ಬೆಂಗಳೂರು: ಈ ಹಿಂದೆ ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚಿದ್ದ ಮೋಹಕ ತಾರೆ ರಮ್ಯಾ, ನಂತರ ರಾಜಕೀಯದಲ್ಲಿ ತೊಡಗಿಸಿಕೊಂಡರು. ಸದ್ಯ ರಾಜಕೀಯ ಮತ್ತು ಸಿನಿಮಾ ಕ್ಷೇತ್ರದಿಂದ ದೂರ ಉಳಿದಿರುವ ಅವರು ಸಮಾಜದಲ್ಲಿನ ಅಂಕುಡೊಂಕುಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಧ್ವನಿ ಎತ್ತುತ್ತಿದ್ದಾರೆ. ಆಗಾಗ ಕನ್ನಡ ಸಿನಿಮಾಗಳಿಗೆ ಸಪೋರ್ಟ್ ಮಾಡುತ್ತಿರುತ್ತಾರೆ. ಇದೀಗ ಡಾಲಿ ಧನಂಜಯ್ ಅಭಿನಯದ ಹೊಯ್ಸಳ ಸಿನಿಮಾದ ಶೂಟಿಂಗ್ ಸ್ಪಾಟ್ಗೆ ಭೇಟಿ ಕೊಟ್ಟು ಚಿತ್ರತಂಡದ ಜೊತೆ ಒಂದು ಗಂಟೆ ಕಾಲ ಕಳೆದಿದ್ದಾರೆ.
ಕಳೆದ ಒಂದು ವಾರದಿಂದ ಮೈಸೂರಿನಲ್ಲಿ ಹೊಯ್ಸಳ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಮ್ಯಾ ಹೊಯ್ಸಳ ಸಿನಿಮಾದ, ಚಿತ್ರೀಕರಣ ಸ್ಥಳಕ್ಕೆ ಭೇಟಿ ನೀಡುವ ಮೂಲಕ ಹೊಯ್ಸಳ ಚಿತ್ರತಂಡಕ್ಕೆ ಅಚ್ಚರಿ ಮೂಡಿಸಿದ್ದಾರೆ. ರಮ್ಯಾ ಕೂಡ ಹೊಯ್ಸಳ ಸಿನಿಮಾ, ಚಿತ್ರೀಕರಣದ ಸ್ಥಳಕ್ಕೆ ಭೇಟಿ ನೀಡಿದ್ದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ವಿಜಯ್ ನಿರ್ದೇಶಿಸುತ್ತಿರುವ ಹೊಯ್ಸಳ ಚಿತ್ರದ ಸೆಟ್ಗೆ ಭೇಟಿ ನೀಡಿದೆ. ಆ್ಯಕ್ಷನ್ ದೃಶ್ಯವೊಂದನ್ನು ಚಿತ್ರೀಕರಿಸುತ್ತಿದ್ದರು. ಚಿತ್ರೀಕರಿಸಿರುವ ಕೆಲವು ಸಿಕ್ವೇನ್ಸ್ಗಳನ್ನು ನೋಡಿದೆ. ಬಹಳ ಚೆನ್ನಾಗಿ ಚಿತ್ರೀಕರಣ ಮಾಡುತ್ತಿದ್ದಾರೆ ಎಂದು ರಮ್ಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-
Sandalwood Queen @divyaspandana visits #Hoysala set😍
— Dhananjaya (@Dhananjayaka) July 10, 2022 " class="align-text-top noRightClick twitterSection" data="
Thanks for all the love❤️@Karthik1423 @yogigraj @vijaycinephilia @amrutha_iyengar @AJANEESHB @S_Karthik @KRG_Studios @HoysalaTheFilm pic.twitter.com/dUfWytgr3W
">Sandalwood Queen @divyaspandana visits #Hoysala set😍
— Dhananjaya (@Dhananjayaka) July 10, 2022
Thanks for all the love❤️@Karthik1423 @yogigraj @vijaycinephilia @amrutha_iyengar @AJANEESHB @S_Karthik @KRG_Studios @HoysalaTheFilm pic.twitter.com/dUfWytgr3WSandalwood Queen @divyaspandana visits #Hoysala set😍
— Dhananjaya (@Dhananjayaka) July 10, 2022
Thanks for all the love❤️@Karthik1423 @yogigraj @vijaycinephilia @amrutha_iyengar @AJANEESHB @S_Karthik @KRG_Studios @HoysalaTheFilm pic.twitter.com/dUfWytgr3W
ಅಷ್ಟೇ ಅಲ್ಲ, ಇಡೀ ಚಿತ್ರತಂಡಕ್ಕೆ ರಮ್ಯಾ ಚಾಕೋಲೇಟ್ ಕೊಡಿಸಿದ್ದಾರೆ. ಡಾಲಿ ಜೊತೆ ರಮ್ಯಾ ಚಾಕೋಲೇಟ್ ಶೇರ್ ಮಾಡಿದ್ದಾರೆ. ಧನಂಜಯ್ ಅವರನ್ನು ತೆರೆಯ ಮೇಲೆ ಪೊಲೀಸ್ ಪಾತ್ರದಲ್ಲಿ ನೋಡಲು ನನಗೆ ಬಹಳ ಕಾತರವಿದೆ. ನಟಿ ಅಮೃತಾ ಅಯ್ಯಂಗಾರ್ ಅವರ ಅಭಿನಯಕ್ಕೆ ಬಹಳಷ್ಟು ಪ್ರಶಸ್ತಿಗಳು ಬರುತ್ತವೆ ಎಂದು ರಮ್ಯಾ ಭವಿಷ್ಯ ನುಡಿದಿದ್ದಾರೆ.
ಕಾರ್ತಿಕ್ ಗೌಡ, ಯೋಗಿ ಜಿ. ರಾಜ್ ನಿರ್ಮಾಣ ಮಾಡುತ್ತಿರುವ ಹೊಯ್ಸಳ ಸಿನಿಮಾ ಬಹಳ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಲಿ ಎಂದು ರಮ್ಯಾ ಇಡೀ ತಂಡಕ್ಕೆ ಬೆನ್ನು ತಟ್ಟಿದ್ದಾರೆ. ನನ್ನನ್ನು ಕರೆದದ್ದಕ್ಕೆ ಹಾಗೂ ನಿಮ್ಮ ಪ್ರೀತಿಗೆ ನನ್ನ ಧನ್ಯವಾದಗಳು ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಕನ್ನಡದಲ್ಲೂ ಬರ್ತಿದೆ ಆರ್ಜಿವಿ ಮಾರ್ಷಲ್ ಆರ್ಟ್ಸ್ ಆಧಾರಿತ 'ಹುಡುಗಿ' ಸಿನೆಮಾ