ETV Bharat / entertainment

ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ! - ರೇಣು ದೇಸಾಯಿ ಹೃದ್ರೋಗ

ಪವನ್ ಕಲ್ಯಾಣ್ ಮಾಜಿ ಪತ್ನಿ, ನಟಿ ರೇಣು ದೇಸಾಯಿ ಆನಾರೋಗ್ಯದಿಂದ ಬಳಲುತ್ತಿದ್ದಾರೆ.

Renu Desai health issues
ರೇಣು ದೇಸಾಯಿ ಅನಾರೋಗ್ಯ ಸಮಸ್ಯೆ
author img

By

Published : Feb 15, 2023, 2:17 PM IST

ನಟ ಪವನ್ ಕಲ್ಯಾಣ್ ಮಾಜಿ ಪತ್ನಿ, ನಟಿ ರೇಣು ದೇಸಾಯಿ ಅವರು ಹೃದಯ ಸಂಬಂಧಿತ ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನಾರೋಗ್ಯ ಸಮಸ್ಯೆಯನ್ನು ಶೇರ್​ ಮಾಡಿಕೊಂಡಿರುವ ನಟಿ ರೇಣು ದೇಸಾಯಿ, ಒರಟಾದ, ಕಷ್ಟಕರ ಸಮಯದಲ್ಲಿ ಶಕ್ತಿಯನ್ನು ಕಂಡುಕೊಳ್ಳುವುದು ಸುಲಭವಲ್ಲ. ಆದರೆ ನಂಬಿಕೆ ಇಡುತ್ತೇನೆ, ತನ್ನ ಪ್ರತೀ ಹೆಜ್ಜೆಯಲ್ಲಿ ಪ್ರತೀ ವಿಷಯಗಳನ್ನು ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ರೇಣು ದೇಸಾಯಿ ಇನ್​ಸ್ಟಾ ಪೋಸ್ಟ್: ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋವನ್ನು ಹಂಚಿಕೊಂಡಿರುವ ನಟಿ ರೇಣು ದೇಸಾಯಿ, "ನನ್ನ ಹತ್ತಿರದ ಮತ್ತು ಆತ್ಮೀಯರೆಲ್ಲರಿಗೂ ನಾನು ಕೆಲ ವರ್ಷಗಳಿಂದ ಹೃದಯ ಸಂಬಂಧಿತ ಮತ್ತು ಇತರೆ ಕೆಲ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ ಎಂಬುದು ತಿಳಿದಿದೆ. ಕೆಲವೊಮ್ಮೆ ಶಕ್ತಿಯನ್ನು ಕಂಡುಹಿಡಿಯುವುದು ತುಂಬಾ ಕಷ್ಟಕರವಾಗುತ್ತದೆ. ನಾನು ಮತ್ತು ತಮ್ಮ ಸ್ವಂತ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವ ಇತರೆ ಅನೇಕರು ಸೇರಿದಂತೆ ನಾವು ಬಲವಾಗಿರಬೇಕು ಮತ್ತು ಪ್ರಕ್ರಿಯೆಯಲ್ಲಿ ನಂಬಿಕೆಯನ್ನು ಇಟ್ಟುಕೊಳ್ಳಬೇಕು ಎಂಬುದನ್ನು ನೆನಪಿಸಲು ನಾನು ಇಂದು ಇಲ್ಲಿ ಈ ಪೋಸ್ಟ್ ಶೇರ್ ಮಾಡುತ್ತಿದ್ದೇನೆ'' ಎಂದಿದ್ದಾರೆ.

ನಿಮ್ಮ ಜೀವನದಲ್ಲಿ ಭರವಸೆ ಕಳೆದುಕೊಳ್ಳಬೇಡಿ. ನಮಗೆಂದೇ ಸಿಹಿ ಯೋಜನೆಗಳನ್ನು ಈ ಬ್ರಹ್ಮಾಂಡ ಹೊಂದಿದೆ. ನಗು ಇರಲಿ. (ಚಿಕಿತ್ಸೆಗಳು, ಔಷಧಿಗಳು, ಯೋಗ, ಪೋಷಣೆ ಇತ್ಯಾದಿಗಳು ನಡೆಯುತ್ತಿವೆ. ನಾನು ಸಹಜ ಜೀವನಕ್ಕೆ ಮರಳುತ್ತೇನೆ ಮತ್ತು ಶೀಘ್ರದಲ್ಲೇ ಶೂಟಿಂಗ್‌ಗೆ ವಾಪಸ್ಸಾಗುತ್ತೇನೆ) ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮರುಮದುವೆ ಸಂತಸದಲ್ಲಿ ಹಾರ್ದಿಕ್ ಪಾಂಡ್ಯ ದಂಪತಿ: ಪುತ್ರನಿಗೆ ಪೋಷಕರ ವಿವಾಹ ನೋಡುವ ಭಾಗ್ಯ

ಅಭಿಮಾನಿಗಳ ಹಾರೈಕೆ: ನಟಿ ರೇಣು ದೇಸಾಯಿ ತಮ್ಮ ಆರೋಗ್ಯ ಸಮಸ್ಯೆಯನ್ನು ಶೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡ ಕೂಡಲೇ ಅಭಿಮಾನಿಗಳು ಪ್ರತಿಕ್ರಿಯೆ ವ್ಯಕ್ತಪಡಿಸಿಲು ಆರಂಭಿಸಿದ್ದಾರೆ. ಶೀಘ್ರದಲ್ಲೇ ಗುಣಮುಖರಾಗಿ ಎಂಬ ಸಂದೇಶ ರವಾನಿಸುತ್ತಿದ್ದಾರೆ. ಅಭಿಮಾನಿಯೊಬ್ಬರು, "ಮೊದಲಿಗಿಂತಲೂ ಹೆಚ್ಚು ಶಕ್ತಿಯುತರಾಗಿ ಹಿಂತಿರುಗಿ" ಎಂದು ಬರೆದಿದ್ದಾರೆ. ಮತ್ತೋರ್ವ ಅಭಿಮಾನಿ, "ದೇವರು ನಿಮಗೆ ಬೇಕಾದ ಎಲ್ಲಾ ಶಕ್ತಿಯನ್ನು ನೀಡಲಿ, ಶೀಘ್ರದಲ್ಲೇ ಗುಣಮುಖರಾಗಲಿ" ಎಂದು ಬರೆದಿದ್ದಾರೆ.

ಇದನ್ನೂ ಓದಿ: ಬಹುನಿರೀಕ್ಷಿತ ಜೂಲಿಯೆಟ್‌ 2 ಟ್ರೇಲರ್​ ರಿಲೀಸ್​: ಆ್ಯಕ್ಷನ್​ ಅವತಾರದಲ್ಲಿ ಬೃಂದಾ ಆಚಾರ್ಯ

ನಟಿ ರೇಣು ಮತ್ತು ನಟ ಪವನ್ ಕಲ್ಯಾಣ್ 2009ರಲ್ಲಿ ದಾಂಪತ್ಯ ಜೀವನ ಆರಂಭಿಸಿದರು. 2012ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ಕೆಲಸದ ವಿಚಾರ ನೋಡುವುದಾದರೆ, ನಟಿ ರೇಣು ದೇಸಾಯಿ ಬದ್ರಿ, ಜೇಮ್ಸ್ ಪಾಂಡು ಮತ್ತು ಜಾನಿ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ರವಿತೇಜಾ ಅವರ ಮುಂಬರುವ ಚಿತ್ರ ಟೈಗರ್ ನಾಗೇಶ್ವರ ರಾವ್‌ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. 18 ವರ್ಷಗಳ ಬ್ರೇಕ್​ ನಂತರ ಅವರು ಶೀಘ್ರದಲ್ಲೇ ನಟನೆಗೆ ಮರಳಲಿದ್ದಾರೆ.

ಇದನ್ನೂ ಓದಿ: ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನಕ್ಕೆ ಸಮಂತಾ ಭೇಟಿ: 600 ಮೆಟ್ಟಿಲುಗಳಿಗೂ ಕರ್ಪೂರ ಹಚ್ಚಿ ಹೆಜ್ಜೆ ಹಾಕಿದ ನಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.