ETV Bharat / entertainment

ಸಿನಿಮಾಗಳಿಂದ ಬ್ರೇಕ್​.. ವಿರಾಮದ ದಿನಗಳಲ್ಲಿ ಸಮಂತಾ ರುತ್ ಪ್ರಭು ದಿನಚರಿ ಹೇಗಿರಲಿದೆ?

ಸಿನಿಮಾಗಳಿಂದ ಬ್ರೇಕ್​ ಪಡೆದಿರುವ ನಟಿ ಸಮಂತಾ ರುತ್ ಪ್ರಭು ಪ್ರವಾಸ, ಧ್ಯಾನ, ದೇವಸ್ಥಾನ, ಮೂವಿ ಟೈಮ್ ಎಂದು ಬ್ಯುಸಿಯಾಗಿದ್ದಾರೆ.

Samantha Ruth Prabhu
ಸಮಂತಾ ರುತ್ ಪ್ರಭು
author img

By

Published : Jul 22, 2023, 5:24 PM IST

ಸೌತ್​​ ಸಿನಿಮಾ ಇಂಡಸ್ಟ್ರಿಯ ಟಾಪ್​​ ನಟಿ ಸಮಂತಾ ರುತ್ ಪ್ರಭು ಅವರು ಸದ್ಯ ತಮ್ಮ ಆರೋಗ್ಯದ ಮೇಲೆ ಸಂಪೂರ್ಣ ಗಮನ ಹರಿಸುವ ಸಲುವಾಗಿ, ಸಿನಿಮಾಗಳಿಂದ ಕೊಂಚ ಬ್ರೇಕ್​ ಪಡೆದಿದ್ದಾರೆ. ಚೇತರಿಕೆ ನಂತರ ಹೊಸ ಪ್ರಾಜೆಕ್ಟ್​ಗಳ ಕಡೆಗೆ ಗಮನ ಹರಿಸಲಿದ್ದಾರೆ. ಸದ್ಯ ಪ್ರವಾಸ, ಧ್ಯಾನ, ದೇವಸ್ಥಾನ ಭೇಟಿ, ಮೂವಿ ಟೈಮ್​ ಎಂದು ಬ್ಯುಸಿಯಾಗಿದ್ದಾರೆ. ತಮ್ಮ ದಿನಚರಿಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಸನಿಹದಲ್ಲಿದ್ದಾರೆ.

Samantha Ruth Prabhu
ಸಮಂತಾ ರುತ್ ಪ್ರಭು ಇನ್​​ಸ್ಟಾ ಸ್ಟೋರಿ

ಹೌದು, ನಟಿ ಸಮಂತಾ ಈ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ. ಅವರಿಂದು ಹಂಚಿಕೊಂಡಿರುವ ಇನ್​ಸ್ಟಾ ಸ್ಟೋರಿ ಅಭಿಮಾನಿಗಳ ಗಮನ ಸೆಳೆದಿದೆ. ಚಿತ್ರಮಂದಿರದಲ್ಲಿ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಓಪನ್‌ಹೈಮರ್‌ (Oppenheimer) ಸಿನಿಮಾ ವೀಕ್ಷಿಸಿ ಎಂಜಾಯ್​ ಮಾಡಿದ್ದಾರೆ. ಆ ಫೋಟೋ ಶೇರ್ ಮಾಡಿರುವ ಅವರು, "8.45 am ಶೋ (ಹಾರ್ಟ್ ಎಮೋಜಿಯೊಂದಿಗೆ), ಗುಡ್​ ಲೈಫ್​ (ಸ್ಮೈಲ್ ಎಮೋಜಿ) #oppenheimer" ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ.

ಈವರೆಗೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದ ನಟಿ ತಮ್ಮ ಆರೋಗ್ಯದ ಮೇಲೆ ಸಂಪೂರ್ಣ ಗಮನ ಹರಿಸಲು ನಿರ್ಧರಿಸಿದ್ದಾರೆ. ಮಯೋಸಿಟಿಸ್ ಕಾಯಿಲೆ ವಿರುದ್ಧ ಹೋರಾಡುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಈ ಹಿನ್ನೆಲೆ ತಾವು ಒಪ್ಪಿಕೊಂಡ ಪ್ರಾಜೆಕ್ಟ್​ಗಳ ಶೂಟಿಂಗ್​ ಪೂರ್ಣಗೊಳಿಸಿದ್ದಾರೆ. ಆರೋಗ್ಯ ಸರಿಯಾದ ಬಳಿಕವಷ್ಟೇ ಮುಂದಿನ ಸಿನಿಮಾಗಳತ್ತ ಗಮನ ಹರಿಸಲಿದ್ದಾರೆ. ಸದ್ಯಕ್ಕೆ ಯಾವುದೇ ಚಿತ್ರಗಳಿಗೆ ಗ್ರೀನ್​ ಸಿಗ್ನಲ್​ ಕೊಟ್ಟಿಲ್ಲ. ತಮ್ಮ ಆರು ತಿಂಗಳ ಬ್ರೇಕ್​ ಅವಧಿಯಲ್ಲಿ ಸಮಂತಾ ಆರೋಗ್ಯ ಚೇತರಿಕೆಗೆ ಕ್ರಮ ಕೈಗೊಳ್ಳಲಿದ್ದಾರೆ. ಅಮೆರಿಕದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಕೂಡ ಹೇಳಲಾಗಿದೆ.

ಇತ್ತೀಚೆಗೆ ನಟಿ ತಮಿಳುನಾಡಿನ ವೆಲ್ಲೂರಿನ ಶ್ರೀಪುರಂ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ್ದರು. ಬಳಿಕ ಕೊಯಮತ್ತೂರಿನಲ್ಲಿರುವ ವೆಲ್ಲಿಯಂಗಿರಿಯ ಇಶಾ ಯೋಗ ಸೆಂಟರ್​ಗೆ ಭೇಟಿ ಕೊಟ್ಟರು. ಇಶಾ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್​ ಅವರ ಅಭಿಮಾನಿಯೂ ಆಗಿರುವ ​​ ನಟಿ ಸಮಂತಾ ರುತ್ ಪ್ರಭು ಇಶಾ ಯೋಗ ಸೆಂಟರ್​ಗೆ ಭೇಟಿ ಕೊಡುವ ಮೂಲಕ ಗಮನ ಸೆಳೆದರು. ಅಲ್ಲಿನ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ನಂತರ ಈರೋಡ್ ಪನ್ನಾರಿ ಅಮ್ಮನ್ ದೇವಸ್ಥಾನಕ್ಕೆ ಭೇಟಿ ಕೊಟ್ಟ ನಟಿ ವಿಶೇಷ ಪೂಜೆ ಸಲ್ಲಿಸಿ, ತೀರ್ಥ ಪ್ರಸಾದ ಸ್ವೀಕರಿಸಿದ್ದರು. ಹೀಗೆ, ಪ್ರವಾಸ, ಧ್ಯಾನ, ದೇವಸ್ಥಾನ, ಮೂವಿ ಟೈಮ್ ಎಂದು ನಟಿ ತಮ್ಮ ದಿನವನ್ನು ಉತ್ತಮವಾಗಿ ಕಳೆಯುತ್ತಿದ್ದಾರೆ. ​

ಇದನ್ನೂ ಓದಿ: Rashmika Mandanna: ವಾಶ್​​ರೂಮ್​ನಲ್ಲಿ ನ್ಯಾಶನಲ್​​ ಕ್ರಶ್​​ ಕ್ರಿಯೇಟಿವಿಟಿ!

ಸದ್ಯ ಬಿಡುಗಡೆಗೆ ಸಜ್ಜಾಗಿರುವ ಸಿನಿಮಾ 'ಕುಶಿ'. ಇತ್ತೀಚೆಗಷ್ಟೇ ಖುಷಿ ಶೂಟಿಂಗ್​ ಪೂರ್ಣಗೊಳಿಸಿದ್ದಾರೆ. ತೆಲುಗು ಸ್ಟಾರ್ ವಿಜಯ್ ದೇವರಕೊಂಡ ಅವರೊಂದಿಗೆ ಸ್ಕ್ರೀನ್​ ಶೇರ್ ಮಾಡಿದ್ದಾರೆ. ಶಿವ ನಿರ್ವಾಣ ನಿರ್ದೇಶನದಲ್ಲಿ ರೆಡಿಯಾಗಿರುವ ಈ ಸಿನಿಮಾ ಸೆಪ್ಟೆಂಬರ್ 1 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಸಿಟಾಡೆಲ್​ ನಟಿಯ ಮತ್ತೊಂದು ಪ್ರಾಜೆಕ್ಟ್​. ಈ ವೆಬ್​ ಸೀರಿಸ್​ನಲ್ಲಿ ಬಾಲಿವುಡ್​ ನಟ ವರುಣ್​ ಧವನ್​ ಜೊತೆ ತೆರೆ ಹಂಚಿಕೊಂಡಿದ್ದು, ನಟಿ ಪಾತ್ರದ ಚಿತ್ರೀಕರಣ ಪೂರ್ಣಗೊಂಡಿದೆ.

ಇದನ್ನೂ ಓದಿ: ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ.. ರಾಷ್ಟ್ರಾದ್ಯಂತ ಭರ್ಜರಿ ಪ್ರಚಾರ - ಪ್ರೇಮದಲೆಯಲ್ಲಿ ಮಿಂದೆದ್ದ ರಣ್​​ವೀರ್, ಆಲಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.