತಮ್ಮ ಚಿತ್ರದ ಟ್ರೇಲರ್​ ಬಿಡುಗಡೆ ವೇಳೆ ವೇದಿಕೆಯ ಮೇಲೆಯೇ ಭಾವುಕರಾದ ಕ್ಷಣ ಕಂಡುಬಂತು. ಮಯೋಸಿಟಿಸ್​ನಿಂದಾಗಿ ಮಾಧ್ಯಮಗಳಿಂದ ದೂರ ಉಳಿದಿದ್ದ ನಟಿ ಸ್ಯಾಮ್​ ಸೋಮವಾರ ಮಧ್ಯಾಹ್ನ ನಡೆದ ‘ಶಾಕುಂತಲಂ’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ, ಕಥೆಗಾರ ಮತ್ತು ನಿರ್ದೇಶಕರಾಗಿರುವ ಗುಣಶೇಖರ್ ಮಾತಿಗೆ ಕಣ್ಣೀರಿಟ್ಟರು.

20 ವರ್ಷಗಳ ನಂತರ ಮಹೇಶ್​ ಬಾಬು ಅಭಿನಯದ ಸೂಪರ್​ ಹಿಟ್​ ಚಿತ್ರ ‘ಒಕ್ಕಡು’ ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಆ ಚಿತ್ರವನ್ನು ಅಭಿಮಾನಿಗಳು ಅದ್ದೂರಿಯಿಂದ ಬರ ಮಾಡಿಕೊಂಡಿದ್ದಾರೆ. ಒಕ್ಕಡು ಚಿತ್ರವನ್ನು ಮತ್ತೆ ಬೆಂಬಲಿಸಿದ್ದಕ್ಕೆ ಧನ್ಯವಾದಗಳು. ಒಳ್ಳೆಯ ಕಂಟೆಂಟ್ ಇದ್ದರೆ ಸಿನಿಮಾಗಳು ಇಷ್ಟವಾಗುತ್ತವೆ ಎನ್ನುವುದಕ್ಕೆ ಈ ಸಿನಿಮಾ ಉದಾಹರಣೆ ಎಂದು ಕಥೆಗಾರ ಮತ್ತು ನಿರ್ದೇಶಕರಾಗಿರುವ ಗುಣಶೇಖರ್ ಹೇಳಿದರು.

  • " class="align-text-top noRightClick twitterSection" data="">

'ಶಾಕುಂತಲಂ'ಗೆ ಮೂವರು ನಾಯಕರಿದ್ದಾರೆ. ಕಥೆಯ ನಾಯಕ ದೇವ್ ಮೋಹನ್ ಆಗಿದ್ದರೆ, ಈ ಸಿನಿಮಾದ ನಾಯಕಿ ಸಮಂತಾ. ದಿಲ್ ರಾಜು ತೆರೆಮರೆಯ ನಾಯಕ. ಈ ಸಿನಿಮಾದ ಕ್ರೆಡಿಟ್ ಅನ್ನು ದಿಲ್ ರಾಜು ಅವರಿಗೆ ನೀಡುತ್ತೇನೆ. ‘ಶಾಕುಂತಲಂ’ ವಿಚಾರದಲ್ಲಿ ಪ್ರೇಕ್ಷಕರ ನಂಬಿಕೆಗೆ ಸ್ವಲ್ಪವೂ ಧಕ್ಕೆಯಾಗುವುದಿಲ್ಲ. ನನ್ನ ಪಕ್ಕದಲ್ಲಿ ದಿಲ್ ರಾಜು ಇದ್ದುದರಿಂದ ನಾನು ಬಯಸಿದ ಚಿತ್ರದ ಚಿತ್ರೀಕರಣಕ್ಕೆ ಅವಕಾಶವಾಯಿತು ಎಂದರು.

ನನ್ನ ಮಗಳು ಭಾರತಕ್ಕೆ ಬಂದ ಕೂಡಲೇ ನಿರ್ಮಾಪಕಿಯಾಗಬೇಕೆಂದು ನಿರ್ಧರಿಸಿದಳು. ಅವಳು ನನಗೆ ಅದೇ ವಿಷಯವನ್ನು ಹೇಳಿದರು ಮತ್ತು ಕಥೆಗಳನ್ನು ಕೇಳಿದಳು. ಆಗ ನಾನು ‘ಶಾಕುಂತಲಂ’ ಕಥೆ ಹೇಳಿದ್ದೆ. ನೀಲಿಮಾ ಅವರು ಪುರಾಣಗಳಿಂದ ಇಂತಹ ಅನೇಕ ಅದ್ಭುತ ಕಥೆಗಳನ್ನು ಇಂದಿನ ಜನರಿಗೆ ಹೇಳಲು ಬಯಸಿದ್ದರು ಎಂದರು.

ಶಕುಂತಲಾ ಪಾತ್ರದಲ್ಲಿ ಸಮಂತಾ ಚೆನ್ನಾಗಿ ಹೊಂದಾಣಿಕೆಯಾಗುತ್ತೆ ಎಂದು ತಿಳಿದೆವು. ಹಾಗಾಗಿ ಸ್ಯಾಮ್​ಗೆ ಕಥೆ ಹೇಳಿದೆ. ಅವಳಿಗೆ ಕಥೆ ತುಂಬಾ ಇಷ್ಟವಾಯಿತು. ನಂತರ ದಿಲ್ ರಾಜು ಈ ಯೋಜನೆಯ ಭಾಗವಾದರು. ಒಬ್ಬ ನಾಯಕಿಯನ್ನು ನಂಬಿ ಇಷ್ಟು ಕೋಟಿ ಖರ್ಚು ಮಾಡಿದ್ದಾನೆ. ಅದಕ್ಕೆ ಧನ್ಯವಾದ ಎಂದು ಗುಣಶೇಖರ್ ಭಾವುಕರಾದರು. ಅಲ್ಲಿದ್ದ ಸಮಂತಾ ಅವರ ಮಾತುಗಳಿಂದ ಕಣ್ಣೀರು ಹಾಕಿದರು.

Actress Samantha was emotional  Samantha was emotional on trailer release program  trailer release program of Shakunthalam  ಶಾಕುಂತಲಂ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ  ವೇದಿಕೆ ಮೇಲೆಯೇ ಕಣ್ಣೀರಿಟ್ಟ ನಟಿ ಸಮಂತಾ  ಶಾಕುಂತಲಂ ಚಿತ್ರದ ಟ್ರೇಲರ್ ಬಿಡುಗಡೆ  ಮಾಧ್ಯಮಗಳಿಗೆ ಮುಖ ದರ್ಶನ ನೀಡಿದ ನಟಿ ಸಮಂತಾ  ಟ್ರೇಲರ್​ ಬಿಡುಗಡೆ ವೇಳೆ ವೇದಿಕೆಯ ಮೇಲೆಯೇ ಭಾವೂಕರಾದ ಕ್ಷಣ  ಮಹೇಶ್​ ಬಾಬು ಅಭಿನಯದ ಸೂಪರ್​ ಹಿಟ್​ ಚಿತ್ರ  ಒಳ್ಳೆಯ ಕಂಟೆಂಟ್ ಇದ್ದರೆ ಸಿನಿಮಾಗಳು ಇಷ್ಟವಾಗುತ್ತವೆ  ನಮ್ಮ ಸಿನಿಮಾ ಶೀಘ್ರದಲ್ಲೇ ಬಿಡುಗಡೆ
ಶಾಕುಂತಲಂ ಚಿತ್ರದ ಬರಹಗಾರ ಗುಣಶೇಖರ್​

ತಾಳ್ಮೆ ಇಲ್ಲದಿದ್ದರೂ ಬಂದೆ..: ಹಲವು ದಿನಗಳಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದೇವೆ. ನಮ್ಮ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಗುಣಶೇಖರ್ ಮೇಲಿನ ಗೌರವದಿಂದ ಇಲ್ಲಿಗೆ ಬಂದಿದ್ದೇನೆ. ಇಂದು ನಾನು ಹೇಗಾದರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರ್ಧರಿಸಿದೆ. ಕೆಲವರಿಗೆ ಸಿನಿಮಾ ಜೀವನದ ಒಂದು ಭಾಗ. ಆದರೆ, ಗುಣಶೇಖರ್​ಗೆ ಸಿನಿಮಾ ಎಂದರೆ ಪ್ರಾಣ. ಪ್ರತಿ ಸಿನಿಮಾದಂತೆ ಈ ಸಿನಿಮಾಕ್ಕೂ ಜೀವ ತುಂಬಿದ್ದಾರೆ ಎಂದರು.

ನೀವು ಅವರ ಮೇಲೆ ತೋರುವ ಪ್ರೀತಿಯನ್ನು ನೋಡಲು ನಾನು ಬಯಸುತ್ತೇನೆ. ನಟರು ಸಾಮಾನ್ಯವಾಗಿ ಕಥೆ ಕೇಳಿದಾಗ ಸಿನಿಮಾ ಅದ್ಭುತವಾಗಿರಬೇಕು ಎಂದು ಊಹಿಸುತ್ತಾರೆ. ಕೆಲವೊಮ್ಮೆ ಆ ಕಲ್ಪನೆಗೂ ಮೀರಿ ಅನೇಕ ಪವಾಡಗಳು ನಡೆಯುತ್ತವೆ. ‘ಶಾಕುಂತಲಂ’ ನೋಡಿದ ಮೇಲೆ ನನಗೂ ಅದೇ ಅನಿಸಿತು. ನಮ್ಮನ್ನು ಬೆಂಬಲಿಸಿದ್ದಕ್ಕಾಗಿ ದಿಲ್ ರಾಜು ಅವರಿಗೆ ಧನ್ಯವಾದಗಳು. ಈ ಸಿನಿಮಾದ ಭಾಗವಾಗಲು ನಾನು ಅದೃಷ್ಟಶಾಲಿ ಎಂದರು.

ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದರೂ ಒಂದಲ್ಲ ಒಂದು ಬದಲಾವಣೆ ಕಂಡಿದ್ದೇನೆ. ಈ ಸಿನಿಮಾದಿಂದ ನಿಮ್ಮ ಪ್ರೀತಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ ಎಂದು ಸಮಂತಾ ಹೇಳಿದರು. ಈ ಚಿತ್ರದಲ್ಲಿ ಸಮಂತಾ, ದೇವ್ ಮೋಹನ್, ಅಲ್ಲು ಅರ್ಜನ್​ ಮಗಳು ಅಲ್ಲು ಅರ್ಹ, ಸಚಿನ್ ಖೇಡೇಕರ್, ಕಬೀರ್ ಬೇಡಿ, ಡಾ.ಎಂ ಮೋಹನ್ ಬಾಬು, ಪ್ರಕಾಶ್ ರಾಜ್, ಮಧುಬಾಲಾ, ಗೌತಮಿ, ಅದಿತಿ ಬಾಲನ್, ಅನನ್ಯ ನಾಗಲ್ಲ, ಜಿಶು ಸೇನ್‌ಗುಪ್ತಾ ಸೇರಿದಂತೆ ಮುಂತಾದವರು ನಟಿಸಿದ್ದಾರೆ. ಈ ಚಿತ್ರವು ಫೆಬ್ರವರಿ 17, 2023 ರಂದು ಚಿತ್ರಮಂದಿರಗಳಿಗೆ ಅಪ್ಪಳಿಸಲಿದೆ.

ಓದಿ: ಹರ್ಷಿಕಾ, ರಾಧಿಕಾ 'ಸಂಕ್ರಾಂತಿ ತಕಥೈ': ಹಬ್ಬಕ್ಕೆ ವಿಶೇಷ ಹಾಡು ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.