ETV Bharat / entertainment

ಯಶೋದಾ ಸಿನಿಮಾ ಟೀಸರ್ ರಿಲೀಸ್​... ಹೊಸ ಅವತಾರದಲ್ಲಿ ನಟಿ ಸಮಂತಾ ರುತ್ ಪ್ರಭು - Yashoda movie

ಯಶೋದಾ ಸಿನಿಮಾ ಟೀಸರ್ ರಿಲೀಸ್ ಆಗಿದೆ. ಸಮಂತಾ ಗರ್ಭಿಣಿಯಾಗಿ ಕಾಣಿಸಿಕೊಂಡಿದ್ದಾರೆ. ಅನಿವಾರ್ಯ ಮತ್ತು ಅತ್ಯಂತ ಅಪಾಯಕಾರಿ ಸಂದರ್ಭಗಳನ್ನು ಸಮಂತಾ ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಈ ಟೀಸರ್​ನಲ್ಲಿ ನೋಡಬಹುದು.

Actress Samantha starrer Yashoda movie teaser released
ಯಶೋದಾ ಸಿನಿಮಾ ಟೀಸರ್ ರಿಲೀಸ್
author img

By

Published : Sep 9, 2022, 3:51 PM IST

Updated : Sep 9, 2022, 4:10 PM IST

ಬಹುಬೇಡಿಕೆ ನಟಿ ಸಮಂತಾ ರುತ್ ಪ್ರಭು ಅಭಿನಯದ ಯಶೋದಾ ಸಿನಿಮಾ ಟೀಸರ್ ರಿಲೀಸ್ ಆಗಿದೆ. ಪ್ರೇಕ್ಷಕರು ಹಿಂದೆಂದೂ ನೋಡಿರದ, ಹೊಸ ಅವತಾರದಲ್ಲಿ ನಟಿ ಸಮಂತಾ ಕಾಣಿಸಿಕೊಂಡಿದ್ದಾರೆ.

ಹೌದು, ಪ್ಯಾನ್ ಇಂಡಿಯಾ ಚಿತ್ರವಾದ 'ಯಶೋದಾ'ದಲ್ಲಿ ಸಮಂತಾ ಗರ್ಭಿಣಿಯಾಗಿ ಕಾಣಿಸಿಕೊಂಡಿದ್ದಾರೆ. ವೈದ್ಯರು ಯಾವುದನ್ನು ಬೇಡ ಎಂದು ಸಲಹೆ ನೀಡಿರುತ್ತಾರೋ ಅವನ್ನೇ ಮಾಡುತ್ತಿರುವುದನ್ನು ಟೀಸರ್​ನಲ್ಲಿ ನೋಡಬಹುದಾಗಿದೆ. ಸೀಟಿನ ಅಂಚಿಗೆ ಕೂರಿಸುವಂತ ರೋಮಾಂಚಕ ಆ್ಯಕ್ಷನ್ ದೃಶ್ಯಗಳಿರುವ ಈ ಟೀಸರ್​ನಲ್ಲಿ ಅನಿವಾರ್ಯ ಮತ್ತು ಅತ್ಯಂತ ಅಪಾಯಕಾರಿ ಸಂದರ್ಭಗಳನ್ನು ಸಮಂತಾ ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ನೋಡಬಹುದು. ಸಮಂತಾ ಈ ಹಿಂದಿನ ಚಿತ್ರಗಳಲ್ಲಿ ನಿರ್ವಹಿಸದಿರುವ ಪಾತ್ರವನ್ನು ಈ ಚಿತ್ರದಲ್ಲಿ ಮಾಡಿದ್ದಾರೆ ಎನ್ನುತ್ತದೆ ಚಿತ್ರಂಡ. ಅದು ಏನು ಮತ್ತು ಯಾಕೆ ಎಂದು ಟೀಸರ್ ಸುಳಿವು ನೀಡಿದೆ.

  • " class="align-text-top noRightClick twitterSection" data="">

ಇನ್ನೂ ಚಿತ್ರದಲ್ಲಿ ಉನ್ನಿಮುಕುಂದನ್​ ವೈದ್ಯರಾಗಿ ಕಾಣಿಸಿಕೊಂಡಿದ್ದಾರೆ. ಟೀಸರ್​ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ದೊಡ್ಡ ಬಜೆಟ್​ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಪ್ರತಿ ದೃಶ್ಯ ಸಹ ಶ್ರೀಮಂತವಾಗಿ ಮೂಡಿಬಂದಿದೆ ಎನ್ನುತ್ತಾರೆ ಚಿತ್ರತಂಡದವರು.

ಇದನ್ನೂ ಓದಿ: ಬಾಲಿವುಡ್ ಸೂಪರ್​ಸ್ಟಾರ್ ಅಕ್ಷಯ್ ಕುಮಾರ್ ಜನ್ಮದಿನ - ಬಾಲಿವುಡ್​ ಖಿಲಾಡಿಗೆ ಶುಭಾಶಯಗಳ ಮಹಾಪೂರ

ಯಶೋದಾ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಕ್ತಾಯದ ಹಂತ ತಲುಪಿದ್ದು, ಸದ್ಯದಲ್ಲೇ ವಿಶ್ವಾದ್ಯಂತ ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಪ್ರತಿಭಾವಂತ ನಿರ್ದೇಶಕ ಜೋಡಿ ಹರಿ-ಹರೀಶ್ ನಿರ್ದೇಶಿಸಿರುವ ಅದ್ಭುತ ಸಾಹಸ ದೃಶ್ಯಗಳನ್ನು ಹೊಂದಿರುವ ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರವನ್ನು ದೊಡ್ಡ ಬಜೆಟ್​​ನಲ್ಲಿ ನಿರ್ಮಿಸಲಾಗಿದೆ.

Actress Samantha
ನಟಿ ಸಮಂತಾ ರುತ್ ಪ್ರಭು

ಈ ಚಿತ್ರಕ್ಕೆ ಯಾವುದೇ ಕೊರತೆ ಉಂಟಾಗದಿರುವಂತೆ ನಿರ್ಮಾಪಕ ಶಿವಲೆಂಕ ಕೃಷ್ಣಪ್ರಸಾದ್ ನೋಡಿಕೊಂಡಿದ್ದು, ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಸಮಂತಾ ಜೊತೆಗೆ ವರಲಕ್ಷ್ಮೀ ಶರತ್​ ಕುಮಾರ್, ಉನ್ನಿ ಮುಕುಂದನ್ ಸೇರಿದಂತೆ ಪ್ರತಿಭಾವಂತ ಕಲಾವಿದರ ಬಳಗವಿದೆ. ಚಿತ್ರಕ್ಕೆ ‘ಮೆಲೋಡಿ ಬ್ರಹ್ಮ’ ಎಂದೇ ಖ್ಯಾತರಾದ ಮಣಿಶರ್ಮ ಸಂಗೀತ ಸಂಯೋಜಿಸಿದ್ದಾರೆ.

Last Updated : Sep 9, 2022, 4:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.