ETV Bharat / entertainment

'ಟಾರ್ಚರ್​ ಟೈಮ್​': 'ಸಿಟಾಡೆಲ್'​ ಶೂಟಿಂಗ್​ ವೇಳೆ ಸಮಂತಾ ಹೀಗಂದ್ರು! - ಈಟಿವಿ ಭಾರತ ಕನ್ನಡ

ಐಸ್​ ಬಾತ್​ನಲ್ಲಿ ಕುಳಿತು ಫೋಟೋ ಹಂಚಿಕೊಂಡಿರುವ ಸಮಂತಾ 'ಟಾರ್ಚರ್​ ಟೈಮ್​' ಎಂದು ಬರೆದುಕೊಂಡಿದ್ದಾರೆ. ಈ ಸ್ಟೋರಿ ಸದ್ಯ ವೈರಲ್​ ಆಗಿದೆ.

samantha
ಸಿಟಾಡೆಲ್
author img

By

Published : May 2, 2023, 1:02 PM IST

ಬಹುಬೇಡಿಕೆಯ ನಟಿ ಸಮಂತಾ ರುತ್​ ಪ್ರಭು ಸದ್ಯ 'ಸಿಟಾಡೆಲ್'​ ಆ್ಯಕ್ಷನ್​ ವೆಬ್​ ಸೀರೀಸ್​ನಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಸರಣಿಗಾಗಿ ಅವರು ಕಠಿಣ ಸಾಹಸಗಳನ್ನು ಮಾಡುತ್ತಿದ್ದಾರೆ. ಈ ಹಿಂದೆ ಚಿತ್ರೀಕರಣದ ವೇಳೆ ತಮ್ಮ ಎರಡೂ ಕೈಗಳಿಗಾದ ಗಾಯಗಳ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದರು. ಇದೀಗ ಮತ್ತೆ ಇನ್​ಸ್ಟಾದಲ್ಲಿ ಸ್ಟೋರಿ ಹಾಕಿಕೊಂಡಿದ್ದು, 'ಟಾರ್ಚರ್​ ಟೈಮ್​' ಅಂತ ಬರೆದುಕೊಂಡಿದ್ದಾರೆ. ಐಸ್​ ಬಾತ್​ನಲ್ಲಿ ಕುಳಿತಿರುವ ಫೋಟೋ ಇದಾಗಿದೆ.

samantha
'ಟಾರ್ಚರ್​ ಟೈಮ್​'..'ಸಿಟಾಡೆಲ್'​ ಶೂಟಿಂಗ್​ ವೇಳೆ ಸಮಂತಾ ಹೀಗಂದ್ರು!

ಸಾಹಸ ದೃಶ್ಯಗಳಲ್ಲಿ ನಟಿಸುತ್ತಿರುವ ಸ್ಯಾಮ್​ ಇದೊಂದು ಟಾರ್ಚರ್​ ಇದ್ದಂತೆ ಎಂದಿದ್ದಾರೆ. ಇಷ್ಟೆಲ್ಲಾ ಕಷ್ಟಪಡುತ್ತಿರುವ ಸಮಂತಾ ಅವರಿಗೆ ಸಿಟಾಡೆಲ್​ ಯಾವ ರಿಸಲ್ಟ್​ ಕೊಡುತ್ತೆ ಅನ್ನೋದನ್ನು ಕಾದು ನೋಡಬೇಕಿದೆ. ಇನ್ನು, ಸಿಟಾಡೆಲ್​ ಇಂಟರ್​ನ್ಯಾಷನಲ್​ ವೆಬ್​ ಸೀರೀಸ್ ಆಗಿದೆ. ಇಂಗ್ಲಿಷ್​ ಆವೃತ್ತಿಯಲ್ಲಿ (ಹಾಲಿವುಡ್​) ಗ್ಲೋಬಲ್​ ಐಕಾನ್​ ಪ್ರಿಯಾಂಕಾ ಚೋಪ್ರಾ ನಟಿ ನಟಿಸಿದ್ದಾರೆ. ಭಾರತೀಯ ಆವೃತ್ತಿಯಲ್ಲಿ ಸಮಂತಾ ನಟಿಸುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ನಟಿಸಿರುವ ಈ ಸರಣಿಯು ಈಗಾಗಲೇ ಏಪ್ರಿಲ್​ 28 ರಂದು ಅಮೆಜಾನ್​ನಲ್ಲಿ ಬಿಡುಗಡೆಯಾಗಿದೆ.

ಇದರಲ್ಲಿ ಸಾಕಷ್ಟು ಬೋಲ್ಡ್​ ಕಂಟೆಂಟ್​ ದೃಶ್ಯಗಳೂ ಇವೆ. ಈ ಇಂಟಿಮೇಟ್​ ದೃಶ್ಯಗಳಲ್ಲಿ ನಟಿಸಲು ಸಾಕಷ್ಟು ತೊಂದರೆ ಅನುಭವಿಸಿದ್ದೆ ಎಂದು ಈ ಹಿಂದೆ ಪ್ರಿಯಾಂಕಾ ಚೋಪ್ರಾ ಹೇಳಿದ್ದರು. ಭಾರತೀಯ ಆವೃತ್ತಿಯ ಸರಣಿಯಲ್ಲೂ ವರುಣ್​ ಧವನ್​ ಮತ್ತು ಸಮಂತಾ ನಡುವೆ ಅಂತಹ ಬೋಲ್ಡ್​ ದೃಶ್ಯಗಳು ಇರಲಿವೆ ಎಂದು ಹೇಳಲಾಗುತ್ತಿದೆ. ಆದರೆ ಭಾರತೀಯ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಡೋಸ್​ ಕಡಿಮೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿಟಾಡೆಲ್​ ವೆಬ್​ ಸೀರೀಸ್​ ಅನ್ನು 'ದಿ ಫ್ಯಾಮಿಲಿ ಮ್ಯಾನ್'​ ಖ್ಯಾತಿಯ ರಾಜ್​ ಮತ್ತು ಡಿಕೆ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: 'ಜೀವನದಲ್ಲಿ ಯಾವುದರ ಬಗ್ಗೆಯೂ ವಿಷಾದವಿಲ್ಲ, ಎಲ್ಲವೂ ಪಾಠವಷ್ಟೇ': ನಟ ನಾಗ ಚೈತನ್ಯ ಹೀಗಂದಿದ್ಯಾಕೆ?

ಐಟಿ ಉದ್ಯೋಗಿಯಾದ ಸಮಂತಾ: ಸಮಂತಾ ಅವರು 'ಖುಷಿ' ಸಿನಿಮಾ ವಿಚಾರವಾಗಿಯೂ ಸುದ್ದಿಯಲ್ಲಿದ್ದಾರೆ. ಟಾಲಿವುಡ್​ ಹ್ಯಾಂಡ್ಸಮ್​ ಕಿಂಗ್​ ವಿಜಯ್​ ದೇವರಕೊಂಡ ಜೊತೆ ನಾಯಕಿಯಾಗಿ ಸ್ಯಾಮ್​ ನಟಿಸುತ್ತಿದ್ದಾರೆ. ಚಿತ್ರದಲ್ಲಿ ನಟಿ ಐಟಿ ಉದ್ಯೋಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ 'ಖುಷಿ' ಚಿತ್ರತಂಡ ಸಿನಿಮಾ ಪೋಸ್ಟರ್​ ಬಿಡುಗಡೆ ಮಾಡಿತ್ತು. ಇದು ಅಪಾರ ಸಿನಿಪ್ರೇಕ್ಷಕರನ್ನು ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸುಮಾರು 13 ವರ್ಷಗಳ ಹಿಂದೆ ಸಮಂತಾ 'ಏ ಮಾಯಾ ಚೇಸಾವೆ' ಚಿತ್ರದಲ್ಲಿ ಐಟಿ ಉದ್ಯೋಗಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರ ಸೂಪರ್​ ಹಿಟ್​ ಆಗಿತ್ತು.

ಮಲಯಾಳಂ ನಟ ಜಯರಾಮ್​, ಮರಾಠಿ ನಟ ಸಚಿನ್​ ಖಡೇಕರ್​ ಮುಂತಾದವರು ನಟಿಸುತ್ತಿದ್ದಾರೆ. ಸೆಪ್ಟೆಂಬರ್​ 1 ರಂದು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಮೈತ್ರಿ ಮೂವಿ ಬ್ಯಾನರ್​ ಅಡಿಯಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ಮಜಿಲಿ ಹಿಟ್​ ನಿರ್ದೇಶಕ ಶಿವ ನರ್ವಣ ನಿರ್ದೇಶಿಸುತ್ತಿದ್ದಾರೆ. ನವೀನ್​ ಯೆರ್ನೇನಿ ಮತ್ತು ಯಲಮಂಚಿಲಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಇದಕ್ಕೂ ಮುನ್ನ ಅವರು ಶಾಕುಂತಲಂ ಚಿತ್ರದಲ್ಲಿ ನಟಿಸಿದ್ದರು. ಇದು ನಿರೀಕ್ಷಿತ ಮಟ್ಟದಲ್ಲಿ ಸಕ್ಸಸ್​ ಕಂಡಿಲ್ಲ.

ಇದನ್ನೂ ಓದಿ: ಮೆಟ್ ಗಾಲಾ 2023: ರೆಡ್ ಕಾರ್ಪೆಟ್​ ಮೇಲೆ ಪ್ರಿಯಾಂಕಾ, ಆಲಿಯಾ, ಇಶಾ ಅಂಬಾನಿ ಝಲಕ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.