ETV Bharat / entertainment

ಯು ಐ ಸಿನಿಮಾ: ರಿಯಲ್ ಸ್ಟಾರ್​ ಉಪೇಂದ್ರಗೆ ಜೋಡಿಯಾದ ರೀಷ್ಮಾ ನಾಣಯ್ಯ - Reeshma Nanaiah movies

ಯು ಐ ಸಿನಿಮಾ ಮೇಲೆ ಸಿನಿಮಾ ಮಂದಿಯಲ್ಲಿ ನಿರೀಕ್ಷೆ ಹೆಚ್ಚುತ್ತಿದೆ. ತಾರಾಗಣದಲ್ಲಿ ರೀಷ್ಮಾ ನಾಣಯ್ಯ ಅವರಿದ್ದು ಉಪ್ಪಿಗೆ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದಾರೆ.

Reeshma Nanaiah
ನಟಿ ರೀಷ್ಮಾ ನಾಣಯ್ಯ
author img

By

Published : Jan 4, 2023, 12:23 PM IST

ಕೆಜಿಎಫ್​, ಕಾಂತಾರ ಸಿನಿಮಾಗಳ ಬಳಿಕ ಸ್ಯಾಂಡಲ್​ವುಡ್​ ಪ್ರತಿಷ್ಠೆ ಹೆಚ್ಚುತ್ತಿದೆ. ಕನ್ನಡ ಚಿತ್ರಗಳ ಮೇಲೆ ಇಡೀ ಭಾರತೀಯ ಚಿತ್ರರಂಗ ಗಮನಹರಿಸುತ್ತಿದೆ. ಉತ್ತಮ ಕಥೆಗಳ ಜೊತೆಗೆ ಮೇಕಿಂಗ್​ ವಿಷಯದಲ್ಲೂ ಸ್ಯಾಂಡಲ್​ವುಡ್​ ಹಿಂದೆ ಬಿದ್ದಿಲ್ಲ. ಇದೀಗ ಕನ್ನಡ ಮಾತ್ರವಲ್ಲದೇ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಯು ಐ ಚಿತ್ರದ ಮಾತುಗಳು ಕೇಳಲಾರಂಭಿಸಿವೆ.

ಯು ಐ ಸಿನಿಮಾ: ರಿಯಲ್ ಸ್ಟಾರ್ ಉಪೇಂದ್ರ ಅವರ ಸಿನಿಮಾ ಅಂದ್ಮೇಲೆ ನಿರೀಕ್ಷೆ ಕೊಂಚ ಹೆಚ್ಚೇ ಅಲ್ವಾ?. ಏಳು ವರ್ಷಗಳ ಬಳಿಕ 'ಬುದ್ಧಿವಂತ' ಸಿನಿಮಾ ಖ್ಯಾತಿಯ ಉಪೇಂದ್ರ ನಿರ್ದೇಶಕನ ಕ್ಯಾಪ್‌ ಧರಿಸುತ್ತಿರುವ ಬಹುನಿರೀಕ್ಷಿತ ಚಿತ್ರವಿದು. ಟೈಟಲ್ ಹಾಗು ಮೇಕಿಂಗ್​ನಿಂದ ಕ್ರೇಜ್ ಹುಟ್ಟಿಸಿರೋ ಯು ಐ ಸಿನಿಮಾದ ಅಡ್ಡದಿಂದ ಹೊಸ ಸುದ್ದಿಯೊಂದು ಸಿಕ್ಕಿದೆ.

Reeshma Nanaiah
ನಟಿ ರೀಷ್ಮಾ ನಾಣಯ್ಯ

ಮೂರು ನಾಮ ಶೈಲಿಯಲ್ಲಿ ಯು ಐ ಶೀರ್ಷಿಕೆ ಇಟ್ಟು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದ ಉಪೇಂದ್ರ ಅವರ ಈ ಸಿನಿಮಾಗೆ ನಾಯಕನಟಿ ಯಾರಾಗ್ತಾರೆ ಅಂತಾ ಗಾಂಧಿನಗರ ಅಲ್ಲದೇ ಇಡೀ ಸಿನಿಮಾರಂಗದಲ್ಲಿ ಬಿಸಿ ಬಿಸಿ ಚರ್ಚೆ ಆಗುತ್ತಿತ್ತು. ಮತ್ತೊಂದೆಡೆ, ಪರಭಾಷೆಯ ನಟಿಯನ್ನು ಕರೆ ತರುತ್ತಾರೆ ಎಂದೂ ಹೇಳಲಾಗುತ್ತಿತ್ತು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಉಪೇಂದ್ರಗೆ ಜೋಡಿಯಾದ ರೀಷ್ಮಾ ನಾಣಯ್ಯ: ಏಕ್ ಲವ್ ಯಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರೀಷ್ಮಾ ನಾಣಯ್ಯ ಅವರು ಉಪೇಂದ್ರ ನಟಿಸಿ, ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕೆ ನಾಯಕ ನಟಿಯಾಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಾನ ದಾರಿಯಲ್ಲಿ ಸಿನಿಮಾದಲ್ಲಿ ರೀಷ್ಮಾ ನಾಣಯ್ಯ ಅಭಿನಯಿಸಿದ್ದು, ಈಗ ಉಪೇಂದ್ರ ಜೊತೆ ನಟಿಸುವ ಬಂಪರ್ ಆಫರ್ ಪಡೆದಿದ್ದಾರೆ.

ರೀಷ್ಮಾ ನಾಣಯ್ಯ ಮಾತನಾಡಿ, 'ನಾನು ಉಪೇಂದ್ರ ಸರ್​ಗೆ ಹೀರೋಯಿನ್ ಆಗಿ ಸೆಲೆಕ್ಟ್ ಆಗಿದ್ದಕ್ಕೆ ಎಕ್ಸೈಟ್ ಆಗಿದ್ದೇನೆ. ಒಂದು ರೀತಿ ಶಾಕ್​​ನಲ್ಲೇ ಇದ್ದೇನೆ. ಈಗಾಗಲೇ 10 ದಿನಗಳ ಕಾಲ ಚಿತ್ರೀಕರಣ ಕೂಡ ಮಾಡಿದ್ದಾರೆ. ಇಂತಹ ಅವಕಾಶ ಪಡೆದುಕೊಂಡ ನಾನು ನಿಜಕ್ಕೂ ಅದೃಷ್ಟವಂತೆ. ಉಪೇಂದ್ರ ಸರ್ ಸಿನಿಮಾಗಳನ್ನು ನೋಡಿಕೊಂಡು ಬೆಳೆದವಳು. ನಾನು ಅವರ ದೊಡ್ಡ ಫ್ಯಾನ್. ಈಗ ಅವರು ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ನಾಯಕಿಯಾಗಿದ್ದೇನೆ' ಎಂದು ಸಂತಸ ಹಂಚಿಕೊಂಡರು.

ಇದನ್ನೂ ಓದಿ: ಅಬ್ಬಬ್ಬಾ.. ಒಂದೇ ಒಂದು ದೃಶ್ಯಕ್ಕೆ 400 ಕ್ಯಾಮರಾ ಬಳಸಿದ ಉಪ್ಪಿ!

'ಈ ಸಿನಿಮಾಗೆ ಬಾಲಿವುಡ್ ನಾಯಕಿ ಸೇರಿದಂತೆ, ಪರಭಾಷೆಯ ನಾಯಕಿಯರನ್ನು ಕರೆತಬೇಕಂದು ನಿರ್ದೇಶಕ ಉಪೇಂದ್ರ ಹಾಗು ನನಗೆ ಆಸೆಯಿತ್ತು.‌ ಆದರೆ ಉಪೇಂದ್ರ ಅವರು ನಮ್ಮ ಕನ್ನಡದ ಹುಡುಗಿಯೇ ಇರಲಿ ಎಂದು ರೀಷ್ಮಾ ನಾಣಯ್ಯ ಅವರನ್ನು ಆಯ್ಕೆ ಮಾಡಿದ್ದಾರೆ' ಎಂದು ನಿರ್ಮಾಪಕ ಕೆ.ಪಿ ಶ್ರೀಕಾಂತ್ ಹೇಳಿದ್ದಾರೆ. ಟಗರು ಸಿನಿಮಾ ಖ್ಯಾತಿಯ ಕೆ.ಪಿ.ಶ್ರೀಕಾಂತ್ ಹಾಗು ಲಹರಿ ಸಂಸ್ಥೆಯ ಮನೋಹರ್ ಸಹಯೋಗದಲ್ಲಿ 100 ಕೋಟಿ ರೂ ಬಜೆಟ್​​ನಲ್ಲಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ.

ಇದನ್ನೂ ಓದಿ: 'ಮೆಲ್ಲುಸಿರೆ ಸವಿಗಾನ'ಕ್ಕೆ ಹೆಜ್ಜೆ ಹಾಕಲು ಅಪ್ಪಾಜಿ, ಲೀಲಾವತಿ ಅಮ್ಮ ಕಾರಣ: ರೀಷ್ಮಾ ನಾಣಯ್ಯ

ರೀಷ್ಮಾ ನಾಣಯ್ಯ ಏಕ್​​ ಲವ್​​ ಯಾ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಾಣಾ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ಬಿಡುಗಡೆಗೆ ಸಜ್ಜಾಗಿರುವ ಸ್ಪೂಕಿ ಕಾಲೇಜ್​ ಸಿನಿಮಾದ ಹಾಡೊಂದರಲ್ಲಿ ಸೊಂಟ ಬಳುಕಿಸಿದ್ದಾರೆ. ಮೆಲ್ಲುಸಿರೆ ಸವಿಗಾನ ಹಾಡು ಬಿಡುಗಡೆಯಾಗಿ ಉತ್ತಮ ವೀಕ್ಷಣೆ ಕಂಡಿದೆ. ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರ ನಟನೆಯ ವಾಮನ, ಬಾನ ದಾರಿಯಲ್ಲಿ ಸಿನಿಮಾ ಬಿಡುಗಡೆ ಆಗಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.